ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಅವರ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ಬಿ. ಉದಯ ಕುಮಾರ್ ಶೆಟ್ಟಿ ನೇಮಕಗೊಂಡಿದ್ದಾರೆ. ಕುಂದಾಪುರ ತಾಲೂಕು ಶಂಕರನಾರಾಯಣ ಬಯಲೂರು ಹೆಬ್ಬಾಗಿಲು ಮನೆಯವರಾದ ಉದಯಕುಮಾರ್ ಶೆಟ್ಟಿ ಅವರು ಈ ಹಿಂದೆ ಉಡುಪಿ ತಹಸೀಲ್ದಾರರಾಗಿ, ಸೊರಬದ ಸಹಾಯಕ ಕಮೀಷನರ್ರಾಗಿ, ಕಾರವಾರ ನಗರಸಭೆ ಆಯುಕ್ತರಾಗಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯದರ್ಶಿಯಾಗಿ, ಅರಣ್ಯ ಸಚಿವರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಬನ್ನಾಡಿಯ ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀ ಗೋಪಾಲಕೃಷ್ಣನಿಗೆ ವಿಶೇಷ ಪೂಜೆ ನೆರವೇರಿಸುವುದರೊಂದಿಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಕೂಟಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಯೋಜಿಸಿತ್ತು. ಉಡುಪಿಯ ನಾಗರಾಜ ಶೇಟ್ ಮತ್ತು ಬಳಗದವರಿಂದ ಭಕ್ತಿ ಲಹರಿ ಹಾಗೂ ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ವರ್ಷಂಪ್ರತಿಯಂತೆ ಈ ವರ್ಷವೂ ಕೂಡಾ 6 ವರ್ಷದೊಳಗಿನ ಪುಟಾಣಿ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಧ್ಯಾಪಕಿ ವಿದ್ಯಾ ಹೇರ್ಳೆ ಗಿಳಿಯಾರು, ನಿವೃತ್ತ ಅಧ್ಯಾಪಕರಾದ ಯಾಳಕ್ಲು ನಾರಾಯಣ ಶೆಟ್ಟಿ ಮತ್ತು ನಿವೃತ್ತ ಮುಖ್ಯೋಪಾಧ್ಯಾಯರಾದ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿಯವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು. ವಿಟ್ಲಪಿಂಡಿಯ ದಿನ ಶ್ರೀ ಗೋಪಾಲಕೃಷ್ಣನ ಪುರ ಮೆರವಣಿಗೆಯನ್ನು ವಿಜೃಂಭಣೆಯಿಂದ ಏರ್ಪಡಿಸಲಾಯ್ತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಹಿಂದಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ಭೋಜ ಹೆಗ್ಡೆ, ಕಾರ್ಯದರ್ಶಿ ಯು.ವಸಂತ ಶೆಟ್ಟಿ, ಪ್ರಧಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2018-19 ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಯಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕೃತರಾದ ಶಿಕ್ಷಕರ ವಿವರಗಳು ಹೀಗಿವೆ. ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು: ಗಿರೀಶ್ ಶ್ಯಾನಭಾಗ್, ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಲಗೋಣ (ಬೈಂದೂರು ವಲಯ), ಸುಮನ ಎನ್., ಸಹ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ (ಕುಂದಾಪುರ ವಲಯ) ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು: ಮೋಹಿನಿ ಬಾಯಿ, ಮುಖ್ಯ ಶಿಕ್ಷಕಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ (ಬೈಂದೂರು ವಲಯ), ಕಿಶನ್ ರಾಜ್ ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ವೆ (ಕುಂದಾಪುರ ವಲಯ). ಪ್ರೌಢಶಾಲಾ ಶಿಕ್ಷಕರು: ಪ್ರಕಾಶಿನಿ ಸಹ ಶಿಕ್ಷಕಿ ಸರಕಾರಿ ಪ್ರೌಢಶಾಲೆ ಹೆಸ್ಕತ್ತೂರು (ಕುಂದಾಪುರ ವಲಯ), ಭಾಸ್ಕರ್ ಮಯ್ಯ ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು (ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಳೆಯಿಂದಾಗಿ ಸಂಪೂರ್ಣ ಕೆಟ್ಟು ಹೋಗಿದ್ದ ಕುಂದಾಪುರ ತಾಲೂಕು ಹೊಸೂರು ಗ್ರಾಮದ ಕದಳಿ – ಮತ್ತಿಕೊಡ್ಲು ರಸ್ತೆಯನ್ನು ಕೆಳಹೊಸೂರಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಒಂದು ದಿನದ ಶ್ರಮಾದಾನದ ಮೂಲಕ ದುರಸ್ತಿ ಮಾಡಿದರು. ರಸ್ತೆ ದುರಸ್ತಿಗಾಗಿ ಹಲವು ಭಾರಿ ಗ್ರಾಮ ಪಂಚಾಯತಿಯ ಗಮನಕ್ಕೆ ತರಲಾಗಿತ್ತು. ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿಯವರಿಗೂ ಮನವಿಯನ್ನು ಸಲ್ಲಿಸಲಾಗಿತ್ತು. ಪ್ರತೀ ವರ್ಷವೂ ಗ್ರಾಮ ಪಂಚಾಯಿತಿಯ ಅಲ್ಪ ಸ್ವಲ್ಪ ಅನುದಾನದಲ್ಲಿ ಮಣ್ಣು ಹಾಕಿ ದುರಸ್ತಿ ಮಾಡಿದರೂ, ಮಳೆಗಾಲ ಬಂತೆಂದರೆ ಇಲ್ಲಿಯ ಗ್ರಾಮಸ್ಥರಿಗೆ ವಾಹನದ ಪಯಣ ಕಷ್ಟಸಾಧ್ಯವಾಗುತ್ತಿತ್ತು. ಈ ವರ್ಷದ ಮಳೆಗೆ ರಸ್ತೆಯೆಲ್ಲ ಕೊಚ್ಚಿ ಹೋಗಿ, ಈ ರಸ್ತೆಯಲ್ಲಿ ವಾಹನ ಚಾಲನೆ ಅಸಾಧ್ಯವಾಗಿತ್ತು. ಗ್ರಾಮಸ್ಥರ ಕಷ್ಟವನ್ನು ಮನಗಂಡ ಗ್ರಾಮದ ಯುವಕರು ಹೊಸೂರಿನ ಕಾಂಗ್ರೆಸ್ ಕಾರ್ಯಕರ್ತರಾದ ರಾಘವೇಂದ್ರ ಪೂಜಾರಿ ನೇತೃತ್ವದಲ್ಲಿ ಕೆಟ್ಟುಹೊಗಿದ್ದ ರಸ್ತೆಯನ್ನು ಕಲ್ಲು ಮಣ್ಣು ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಮಾಡವಷ್ಟು ದುರಸ್ತಿಗೊಳಿಸಲಾಯಿತು. ಈ ವರ್ಷವಾದರೂ ಸರಕಾರದಿಂದ ಅನುದಾನ ದೊರಕಲಿ ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಹಾತ್ಮ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಸಹಿಷ್ಣುತೆಯಂತಹ ವಿಚಾರಗಳು ಭಾರತಕ್ಕಷ್ಟೇ ಅಲ್ಲ, ಪ್ರಸಕ್ತ ಕಾಲಘಟ್ಟದಲ್ಲಿ ಇಡೀ ಜಗತ್ತಿಗೆ ಪ್ರಸ್ತುತ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು. ಬೈಂದೂರಿನ ರಂಗಸುರಭಿ ಮತ್ತು ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ ರೋಟರಿ ಸಮುದಾಯ ಭವನದಲ್ಲಿ ಧಾರವಾಡದ ರಂಗಾಯಣ ತಂಡ ’ಗಾಂಧಿ ೧೫೦-ಒಂದು ರಂಗಪಯಣ’ ಭಾಗವಾಗಿ ಭಾನುವಾರ ಪ್ರದರ್ಶಿಸಿದ ಬೊಳುವಾರು ಮಹಮದ್ ಕುಂಞಿ ಅವರ ’ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ರಂಗರೂಪಕವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಗಾಂಧೀಜಿ ವ್ಯಕ್ತಿತ್ವ, ಬದುಕು, ಸಂದೇಶ-ಸಾಧನೆಗಳು ನಾಟಕಗಳಲ್ಲಿ ಹಿಡಿದಿಡಲಾಗದಷ್ಟು ಅಗಾಧ ಮತ್ತು ಉತ್ತುಂಗವಾದವುಗಳು. ಆದರೆ ಅವುಗಳನ್ನು ಜನಮನದಲ್ಲಿ ಬಿತ್ತುವ ಕೆಲಸವನ್ನು ಕೆಲಮಟ್ಟಿಗೆ ರಂಗಪ್ರದರ್ಶನಗಳು ಮಾಡಬಹುದಾದ್ದರಿಂದ ಅಂತಹ ಕಾರ್ಯ ಸ್ತುತ್ಯರ್ಹ ಎಂದು ಅವರು ಹೇಳಿದರು. ರೋಟರಿ ಅಧ್ಯಕ್ಷ ಐ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ ಸ್ವಾಗತಿಸಿದರು. ಸುರಭಿಯ ನಿರ್ದೇಶಕ ಕೃಷ್ಣಮೂರ್ತಿ ಉಡುಪ ವಂದಿಸಿದರು. ಸುಧಾಕರ ಪಿ. ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಪುರಸಭಾ ಚುನಾವಣೆಯಲ್ಲಿ ಬಿಜೆಪಿ 14 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೇ, ಕಾಂಗ್ರೆಸ್ 8 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಪುರಸಭೆಯ 23 ವಾರ್ಡುಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ ಇಲ್ಲಿದೆ. ಫೆರಿ ರಸ್ತೆ ವಾರ್ಡ್ – ಅಬು ಮಹಮ್ಮದ್ (ಕಾಂಗ್ರೆಸ್) ಮದ್ದುಗುಡ್ಡೆ ವಾರ್ಡ್ – ರಾಘವೇಂದ್ರ ಖಾರ್ವಿ (ಬಿಜೆಪಿ) ಈಸ್ಟ್ ಬ್ಲಾಕ್ ವಾರ್ಡ್ – ಪ್ರಭಾವತಿ ಶೆಡ್ತಿ (ಕಾಂಗ್ರೆಸ್) ಖಾರ್ವಿಕೇರಿ ವಾರ್ಡ್ – ಚಂದ್ರಶೇಖರ ಖಾರ್ವಿ (ಕಾಂಗ್ರೆಸ್) ಬಹದ್ದೂರ್ ಶಾ ವಾರ್ಡ್ – ಸಂದೀಪ ಖಾರ್ವಿ (ಬಿಜೆಪಿ) ಚಿಕ್ಕನಸಾಲು ಎಡಬದಿ ವಾರ್ಡ್ – ಸಂತೋಷ್ ಶೆಟ್ಟಿ (ಬಿಜೆಪಿ) ಕುಂದಾಪ್ರ ಡಾಟ್ ಕಾಂ ಸುದ್ದಿ. ಮೀನು ಮಾರ್ಕೆಟ್ ವಾರ್ಡ್ – ಶ್ರೀಧರ ಶೇರೆಗಾರ್ (ಕಾಂಗ್ರೆಸ್) ಚಿಕ್ಕನಸಾಲು ಬಲಬದಿ ವಾರ್ಡ್ – ಕೆ.