ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ)ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ನಿಂದ ಕೊಡಮಾಡುವ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಪ್ರತಿಭಾವಂತ ಬಹುಮುಖ ಪ್ರತಿಭೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆ ಕುಂಭಾಶಿ ಇದರ ವಿದ್ಯಾರ್ಥಿನಿ ಶ್ಲಾಘ ಸಾಲಿಗ್ರಾಮ, ಯು.ಬಿ,ಎಂ.ಸಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರದ ವಿದ್ಯಾರ್ಥಿನಿ ಸಿಂಚನ ಕೋಟೇಶ್ವರ, ಮಾಧವ ಕೃಪಾ ಇಂಗ್ಲೀಷ್ ಮೀಡಿಯಂ ಸ್ಕೂಲ್, ಮಣಿಪಾಲದ ವಿದ್ಯಾರ್ಥಿನಿ ಲಾವಣ್ಯ ಟಿ, ಶ್ರೀಗಜಾನನ ಹಿರಿಯ ಪ್ರಾಥಮಿಕ ಶಾಲೆ ಪಾರಂಪಳ್ಳಿಯ ವಿದ್ಯಾರ್ಥಿ ವೈಭವ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಣೂರು ವಿದ್ಯಾರ್ಥಿ ಶ್ರೀನಿಧಿ, ಲಿಟ್ಲರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿ ನಕ್ಷತ್ರ ಎನ್ ಕೋಟ, ಜಿ.ಎಮ್.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ಪ್ರಣ್ವಿತ್ ಪಿ, ಶ್ರೀಶಾಂಭವಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಗಿಳಿಯಾರು-ಕೋಟದ ವಿದ್ಯಾರ್ಥಿನಿ ಇಂಚರ ಭಟ್, ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪಾರಂಪಳ್ಳಿಯ ವಿದ್ಯಾರ್ಥಿನಿ ಧನ್ಯ, ಶ್ರೀರಾಮ ಪ್ರಸಾದ ಅನುದಾನಿತ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮಹಿಳೆಯರು ತಮ್ಮ ಹಕ್ಕನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಮನೆಯಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರದ ಜೊತೆಗೆ ಮೌಲ್ಯಯುತವಾದ ಶಿಕ್ಷಣದ ಬೋಧನೆ ಮಾಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದರು. ಅವರು ನಗರದ ಬೋರ್ಡ್ ಹೈಸ್ಕೂಲ್ನಲ್ಲಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ದೆಹಲಿ, ಭಾರತ್ ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳಾ ಹಕ್ಕುಗಳು ಮತ್ತು ಕಾನೂನುಗಳ ಕುರಿತು ಮಹಿಳೆಯರು ಅರಿತುಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಇರುವ ಅನಕ್ಷರರಿಗೂ ಈ ಕುರಿತು ಅರಿವು ಮೂಡಿಸಬೇಕು ಎಂದ ಅವರು, ಮಹಿಳೆಯರು ತಮ್ಮ ಸಂಸ್ಕೃತಿ ಮತ್ತು ಕಾನೂನಿನ ಚೌಕಟ್ಟಿನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕರ್ನಾಟಕದಲ್ಲಿ ದೂರಶಿಕ್ಷಣಕ್ಕೆ ಯುಜಿಸಿಯಿಂದ ಮಾನ್ಯತೆ ಪಡೆದ ಏಕೈಕ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಳ್ವಾಸ್ ದೂರಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರದಿಂದ ದೂರ ಶಿಕ್ಷಣದ ವಿವಿಧ ಕೋರ್ಸ್ಗಳ ದಾಖಲಾತಿಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಗಳಿಗೆ ಅರ್ಹ ಅಭ್ಯರ್ಥಿಗಳು ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ದೂರ ಶಿಕ್ಷಣ ಕೇಂದ್ರದ ಮೂಲಕ ನೋಂದಾವಣಿ ಮಾಡಬಹುದಾಗಿದೆ. ಪದವಿಯಲ್ಲಿ ಬಿ.ಎ., ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ, ಬಿ.ಬಿ.ಎ, ಬಿ.ಲಿಬ್. ಸ್ನಾತಕೋತ್ತರ ಪದವಿಯಲ್ಲಿ ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂ.ಬಿ.ಎ, ಎಂ.ಲಿಬ್, ಒಂದು ವರ್ಷ ಡಿಪ್ಲೊಮಾ ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಅಂಡ್ ಹೆಲ್ತ್ ಎಜುಕೇಷನ್, ಇನ್ಫೋ ಟೆಕ್ನಾಲಜಿ ಕಂಪ್ಯೂಟರ್ ಅಪ್ಲಿಕೇಶನ್, 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಸಿ.ಪಿ.ಆರ್. (ಪಂಚಾಯತ್ ರಾಜ್), ಫುಡ್ ಅಂಡ್ ನ್ಯೂಟ್ರಿಷನ್, ಕಮ್ಯುನಿಕೇಷನ್ ಟೆಕ್ನಾಲಜಿ, 6 ತಿಂಗಳ ಪಿ.ಜಿ. ಸರ್ಟಿಫಿಕೇಟ್ ಕೋರ್ಸ್ (ಪಿ.ಜಿ.ಸಿ.) ಪಿಜಿಸಿ ಇಂಗ್ಲಿಷ್, ಕಮ್ಯೂನಿಕೇಟಿವ್ ಇಂಗ್ಲಿಷ್, ಮಾರ್ಕೇಟಿಂಗ್ ಮೆನೆಜ್ಮೆಂಟ್, ಎಚ್. ಆರ್. ಮ್ಯಾನೇಜ್ಮೆಂಟ್, ಬಿಸಿನೆಸ್ ಅಡ್ಮಿನಿಸ್ಟ್ರಷನ್, ಫೈನಾನ್ಸ್ ಮೆನೆಜ್ಮೆಂಟ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ, ಕಾರ್ಯಕಾರಿ ಮಂಡಳಿ ಹಾಗೂ ಜಿಲ್ಲಾಧ್ಯಕ್ಷರ ಚುನಾವಣೆಯು ನ.21ರಂದು ನಡೆಯಲಿದ್ದು, ಸಾಹಿತ್ಯ ವಲಯದಲ್ಲಿ ಪರಿಷತ್ ಗಾದಿಗಾಗಿ ಪ್ರಬಲ ಪೈಪೋಟಿ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷರ ಚುನಾವಣೆಗೆ ಉಡುಪಿ ತಾಲೂಕಿನ ಕೆ. ಎಸ್ ಸುಬ್ರಹ್ಮಣ್ಯ ಬಾಸ್ರಿ, ಬೈಂದೂರು ತಾಲೂಕಿನ ಡಾ. ಸುಬ್ರಹ್ಮಣ್ಯ ಭಟ್ ಬೈಂದೂರು ಹಾಗೂ ಉಡುಪಿ ತಾಲೂಕಿನಿಂದ ನಿಕಟಪೂರ್ವ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನಾಮಪತ್ರಗಳನ್ನು ಸಲ್ಲಿಸಿದ್ದು, ಅಂತಿಮ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. 