Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಲವ್ ಜಿಹಾದ್ ತಡೆಗೆ ಪ್ರತಿ ಗ್ರಾಮ ಮಟ್ಟದಲ್ಲಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ದುರ್ಗಾವಾಹಿನಿ ಮೂಲಕ ಟಾಸ್ಕ್‌ಪೋರ್ಸ್ ರಚಿಸಿ, ಲವ್ ಜಿಹಾದ್ ವಿರುದ್ದ ಹೋರಾಟ ನಡೆಸಲಾಗುತ್ತದೆ. ಹಿಂದೂ ಹೆಣ್ಣು ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಎಂದು ಬಜರಂಗದಳ ಪ್ರಾಂತ್ಯ ಸಂಚಾಲಕ ಸುನೀಲ್ ಕೆ. ಆರ್. ಎಚ್ಚರಿಸಿದರು. ಇತ್ತಿಚಿಗೆ ಆತ್ಮಹತ್ಯೆ ಮಾಡಿಕೊಂಡ ಉಪ್ಪಿನಕುದ್ರು ಶಿಲ್ವಾ ದೇವಾಡಿಗ ಸಾವಿಗೆ ನ್ಯಾಯ ಹಾಗೂ ಜನಜಾಗೃತಿಗಾಗಿ ಮಂಗಳವಾರ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಕುಂದಾಪುರ ಪ್ರಖಂಡದಿಂದ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆ ಸಭೆಯಲ್ಲಿ ಮಾತನಾಡಿ, ಇಸ್ಲಾಂ ಧರ್ಮಕ್ಕೆ ಮತಾಂತರ ಪ್ರಚೋದನೆಯೇ ಶಿಲ್ವಾ ಆತ್ಮಹತ್ಯೆಗೆ ಕಾರಣವಾಗಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂದು ಅಭಿಪ್ರಾಯಪಟ್ಟರು. ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಕರಾವಳಿ ಪ್ರದೇಶದ ಸಾಕಷ್ಟು ಕುಟುಂಬಗಳು ಲವ್ ಜಿಹಾದ್ ಕಾರಣದಿಂದ ಕಣ್ಣೀರು ಸುರಿಸುತ್ತಿವೆ. ಈವತ್ತು ಅದಕ್ಕೆ ಕುಂದಾಪುರವೂ ಸೇರಿಕೊಂಡಿದೆ. ಇನ್‌ಗ್ರಾಮ್, ಫೇಸ್‌ಬುಕ್ ವಾಟ್ಸ್‌ಅಪ್‌ನಿಂದ ಆದಷ್ಟು ಅಂತರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುಜಿಡಿ ಕಾಮಗಾರಿಗಾಗಿ ರಸ್ತೆ ತುಂಡಿರಿಸಿ ಬಳಿಕ ಹಾಕಿರುವ ತೇಪ ಸಮರ್ಪಕವಾಗಿಲ್ಲ. ಚೇಂಬರ್ ಕೂಡಾ ಕೆಲವು ಕಡೆ ರಸ್ತೆಯಿಂದ ಮೇಲೆ, ಕೆಳಗೆ ಅಳವಡಿಸಲಾಗಿದೆ. ಈ ರಸ್ತೆಯಲ್ಲಿಯೇ ಸಂಚರಿಸುವುದೇ ಸಮಸ್ಯೆಯಾಗಿದೆ ಯುಜಿಡಿ ಕಾಮಗಾರಿ ಬಗ್ಗೆ ಅಧಿಕಾರಿಗಳ ಜೊತೆ ಸಭೆ, ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಗಷ್ಟೇ ಸೀಮಿತವಾಗಿದೆ ಎಂದು ಆಡಳಿತ ಪಕ್ಷದ ಸದಸ್ಯ ಸಂತೋಷ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಕುಂದಾಪುರ ಪುರಸಭೆ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಯಲ್ಲಿ ಅವರು ಮಾತನಾಡಿ ಕಾಲಮಿತಿಯೊಳಗೆ ಯುಜಿಡಿ ಕಾಮಗಾರಿ ಸರಿಪಡಿಸುವಂತೆ ಒತ್ತಾಯಿಸಿದರು. ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉತ್ತರಿಸಿ, ಸಂಚಾರಕ್ಕೆ ಎಲ್ಲೆಲ್ಲಿ ರಸ್ತೆ ಯೋಗ್ಯವಾಗಿಲ್ಲವೋ ಅಲ್ಲಲ್ಲಿ ತುರ್ತು ದುರಸ್ತಿಮಾಡಿ, ಬಿಲ್ ಗುತ್ತಿಗೆದಾರರಿಗೆ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಯುಜಿಡಿ ಕಾಮಗಾರಿ ನಡೆಸಿ, ಸಂಚಾರ ಸಮಸ್ಯೆ ಮಾಡಿದ ಗುತ್ತಿಗೆದಾರರ ವಿರುದ್ದ ದೂರು ದಾಖಲಿಸುವಂತೆ ಸಂತೋಷ್ ಶೆಟ್ಟಿ ಒತ್ತಾಯಿಸಿದ್ದು, ಅದಕ್ಕೆ ಆಡಳಿತ ಹಾಗೂ ವಿರೋಧ ಸದಸ್ಯರು ದನಿ ಗೂಡಿಸಿದರು. ವಿರೋಧ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಮಿತ್ರ ಪತ್ರಿಕೆಯ ಸಂಪಾದಕ ಟಿ.ಪಿ. ಮಂಜುನಾಥ ಅವರು ಸಂಜೆಪ್ರಭ ಮಾಧ್ಯಮ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೂನ್.4ರಂದು ಸಂಜೆಪ್ರಭ ಪತ್ರಿಕೆಯ ದಶಮ ಸಂಭ್ರಮದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಟಿ. ಪಿ. ಮಂಜುನಾಥ ಅವರಿಗೆ ಸಂಜೆಪ್ರಭ ಮಾಧ್ಯಮ ಸೇವಾರತ್ನ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಉಪ್ಪಿನಕುದ್ರುವಿನ ಯುವತಿ ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಪ್ರಮುಖ ಆರೋಪಿ ಅಝೀಝ್ (32) ಹಾಗೂ ಆತನಿಗೆ ಸಹಕರಿಸಿದ ರಹೀಮ್ (34) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ‌. ಮೃತ ಯುವತಿ ಶಿಲ್ಪಾ, ಅಜೀಜ್ ಎಂಬಾತನ ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಜೀಜ್​​ ಕೆಲಸದ ಆಕೆ ವೇಳೆ ಪುಸಲಾಯಿಸಿ ಸ್ನೇಹ ಬೆಳೆಸಿಕೊಂಡಿದ್ದಲ್ಲದೇ, ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಿಕೊಂಡಿದ್ದ. ಬಳಿಕ ಮತಾಂತರವಾಗಿ ಮದುವೆ ಮಾಡುಕೊಳ್ಳುವಂತೆ ಶಿಲ್ಪಾಗೆ ಅಝೀಜ್ & ಆತನ ಹೆಂಡತಿ ಒತ್ತಾಯ ಮಾಡಿದ್ದು ಇದರಿಂದಲೇ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಫಲಿಸದೆ ಶಿಲ್ಪಾ ಸಾವನ್ನಪ್ಪಿದ್ದಳು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಝೀಜ್‌ ಮತ್ತು ಆತನ ಪತ್ನಿ ಸಲ್ಮಾ ವಿರುದ್ದ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು. ಅದರಂತೆ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ ಅಝೀಜ್‌ನನ್ನು ಸೋಮವಾರ ಬೆಳಿಗ್ಗೆ ಹೆಮ್ಮಾಡಿಯಲ್ಲಿ ವಶಕ್ಕೆ ಪಡೆದುಕೊಂಡು ಬಳಿಕ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬ್ಯಾರೀಸ್ ವಿದ್ಯಾ ಸಂಸ್ಥೆಗಳು ಕೋಡಿ ಕುಂದಾಪುರ ಇವರು ಪ್ರಾರಂಭಿಸಿದ ” ಸ್ವಚ್ಛ ಕಡಲ ತೀರ – ಹಸಿರು ಕೋಡಿ” ಅಭಿಯಾನ 2022 5ನೇ ಹಂತ ಕೋಡಿಯಲ್ಲಿ ದಿನಾಂಕ 29-05-2022 ರವಿವಾರ ನಡೆಯಿತು. ವಿದ್ಯಾರ್ಥಿಗಳು, ಶಿಕ್ಷಕರು ,ಆಡಳಿತ ಮಂಡಳಿಯ ಸದಸ್ಯರು, ರಕ್ಷಕ- ಶಿಕ್ಷಕ ಸಂಘದ ಸದಸ್ಯರು, ಪೋಷಕರು , ಪ್ರಾಕ್ತನ ವಿದ್ಯಾರ್ಥಿಗಳು, ಊರಿನ ಪ್ರಮುಖರು ಹಾಗೂ ಮಹಾಜನರು ಮತ್ತು ನಿಸರ್ಗ ಪ್ರಿಯರು ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕೋಡಿಯ ಕಡಲ ತೀರವನ್ನು ಸ್ವಚ್ಛಗೊಳಿಸಿದರು. ಈ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಕುಂದಾಪುರ ಪುರಸಭೆಯ ಚೀಫ್ ಆಫೀಸರ್ ಹಾಗೂ ಪದಾಧಿಕಾರಿಗಳಿಗೆ ಮತ್ತು ಎಲ್ಲಾ ಸಿಬ್ಬಂದಿವರ್ಗದವರಿಗೆ ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ನಾವಿರುವ ಪ್ರದೇಶದ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿಯನ್ನು ತಿಳಿಸುವ ಕಾರ್ಯ ನಿರಂತರವಾಗಿ ಈ ಅಭಿಯಾನದ ಮೂಲಕ ನಡೆಯುತ್ತಿರುವದರ ಕುರಿತು ಹರ್ಷ ವ್ಯಕ್ತ ಪಡಿಸುತ್ತಾ ಇದರಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾರ್ನಾಡ್ ಸದಾಶಿವರಾಯರು ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನೆಲ್ಲಾ ಶ್ರೀಮಂತಿಕೆ ಧಾರೆಯೆರೆದರೆ, ಅವರ ಪತ್ನಿ ಸ್ವಾತಂತ್ರ್ಯ ಹೋರಾಟಗಾರರ ಹಸಿವು ನೀಗಿಸಲು ಧಾರೆ ಸೀರೆ ತ್ಯಾಗ ಮಾಡಿದರು. ಮಹಿಳೆಯರು ಮಾಂಗಲ್ಯವನ್ನೇ ತ್ಯಾಗ ಮಾಡಿದರು. ಇದು ಕರಾವಳಿಗರ ಕೊಡುಗೆಯಾಗಿದೆ. ಸ್ವಾಂತ್ರ್ಯಕ್ಕಾಗಿ ತ್ಯಾಗ, ಹೋರಾಟ ಮಾಡಿದ ಎಲ್ಲರ ನೆನಪಿಸಿಕೊಳ್ಳುವುದೇ ಅಮೃತ ಭಾರತಿಗೆ ಕನ್ನಡದ ಆರತಿ ಉದ್ದೇಶ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ಬಸ್ರೂರು ಶ್ರೀ ಶಾರದಾ ಕಾಲೇಜ್ ಆವರಣದಲ್ಲಿ ಶನಿವಾರ ನಡೆದ ಅಮೃತ ಭಾರತಿಗೆ ಕನ್ನಡ ಆರತಿ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರಕ್ಕಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟವರ, ದುಡಿದವರ, ಮಡಿದವರ ಹೋರಾಟ ನೆನಪಿಸಿಕೊಂಡು ನಾವು ಸ್ವಾತಂತ್ರ್ಯದ ನಂತರ ಎಷ್ಟು ಹೆಜ್ಜೆ ಮುಂದಿಟ್ಟಿದ್ದೇವೆ ಎನ್ನುವುದ ಯೋಚಿಸಿದರೆ ನಮ್ಮ ದೂರಗಾಮಿತ್ವ, ಕ್ರಮಿಸುವ ದೂರ ಬಹಳಷ್ಟಿದೆ ಎಂದು ಅನ್ನಿಸುತ್ತಿದೆ. ಸ್ವಾತಂತ್ರ್ಯ ನಂತರ ಅನೇಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಮೇ.28: ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಯುವ ಜನರಿಗೆ ಅರಿವು ಮೂಡಿಸುವ ಹಾಗೂ ಅವರಲ್ಲಿ ದೇಶಪ್ರೇಮ, ದೇಶಾಭಿಮಾನ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತಿಹಾಸ ಗೊತ್ತಿದ್ದಲ್ಲಿ ಮಾತ್ರ ಯಾರೊಬ್ಬರು ಇತಿಹಾಸವನ್ನು ಸೃಷ್ಠಿಸಲು ಸಾಧ್ಯ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಬಗ್ಗೆ ಪ್ರತಿಯೊಬ್ಬರು ತಿಳಿಯುವುದರೊಂದಿಗೆ ದೇಶ ಪ್ರೇಮವನ್ನು ಹಾಗೂ ದೇಶಾಭಿಮಾನವನ್ನು ಬೆಳೆಸಿಕೊಂಡು ನಾವು ಪಡೆದಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅನೇಕ ಮಹಾನ್ ನಾಯಕರುಗಳಾದ ಜಾನ್ಸಿ ರಾಣಿ ಲಕ್ಷಿö್ಮÃ ಬಾಯಿ, ತಾಂತ್ಯಾ ಟೋಪಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಾಲಾ ಗಂಗಾಧರ ತಿಲಕ, ಸುಭಾಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಮೇ28: ಕೋಟೇಶ್ವರದ ಅಂಕದಕಟ್ಟೆ ಎಂಬಲ್ಲಿ ಮೇ.27ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೊಳಹಳ್ಳಿ ಗಣೇಶ ಶೆಟ್ಟಿ ಅವರನ್ನು ಶುಕ್ರವಾರ ಸಂಜೆ ಬಂಧಿಸಲಾಗಿದೆ. ಆತ್ಮಹತ್ಯೆ ಸಂಬಂಧ ಮೃತರ ಪುತ್ರ ಸುಧೀಂದ್ರ ಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಸೆಕ್ಷನ್ 306 ಪ್ರಕಾರ ಪ್ರಕರಣ ದಾಖಲಾಗಿತ್ತು. ತಂದೆಯ ಸಾವಿಗೆ ಮೊಳಹಳ್ಳಿ ಗಣೇಶ ಶೆಟ್ಟಿ ಮತ್ತು ಬ್ರೊಕರ್ ಇಸ್ಮಾಯಿಲ್ ಅವರ ಪ್ರಚೋದನೆಯೇ ಕಾರಣ ಎಂದು ಅವರು ದೂರಿದ್ದರು. ಪ್ರಕರಣ ಆಪಾದಿತರ ಪ್ಯೆಕಿ ಗಣೇಶ ಶೆಟ್ಟಿ ಬಂಧಿಸಲ್ಪಟ್ಟಿದ್ದು, ಇಸ್ಮಾಯಿಲ್ ಬಂಧನಕ್ಕೆ ಬಲೆ ಬೀಸಲಾಗಿದೆ. ಶುಕ್ರವಾರ ರಾತ್ರಿ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮನೆ ಮುಂದೆ ಹಾಜರುಪಡಿಸಲಾಗಿದ್ದು ಮೇ.30 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅವಶ್ಯವಿದ್ದಲ್ಲಿ ವ್ಯೆದ್ಯಕೀಯ ಚಿಕಿತ್ಸೆಗೆ ಒಳಪಡಿಸಬಹುದು ಎಂದು ಅದೇಶಿಸಿದೆ. ಇದನ್ನೂ ಓದಿ: ► ಕುಂದಾಪುರ: ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ – https://kundapraa.com/?p=59468► ಆರ್ಥಿಕ ವ್ಯವಹಾರದಲ್ಲಿ 9 ಕೋಟಿ ಮೋಸ: ಡೆತ್‌ನೋಟ್‌ನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಕನ್ನಡದ ಸೊಗಡನ್ನು ಹೊತ್ತಿರುವ ಸಿನೆಮಾ ‘ಕೋಳಿ ತಾಳ್’ ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ಕುಂದಾಪುರ, ಮಲೆನಾಡ ಭಾಗದಲ್ಲಿ ಅಜ್ಜಿ ಮನೆಗೆ ಮೊಮ್ಮಗ ಬಂದರೆ ಕೋಳಿ ಸಾರು ಮಾಡುವ ಸಂಪ್ರದಾಯವಿದೆ. ಹಾಗೆ ಮೊಮ್ಮಗ ಬಂದ ಹೊತ್ತಲ್ಲಿ ಸಾರು ಮಾಡಬೇಕಿದ್ದ ಕೋಳಿಯೇ ನಾಪತ್ತೆಯಾಗುತ್ತದೆ. ಆ ಕೋಳಿಯನ್ನು ಹುಡುಕಾಡುವ ಪ್ರಸಂಗವೇ ‘ಕೋಳಿ ತಾಳ್’ ಚಿತ್ರದ ಸಾರಾಂಶ. 90 ನಿಮಿಷಗಳ ಈ ಸಿನಿಮಾವನ್ನು 15ರಿಂದ 20 ದಿನಗಳ ಅವಧಿಯಲ್ಲಿ ಸಾಗರ, ಬ್ರಹ್ಮಾವರ, ಉಡುಪಿ, ಮಂದಾರ್ತಿಯಲ್ಲಿ ಶೂಟಿಂಗ್ ಮಾಡಲಾಗಿದೆ. ಲಾಕ್ಡೌನ್ಗೂ ಮುನ್ನ ಚಿತ್ರದ ಶೂಟಿಂಗ್ ನಡೆದಿತ್ತು. ಕೋಳಿ ತಾಳ್ ಆಫ್ ಬೀಟ್ ಸಿನಿಮಾವಾಗಿದ್ದು, ಮೂವರ ನಡುವೆ ನಡೆಯುವ ಕಥೆಯಾಗಿದೆ. ನ್ಯೂಯಾರ್ಕ್ ಇಂಡಿಯನ್ ಸಿನಿಮೋತ್ಸವ ಸೇರಿದಂತೆ ಹಲವು ಸಿನಿಮೋತ್ಸವಕ್ಕೆ ಆಯ್ಕೆಯಾದ ಹೆಗ್ಗಳಿಯೂ ಈ ಸಿನೆಮಾಕ್ಕಿದೆ. ಹಿರಿಯ ನಟರಾದ ರಾಧಾ ರಾಮಚಂದ್ರ ಮತ್ತು ಪ್ರಭಾಕರ್ ಕುಂದರ್ ಪ್ರಮುಖ ಪಾತ್ರದಲ್ಲಿದ್ದಾರೆ. ನಿರ್ದೇಶನದ ಜತೆಗೆ ನಟನಾಗಿಯೂ ಅಭಿಲಾಷ್ ಶೆಟ್ಟಿ ನಟಿಸಿದ್ದಾರೆ. ಸಚಿನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಲೇಷಿಯಾದಲ್ಲಿ ಜರುಗುತ್ತಿರುವ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ಗೆ ಬೆಂಗಳೂರಿನ ಎಸ್.ಇ.ಟಿ ಪಿಯು ಕಾಲೇಜು ವಿದ್ಯಾರ್ಥಿನಿ ಸ್ವಾತಿ ಎಸ್. ಪೂಜಾರಿ ಆಯ್ಕೆಯಾಗಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಸ್ವಾತಿ ಎಸ್. ಪೂಜಾರಿ ಈವರೆಗೆ ಹಲವು ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಪ್ರಸ್ತುತ ಓಕಿನವ ಡ್ರಾಗನ್ ಮಾರ್ಷಿಯಲ್ ಆರ್ಟ್ಸ್ ಫೆಡರೇಶನ್ ಸಂಸ್ಥೆಯಲ್ಲಿ ದಿಲೀಪ್ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ. ಈಕೆ ಬೆಂಗಳೂರಿನಲ್ಲಿ ನೆಲೆಸಿರುವ ಸುರೇಶ್ ಪೂಜಾರಿ ಹಾಗೂ ಚಂದ್ರಿಕಾ ಸುರೇಶ್ ಪೂಜಾರಿ ದಂಪತಿಗಳ ಪುತ್ರಿಯಾಗಿದ್ದಾಳೆ.

Read More