Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸುತ್ತಮುತ್ತಲಿನ ಪರಿಸರದಲ್ಲಿ ಅದ್ದೂರಿ ವೆಚ್ಚದ ಕನ್ನಡ ಸಿನಿಮಾ ಸಿಗ್ನೇಚರ್‌ ಚಿತ್ರತಂಡ ಬಿರುಸಿನ ಚಿತ್ರೀಕರಣದಲ್ಲಿ ತೊಡಗಿದೆ. ಕುಂದಾಪುರ ಮೂಲದ ಕೊರವಡಿ ಪೂರ್ಣಿಮಾ ಭಾಸ್ಕರ ಪೂಜಾರಿ ನಿರ್ಮಾಣದ, ವಿ. ಮನೋಹರ್‌ ಸಂಗೀತ ನಿರ್ದೇಶನದ ಎಂಎಂಕೆ ಮೂವೀಸ್‌ನ ವಿರಾಟ್‌ ಪ್ರೊಡಕ್ಷನ್‌ನ ಬ್ಯಾನರ್‌ನಲ್ಲಿ ಎ. 25ರಂದು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿನೆಮಾ ಚಿತ್ರೀಕರಣಕ್ಕೆ ಚಾಲನೆ ದೊರಕಿದೆ. ತಾಲೂಕಿನ ಹಾಲಾಡಿ, ಅಮಾಸೆಬೈಲು, ಕೋಡಿ, ಮರವಂತೆ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸುಂದರ ಸೊಬಗನ್ನು ಡಿಒಪಿ ಜೀವನ್‌ ಗೌಡ ಛಾಯಾಗ್ರಹಣದ ಮೂಲಕ ಸೆರೆಹಿಡಿಯಲಿದ್ದಾರೆ. ಕುಂದಾಪುರ ಮೂಲದ ನಟ ರಂಜಿತ್‌ ಹಾಗೂ ನಟಿ ಮಯೂರಿ ಚಿತ್ರದ ಮುಖ್ಯ ಪಾತ್ರದಲ್ಲಿ ಹಾಗೂ ಸಹ ಕಲಾವಿದರಾಗಿ ಸುನಿಲ್‌ ಪುರಾಣಿಕ್‌, ಕಿಶೋರ್‌, ವಾಣಿಶ್ರೀ, ಬಚ್ಚನ್‌ (ಖಳನಾಯಕ) ಹಾಗೂ ಬೇಬಿ ಮಾನ್ಯ ಕೊರವಡಿ ನಟಿಸಲಿದ್ದಾಳೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪುರಸಭೆಯ ಕಸದ ಲಾರಿಗಳಲ್ಲೂ ಮತದಾನ ಜಾಗೃತಿಯ ಫ್ಲೆಕ್ಸ್‌ ನೇತಾಡುತ್ತಿದೆ. ಚುನಾವಣೆ ಎಂಬ ಹಬ್ಬ ಬಂತು ಎಂದು ಯಕ್ಷಗಾನದ ಹಾಡು ಕೇಳುತ್ತಿದೆ. ಮತದಾನ ಜಾಗೃತಿಗೆ ಎಲ್ಲೆಡೆ ವಿವಿಧ ಪ್ರಯತ್ನ ನಡೆಯುತ್ತಿದೆ. ಚುನಾವಣಾ ಆಯೋಗವಂತೂ ಮತದಾನ ಪ್ರಮಾಣ ಹೆಚ್ಚವಾಗಲು ಇನ್ನಿಲ್ಲದ ಜಾಗೃತಿ ಅಭಿಯಾನ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ವಿವಿಧ ರೀತಿಯಲ್ಲಿ ಮತದಾನ ಮಾಡಿ ಎಂದು ಅರಿವು ಮೂಡಿಸುತ್ತಿದೆ. ನಗರದ ವಿವಿಧ ಭಾಗಗಳಲ್ಲಿ ಕನ್ನಡ ಹಾಗೂ ಕುಂದಗನ್ನಡದಲ್ಲಿ ಮತದಾನ ಮಾಡುತ್ತೇನೆ, ಏನೇ ಕೆಲಸ ಇದ್ದರೂ ಮತದಾನ ಮಾಡಿ ಎಂಬಿತ್ಯಾದಿ ಹೋರ್ಡಿಂಗ್‌ಗಳಿವೆ. ಮತಯಂತ್ರ ಹಾಗೂ ವಿವಿ ಪ್ಯಾಟ್‌ ಕುರಿತು ಜಾಗೃತಿ ಅಭಿಯಾನ ನಡೆಯುತ್ತಿದೆ. ಪುರಸಭಾ ವ್ಯಾಪ್ತಿಯ ವಿವಿಧೆಡೆ ಮತಯಂತ್ರಗಳ ಪ್ರಾತ್ಯಕ್ಷಿಕೆ, ಅಣಕು ಮತದಾನ ಮೂಲಕ ಮತಯಂತ್ರ ಮೇಲೆ ಸಂಶಯ ಇದ್ದರೆ ಹೋಗಲಾಡಿಸುವ ಯತ್ನ ನಡೆಯುತ್ತಿದೆ. ಯಂತ್ರದ ಮೂಲಕ ಈ ಹಿಂದೆ ಮತದಾನ ನಡೆದಿದ್ದರೂ ಹೊಸಬರಿಗೆ ಮತಯಂತ್ರದ ಮೂಲಕ ಮತದಾನ ಮಾಡುವುದು ಹೇಗೆ ಎಂಬ ಮಾಹಿತಿ ಬೇಕಿದ್ದರೆ, ಹಳಬರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲ ಕೆಲಸ-ಕಾರ್ಯ ಮಾಡಿದ್ದೇನೆ ಹಾಗೂ ಕಸ್ತೂರಿ ರಂಗನ್‌,ಸಿಆರ್‌ಝಡ್‌, ಡೀಮ್ಡ್ ಫಾರೆಸ್ಟ್‌ ಇನ್ನಿತರ ಪ್ರಮುಖ ಸಭೆಗಳಲ್ಲಿ ಪಾಲ್ಗೊಂಡ ಬಗ್ಗೆ ದಾಖಲೆಗಳು ನನ್ನಲ್ಲಿವೆ. ಅಗತ್ಯ ಬಿದ್ದಾಗ ಅದನ್ನು ಬಹಿರಂಗಪಡಿಸುತ್ತೇನೆ. ನಾನು ಏನು ಕೆಲಸ ಮಾಡಿದ್ದೇನೆ ಎನ್ನುವುದು ಜನರಿಗೆ ಗೊತ್ತಿದೆ ಎಂದು ಕುಂದಾಪುರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು. ಪ್ರಧಾನಿ ಮೋದಿ ಉಡುಪಿ ಭೇಟಿ ಕುರಿತು ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಕರೆಯಲಾದ ನಗರ ಹಾಗೂ ತಾಲೂಕಿನ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಿಜೆಪಿ ಸೇರ್ಪಡೆ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಭೇಟಿ ಕೊಟ್ಟ ಹಾಲಾಡಿಯವರು ಮೇ 1ರಂದು ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಕುರಿತು ಚರ್ಚಿಸಿದರು. ಬಿಜೆಪಿಗೆ ಸೇರ್ಪಡೆ ಇದೇ ವೇಳೆ ಬಿಜೆಪಿಗೆ ಸೇರ್ಪಡೆಯಾದ ಕುಂದಾಪುರ ಹೂವಿನ ಮಾರುಕಟ್ಟೆ ಸಂಘದ ಅಧ್ಯಕ್ಷ ಶಿವ ಮೆಂಡನ್‌, ಬುದ್ದರಾಜ ಶೆಟ್ಟಿ ಕೋಟೇಶ್ವರ ಅವರಿಗೆ ಹಾಲಾಡಿ ಶ್ರೀನಿವಾಸ ಶೆಟ್ಟರು ಪಕ್ಷದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ. ಕಳೆದ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದ 5 ವಲಯಗಳಲ್ಲಿ ಈ ಬಾರಿಯೂ ಕುಂದಾಪುರ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ರಾಜ್ಯದಲ್ಲಿ 13ನೇ ಹಾಗೂ ಕರಾವಳಿಯಲ್ಲಿ 10 ನೇ ಸ್ಥಾನ ಗಳಿಸಿದ ಮೂಡಬಿದಿರೆ ಅನಂತರದ ಸ್ಥಾನವನ್ನು ಕುಂದಾಪುರ ವಲಯ ಪಡೆದುಕೊಂಡಿದೆ. ಜಿಲ್ಲೆಯ 5 ವಲಯಗಳ ಪೈಕಿ ಕುಂದಾಪುರ ಪ್ರಥಮ, ಕಾರ್ಕಳ ಎರಡನೇ ಸ್ಥಾನ, ಉಡುಪಿ 3ನೇ, ಬ್ರಹ್ಮಾವರ 4ನೇ ಹಾಗೂ ಬೈಂದೂರು ವಲಯ 5ನೇ ಸ್ಥಾನ ಗಳಿಸಿದೆ. ಕಳೆದ ಬಾರಿಯೂ ಉಡುಪಿ ಜಿಲ್ಲೆಯ 5 ವಲಯಗಳ ಪೈಕಿ ಕುಂದಾಪುರ ಪ್ರಥಮ ಸ್ಥಾನ ಪಡೆದಿತ್ತು. ಬೈಂದೂರು ಕಳೆದ ಬಾರಿಯಂತೆ ಈ ಬಾರಿಯೂ 5ನೇ ಸ್ಥಾನ ಪಡೆದರೂ ಫಲಿತಾಂಶದಲ್ಲಿ ಹೆಚ್ಚಳವಾಗಿದೆ. ಕುಂದಾಪುರ: 5 ಶಾಲೆಗಳಿಗೆ ಶೇ. 100 ಫಲಿತಾಂಶ ಕುಂದಾಪುರ ವಲಯದಲ್ಲಿ 21 ಸರಕಾರಿ, 7 ಅನುದಾನಿತ ಹಾಗೂ 14 ಅನುದಾನ ರಹಿತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮೀನುಗಾರರ ಕಲ್ಯಾಣಕ್ಕೆ ಈವರೆಗೆ ಯಾವೊಂದೂ ಕಾರ್ಯಕ್ರಮ ಹಾಕಿಕೊಳ್ಳದ ಕಾಂಗ್ರೆಸ್‌ ಸರಕಾರವನ್ನು ಅಧಿಕಾರದಿಂದ ಇಳಿಸಿ. ಕರಾವಳಿ ತೀರದಲ್ಲಿ ಬಂದರು ಸ್ಥಾಪನೆ ಮಾಡುವ ಮೂಲಕ ಯುವಕರಿಗೆ, ಮೀನುಗಾರರಿಗೆ, ವ್ಯಾಪಾರಸ್ಥರಿಗೆ, ಪ್ರವಾಸೋದ್ಯಮಕ್ಕೆ ನೆರವಾಗಲು ಬಿಜೆಪಿ ಆಡಳಿತ ಬರುವಂತೆ ಮಾಡಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದರು. ಅವರು ತ್ರಾಸಿಯಲ್ಲಿ ಮಂಗಳವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು. ರಾಮ ವನವಾಸಕ್ಕೆ ಹೋಗುವಾಗ ಆತನ ಜತೆಗಿದ್ದುದು ಮೀನುಗಾರ ನಿಷಧರಾಜ ಹಾಗೂ ಕರ್ನಾಟಕದಲ್ಲಿ ಜನಿಸಿದ ಅಂಜನಿಪುತ್ರ ಹನೂಮಂತ. ಅಂತಹ ರಾಮಾಯಣದ ಆದರ್ಶಗಳನ್ನು ಹೊಂದಿದ ರಾಜ್ಯ ಇದು. ಆದರೆ ಇಲ್ಲಿ ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಜನ ಬೇಸತ್ತಿದ್ದಾರೆ. ಹಿಂದೂಗಳ , ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಈ ಮೂಲಕ ಕಾಂಗ್ರೆಸ್‌ ಸರಕಾರ ಜೆಹಾದಿ ಆಡಳಿತ ಮಾಡುತ್ತಿದೆ. ಹಿಂದೂ ಹೃದಯ ಸಾಮ್ರಾಟ ಶಿವಾಜಿ ಆದರ್ಶವಾಗುವ ಬದಲು ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಮೂಲಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಸಿದ್ದಾಪುರ: ಅಂಪಾರು ಗ್ರಾಮದ ಬಾಳ್ಕಟ್ಟು ಬಳಿ ಬುಧವಾರ ಕಾರು ಬೈಕ್‌ ಢಿಕ್ಕಿಯಾಗಿ ಗ್ರಾ. ಪಂ. ಮಾಜಿ ಸದಸ್ಯ ಮಹೇಶ ಹೆಗ್ಡೆ ಬೇಳೂರು (56) ಅವರು ಮೃತಪಟ್ಟಿದ್ದಾರೆ. ಬೇಳೂರು ಬಾಳ್ಕಟ್ಟು ಮನೆ ನಿವಾಸಿ ಮಹೇಶ ಹೆಗ್ಡೆ ಅವರು ಬೈಕ್‌ನಲ್ಲಿ ಸಿದ್ದಾಪುರದಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದಾಗ ಕುಂದಾಪುರದಿಂದ ಸಿದ್ದಾಪುರ ಕಡೆಗೆ ವೇಗವಾಗಿ ಸಾಗುತ್ತಿದ್ದ ಮಾರುತಿ ರಿಟ್ಜ್ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಬೈಕನ್ನು ಸುಮಾರು 15 ಮೀ. ದೂರ ಎಳೆದುಕೊಂಡು ಹೋಗಿ, ಕಾರು ಮರಕ್ಕೆ ಗುದ್ದಿ ಕಂದಕಕ್ಕೆ ಉರುಳಿದೆ. ಕಾರಿನಲ್ಲಿ ಚಾಲಕ ಹಾಗೂ ಇನ್ನೊಬ್ಬರು ಪ್ರಯಾಣಿಸುತ್ತಿದ್ದು, ಅವರಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಚಾಲಕನಿಗೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ, ಕಾರಿನ ಮಾಲಕ ಬೆಳ್ವೆ ಗ್ರಾಮದ ಶಂಕರ ಶೆಟ್ಟಿ ಸೂರೊಳಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. ಸರಳ ಸಜ್ಜನಿಕೆಯ ವ್ಯಕ್ತಿ ಮಹೇಶ್‌ ಹೆಗ್ಡೆ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯ ಕರ್ತರಾಗಿದ್ದು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿ ರುತು ಎಂ.ಗುತ್ತೇದಾರ್ (603) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಪ್ರಥ್ವಿಶ್ರೀ (592), ವಿನಾಯಕ್ ನಾಯಕ್ (575), ರೋಶಿನಿ ಪೂಜಾರಿ (566), ಜಿ.ಶಶಾಂಕ್ (558), ನಾಗಶ್ರೀ (553), ಸುಹಾಸ್ (545), ಅಕ್ಷೀತಾ (541), ಹರೀಶ ನಾಯಕ್ (539), ಶ್ರೀನಿಧಿ (538), ಸಂಜನಾ (535), ಶ್ರುತಿ (530) ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಬಾರಿಗೆ ಕೊಂಕಣಿ ತೃತೀಯ ಭಾಷೆಯಲ್ಲಿ ಪರೀಕ್ಷೆ ಬರೆದ ಎಲ್ಲಾ 13 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಅತ್ಯುನ್ನತ ಸಾಧನೆ ಮಾಡಿದೆ. ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಒಟ್ಟು 903 ಮಂದಿ ಪರೀಕ್ಷೆ ಬರೆದಿದ್ದು 885 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 98.66 ಫಲಿತಾಂಶವನ್ನು ಪಡೆದುಕೊಂಡಿದೆ. ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಲಾ ಪ್ರಶಾಂತ್ 624 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಮತ್ತು ಜಿಲ್ಲೆಗೆ ಪ್ರಥಮಸ್ಥಾನವನ್ನು ಹಾಗೂ ಲಾವಣ್ಯ ಶಹಾಪುರ 622 ಅಂಕ ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವಿಭಜಿತ ಜಿಲ್ಲೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸುಧನ್ವ ನಾಡಿಗೇರ 619 ಪ್ರಥಮ ಸ್ಥಾನ, ಶಶಾಂಕ 618 ದ್ವಿತೀಯ ಸ್ಥಾನ, ಸಂತೋಷ 617 ತೃತೀಯ ಸ್ಥಾನ ಹಾಗೂ ಪ್ರದೀಪ್ ರಾಮಪ್ಪ ದೇಸಾಯಿ 616 ಅಂಕ ಗಳಿಸಿ ಚತುರ್ಥಸ್ಥಾನವನ್ನು ಪಡೆದುಕೊಂಡಿದ್ದಾರೆ. ಆಳ್ವಾಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಒಟ್ಟು ಫಲಿತಾಂಶದಲ್ಲಿ 600 ಅಂಕಕ್ಕಿಂತ ಮೇಲ್ಪಟ್ಟು 46 ವಿದ್ಯಾರ್ಥಿಗಳು, 95%ಕ್ಕಿಂತ ಮೇಲ್ಪಟ್ಟು 62…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷ ದೇಶಕ್ಕೆ ಉತ್ತಮ ಆಡಳಿತ ನೀಡಿದೆ. ಗರಿಷ್ಠ ಸಾಧ್ಯ ಅಭಿವೃದ್ಧಿ ನಡೆಸಿದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವಿದ್ದರೆ ಇಲ್ಲಿಯೂ ಅಂತಹ ಸಾಧನೆ ಸಾಧ್ಯವಾಗುತ್ತದೆ. ಆದುದರಿಂದ ಇಲ್ಲಿನ ಜನರು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತನೀಡಿ ಅದರ 150 ಸ್ಥಾನಗಳ ಗೆಲುವಿನ ಗುರಿ ತಲಪಿಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಸಂಪರ್ಕ ರಾಜ್ಯ ಸಚಿವ ಮನೋಜ್ ಸಿಂಹ ಹೇಳಿದರು. ಬೈಂದೂರು ಬಿಜೆಪಿ ವಲಯ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಲ್ಲ ರಂಗಗಳ್ಲಿ ವಿಫಲವಾಗಿದೆ. ಇಲ್ಲಿನ ಕಾನೂನು ಸ್ಥಿತಿ ಹದಗೆಟ್ಟಿದೆ. ಉತ್ತಮ ಅಧಿಕಾರಿಗಳು ಹೊರಾಜ್ಯಗಳಿಗೆ ಹೋಗುತ್ತಿದ್ದಾರೆ ಇಲ್ಲವೆ ರಾಜಿನಾಮೆ ನೀಡುತ್ತಿದ್ದಾರೆ. ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅಭಿವೃದ್ಧಿಗಾಗಿ ಕೇಂದ್ರ ನೀಡಿದ ಅನುದಾನ ದುರ್ಬಳಕೆಯಾಗುತ್ತಿದೆ. ಸ್ಮಾರ್ಟ್‌ಸಿಟಿಯ ಕಾಮಗಾರಿಗಳು ಕುಂಟುತ್ತ ಸಾಗಿವೆ. ಇದರ ನಡುವೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮರಳಿ ಅಧಿಕಾರಕ್ಕೇರಲು ಪ್ರಯತ್ನಿಸುತ್ತಿದೆ. ಆದರೆ ಅದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ದೇವರು ಎನ್ನುವುದು ಒಂದು ನಂಬಿಕೆಯಾಗಿದ್ದು, ಧರ್ಮ ಜೀವನದ ಒಂದು ಭಾಗವಾಗಿದೆ. ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಗಳ ಮೂಲಕ ಜನರಲ್ಲಿ ಆಡಂಬರ ರಹಿತ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಬೇಕು ಎಂದು ಹಿರಿಯ ಧಾರ್ಮಿಕ ಧುರೀಣ ಬಿ. ಸಿ. ರಾವ್ ಶಿವಪುರ ಹೇಳಿದರು. ಕೆರ್ಗಾಲು ಗ್ರಾಪಂ ವ್ಯಾಪ್ತಿಯ ಮಟ್ನಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನಲ್ಲಿ ಕ್ಷೇತ್ರದ ನಾಗದೇವರ ಪುನರ್‌ಪ್ರತಿಷ್ಟಾ, ಆಶ್ಲೇಷಾ ಬಲಿ ಹಾಗೂ ವರ್ಧಂತ್ಯುತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದರು. ಧರ್ಮದ ಮುಖಗಳು ಬೇರೆಬೇರೆಯಾಗಿದ್ದು, ಸಮಜದಲ್ಲಿ ಇದನ್ನು ವಿಭಿನ್ನ ಭಾವನೆಗಳಿಂದ ನೋಡುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧರ್ಮದ ಬಗ್ಗೆ ಮಾತನಾಡುವುದು ತಪ್ಪು ಎಂಬ ವಾತಾವರಣ ನಿರ್ಮಾಣವಾಗಿದೆ. ಆದರೆ ಎಲ್ಲವೂ ಹೊಂದಿರುವ ನಾವಿಂದು ಇಲ್ಲದೆಡೆಗೆ ಸಾಗುತ್ತಿದ್ದೇವೆ. ಜೀವನದಲ್ಲಿ ಗೊತ್ತುಗುರಿ ಹಾಕಿಕೊಳ್ಳದೇ ನಾವು ಸೋತಿದ್ದೇವೆ. ಧರ್ಮದಿಂದ ಬದಲಾಗಿದ್ದೇವೆ. ನಮ್ಮ ಮೂಲ ಪರಂಪರೆ, ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯುತ್ತಿದ್ದೇವೆ. ಇದು ನಮ್ಮ ಹಿಂದೂ ಸಮಾಜದ ದೊಡ್ಡ ದುರಂತವಾಗಿದೆ. ದೇವಾಲಯಗಳಲ್ಲಿ ನಡೆಯುವ ಉತ್ಸವಗಳ ಮೂಲಕ…

Read More