1987 ಮತದಾರರು:ನವೆಂಬರ್ 21 ರಂದು ಒಟ್ಟು 8 ಮತಗಟ್ಟೆ ಕೇಂದ್ರಗಳಲ್ಲಿ (ತಾಲೂಕು ತಹಶೀಲ್ದಾರರ ಕಛೇರಿ, ಬೈಂದೂರು ಪಟ್ಟಣ ಪಂಚಾಯತ್ ಕಛೇರಿ) ಬೆಳಗ್ಗೆ 8 ಗಂಟೆಯಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 1987 ಮಂದಿ ಮತದಾರರಿದ್ದಾರೆ. ಆ ಪೈಕಿ 250 ಹೆಚ್ಚು ಮತದಾರರು ಮರಣ ಹೊಂದಿದ್ದು, ಉಳಿದ ಮತಗಳಲ್ಲಿ ಒಟ್ಟು ಶೇ.60ರಷ್ಟು ಮತದಾನವಾಗುವ ನಿರೀಕ್ಷೆ ಇದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರುವವರು ಮತದಾರರಾಗಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಕುಂದಾಪುರ, ಬ್ರಹ್ಮಾವರ ಮತ್ತು ಉಡುಪಿ ತಾಲೂಕುಗಳ ವ್ಯಾಪ್ತಿಯಲ್ಲಿನ ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ಪ್ರದೇಶಗಳ ವಾರಾಹಿ, ಸೌಪರ್ಣಿಕಾ, ಸ್ವರ್ಣಾ ಮತ್ತು ಸೀತಾ ನದಿ ಪಾತ್ರಗಳಲ್ಲಿ ಮರಳು ದಿಬ್ಬ ತೆರವುಗೊಳಿಸಲು ಅನುಮತಿ, ತಾತ್ಕಾಲಿಕ ಪರವಾನಿಗೆ ಹಾಗೂ ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ (ನಾನ್ ಸಿಆರ್ಝಡ್) ಪ್ರದೇಶದ ನದಿ ಪಾತ್ರಗಳಲ್ಲಿ ಮರಳುಗಾರಿಕೆ ನಡೆಸಲು ಮರಳು ಗಣಿ ಗುತ್ತಿಗೆಗಳನ್ನು ನೀಡಲಾಗಿದ್ದು, ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ. ಜಿಲ್ಲೆಯ ಕಟ್ಟಡ ನಿರ್ಮಾಣ ಮಾಲೀಕರು ಹಾಗೂ ಗುತ್ತಿಗೆದಾರರು ಮಂಜೂರಾದ ಕಟ್ಟಡದ ಕಾಮಗಾರಿಗಳ ಅವಶ್ಯಕತೆಗನುಗುಣವಾಗಿ ಗಣಿ ಗುತ್ತಿಗೆ ಮತ್ತು ತಾತ್ಕಾಲಿಕ ಪರವಾನಿಗೆ ಪಡೆದ ಪರವಾನಿಗೆದಾರರಿಂದ ಉಪಖನಿಜಕ್ಕೆ (ಸಾಮಾನ್ಯ ಮರಳು) ರವಾನೆ, ಸಾಗಾಟ ಪರವಾನಿಗೆ ಪಡೆದು ಬಳಸಬೇಕು. ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ (ನಾನ್ ಸಿಆರ್ಝಡ್) ಹಾಗೂ ಕರಾವಳಿ ನಿಯಂತ್ರಣ ವಲಯದ (ಸಿಆರ್ಝಡ್) ನದಿ ಪಾತ್ರಗಳಲ್ಲಿ ಅನಧಿಕೃತ ಮರಳು ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನು ಮಾಡುವುದು ಹಾಗೂ ಮಾಡಿರುವುದು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಪ್ರತಿಯೊಬ್ಬರ ಭವ್ಯ ಭವಿತವ್ಯ ಅವರ ವಿದ್ಯಾರ್ಥಿ ಜೀವನದಲ್ಲಿ ರೂಪಿತಗೊಳ್ಳುತ್ತದೆ. ಶೈಕ್ಷಣಿಕ ಜೀವನದ ಪ್ರತಿ ಕ್ಷಣವನ್ನು ಸದುಪಯೋಗ ಪಡಿಸಿಕೊಂಡು, ಗುರಿಯೆಡೆಗೆ ಅಹರ್ನಿಶಿ ಶ್ರಮಿಸಿದಾಗ ಸುಂದರ ನಾಳೆಗಳು ನಿರ್ಮಾಣಗೊಳ್ಳುತ್ತವೆ ಎಂದು ಮಂಗಳೂರು ನಗರ ಪೋಲೀಸ್ ಕಮೀಷನರ್ ಎನ್. ಶಶಿಕುಮಾರ್ ಐಪಿಎಸ್ ತಿಳಿಸಿದರು. ಅವರು, ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಗ್ ವಿದ್ಯಾರ್ಥಿಗಳ ಪ್ರವೇಶಾತಿ ಆಳ್ವಾಸ್ ಆಗಮನ 2021-22ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಮಯ ಪಾಲನೆ, ಶಿಸ್ತು, ತಾಳ್ಮೆ, ಪ್ರಾಮಾಣಿಕತೆ, ಏಕಾಗ್ರತೆ ಪ್ರತಿಯೊಬ್ಬರ ಯಶಸ್ವಿ ಜೀವನದ ಗುಟ್ಟು. ಪ್ರತಿ ಕ್ರಿಯೆಗೂ ಪ್ರತಿಕ್ರಿಯಿಸುವ ಮನಸ್ಥಿತಿ ಒಳ್ಳೆದಲ್ಲಾ. ಇದರಿಂದ ನಮ್ಮ ಸುತ್ತಾ ವೈರತ್ವವನ್ನು ಬೆಳೆಸಿಕೊಳ್ಳುವ ಸಾಧ್ಯತೆಯೆ ಹೆಚ್ಚು. ಇನ್ನೊಬ್ಬರ ಮೇಲೆ ಅನಗತ್ಯ ಟೀಕೆ- ಟಿಪ್ಪಣಿ, ಆಜ್ಞೆಗಳನ್ನು ಮಾಡಬೇಡಿ. ನಿಮ್ಮ ನಿಜವಾದ ವ್ಯತಿತ್ವವನ್ನೆ ಜಗತ್ತಿಗೆ ಪರಿಚಯಿಸಿ, ಸೋಗಿನ ವ್ಯಕ್ತಿತ್ವ ಹೆಚ್ಚು ದಿನ ಬಾಳಲಾರದು. ಪ್ರತಿದಿನ ನಿಮ್ಮ ಜೀವನಕ್ಕೆ ಮೌಲ್ಯಯುತ ಅಂಶವನ್ನು ಸೇರ್ಪಡೆಗೊಳಿಸುತ್ತಾ ಸಾಗಿ. ಯಾರು ಸಮಯವನ್ನು ಸರಿಯಾಗಿ ನಿರ್ವಹಣೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ಜೀವನದಲ್ಲಿ ಕ್ರೀಡಾ ಮನೋಭಾವವನ್ನು ಮೈಗೂಡಿಸಿಕೊಂಡರೆ ವಿದ್ಯಾರ್ಥಿಗಳ ಮನಸ್ಸು ಗಟ್ಟಿ ಆಗುವುದರ ಜೊತೆಗೆ ಎಂತಹ ಕಠಿಣ ಪರಿಶ್ರಮವನ್ನು ಎದುರಿಸಲು ಕೂಡ ಸಜ್ಜಾಗುತ್ತದೆ ಎಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಿರಂಜನ್ ಗೌಡ ಹೇಳಿದರು. ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿ.ಎ/ಸಿ.ಎಸ್ ಸಂಸ್ಥೆ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಕೂಡ ಸ್ವಲ್ಪ ಸಮಯ ಮೀಸಲಿಡಬೇಕು ಎಂದು ಕರೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸುಜ್ಞಾನ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ರಮೇಶ್ ಶೆಟ್ಟಿ ಅವರು ಮಾತನಾಡಿ, ಕುಂದಾಪುರದಲ್ಲಿ ಸಿ.