ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷರಾಗಿರುವ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಂ.ಎಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನುಆಚರಿಸಲಾಯಿತು. ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಡೇರ ಹೋಬಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿರುವ ಶಂಕರ ಶೆಟ್ಟಿಯವರು ಮಾತನಾಡಿ ’ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದು ಕೇವಲ ಒಂದು ದಿನದ ಆಚರಣೆಯಾಗದೇ ನಿರಂತರವಾಗಿ ನಡೆಯಬೇಕು. ಗಿಡ ನೆಡುವುದು ಎಷ್ಟು ಮುಖ್ಯವೋ ಅದರ ಪಾಲನೆ ಕೂಡ ನಮ್ಮ ಜವಾಬ್ದಾರಿಯಾಗಬೇಕು’ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಉಪಪ್ರಾಂಶುಪಾಲರಾದ ಶುಭಾಕೆ.ಎನ್, ಮುಖ್ಯಶಿಕ್ಷಕ ಜಗದೀಶ್ಆಚಾರ್ ಸಾಸ್ತಾನ, ಶಿಕ್ಷಕಿ ಕವಿತಾ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಿಯಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಿರಿಯ ಮಹಿಳಾ ಕ್ರೀಡಾಪಟು ಜ್ಯೋತಿ ಶೆಟ್ಟಿ (51) ಭಾನುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉಡುಪಿಯ ಕೊಡವೊರಿನವರಾದ ಜ್ಯೋತಿ ಶೆಟ್ಟಿ ಅವರು ಭಾನುವಾರ ರಾತ್ರಿ ಸಹೋದರನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿನ ಹಂಪ್ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿ ತೀವ್ರವಾಗಿ ಗಾಯಗೊಂಡಿದ್ದರು. ಜ್ಯೋತಿಯವರ ತಲೆಯ ಹಿಂಬದಿಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಾಸಿದಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಜ್ಯೋತಿ ಅವರು ಎಸ್ಸೆಸ್ಸೆಲ್ಸಿ ಬಳಿಕ ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಮದುವೆಯಾದ ಬಳಿಕ ಮತ್ತೆ ಕ್ರೀಡಾ ಆಸಕ್ತಿ ಮೊಳೆತು, ಅಭ್ಯಾಸದಲ್ಲಿ ತೊಡಗಿದ್ದರು. 2011ರಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರು. ಹೈಜಂಪ್, ಲಾಂಗ್ ಜಂಪ್, ಶಾಟ್ ಪಟ್, ಓಟ, ಮ್ಯಾರಥಾನ್ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಸಮಾಜಸೇವೆ ಮೂಲಕವೂ ಗುರುತಿಸಿಕೊಂಡಿದ್ದರು.