ಜಿ ನಿತ್ಯಾನಂದ (ಕಾಂಗ್ರೆಸ್) ಸರಕಾರಿ ಆಸ್ಪತ್ರೆ ವಾರ್ಡ್ – ದೇವಕಿ ಸಣ್ಣಯ್ಯ (ಕಾಂಗ್ರೆಸ್) ಚರ್ಚ್ ರೋಡ್ ವಾರ್ಡ್ – ಪ್ರಭಾಕರ್ (ಬಿಜೆಪಿ) ಸೆಂಟ್ರಲ್ ವಾರ್ಡ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕುಂದಾಪುರ ಪುರಸಭೆಯ 23 ವಾರ್ಡುಗಳ ಪೈಕಿ 14 ವಾರ್ಡುಗಳನ್ನು ಭಾರತೀಯ ಜನತಾ ಪಾರ್ಟಿ, 8 ವಾರ್ಡುಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ 1 ವಾರ್ಡ್ನ್ನು ಪಕ್ಷೇತರ ಅಭ್ಯರ್ಥಿ ಗೆದ್ದುಕೊಂಡು, ಬಿಜೆಪಿ ದೊಡ್ಡ ಪಕ್ಷವಾಗಿ ಬೀಗಿದೆ. ಇಂದು ಬೆಳಿಗ್ಗೆ ಕುಂದಾಪುರದಲ್ಲಿ ನಡೆದ ಮತ ಎಣಿಕೆ ಕೇಂದ್ರದ ಬಳಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಪಕ್ಷದ ಗೆಲುವಿನ ಸೂಚನೆ ದೊರೆಯುತ್ತಿದ್ದಂತೆ ಸಂಭ್ರಮಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೆದ್ದ ಅಭ್ಯರ್ಥಿಗಳೊಂದಿಗೆ ವಿಜಯೋತ್ಸವ ಆಚರಿಸಿದರು.
6 ಭಾರಿ ರಾಷ್ಟ್ರ ಮಟ್ಟದ ಪದಕ ವಿಜೇತೆ. ಮೊದಲು ಭಾರಿಗೆ ಅಂತರಾಷ್ಟ್ರೀಯ ಸ್ವರ್ಧೆಯತ್ತ ಹೆಜ್ಜೆ ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಆರು ಭಾರಿ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಅಥೆಟಿಕ್ಸ್ನಲ್ಲಿ ಭಾಗವಹಿಸಿ ತ್ರಿಪಲ್ ಜಂಪ್, ಹೈಜಂಪ್, ಲಾಂಗ್ ಜಂಪ್ ಮೊದಲಾದ ಕ್ರೀಡೆಗಳಲ್ಲಿ ಸತತವಾಗಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಗೆಲ್ಲುತ್ತಲೇ ತಮ್ಮ ಕ್ರೀಡಾ ಪ್ರಾವೀಣ್ಯತೆಯನ್ನು ಮೆರೆಯುತ್ತಾ ಬಂದಿರುವ ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಾಕುಮಾರಿ ಜಿ. ಅವರು ಇದೀಗ ಅಂತರಾಷ್ಟ್ರೀಯ ಮಟ್ಟದ ಸ್ವರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ತಯಾರಿ ನಡೆಸುತ್ತಿದ್ದಾರೆ. 2013ರಿಂದಲೂ ಇಂಡಿಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸುತ್ತಿರುವ ಶಾಂತಾಕುಮಾರಿ ಅವರು ಪ್ರತಿ ವರ್ಷವೂ ವಿವಿಧ ವಿಭಾಗಳಲ್ಲಿ ಪದಕ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಲು ಅರ್ಹತೆ ಪಡೆಯುತ್ತಲೇ ಬಂದಿದ್ದಾರೆ. ಪ್ರಸಕ್ತ ವರ್ಷ ಮಂಗಳೂರಿನಲ್ಲಿ ನಡೆದ ನ್ಯಾಶನಲ್ ಅಥ್ಲೆಟಿಕ್ಸ್ನಲ್ಲಿ 1 ಚಿನ್ನ, 2 ಬೆಳ್ಳಿಯ ಪದಕವನ್ನು ಗೆದ್ದಿದ್ದು ಅಂತರಾಷ್ಟ್ರೀಯ ಮಟ್ಟದ ಸ್ವರ್ಧೆ ’ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಒಪನ್ ಮೀಟ್ನಲ್ಲಿ ಭಾಗವಹಿಸಲು ಅಣಿಯಾಗುತ್ತಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿಗೆ ಸಮೀಪದ ಶಿರೂರು ಕೋಣಮಕ್ಕಿ ಸೇತುವೆ ಬಳಿ ಕುಟುಂಬ ಸದಸ್ಯರ ಜೊತೆ ಪಿಕ್ನಿಕ್ ಬಂದ ವೇಳೆ ನದಿಯಲ್ಲಿ ಈಜಲು ತೆರಳಿದ್ದ ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಭಟ್ಕಳದ ರಾಜು(28) ಹಾಗೂ ಜಮೀರ್ (22) ಮೃತ ದುರ್ದೈವಿಗಳು. ಸೇತುವೆ ಬಳಿ ರಾಜು ನದಿಯಲ್ಲಿ ಈಜುತ್ತಿದ್ದ ವೇಳೆ ನೀರಿನ ಸುಳಿಗೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ಇದನ್ನು ಗಮನಿಸಿ ಅವರನ್ನು ರಕ್ಷಿಸಲು ತೆರಳಿದ ಜಮೀರ್ ಕೂಡ ಈಜಲಾಗದೆ ನೀರು ಪಾಲಾದರು. ಅಕ್ಕಪಕ್ಕದ ಮನೆಯ ಒಟ್ಟು ಎಂಟು ಮಂದಿ ಬಂದಿದ್ದರೆನ್ನಲಾಗಿದೆ. ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಹಾಗೂ ಸಿಬ್ಬಂಧಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರತಿಭೆ ಇದೆ. ಆದರೆ ಅದರ ವಿಕಾಸಕ್ಕೆ ವೇದಿಕೆ ಬೇಕು. ಜೇಸಿಐ ಅಂತಹ ವೇದಿಕೆ ಎಂದು ಕುಂದಾಪುರ ಜೇಸಿಐ ಸ್ಥಾಪಕಾಧ್ಯಕ್ಷ ಎ. ಎಸ್. ಎನ್. ಹೆಬ್ಬಾರ್ ಹೇಳಿದರು. ಶನಿವಾರ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ನಡೆದ ಬೈಂದೂರು ಜೇಸಿಐ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಮಾತನಾಡಿದರು. ಜೇಸಿ ಧ್ಯೇಯವಾಕ್ಯವು ದೇವರಲ್ಲಿ ನಂಬಿಕೆ ಇರಿಸಿಕೊಳ್ಳಬೇಕು ಎನ್ನುತ್ತದೆ. ಆದರೆ ವ್ಯಕ್ತಿಯ ಉದ್ದಾರಕ್ಕೆ ಅದಷ್ಟೇ ಸಾಲದು. ಅದರೊಂದಿಗೆ ಸ್ವಪ್ರಯತ್ನವೂ ಅಗತ್ಯ. ಜೇಸಿ ವ್ಯಕ್ತಿಯ ವಿಕಾಸಕ್ಕೆ ಆದ್ಯತೆ ನೀಡುತ್ತದೆ. ಆ ಮೂಲಕ ಜೇಸಿ ಸದಸ್ಯ ತನ್ನ ಸಾಮಾಜಿಕ ಹೊಣೆ ನಿಭಾಯಿಸುದರ ಜತೆಗೆ ಕೈಗೊಳ್ಳುವ ಉದ್ಯೋಗದಲ್ಲಿ ಯಶಸ್ಸು ಪಡೆಯುವುದೂ ಸಾಧ್ಯವಾಗಬೇಕು ಎನ್ನುವ ಗುರಿ ಹೊಂದಿದೆ ಎಂದು ಅವರು ಹೇಳಿದರು. ಶಿರೂರು ಜೇಸಿಐ ಪ್ರವರ್ತಿಸಿದ ಬೈಂದೂರು ಸಿಟಿ ಘಟಕವನ್ನು ಉದ್ಘಾಟಿಸಿದ ವಲಯಾಧ್ಯಕ್ಷ ರಾಕೇಶ್ ಕುಂಜೂರ್ ಮಾತನಾಡಿ ಜೇಸಿಐ ವಿಶಾಲ ಸಮುದ್ರ. ಸಮುದ್ರದಲ್ಲಿ ಇರುವ ಮುತ್ತುರತ್ನಗಳು…
