ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನೂತನವಾಗಿ ಅಸ್ತಿತ್ವಕ್ಕೆ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವನ್ನು ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಉದ್ಘಾಟನೆಗೊಳಿಸಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶಪ್ರಸಾದ್ ಪಾಂಡೇಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅತಿಥಿಗಳಾಗಿದ್ದರು. ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ನರಸಿಂಹ ಬಿ. ನಾಯಕ್ ಸ್ವಾಗತಿಸಿದರು. ಸದಸ್ಯ ಸುನಿಲ್ ಹೆಚ್. ಜಿ ಬೈಂದೂರು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಸೆನೆಟರ್ ಅರ್ಪಿತ್ ಹಾಥಿಯವರು ಜೆಸಿಐ ಶಿರೂರು ಗ್ರಾಮೀಣ ಘಟಕಕ್ಕೆ ಭೇಟಿ ನೀಡಿ, ಅಳ್ವೆಗದ್ದೆ ಕಡಲ ಕಿನಾರೆಗೆ ಹೋಗುವ ದಾರಿ ಸೂಚನಾ ಫಲಕವನ್ನು ಅನಾವರಣ ಗೊಳಿಸಿದರು ಹಾಗೂ ಜೆಸಿಐ ಶಿರೂರು ಸದಸ್ಯರು ಕೊಡಗು ಸಂತ್ರಸ್ತರಿಗೆ ಕೊಡಮಾಡಿದ ಹಲವು ಪರಿಕರಗಳನ್ನು ಹಸ್ತಾಂತರಿಸಿ, ಶಿರೂರು ಘಟಕವು ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರಶಂಸನಾರ್ಹವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಜರುಗಿ ಯಶಸ್ವಿಯಾಗಲಿ ಎಂದು ಶುಭ ಹಾರೈಕೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ದಾರಿ ಸೂಚನಾ ಫಲಕದ ಪ್ರಯೋಜಕರಾದ ಮೋಹನ ರೇವಣ್ಕರ್ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ರಾಕೇಶ ಕುಂಜೂರು, ಜೆಸಿಐ ಶಿರೂರು ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಚಂದ್ರಶೇಖರ್ ನಾಯರ್ ,ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು, ಮೋಹನ ರೇವಣ್ಕರ್, ಅರುಣ್ ಕುಮಾರ, ಪ್ರಕಾಶ ಮಾಕೋಡಿ, ಗಿರೀಶ ಮೇಸ್ತ, ಹರೀಶ ಶೇಟ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗೇಶ ಟಿ, ನಾರಾಯಣ ಅಳ್ವೆಗದ್ದೆ, ಮಹಾದೇವ ಅಳ್ವೆಗದ್ದೆ ವಲಯಾಧಿಕಾರಿಗಳು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸುರಭಿ ಕಲಾ ಸಂಸ್ಥೆಯ ರಂಗಸುರಭಿಯ 3 ದಿನಗಳ ರಂಗತರಬೇತಿ ಶಿಬಿರಕ್ಕೆ ತೈವಾನ್ ದೇಶದ ನಿವೃತ್ತ ಅಧ್ಯಾಪಕ ಹಾಗೂ ಕಲಾವಿದ ಆದ ಚಿನ್‌ಲಂಗ್ ಮತ್ತು ಪಿಯಿಯಾ ಸೌಹಾರ್ದಯುತ ಭೇಟಿ ನೀಡಿದರು. ಕೆಲ ಹೊತ್ತು ರಂಗಕಲೆಯನ್ನು ವೀಕ್ಷಿಸಿ ಭಾರತದ ರಂಗಭೂಮಿ ಮತ್ತು ನಾಟಕದ ಬಗ್ಗೆ ಚರ್ಚಿಸಿದರು. ಅಲ್ಲದೆ ಅವರೂ ಮುಟ್ಟಾಳೆಗಳನ್ನು ಧರಿಸಿ ವಾದ್ಯದತಾಳಕ್ಕೆ ಲಯಬದ್ಧವಾಗಿ ನರ್ತಿಸಿ ಸುರಭಿ ತಂಡಕ್ಕೆ ಶುಭ ಹಾರೈಸುತ್ತಾ ತೈವಾನ್ ದೇಶಕ್ಕೆ ಸುರಭಿಯ ಕಲಾವಿದರಿಗೆ ಆಹ್ವಾನಿಸುವುದಾಗಿ ಭರವಸೆ ನೀಡಿದರು. ಸುರಭಿಯ ವ್ಯವಸ್ಥಾಪಕ ಕೃಷ್ಣಮೂರ್ತಿಉಡುಪ ಸ್ವಾಗತಿಸಿದರು. ಕಲಾವಿದೆ ಕೀರ್ತಿ ಭಟ್ ಮಾಲಾರ್ಪಣೆ ಮಾಡಿದರು. ಕಾರ್ಯದರ್ಶಿ ವೈ. ಲಕ್ಷ್ಮಣ್ ಕೊರಗ ವಂದಿಸಿದರು. ನಿರ್ದೇಶಕ ಗಣೇಶ್ ಮುಂಡಾಡಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸುಧಾಕರ್ ಪಿ. ಬೈಂದೂರು ನಿರೂಪಿಸಿದರು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ಸತ್ಯನಾಕೋಡೇರಿ ಕೊಳಲು ನುಡಿಸಿ ಯೋಗೇಶ್ ಬಂಕೇಶ್ವರ ಕಂಜರ, ಲಕ್ಷ್ಮಣ್ ಕೊರಗ ಡೋಲಕ್ ಹಾಗೂ ಗಣೇಶ್ ಮುಂಡಾಡಿ ಡ್ರಮ್ಸ್ ನುಡಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸುರಭಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಯಕ್ಷಗಾನ ಸಂಘಟಕ ನಾಗರಾಜ ಶೆಟ್ಟಿ ನೈಕಂಬ್ಳಿಯವರ ಸಂಯೋಜನೆಯಲ್ಲಿ ಸೆ.1ರ ಶನಿವಾರ ರಾತ್ರಿ 10ಗಂಟೆಗೆ ‘ಯಕ್ಷ ಸಂಕ್ರಾಂತಿ’ಯಲ್ಲಿ ರಾಜಾ ಹರೀಶ್ಚಂದ್ರ ಹಾಗೂ ಚಕ್ರ ಚಂಡಿಕೆ ಎಂಬ ಎರಡು ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ಬಹು ಅಪರೂಪದ ಪ್ರಸಂಗ ಮತ್ತು ಹೈವೋಲ್ಟೇಜ್ ಮುಖಾಮುಖಿಯ ಸಂಯೋಜನೆಯ ಕೊಳಗಿ, ಸುರೇಶ ಶೆಟ್ಟಿ , ಹೆಬ್ರಿ , ಭಾಳ್ಕಲ್ ,ಗಾನ ಸಾರಥ್ಯಕ್ಕೆ ಜಲವಳ್ಳಿ ವಿಧ್ಯಾದರ್ ರಾವ್ ಹರೀಶ್ಚಂದ್ರ × ಉಜಿರೆ ಅಶೋಕ್ ಭಟ್ ವಿಶ್ವಾಮಿತ್ರ × ಡಾ. ಪ್ರದೀಪ ಸಾಮಗ ಚಂದ್ರಮತಿ × ಐರಬೈಲ್ ಆನಂದ ಶೆಟ್ಟಿ ಘಟೋತ್ಕಜ × ಕೊಳಲಿ ಕೃಷ್ಣ ಶೆಟ್ಟಿ ಭರ್ಭರಿಕ × ತೊಂಬಟ್ಟು ಕೃಷ್ಣ × ಯಲಗುಪ್ಪ ವತ್ಸಲೆಯಾಗಿ ಕಾಣಿಸಿಕೊಂಡರೆ ಅಜಿತ್ ಕಾರಂತ , ಕ್ಯಾದಗಿ , ಹಳ್ಳಾಡಿ , ಉಪ್ಪುಂದ , ವಂಡಾರು , ಪಂಜು ರಂಗ ರಂಜಿಸಲಿದ್ದಾರೆ. ದಿಗ್ಗಜ ಕಲಾವಿದರ ಕೂಡುವಿಕೆಯ ಈ ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ. ಟಿಕೇಟು ದರ – 500 -…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉನ್ನತ ವಿದ್ಯಾಭ್ಯಾಸ ಮುಗಿಸಿ ಕೆಲಸ ದೊರೆತ ಬಳಿಕ ಆ ಉದ್ಯೋಗಿಗಳು ತಮಗೆ ಸಿಗುವ ಪ್ರಥಮ ಸಂಬಳ ತಂದೆಗೊ ತಾಯಿಗೊ ನೀಡಿ ಆಶೀರ್ವಾದ ಪಡೆಯುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಆದರೆ ಸ್ವಾಪ್ಟ್‌ವೆರ್ ಉದ್ಯೋಗಿಯಾಗಿ ತನ್ನ ದುಡಿಮೆಯ ಪ್ರಪ್ರಥಮ ಪ್ರತಿಫಲವನ್ನು ತನ್ನ ಊರಿನ ತಾಯಿ, ಗ್ರಾಮ ದೇವತೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರ್ರಿ ಅಮ್ಮನಿಗೆ ಅರ್ಪಿಸುವ ಮೂಲಕ ಕು. ಶೃದ್ಧಾ ಓಂಗಣೇಶ್ ಕಾಮತ್ ಇವರು ಯುವ ಜನತೆಗೆ ಒಂದು ಪ್ರೇರಣೆಯಾಗಿದ್ದಾರೆ ಎಂದು ಬೈಂದೂರು ತಾಲೂಕು ತಹಸೀಲ್ದಾರ್ ಕಿರಣ್ ಜಿ ಗೌರಯ್ಯ ಹೇಳಿದರು. ದೇವಾಲಯಕ್ಕೆ ಅರ್ಪಿಸಿದ ಇಪ್ಪತ್ತೊಂದು ಸಾವಿರ ರೂಪಾಯಿಯ ಚೆಕ್ಕನ್ನು ಸ್ವೀಕರಿಸಿ ಮಾತನಾಡಿದ ಅವರು ’ಗ್ರಾಮೀಣ ಭಾಗದಿಂದ ನಗರ ಸೇರಿ ವೇಗದ ಒತ್ತಡದ ಬದುಕಿನ ನಡುವೆ ಹುಟ್ಟೂರಿಗೆ ಬಂದು ನಡೆಸುವ ಇಂತಹ ದಾನಗುಣ ಆರೋಗ್ಯವನ್ನೂ ನೆಮ್ಮದಿಯನ್ನೂ ತರುವುದಲ್ಲದೆ ತನ್ಮೂಲಕ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನೂ ಪಡೆಯಲು ಸಾಧ್ಯವಾಗುತ್ತದೆ ಈ ಗ್ರಾಮ ದೇವತೆ ಸರ್ವರಿಗೂ ಕರುಣಿಸಿಸಲಿ’ ಎಂದರು. ಇದೆ ಸಂದರ್ಭದಲ್ಲಿ ಕು. ಶೃದ್ಧಾ…
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕøತಿಯರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಹದಿನ್ಯೆದನೇ ವರ್ಷದ ಸಮ್ಮೇಳನವನ್ನು ನವೆಂಬರ ತಿಂಗಳ 16, 17 ಮತ್ತು 18ನೇ ಮೂರು ದಿನಗಳ ಕಾಲ ನಡೆಯಲಿದೆ. ನವೆಂಬರ 16 ಬೆಳಗ್ಗೆ ಸಮ್ಮೇಳನವು ಉದ್ಘಾಟನೆಗೊಳ್ಳಲಿದ್ದು, ನವೆಂಬರ 18ನೇ ತಾರೀಕು ಮಧ್ಯಾಹ್ನ ಸಮ್ಮೇಳನವು ಸಂಪನ್ನಗೊಳ್ಳಲಿದೆ. ಸಮ್ಮೇಳನದ ರೂಪುರೇಖೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು ಶೀಘ್ರವಾಗಿ ಅಂತಿಮ ಸ್ಪರ್ಷನೀಡಲಾಗುವುದು. ಅರ್ಥವತ್ತಾಗುವಂತೆ ಹಾಗೂ ಆಕರ್ಷಕವಾಗುವಂತೆ ಸಮ್ಮೇಳನವನ್ನು ಆಯೋಜಿಸಲು ಪೂರ್ವತಯಾರಿಗಳು ನಡೆಯುತ್ತಿವೆ. ಎಂದಿನಂತೆ ಈ ವರ್ಷವೂರತ್ನಾಕರವರ್ಣಿ ವೇದಿಕೆಯ ನುಡಿಸಿರಿ ಸಭಾಂಗಣದಲ್ಲಿ ಸಮ್ಮೇಳನವು ಜರಗಲಿದೆ. ಪ್ರತಿನಿಧಿಯಾಗ ಬಯಸುವ ಕನ್ನಡಾಭಿಮಾನಿಗಳು 100 ರೂ.ಪ್ರತಿನಿಧಿ ಶುಲ್ಕ ನೀಡಿ ಸದಸ್ಯರಾಗಬಹುದು. ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಉಚಿತ ಪ್ರವೇಶವಿದೆ. ಸಮ್ಮೇಳನದ ಯಶಸ್ಸಿಗಾಗಿ ಸಿದ್ಧತೆಗಳು ನಡೆಯುತ್ತಿದ್ದು ಕನ್ನಡ ನಾಡು-ನುಡಿ-ಸಂಸ್ಕøತಿ ಪ್ರಿಯಕನ್ನಡ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಆಳ್ವಾಸ್ ನುಡಿಸಿರಿ 2018 ಅನ್ನು ಯಶಸ್ವಿಗೊಳಿಸಬೇಕೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಗವದ್ಗೀತೆಯಲ್ಲಿರುವ ಅಂಶಗಳು ಬಹುಪಾಲು ವ್ಯವಹಾರಶಾಸ್ತ್ರ ಹಾಗೂ ಮನಶಾಸ್ತ್ರಕ್ಕೆ ಸಂಬಂಧಿಸಿದವು. ಅದರಲ್ಲಿನ 700 ಶ್ಲೋಕಗಳೂ ಜ್ಞಾನಪ್ರದವಾಗಿದೆ. ಭಗವದ್ಗೀತೆ ಪಠಣದಿಂದಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಮನೋಬಲ ಹೆಚ್ಚುವುದಲ್ಲದೇ ಶೈಕ್ಷಣಿಕವಾಗಿಯೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿಯವರು ಹೇಳಿದರು. ಅವರು ಕೆರಾಡಿಯ ವರಸಿದ್ಧಿವಿನಾಯಕ ಪದವಿಪೂರ್ವ ಕಾಲೇಜಿನ ಕೃಷ್ಣಮ್ಮ ವೀರಣ್ಣ ಶೆಟ್ಟಿ ಸಭಾಭವನದಲ್ಲಿ ಸಂಪೂರ್ಣ ಭಗವದ್ಗೀತಾ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಭಗವಾನ್ ಶ್ರೀಕೃಷ್ಣ ಮಹಾನ್ ಮನಶಾಸ್ತ್ರಜ್ಞ ಎಂದು ವಿಜ್ಞಾನಿಗಳೂ ಕೊಂಡಾಡಿದ್ದಾರೆ. ಇದರಲ್ಲಿ ಎಲ್ಲಿಯೂ ಮತಧರ್ಮದ ವಿಚಾರವೇ ಬರುವುದಿಲ್ಲ. ವಿದ್ಯಾರ್ಥಿಗಳು ಯಾವ ವಿಷಯ ಜ್ಞಾನವನ್ನು ಪಡೆಯಲು ಕಾಲೇಜಿಗೆ ಬಂದಿದ್ದಾರೋ, ಆ ಜ್ಞಾನ ಸುಲಲಿತವಾಗಿ ಸಿದ್ಧಿಸಲು ಭಗವದ್ಗೀತೆ ಸಹಕಾರಿ ಎಂದವರು. ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಆರಂಭದ ಶ್ಲೋಕವನ್ನು ಭೋದಿಸಲಾಯಿತು. ಎಳಜಿತ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ವಿದ್ಯಾರ್ಥಿಗಳು ಶ್ಲೋಕ ಪಠಿಸಿದರು. ವಿದ್ಯಾರ್ಥಿಗಳಾದ ಶರತ್ ಸ್ವಾಗತಿಸಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿಕ್ಷಣ ಇಲಾಖೆ ವಿವಿಧ ಹಂತಗಳಲ್ಲಿ ನಡೆಸುತ್ತಿರುವ ವಾರ್ಷಿಕ ಪ್ರತಿಭಾ ಕಾರಂಜಿ ಮಕ್ಕಳ ಪ್ರತಿಭೆಯನ್ನು ಒರೆಗೆ ಹಚ್ಚಿ, ಬೆಳಕಿಗೆ ತಂದು ಬೆಳೆಸುವ ಉತ್ತಮ ಕಾರ್ಯಕ್ರಮ. ಅದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಧೈರ್ಯ, ಸ್ಥೈರ್ಯ, ಧೀಮಂತಿಕೆ ಬೆಳಸಿಕೊಳ್ಳುತ್ತಾರೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ನಾವುಂದದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಬೈಂದೂರು ವಲಯ ಮಟ್ಟದ ಎರಡು ದಿನಗಳ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು. ವಲಯದ ೧೮೦ ಶಾಲೆಗಳ ೧೫೦೦ ವಿದ್ಯಾರ್ಥಿಳು ಎರಡು ಸ್ಪರ್ಧಾ ಹಂತಗಳನ್ನು ದಾಟಿಬಂದು ಭಾಗವಹಿಸುವ ಈ ಕಾರ್ಯಕ್ರಮ ಕ್ಷೇತ್ರದ ನಿಜವಾದ ಪ್ರತಿಭಾ ಸಂಗಮ. ಈ ಮಕ್ಕಳು ಪ್ರಮಾಣಿಕ, ಕರ್ತವ್ಯನಿಷ್ಠ ಅಧ್ಯಾಪಕರ ಕೈಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ರೂಢಿಸಿಕೊಳ್ಳಬಹುದು. ಆ ನಿಟ್ಟಿನಲಿ ಅವರಿಗೆ ಮಾರ್ಗದರ್ಶನ ದೊರೆಯಲಿ ಎಂದು ಅವರು ಆಶಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಆನಂದ ಜಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ನೂತನವಾಗಿ ಅಸ್ತಿತ್ವಕ್ಕೆ ಬಂದ ಬೈಂದೂರು ತಾಲೂಕಿನಲ್ಲಿ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆರಂಭಗೊಳ್ಳುತ್ತಿದ್ದು, ಅ.೩೧ರ ಶುಕ್ರವಾರ ಬೆಳಿಗ್ಗೆ ೧೦:೩೦ಕ್ಕೆ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶಪ್ರಸಾದ್ ಪಾಂಡೇಲು ವಹಿಸಿಕೊಳ್ಳಲಿದ್ದಾರೆ. ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಸಂಘದ ಉದ್ಘಾಟನೆ ನೆರವೇರಿಸಲಿದ್ದು, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೆಬೆಟ್ಟು ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ► ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜನಾರ್ದನ ಮರವಂತೆ – https://kundapraa.com/?p=29630 .
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಸ್. ಜನಾರ್ದನ ಮರವಂತೆ ಆಯ್ಕೆಯಾಗಿದ್ದಾರೆ. ಸಂಘದ ಕಾರ್ಯದರ್ಶಿಯಾಗಿ ಎಸ್. ಅರುಣಕುಮಾರ್ ಶಿರೂರು, ಉಪಾಧ್ಯಕ್ಷರಾಗಿ ಉದಯ ಪಡಿಯಾರ್, ಅಂದುಕಾ ಎ.ಎಸ್, ಕೊಶಾಧಿಕಾರಿಯಾಗಿ ನರಸಿಂಹ ಬಿ. ನಾಯಕ್, ಸಂಘಟನಾ ಕಾರ್ಯದರ್ಶಿಯಾಗಿ ರಾಮ ಬಿಜೂರು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುನಿಲ್ ಹೆಚ್. ಜಿ. ಬೈಂದೂರು, ಗಿರೀಶ್ ಶಿರೂರು, ಕೃಷ್ಣ ಬಿಜೂರು, ಸುಶಾಂತ್ ಬೈಂದೂರು, ಯೋಗೇಶ್ ಶಿರೂರು ಆಯ್ಕೆಯಾಗಿದ್ದಾರೆ.