ಸ್ಲೋಪ್ ಪ್ರೋಟೆಕ್ಷನ್ ವಾಲ್ ಪ್ಲಾಪ್, ಆತಂಕದಲ್ಲಿ ಹೆದ್ದಾರಿ ಪ್ರಯಾಣಿಕರು ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಮಳೆಯ ಅಬ್ಬರಕ್ಕೆ ಒತ್ತಿನೆಣೆ ಗುಡ್ಡದ ತಳಭಾಗ ಬಿರುಕು ಬಿಟ್ಟಿದೆ.ಗುಡ್ಡ ಕುಸಿಯದಂತೆ ಅಳವಡಿಸಿದ ಹೈಟೆಕ್ ತಂತ್ರಜ್ಞಾನದ ಸ್ಲೋಪ್ ಪ್ರೋಟೆಕ್ಷನ್ ವಾಲ್ ಪ್ಲಾಪ್ ಆಗಿದೆ.ಕಾಂಕ್ರೀಟ್ ಅಳವಡಿಸಿದ ಜಾಗದಲ್ಲಿ ನೀರು ಜಿನುಗಲು ಪ್ರಾರಂಭವಾಗಿರುವುದು ಕಳೆದ ವರ್ಷದ ಘಟನೆ ಮರುಕಳಿಸುವುದೇ ಎನ್ನುವ ಆತಂಕ ಸಾರ್ವಜನಿಕರಲ್ಲಿ ಕಾಡುತ್ತಿದೆ. ಬೈಂದೂರಿನ ಪಾಲಿಗೆ ಅಧಿಕಾರಿಗಳ ನಿರ್ಲಕ್ಷವೇ ಇಂತಹ ಅವೈಜ್ಞಾನಿಕ ಕಾಮಗಾರಿಗೆ ಕಾರಣವಾಗಿದೆ.ಇಲ್ಲಿನ ಭೌಗೋಳಿಕ ಅಂಶಗಳ ಜ್ಞಾನವಿಲ್ಲದ ತಂತ್ರಜ್ಞರ ಯೋಜನೆಯಿಂದ ಪ್ರತಿ ವರ್ಷ ಸಮಸ್ಯೆ ಮರುಕಳಿಸುವಂತೆ ಮಾಡಿದೆ.ಗುರುವಾರ ರಾತ್ರಿ ಸುರಿದ ಮಳೆಗೆ ಗುಡ್ಡದ ಅಂಚಿನಲ್ಲಿ ಮಣ್ಣು ಜಾರದಂತೆ ನಿರ್ಮಿಸಿದ ಕಾಂಕ್ರೀಟ್ ದಂಡೆ ಕೊಚ್ಚಿ ಹೋಗಿದೆ.ಮಾತ್ರವಲ್ಲದೆ ಸಂಪೂರ್ಣ ಸ್ಲೋಪ್ ಪ್ರೋಟೆಕ್ಷನ್ ವಾಲ್ ಬಿರುಕು ಬಿಡುವ ಸಾಧ್ಯತೆಗಳಿವೆ. ಗುಡ್ಡದ ಶೇಡಿ ಮಣ್ಣು ಚರಂಡಿಗೆ ಇಳಿಯುತ್ತಿದೆ.ಕಾಂಕ್ರೀಟ್ ಹೊದಿಕೆ ಕುಸಿಯುವ ಸಾಧ್ಯತೆಗಳಿವೆ. ಪ್ರಾರಂಭದಲ್ಲೂ ಗುಡ್ಡ ಕುಸಿಯುವ ಭೀತಿಯಲ್ಲಿರುವ ಕುರಿತು ಹಾಗೂ ಮಳೆಗಾಲದಲ್ಲಿ ಕಳೆದ ವರ್ಷದ ಘಟನೆ ಮರುಕಳಿಸುವ ಸಾಧ್ಯತೆ ಬಗ್ಗೆ ಉದಯವಾಣಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ನೂತನವಾಗಿ ಆಯ್ಕೆಯಾದ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಶಾಸಕರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ವೇದವ್ಯಾಸ ಕಾಮತ್ ಅವರನ್ನು ದೇವಳದ ಆಡಳಿತ ಮಂಡಳಿ ಸದಸ್ಯರು ಸ್ವಾಗತಿಸಿದರು. ಶ್ರೀದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸೇವೆ ಸಲ್ಲಿಸಿದ ಅವರು ಶ್ರೀದೇವರ ಪ್ರಸಾದ ಸ್ವೀಕರಿಸಿದರು. ಚುನಾವಣೆ ನಾಮಪತ್ರ ಸಲ್ಲಿಕೆ ಸಂದರ್ಭ ಕುಟುಂಬದ ಸದಸ್ಯರು ಶ್ರೀದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಹೀಗಾಗಿ ಚುನಾವಣೆಯಲ್ಲಿ ಗೆದ್ದು ಶಾಸಕನಾಗಿ ಆಯ್ಕೆಯಾಗಿದ್ದು ಶ್ರೀದೇವರ ಆಶೀರ್ವಾದ ಪಡೆಯಲೆಂದು ದೇವಳಕ್ಕೆ ಭೇಟಿ ನೀಡಿರುವುದಾಗಿ ಅವರು ಹೇಳಿದರು. ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್ ಹಾಗೂ ಎಚ್.ಗಣೇಶ ಕಾಮತ್ ಅವರು ಶಾಸಕ ಡಿ.ವೇದವ್ಯಾಸ ಕಾಮತ್ ಅವರನ್ನು ದೇವಳದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ಆಡಳಿತ ಮಂಡಳಿ ಸದಸ್ಯರಾದ ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ಜಿ.