ಎ/ಸಿ.ಎಸ್ ನಂತಹ ಕಠಿಣ ಪರೀಕ್ಷೆಗೆ ಗುಣಮಟ್ಟದ ತರಬೇತಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಕ್ರೀಡಾಕೂಟವನ್ನು ಆಯೋಜಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿಯ ಕಾರ್ಯ ಮೆಚ್ಚುವಂತದ್ದು ಎಂದರು. ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿರುವ ಸಚಿನ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 110/33/11 ಕೆ.ವಿ ಹಿರಿಯಡ್ಕದಲ್ಲಿ 110ಕೆ.ವಿ ಮಧುವನಮಾರ್ಗದ ಬೇದಲ್ಲಿನ ಸುಟ್ಟುಹೋದ ಸಿಟಿ ಕ್ಲಾಂಪ್ಗಳನ್ನು ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಾಳೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 110ಕೆವಿ ಸೇನಾಪುರ ರೈಲ್ವೆ ಉಪಕೇಂದ್ರ , 110/11 ಕೆ.ವಿ ಉಪಕೇಂದ್ರಗಳಾದ ಮಧುವನ, ಕುಂದಾಪುರ ಮತ್ತು ನಾವುಂದ ಹಾಗೂ 33/11ಕೆ.ವಿ ಉಪಕೇಂದ್ರಗಳಾದ ತಲ್ಲೂರು, ಬೈಂದೂರು, ಗಂಗೊಳ್ಳಿ ಗಳಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳ ಕುಂದಾಪುರ ಪೇಟೆ, ಹಂಗೂರು, ಬೀಜಾಡಿ, ಗೋಪಾಡಿ, ಜಪ್ತಿ ವಾಟರ್ಸಪ್ಲೆಂ, ಕೋಣಿ, ಕಂದಾವರ, ಬಳ್ಳೂರು, ಹಳ್ಳಾಡು, ಅಂಪಾರು, ಕಾವಾಡಿ, ಜಪ್ತಿ, ಹೊಂಬಾಡಿ-ಮಡಾಡಿ, ಕಾಳಾವರ, ಅಸೋಡು, ಬಸೂರು, ಕೋಡಿ, ಅನಗಳ್ಳಿ, ಕುಂಭಾಶಿ, ತೆಕ್ಕಟ್ಟೆ, ವಕ್ವಾಡಿ, ಕೋಟೇಶ್ವರ, ಮೊಳಹಳ್ಳಿ, ಕೊರ್ಗಿ, ಯಡಾಡಿ-ಮತ್ಯಾಡಿ, ವಂಡ್ಸ್, ಗುಲ್ವಾಡಿ, ಬಾಂಡ್ಯ, ಗಂಗೊಳ್ಳಿ, ಶಿರೂರು, ಉಪ್ಪುಂದ, ಬಿಜೂರು, ಕೊಲ್ಲೂರು, ತಗ್ಗರ್ಸೆ, ಕರ್ಕುಂಜೆ, ಆರ್ಜಿ, ಕೆರಾಡಿ, ತಲ್ಲೂರು, ಬೈಂದೂರು, ಗೋಳಿಹೊಳ, ಯಳಜಿತ್, ಗಂಗನಾಡು, ನಾಡಾ, ಹೊಸಾಡು, ಗುಜ್ಜಾಡಿ, ಹೊಸೂರು, ಹಡವು. ದೇವಲ್ಕುಂದ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲ್ಲೂಕು ಇದರ ವತಿಯಿಂದ ಜ್ಞಾನದೀಪ ಶಿಕ್ಷಕರ ಸಂದರ್ಶನ ಕಾರ್ಯಕ್ರಮ ತ್ರಾಸಿ ಯೋಜನಾ ಕಚೇರಿಯಲ್ಲಿ ಶುಕ್ರವಾರ ಜರಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯೋಜನೆಯ ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕ ಗಣೇಶ್ ಬಿ., ಉಡುಪಿ ಜಿಲ್ಲೆಯಲ್ಲಿ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕ ಕೊರತೆ ಇರುವ 40 ಆಯ್ದ ಶಾಲೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ಜ್ಞಾನದೀಪ” ಕಾರ್ಯಕ್ರಮದಡಿಯಲ್ಲಿ ಶಿಕ್ಷಕರನ್ನು ಒದಗಿಸಲಾಗುತ್ತಿದೆ. ಕುಂದಾಪುರ ಮತ್ತು ಬೈಂದೂರು ತಾಲ್ಲೂಕಿನಲ್ಲಿ ಸಂದರ್ಶನಕ್ಕೆ ಹಾಜರದವರಲ್ಲಿ 14 ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ ಹಾಗೂ ಶ್ರೀ ಕ್ಷೇತ್ರದಿಂದಲೇ ಪ್ರತಿ ತಿಂಗಳು ಗೌರವಧನ ಪಾವತಿಸಲಾಗುತ್ತದೆ. ಆಯ್ಕೆಯಾದ ಶಿಕ್ಷಕರು ನಿರ್ದಿಷ್ಟ ಪೂರ್ವ ತಯಾರಿಯೊಂದಿಗೆ ಸರ್ಕಾರದ ಶಿಕ್ಷಣ ನೀತಿ, ನಿಯಮ ಪಾಲನೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡುವಂತೆ ಹಾಗೂ ಪ್ರತಿ ತಿಂಗಳು ಕಚೇರಿಗೆ ಬಂದು ವರದಿ ಮಾಡಿಕೊಳ್ಳುವಂತೆ ಮಾಹಿತಿ ನೀಡಿದರು. ಕಚೇರಿ ಪ್ರಬಂಧಕ ಸತೀಶ್ ಸಹಾಯಕ ಆಡಳಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ ಮಾತನಾಡಿ ವಿದ್ಯಾರ್ಥಿಗಳಾದ ನೀವೆಲ್ಲರೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಉಪಸ್ಥಿತರಿರುವ ಟ್ರೈನಿಂಗ್ ಆಫೀಸರ್ ಅಭಿಲಾಷ್ ಕ್ಷತ್ರೀಯ ಮಾತನಾಡಿ ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಆಸಕ್ತಿಯಿಂದ ಕೂಡಿ ಕೆಲಸಮಾಡಬೇಕು ಎಂದು ನುಡಿದರು. ಉಪಸಂಯೋಜಕರಾದ ಮಮತಾ ರೈ ಮಾತನಾಡುತ್ತಾ ಬದುಕು ಎನ್ನುವ ಯುದ್ಧದಲ್ಲಿ ತೇಜಸ್ಸು,ಧೈರ್ಯ,ಸ್ಥೈರ್ಯ,ಸ್ವಾಭಿಮಾನ ಅತ್ಯವಶ್ಯಕ ರಾಷ್ಟ್ರದ ಉನ್ನತಿಗೆ ಈ ದಿನದ ನಿಮ್ಮ ನಿರ್ಧಾರವೇ ಮುನ್ನುಡಿಯಾಗಲಿ ಎಂದು ಶುಭ ಹಾರೈಸಿದರು. ವಿದ್ಯಾರ್ಥಿ ನಾಯಕನಾಗಿ ಪವನ್ ಕುಮಾರ್ ಶೆಟ್ಟಿ, ಉಪನಾಯಕಿ-ಕುಮಾರಿ ಚೈತಾಲಿ ಉಪ್ಪೂರು, ಕಾರ್ಯದರ್ಶಿ-ಕುಮಾರಿ ವನಶ್ರೀ, ಶೈಕ್ಷಣಿಕ ಕಾರ್ಯದರ್ಶಿ ಪ್ರಣವ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಕುಮಾರಿ ಶ್ರಾವ್ಯ, ಕ್ರೀಡಾ ಕಾರ್ಯದರ್ಶಿಯಾಗಿ ದಿಶಾನ್ ಕುಮಾರ್ ಶೆಟ್ಟಿ, ಸಮಾಜ ಸೇವಾ ಕಾರ್ಯದರ್ಶಿಯಾಗಿ ಕುಮಾರಿ ರಿಯಾ ಪ್ರಮಾಣ ವಚನ ಸ್ವೀಕರಿಸಿದರು. ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ವ್ರಂದದವರು ಉಪಸ್ಥಿತರಿದ್ದರು.
