Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಾಕೃತಿಕ ವಿಕೋಪ ತಡೆ, ಮೀನುಗಳ ಸಂತಾನೋತ್ಪತ್ತಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಕಾಂಡ್ಲಾವನ ಬೆಳೆಸುವುದು ಹಾಗೂ ಸಂರಕ್ಷಣೆಯ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು. ಅವರು ಕುಂದಾಪುರ ಪಂಚಗಂಗಾವಳಿ ಹಿನ್ನಿರು ಭಾಗದಲ್ಲಿರುವ ಕಾಂಡ್ಲಾವನ ವೀಕ್ಷಣೆ ಮಾಡಿದ ಬಳಿಕ ಮಾತನಾಡಿ ಕರಾವಳಿಯಾದ್ಯಂತ ಕಾಂಡ್ಲಾವನ ಬೆಳೆಸಲು ಅರಣ್ಯ ಇಲಾಖೆಯಿಂದ ಚಿಂತನೆ ನಡೆಸಲಾಗಿದೆ. ಕಾಂಡ್ಲಾವನ ಹೆಚ್ಚಿದಷ್ಟು ಕರಾವಳಿಯಲ್ಲಿ ಸೈಕ್ಲೋನ್ನಂತಹ ಪ್ರಕೃತಿವಿಕೋಪ ತಡೆಯಲು ಸಾಧ್ಯವಿದೆ. ಕುಂದಾಪುರದ ಪ್ರಸಿದ್ಧ ಕಾಣೆ ಮೀನು ಈ ಪ್ರದೇಶದಲ್ಲಿಯೇ ಸಂತಾನೋತ್ಪತ್ತಿ ಮಾಡುತ್ತದೆ ಅಲ್ಲದೇ ಇಕೋ ಟೂರಿಸಂಗೆ ಪ್ರಶಸ್ತ ಸ್ಥಳವಾಗಿದೆ. ಇದರಿಂದ ಬರುವ ಆದಾಯವನ್ನು ಕಾಂಡ್ಲಾ ಅರಣ್ಯ ಬೆಳೆಸಲು ವಿನಿಯೋಗಿಸುವ ಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಈ ಸಂದರ್ಭ ಕಾಂಡ್ಲಾವನ ಪರಿಚಯದ ಕಿರುಹೊತ್ತಿಗೆಯನ್ನು ಸಚಿವರು ಬಿಡುಗಡೆಗೊಳಿಸಿದರು. ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ,  ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಿಲ್ಲೋ ಟಾಗೋ, ಮುಖ್ಯ…

Read More

ಮಳೆಗಾಲ ಬಂತೆಂದರೆ ಶೀತದ ವಾತಾವರಣದ ಕಾರಣದಿಂದ ಕಾಯಿಲೆ ಬೀಳುವುದು ಅಧಿಕ. ಇದನ್ನು ತಡೆಗಟ್ಟಲು ನಾವು ಮಳೆಗಾಲದಲ್ಲಿ ನಮ್ಮ ಉಡುಪು, ಆಹಾರ ಶೈಲಿ ಎಲ್ಲವನ್ನೂ ಬದಲಾಯಿಸಬೇಕು. ಮಳೆಗಾಲದಲ್ಲಿ ವಾತಾವರಣದಲ್ಲಿ ವಾತ ಹಾಗೂ ಪಿತ್ತದ ದೋಷದ ಕಾರಣ ಜೀರ್ಣಕ್ರಿಯೆ ದುರ್ಬಲವಾಗುವುದು. ಮಳೆಗಾಲದಲ್ಲಿ ಕಾಯಿಲೆ ಬೀಳಲು ಇದು ಪ್ರಮುಖ ಕಾರಣವಾಗಿದೆ. ಆಹಾರಕ್ರಮದಲ್ಲಿ ಸಮತೋಲನ ಕಾಪಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಆಹಾರಕ್ರಮ ಹೇಗಿರಬೇಕು ಎಂದು ನೋಡೋಣ ತಾಜಾ ಹಾಗೂ ಲಘು ಆಹಾರ ಸೇವಿಸಿ  ಮಳೆಗಾಲದಲ್ಲಿ ಅಕ್ಕಿ, ಬಾರ್ಲಿ, ಗೋಧಿ ಇವುಗಳಿಂದ ತಯಾರು ಮಾಡುವ ಆಹಾರ ಸೇವಿಸಿ. ಧಾನ್ಯಗಳು, ತುಪ್ಪ ಇಂಥ ಪದಾರ್ಥಗಳನ್ನು ಸೇವಿಸಿ. ಪ್ರತೀ ಊಟದ ಮೊದಲಿಗೆ ಸ್ವಲ್ಪ ಶುಂಠಿ, ಒಂದು ಒಂದು ಹರಳು ಕಲ್ಲುಪ್ಪು ತಿನ್ನಿ. ಸಾಲ್ಟ್ ಅಂಡ್ ಸೋರ್ ಸೂಪ್ ಬಳಸಿ. ಈರುಳ್ಳಿ ಹಾಗೂ ಇತರ ತರಕಾರಿಗಳನ್ನು ಹೆಚ್ಚಾಗಿ ಬಳಸಿ. ಇವುಗಳನ್ನು ತಿನ್ನಿ ತುಂಬಾ ಮಳೆ ಬರುತ್ತಿದ್ದರೆ ಹುಳಿಯಂಶದ, ಉಪ್ಪಿನಂಶದ, ಎಣ್ಣೆಯಂಶದ ಆಹಾರ ಸೇವಿಸಿ. ಕುದಿಸಿ ಆರಿದ ನೀರಿಗೆ ಸ್ವಲ್ಪ ಜೇನು ಸೇರಿಸಿ ಕುಡಿಯುವುದು ಒಳ್ಳೆಯದು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕ.ರಾ.ಮು.ವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಪಿಯುಸಿ ನಂತರದ ವೃತ್ತಿಪರ ಉನ್ನತ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ನಡೆಸಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಕೆ-ಸಿಇಟಿ) 30 ದಿನಗಳ ಆನ್ಲೈನ್ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ. ಆಸಕ್ತರು ಜುಲೈ 17ರ ಒಳಗೆ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತಗಂಗೋತ್ರಿ ಆವರಣದಲ್ಲಿರುವ ಕ.ರಾ.ಮು.ವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಛೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯೊಳಗೆ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 0821-2515944 ಅನ್ನು ಸಂಪರ್ಕಿಸುವಂತೆ ಮುಕ್ತ ವಿವಿ ಕುಲಸಚಿವ ಪ್ರೊ. ಆರ್. ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಟ್ರಸ್ಟ್ ಶಿವಮೊಗ್ಗ, ಪಿಇಎಸ್ ಶಿವಮೊಗ್ಗ ಹಾಗೂ ಉಡುಪಿ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿರುವ ಎಂಡೋಸಲ್ಪಾನ್ ಸಂತ್ರಸ್ತ ಕುಟುಂಬದವರಿಗೆ ಉಚಿತ ಕೋವೀಡ್ ಲಸಿಕೆ ನೀಡುವ ಅಭಿಯಾನ ಜೂ.12ರಂದು ಬೆಳಿಗ್ಗೆ 9 ಘಂಟೆಗೆ ತಾಲೂಕಿನ ಶಿರೂರು ವೆಂಕಟರಮಣ ಸಭಾಭವನದಲ್ಲಿ ಆರಂಭಗೊಳ್ಳಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದರಾದ ಬಿ. ವೈ ರಾಘವೇಂದ್ರ ಹಾಗೂ ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ಅವರ ಸಹಭಾಗಿತ್ವದಲ್ಲಿ ಸುಮಾರು 3,000 ಕೋವೀಡ್ ಲಸಿಕೆಯನ್ನು ಉಚಿತವಾಗಿ ನೀಡಲಿದ್ದು, ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಂಡೋಸಲ್ಪಾನ್ ಸಂತ್ರಸ್ತ ಕುಟುಂಬಿಕರಿಗೆ ಪ್ರತ್ಯೇಕವಾಗಿ ನೀಡಲಾಗುತ್ತಿದೆ. ಎಂಡೋಸಲ್ಪಾನ್ ಸಂತ್ರಸ್ತ ಕುಟುಂಬದವರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ಅರೋಗ್ಯ ಸಂಸ್ಥೆಗಳಲ್ಲಿ ಖಾಲಿ ಇರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಯನ್ನು ತಾತ್ಕಾಲಿಕವಾಗಿ ಹಾಗೂ ಮುಂದಿನ ಆದೇಶದವರೆಗೆ ಮಾಸಿಕ 15,000 ರೂ, ವೇತನದಂತೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು, ಜುಲೈ 13 ರಂದು ಬೆಳಗ್ಗೆ 10.30 ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತರಬೇತಿ ಹೊಂದಿ, ರಾಜ್ಯ ನರ್ಸಿಂಗ್ ಕೌನ್ಸಿಲ್ನಲ್ಲಿ ನೋಂದಣಿ ಆದಂತಹ ಅಭ್ಯರ್ಥಿಗಳು ವಿದ್ಯಾರ್ಹತೆಯ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 0820-2536650/ 2525566 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ತಾಲೂಕಿನ ಮುಲ್ಲಿಬಾರು ಸ.ಹಿ.ಪ್ರಾ ಶಾಲೆಯ ವಿದ್ಯಾರ್ಥಿನಿ ಸುಚಿತ್ರಾ ಪರಮೇಶ್ವರ ಮರಾಠಿ ನ್ಯಾಶನಲ್ ಮಿನ್ಸ್ ಕಮ್ ಮೆರೀಟ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ (NMMS)ಯಲ್ಲಿ ತೇರ್ಗಡೆಯಾಗಿದ್ದಾಳೆ. ಬೈಂದೂರು ವಲಯದ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳ ಪೈಕಿ 11 ಮಂದಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿನಿಯನ್ನು ಆಕೆಯ ನಿವಾಸದಲ್ಲಿ ಗೌರವಿಸಲಾಯಿತು. ಈ ಸಂದರ್ಭ ಮುಲ್ಲಿಬಾರು ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ, ಎಸ್‌ಡಿಎಂಸಿ ಅಧ್ಯಕ್ಷರು, ಸಂಚಲನದ ಪದಾಧಿಕಾರಿಗಳು, ಕಂಬದಕೋಣೆ ಕ್ಲಸ್ಟರ್ ಸಿಆರ್‌ಪಿ, ಕ್ಯಾಕೋಡ್ ಶಾಲೆಯ ಮುಖ್ಯ ಶಿಕ್ಷಕರು ಮೊದಲಾದವರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಧುನಿಕ ತಂತ್ರಜ್ಞಾನ ಭರಿತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ತಂತ್ರಜ್ಞಾನ ದ ಹೊಸ ಕೋರ್ಸ್ ಅನ್ನು ಪ್ರಾರಂಭಿಸಲು ಅನುಮೋದನೆ ದೊರಕಿದ್ದು, ಇದೇ ಸಾಲಿನಲ್ಲಿ ಪ್ರವೇಶ ಪಡೆಯಲು ಅವಕಾಶವಿರುತ್ತದೆ. ಆಧುನಿಕ ಯುಗದಲ್ಲಿ ಇಂಜಿನಿಯರಿಂಗ್ ಒಳಗೊಳ್ಳುವಿಕೆ ಇಲ್ಲದೆ ಇರುವುದನ್ನು ಊಹಿಸಲೇ ಕಷ್ಟವಾಗಿದ್ದು, ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವ ಉತ್ಪನ್ನಗಳಿಗೆ ಬಹಳ ಬೇಡಿಕೆ ಇರುವುದರಿಂದ ಕೃತಕ ಬುದ್ದಿಶಕ್ತಿ ತಂತ್ರಜ್ಞಾನ ಕಲಿಕೆ ಪ್ರಮುಖ ಪಾತ್ರವಹಿಸುತ್ತದೆ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ಸ್, ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಈಗ ಹೊಸ ಕೋರ್ಸ್ನ ಸೇರ್ಪಡೆಯಿಂದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ವಿದ್ಯಾರ್ಥಿಗಳಿಗೆ ಕಂಪನಿಯಲ್ಲಿ ಉದ್ಯೋಗವಕಾಶಕ್ಕೆ ಅನುಕೂಲವಾಗುವ ಸಲುವಾಗಿ ಕಾಲೇಜು ಈಗಾಗಲೇ ಮೈಕ್ರೋಸಾಫ್ಟ್ನ ಟ್ರೈನಿಂಗ್ ಪಾರ್ಟ್ನರ್ ಮತ್ತು ಎಡೆಕ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿ ಕೊಂಡಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಕೂಡ ಪಡೆಯಲು ಅವಕಾಶ ಇರುತ್ತದೆ. 2020-2021 ಸಾಲಿನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕು ಆಡಳಿತದ ವತಿಯಿಂದ ವಿಕಲಚೇತನ ಮನೆಗಳಿಗೆ ತೆರಳಿ ಆಧಾರ್ ಕಾರ್ಡ್ ನೊಂದಣಿ ಮಾಡುವ ಪ್ರಕ್ರಿಯೆಗೆ ಬೈಂದೂರಿನಲ್ಲಿ ಶುಕ್ರವಾರ ಚಾಲನೆ ನೀಡಲಾಗಿದೆ. ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ ಎಚ್. ಎಸ್ ಅವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ನಡೆದಾಡಲು ಸಾಧ್ಯವಿಲ್ಲದ ಹಾಗೂ ಹಾಸಿಗೆಯಲ್ಲಿಯೇ ಇರುವ ವಿಕಲಚೇತನರನ್ನು ಗುರುತಿಸಿ ಅವರ ಮನೆಗಳಿಗೆ ತೆರಳಿ ಆಧಾರ್ ನೊಂದಣಿ ಮಾಡಲಾಗುತ್ತಿದೆ. ಬೈಂದೂರು ತಾಲೂಕಿನಲ್ಲಿ ಗುರುತಿಸಲಾಗಿರುವ ಸುಮಾರು 22 ವಿಕಲಚೇತನರ ಮನೆಗಳಿಗೆ ತಹಶೀಲ್ದಾರರು ಹಾಗೂ ತಾಲೂಕು ಕಛೇರಿಯಲ್ಲಿರುವ ಆಧಾರ್ ನೊಂದಣಿ ಸಿಬ್ಬಂದಿಗಳು ಲ್ಯಾಪ್‌ಟಾಪ್, ಕ್ಯಾಮರಾ, ಪ್ರಿಂಟರ್, ಆಧಾರ್ ಸ್ಪ್ಯಾನರ್ ಸಹಿತ ತೆರಳಿ ನೊಂದಣಿ ಕಾರ್ಯ ನಡೆಸಿಸುತ್ತಿದ್ದಾರೆ. ಆಧಾರ್ ಕೇಂದ್ರಗಳಿಗೆ ಬರಲು ಸಾಧ್ಯವಿಲ್ಲದ ವಿಕಲಚೇತನರ ಮನೆಗೆ ತೆರಳಿ ಆಧಾರ್ ನೊಂದಣಿ ಮಾಡಿಸುವಂತೆ ಜಿಲ್ಲಾಡಳಿತದ ಸೂಚನೆಯಿದ್ದು ಅದರಂತೆ ಬೈಂದೂರು ತಾಲೂಕಿನ 22 ಮನೆಗಳಿಗೆ ತೆರಳಿ ಆಧಾರ್ ನೊಂದಣಿ ಮಾಡಲಾಗುತ್ತಿದೆ. ತೀರಾ ಇಂಟರ್‌ನೆಟ್ ಸಮಸ್ಯೆ ಇರುವ ಗ್ರಾಮಗಳಲ್ಲಿ ವಿಕಲಚೇತನರನ್ನು ಸಮೀಪವಿರುವ ಗ್ರಾಮ ಪಂಚಾಯತಿಗೆ ಕರೆಯಿಸಿ ಆಧಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಗರ್ಭಪೂರ್ವ ಮತ್ತು ಪ್ರಸವ ಪೂರ್ವಭ್ರೂಣ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನಿನ ಅಡಿಯಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಸೂತಿ ತಜ್ಞ ಹಾಗೂ ಜಿಲ್ಲಾ ಪಿಸಿ & ಪಿಎನ್ಡಿಟಿ ಸಲಹಾ ಸಮಿತಿ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಹೇಳಿದರು. ಅವರು ಉಡುಪಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸಾವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಸರಕಾರ ಕಾನೂನನ್ನು ಜಾರಿಗೆ ತಂದಿದೆ. ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದ್ದು, ಇದನ್ನು ಉಲ್ಲಂಘಿಸುವವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದರು. ಪ್ರಸ್ತುತ ಜಿಲ್ಲೆಯಲ್ಲಿ 1000 ಜನ ಪುರುಷರಿಗೆ, 957 ಜನ ಹೆಣ್ಣು ಮಕ್ಕಳಿದ್ದಾರೆ ಎಂದ ಅವರು ಜಿಲ್ಲೆಯಲ್ಲಿ ಗಂಡು ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಡುಗೆ ಅನಿಲ,ತೈಲ ಬೆಲೆ ಏರಿಕೆ ವಿರೋಧಿಸಿ ಸಿಐಟಿಯುನಿಂದ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕೊರೊನಾ ಪರಿಹಾರ ಪ್ರತಿ ಕಾಮಿ೯ಕರಿಗೆ 10000ರೂ. ನೀಡಬೇಕು. ಮೊದಲಾದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸೆಂಟರ್ ಆಪ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ರಾಜ್ಯ ಸಮಿತಿಯ ಕರೆಯ ಮೇರೆಗೆ ಬೈಂದೂರು ತಾಲೂಕು ಸಿಐಟಿಯು ಕಾಮಿ೯ಕ ಸಂಘಗಳ ನೇತೃತ್ವದಲ್ಲಿ ಇಂದು ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಕಾಮಿ೯ಕರ ಬೃಹತ್ ಪ್ರತಿಭಟನೆ ನಡೆಯಿತು. ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಬೇಡಿಕೆಗಳಮನವಿಯನ್ನು ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ ಅವರಿಗೆ ಹಸ್ತಾಂತರಿಸಲಾಯಿತು. ಸಿಐಟಿಯು ಮುಖಂಡರಾದ ಗಣೇಶ ತೊಂಡೆಮಕ್ಕಿ,ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಶೀಲಾವತಿ, ರಾಜೀವಪಡುಕೋಣೆ, ವೆಂಕಟೇಶ ಕೋಣಿ, ನಾಗರತ್ನ ನಾಡ, ಮಂಜುಪಡುವರಿ, ಗಣೇಶ ಮೊಗವೀರ ಬೈಂದೂರು, ಮಾಧವ ಪೂಜಾರಿ ಉಪ್ಪುಂದ, ಲಕ್ಷ್ಮಣ ಯಡ್ತರೆ,ಹರೀಶ್ ಬೈಂದೂರು, ರಾಮ ಬಡಾಕೆರೆ, ಮೊದಲಾದವರು ಹೋರಾಟದ ನೇತೃತ್ವ ವಹಿಸಿದ್ದರು.

Read More