ವೆಂಕಟೇಶ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬೀಜಾಡಿ ಮೂಡು ಶಾಲೆಯ ಶಿಕ್ಷಕ ಪದ್ಮನಾಭ ಅಡಿಗರಿಗೆ ವಯೋನಿವೃತ್ತಿ ಹಿನ್ನಲೆಯಲ್ಲಿ ಶಾಲಾ ಎಸ್.ಡಿ.ಎಮ್.ಸಿ. ಹಾಗೂ ಗ್ರಾಮಸ್ಥರಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಶಾಲಾ ವೇದಿಕೆಯಲ್ಲಿ ಜರುಗಿತು. ಶ್ರೀ ಪದ್ಮನಾಭ ಅಡಿಗರ ಶಿಕ್ಷಕ ಸಹೊದ್ಯೋಗಿಗಳು ಹಾಗೂ ಗ್ರಾಮಸ್ಥರು ಚಿನ್ನದ ಉಂಗುರವನ್ನು ಕಾಣಿಕೆಯಾಗಿ ನೀಡಿ , ಫಲಪುಷ್ಪ ಸಮರ್ಪಿಸಿ ಸನ್ಮಾನಿಸಿದರು. ಪದ್ಮನಾಭ ಅಡಿಗರ ಗುರುಗಳಾದ ದಯಾನಂದ ರಾವ್ ಸನ್ಮಾನ ಕಾರ್ಯ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಗಣೇಶ್ ಪುತ್ರನ್, ನಿವೃತ್ತ ಪದವೀಧರ ಶಿಕ್ಷಕ ಮೊಹಮ್ಮದ್ ರಫಿಕ್, ನಿವೃತ್ತ ಮುಖ್ಯೋಪಾಧ್ಯಾಯ ರತ್ನಾಕರ ಶೆಟ್ಟಿ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರು ಸೂರಪ್ಪ ಹೆಗ್ಡೆ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಲಕ್ಷ್ಮಣ ಭಟ್, ವಿಶ್ವನಾಥ ಹತ್ವಾರ್, ಶಿಕ್ಷಣ ಇಲಾಖೆಯ ಮಹೇಶ್ಚಂದ್ರ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಶ್ಯಾಮಲ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಭಟ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕರಿಗೆ ನೆನಪಿನ ಕಾಣಿಕೆಯನ್ನು ನೀಡಿದರು. ಈ ಸಂದರ್ಭ ಪುಷ್ಪ ಅಡಿಗರು ಉಪಸ್ಥಿತರಿದ್ದರು. ಶಿಕ್ಷಕ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಜೆಡಿಎಸ್ ಮುಖಂಡ ಹಾಗೂ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ರವೀಂದ್ರ (ರವಿ ಶೆಟ್ಟಿ)ರವರು ಬೈಂದೂರು ಕೊಲ್ಲೂರು ಮಾರ್ಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪವಾಡ ಸದೃಶ್ಯ ಅಪಾಯದಿಂದ ಪಾರಾಗಿದ್ದಾರೆ. ಶಿಕ್ಷಕರ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿದ್ದು, ಬೂತ್ಗೆ ತೆರಳುತ್ತಿರುವಾಗ ರಸ್ತೆಯಲ್ಲಿ ಚಲಿಸುತ್ತಿದ್ದ ನಾಗರಹಾವನ್ನು ರಕ್ಷಣೆ ಮಾಡುವ ಭರದಲ್ಲಿ ಅವರಿದ್ದ ಕಾರು ಪಕ್ಕಕ್ಕೆ ಎಸಯಲ್ಪಟ್ಟು ಪಲ್ಟಿಹೊಡೆದು ಸಂಪೂರ್ಣ ಜಖಂಗೊಂಡಿದೆ. ಈ ಸಂದರ್ಭ ಸಿನಿಮೀಯ ಮಾದರಿಯಲ್ಲಿ ಶೆಟ್ಟಿ ಅವರು ಮುಂದಿನ ಗಾಜನ್ನು ಒಡೆದು ಹೊರಬಂದಿದ್ದಾರೆ. ದೇಹಕ್ಕೆ ಸುಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಈ ಭಾಗದಲ್ಲಿ ಒಂದೇ ಸಮನೆ ಬಿರುಸಾದ ಮಳೆ ಬೀಳುತ್ತಿದ್ದು, ಅಪಘಾತ ಸಂಭವಿಸಿದ ಸ್ಥಳದ ಪಕ್ಕದಲ್ಲಿ ಆಳವಾದ ಕಂದಕ, ಮುಂಭಾಗದಲ್ಲಿ ವಿದ್ಯುತ್ ಕಂಬ, ಎಡ ಭಾಗದಲ್ಲಿ ದೊಡ್ಡ ಹಾವಿನ ಹುತ್ತವಿತ್ತು. ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನ ಸ್ಥಳಕ್ಕಾಗಮಿಸಿ ಕಾರನ್ನು ಮೆಲೆತ್ತಲು ಸಹಕರಿಸಿದರು. ನಾಗರಹಾವಿನ್ನು ರಕ್ಷಸಿದ್ದರಿಂದ ನಾಗದೇವರು ನಿಮ್ಮನ್ನು ರಕ್ಷಿಸಿದ್ದಾರೆ ಎನ್ನುವ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ನಡೆದ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಶಾಂತಿಯುತವಾಗಿ ಮತದಾನ ನಡೆಯಿತು. ಮಳೆಯ ನಡುವೆಯೇ , ಮತದಾನ ಕೇಂದ್ರಗಳಲ್ಲಿ ಮತದಾರರು ಸಾಲುಗಟ್ಟಿ ಮತದಾನ ಮಾಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರಿನ ಗ್ರಾಮೀಣ ಭಾಗಗಳಿಗೆ ಸರಕಾರಿ ಬಸ್ ಸಂಚಾರ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಶಾಲಾ ವಿದ್ಯಾರ್ಥಿಗಳು ಬೈಂದೂರು ತಹಶಿಲ್ದಾರರ ಕಛೇರಿಯ ಎದರು ಪ್ರತಿಭಟನೆ ನಡೆಸಿದರು. ಬೈಂದೂರಿನ ಗ್ರಾಮೀಣ ಭಾಗಗಳಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್ಗಳನ್ನು ಏಕಾಏಕಿ ನಿಲ್ಲಿಸಿದ್ದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕೂಡಲೇ ಬಸ್ ಸಂಚಾರ ಪುನರಾರಂಭ ಮಾಡಬೇಕು ಎಂದವರು ಪ್ರತಿಭಟನೆಯಲ್ಲಿ ಆಗ್ರಹಿಸಿದರು. ಬಳಿಕ ತಹಶೀಲ್ದಾರರು ಹಾಗೂ ಬೈಂದೂರು ಶಾಸಕರಿಗೆ ಮನವಿ ಸಲ್ಲಿಸಿದರು. ಬಳಿಕ ಪ್ರತಿಕ್ರಿಯಿಸಿದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಕೆಎಸ್ಆರ್ಟಿಸಿ ಅಧಿಕಾರಿಗಳು ಅನುಮತಿಯಿಲ್ಲದೇ ಬಸ್ ಓಡಿಸುತ್ತಿದ್ದು, ಖಾಸಗಿಯವರು ಲೋಕಾಯುಕ್ತ ಕೋರ್ಟ್ಗೆ ಹೊಗಿದ್ದರಿಂದಾಗಿ ಸಂಚಾರ ನಿಲ್ಲಿಸಿದ್ದಾರೆ. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಅವರಿಗೆ ತಿಳಿಸಿದ್ದು ಕೂಡಲೇ ಬಸ್ ಸಂಚಾರ ಆರಂಭಿಸುವಂತೆ ಕೇಳಿಕೊಂಡಿದ್ದೇನೆ. ಒಂದು ವೇಳೆ ಬಸ್ ಸಂಚಾರ ಆರಂಭಿಸದೇ ಇದ್ದಲ್ಲಿ ಬೈಂದೂರು ಮಾರ್ಗದ ಎಲ್ಲಾ ಸರಕಾರಿ ಬಸ್ಸುಗಳನ್ನು ತಡೆಹಿಡಿದು ಪ್ರತಿಭಟಿಸಲಾಗುವುದು ಎಂದವರು ಎಚ್ಚರಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕುಂದಾಪುರ ಸೇವಾಸಂಗಮ ಟ್ರಸ್ಟ್ ಆಶ್ರಯದಲ್ಲಿ ಮರವಂತೆ ಕಡಲ ಕಿನಾರೆ ಸಮೀಪದ ಮಹಾರಾಜ ಶ್ರೀ ವರಾಹಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಕಾರ್ಯಕ್ರಮ ಜರುಗಿತು. 