ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಮತ್ತು ಎನ್. ಎಸ್. ಎಸ್ ಘಟಕಗಳು, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಬೈಂದೂರು ಸಮುದಾಯ ಅರೋಗ್ಯ ಕೆಂದ್ರದ ಸಹಯೋಗದೊಂದಿಗೆ ಎಚ್.ಐ.ವಿ ತಡೆಗಟ್ಟುವ ಕ್ರಮ ಮತ್ತು ಯುವಕರಲ್ಲಿ ಅರಿವು” ಎಂಬ ಮಾಹಿತಿ ಕಾರ್ಯಗಾರವನ್ನು ನಡೆಯಿತು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ವಾಸಂತಿ, ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ಏಡ್ಸ್ ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳು, ಮುಂಜಾಗ್ರತೆ ಹಾಗೂ ಜನಸಾಮಾನ್ಯರಲ್ಲಿ ಈ ಕುರಿತು ಅರಿವು ಮೂಡಿಸುವ ಅವಶ್ಯಕತೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ಜೊತೆಗೇ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಜಾಗೃತಿಗೊಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಯುವ ರೆಡ್ ಕ್ರಾಸ್ ಹಾಗೂ ರೆಡ್ ರಿಬ್ಬನ್ ಕ್ಲಬ್ ಸಂಚಾಲಕರಾದ ಡಾ. ಶಿವಕುಮಾರ ಪಿ.ವಿ, ಪ್ರಾಸ್ತಾವಿಕವಾಗಿ ಮಾತನಾಡಿದರು . ಎನ್.ಎಸ್.ಎಸ್ ಸಂಚಾಲಕರಾದ ಶ್ರೀ ನವೀನ್ ಹೆಚ್.ಜೆ, ಮತ್ತು ಡಾ.ಸೋಮೇಶ್ವರಿ, ಡಾ. ಅಶ್ವಥ್ ದೇವರಾಯ್ ನಾಯ್ಕ್ ಉಪಸ್ಥಿತರಿದ್ದರು.
ಸುಹರ್ಷಿಣಿ ಪ್ರಥಮ ಬಿಎ ಕಾರ್ಯಕ್ರಮ ನಿರೂಪಿಸಿದರು, ಗಣೇಶ ದ್ವಿತೀಯ ಬಿಎ, ಸ್ವಾಗತಿಸಿದರು, ರೂಪಶ್ರೀ ಪ್ರಥಮ ಬಿಎ, ಪ್ರಾರ್ಥಿಸಿದರು. ಅಂಜಲಿ ದ್ವಿತೀಯ ಬಿಎ ಸಂವಾದ ನಡೆಸಿದರು. ನಾಗರತ್ನ ದ್ವಿತೀಯ ಬಿಕಾಂ. ವಂದಿಸಿದರು.