2004ರ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಅಭಿಯಾನದ ರೂವಾರಿ, ಕುಂದಾಪುರ ಸೇವಾಸಂಗಮ ಟ್ರಸ್ಟ್ ಸಂಸ್ಥಾಪಕರಾದ ಡಾ. ಎಸ್.ಎನ್. ಪಡಿಯಾರ್ ಮಾತನಾಡಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣದಿಂದ ಉತ್ಪನ್ನವಾಗುವ ಧ್ವನಿ ತರಂಗಗಳಿಗೆ ವಿಶೇಷ ಶಕ್ತಿಯಿದ್ದು, ಕಡಲ್ಕೊರೆತದಂತಹ ಪ್ರಾಕೃತಿಕ ವಿಕೋಪವನ್ನು ತಡೆದು ಶಾಶ್ವತ ಪರಿಹಾರ ನೀಡಬಲ್ಲದು. ಈ ನಿಟ್ಟಿನಲ್ಲಿ 2004 ರಲ್ಲಿ ಸೇವಾಸಂಗಮ ಪಶ್ಚಿಮ ಕರಾವಳಿಯಾದ್ಯಂತ ಸ್ತೋತ್ರ ಪಠಣ ಅಭಿಯಾನವನ್ನು ಸಂಘಟಿಸಿ ಯಶಸ್ಸು ಕಂಡಿದೆ ಆದುದರಿಂದ ಕರಾವಳಿ ತೀರದ ಪ್ರತಿಯೊರ್ವರು ಸ್ತೋತ್ರ ಪಠಣದಲ್ಲಿ ಭಾಗಿಯಾಗಬೇಕಿದೆ ಎಂದು ಹೇಳಿದರು. 2004ರಲ್ಲಿ ಕರಾವಳಿಯ 6 ಸಾವಿರ ಮನೆಗಳಲ್ಲಿ ಸ್ತೋತ್ರ ಪಠಣ ಮಾಡಿದ್ದು, ಬಳಿಕ ಕರಾವಳಿಯಲ್ಲಿ ಕಡಲ್ಕೋರೆತದ ಭೀತಿ ಕ್ಷೀಣಿಸಿ ತೀರವಾಸಿಗಳಲ್ಲಿ ಆತಂಕ ದೂರವಾಗಿರುವುದನ್ನು ಕಂಡುಕೊಳ್ಳಲಾಗಿದೆ ಅಲ್ಲದೇ ಅಭಿಯಾನದಲ್ಲಿ ಪಾಲ್ಗೊಂಡವರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿಯ ಲೈಟ್ಹೌಸ್ನ ಶ್ರೀ ಜಟ್ಟಿಗೇಶ್ವರ ಯುತ್ ಕ್ಲಬ್ ಮತ್ತು ತೌಹೀದ್ ಎಜ್ಯುಕೇಶನಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಶ್ರೀ ಜಟ್ಟಿಗೇಶ್ವರ ದೇವಸ್ಥಾನದಲ್ಲಿ 15ನೇ ವರ್ಷದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಮಡಿ ನಾಗರಾಜ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ವೈ.ಶ್ರೀನಿವಾಸ ಖಾರ್ವಿ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಶಾಲೆ ತೊರೆಯಬಾರದು ಎಂಬ ಉದ್ದೇಶದಿಂದ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಳೆದ 15 ವರ್ಷಗಳಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತಿತರ ಅಗತ್ಯ ಸಲಕರಣೆಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಂಡು ಸತ್ಪ್ರಜೆಗಳಾಗಬೇಕು ಎಂದು ಹೇಳಿದರು. ಗಂಗೊಳ್ಳಿ ತೌಹೀದ್ ಎಜ್ಯುಕೇಶನಲ್ ಟ್ರಸ್ಟ್ನ ಜಕ್ರಿಯಾ ಚಂದಾವರ ಮತ್ತು ಲೈಟ್ ಹೌಸ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ನಾಗರಾಜ ಖಾರ್ವಿ ಕೊಲ್ಲೂರು ಶುಭ ಹಾರೈಸಿದರು. ಲೈಟ್ಹೌಸ್ ಶ್ರೀ…
