Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರು ನೀಡಿದ ನಾಲ್ಕು ನಿಮಿಷಗಳ ಉಪನ್ಯಾಸದಿಂದಾಗಿ ವಿಶ್ವಕ್ಕೆ ಭಾರತದ ಬಗೆಗಿನ ಅಭಿಪ್ರಾಯ ಹಾಗೂ ದೃಷ್ಟಿಕೋನ ಬದಲಾಗುವಂತಾಯಿತು. ಭಾರತದ ಪ್ರತಿ ಯುವಕನಲ್ಲಿಯೂ ಆತ್ಮವಿಶ್ವಾಸ ವೃದ್ಧಿಯಾಯಿತು. ಇದು ಸ್ವಾತಂತ್ರ್ಯ ಚಳುವಳಿಗೂ ಪ್ರೇರಣೆಯಾಗಿತ್ತು. ತನ್ನ ಮಾತಿನ ಮೂಲಕ ಅಂತಹ ಪ್ರಭಾವವನ್ನು ಬೀರಿದ್ದ ಸ್ವಾಮಿ ವಿವೇಕಾನಂದರ ಭಾಷಣವನ್ನು ಮತ್ತೊಮ್ಮೆ ಸ್ಮರಿಸುವ ಮೂಲಕ ಯುವಕರನ್ನು ಜಾಗೃತಿಗೊಳಿಸುವ ಕೆಲಸವಾಗುತ್ತಿದೆ ಎಂದು ಮಂಂಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಧರ್ಮವೃತ್ತಾನಂದ ಸ್ವಾಮೀಜಿ ಹೇಳಿದರು. ಬೈಂದೂರು ಶಾರದಾ ವೇದಿಕೆಯಲ್ಲಿ ಯುವ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಯುವ ಬ್ರಿಗೇಡ್ ಬೈಂದೂರು ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ ೧೨೫ವರ್ಷ ಸಂದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿವೇಕಾನಂದರು ಒಂದು ಧರ್ಮ, ದೇಶಕ್ಕೆ ಸೀಮಿತವಾದವರಲ್ಲ. ಅವರು ವಿಶ್ವ ಮಾನವರಾಗಿದ್ದವರು. ವಿವೇಕಾನಂದರ ಭಾಷಣದಿಂದಾಗಿ ವಿವಿಧ ಧರ್ಮಶಾಸ್ತ್ರಜ್ಞರಲ್ಲಿ ಹಿಂದೂ ಧರ್ಮ ಶ್ರೇಷ್ಠ ಧರ್ಮ ಎಂಬ ಭಾವನೆ ಮೊಳಕೆಯೊಡೆಯುವಂತಾಯಿತು. ಸ್ವಾಮೀಜಿಯವರ ಜೀವನತತ್ವವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತನ್ನ ಮನೆಯೆದುರು ನಡೆಯುತ್ತಿದ್ದ ಮೀನುಗಾರಿಕೆಯನ್ನು ನೋಡುಲು ಸಮುದ್ರ ತೀರಕ್ಕೆ ತೆರಳಿದ್ದ ಮನೋಜ್ ಎಂಬ ಯುವಕನೋರ್ವ ಸಮುದ್ರದ ಅಲೆಯಲ್ಲಿ ಸಿಲುಕಿ ಮೃತಪಟ್ಟ ಘಟನೆ ವರದಿಯಾಗಿದೆ. ತಾಲೂಕಿನ ಕೋಡಿಯ ನಿವಾಸಿ ಮನೋಜ ಪೂಜಾರಿ (18) ಮೃತ ದುರ್ದೈವಿ. ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಮನೋಜ್ ಪೂಜಾರಿ ಕಾಲೇಜಿಗೆ ರಜೆ ಇದ್ದುದರಿಂದ ಸ್ನೇಹಿತರೊಂದಿಗೆ ತಮ್ಮ ಮನೆಯೆದುರೇ ಇದ್ದ ಸಮುದ್ರ ತೀರಕ್ಕೆ ತೆರಳಿದ್ದ. ಈ ಸಂದರ್ಭ ಸಮುದ್ರದ ರಕ್ಕಸದ ಅಲೆಯೊಂದಕ್ಕೆ ಸಿಲುಕಿ ಆತ ನಾಪತ್ತೆಯಾಗಿದ್ದ. ಕೂಡಲೇ ಅಲ್ಲಿದ್ದ ಮೀನುಗಾರರು ರಕ್ಷಿಸುವ ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಆತ ಕೊಚ್ಚಿಹೋಗಿದ್ದ. ಭಾನುವಾರ ಸಂಜೆಯ ತನಕವೂ ಹುಡುಕಾಡ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಹಾಗೂ ಕುಂದಾಪುರ ಪೊಲೀಸರು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಿನಿಯರ್ ಸಿಟಿಸನ್ ಡೇ ಅಂಗವಾಗಿ ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಸಾರಥ್ಯದಲ್ಲಿ ಉಡುಪಿ ಅಜ್ಜರಕಾಡುವಿನಲ್ಲಿ ಆಯೋಜಿಸಲಾದ ಸ್ವರ್ಧೆಯಲ್ಲಿ ಬೈಂದೂರು ಹಿರಿಯ ನಾಗರಿಕರ ವೇದಿಕೆ ಸದಸ್ಯ ಮಯ್ಯಾಡಿಯ ನಿವೃತ್ತ ಮುಖ್ಯೋಪಧ್ಯಾಯ ತಿಮ್ಮಪ್ಪಯ್ಯ ಜಿ. ಅವರು ಏಕಪಾತ್ರಾಭಿನಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಒತ್ತಿನಣೆ ಗುರು ರಾಘವೇಂದ್ರ ಮಠದಲ್ಲಿ ಬೈಂದೂರಿನ ಸಚಿನ್ ಬಿ. ಶೇರುಗಾರ್ ನಿರ್ದೇಶನದಲ್ಲಿ, ಕಿಶನ್ ಖಾರ್ವಿ ಛಾಯಾಗ್ರಹಣದಲ್ಲಿ ತಯಾರಾಗುತ್ತಿರುವ ‘ಜೊತೆ ಜೊತೆಯಲಿ’ ಕಿರುಚಿತ್ರದ ಮುಹೂರ್ತ ನಡೆಯಿತು. ಕಲಾವಿದರಾದ ರವಿ, ಕೃಷ್ಣ, ಅಕ್ಷಯ, ಕಿರಣ,ಶ್ರೀನಿವಾಸ, ಕಾರ್ತಿಕೇಯ, ವಿಕ್ರಮ್, ರೋಹಿತ್, ಸಹ ಛಾಯಾಗ್ರಹಕ ಸಂಕೇತ್ ಹಾಜರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಎಂ.ಬಿ. ಎಜುಕೇಷನ್ ಟ್ರಸ್ಟ್ ಮತ್ತು ಕ್ಯಾಡಮ್ಯಾಕ್ಷ ಸಂಸ್ಥೆ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಬೈಂದೂರು ಮತ್ತು ಉಪ್ಪುಂದದಲ್ಲಿ ನಡೆಯುತ್ತಿರುವ ಕೇಂದ್ರ ಸರಕಾರದ ದಿನ್ ದಯಾಳ ಕೌಶಲ್ಯಾಭಿವೃದ್ದಿ ಕೇಂದ್ರದಲ್ಲಿ ಅಂತ್ಯೋದಯ ದಿನಾಚರಣೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಮಾಹದೇವ ಬಿಲ್ಲವ ಅವರು ಮಾತನಾಡಿ ಈ ಯೋಜನೆ ಗ್ರಾಮೀಣ ಭಾಗದ ನಿರುದ್ಯೋಗವನ್ನು ಹೋಗಲಾಡಿಸಲು ಸಹಾಕಾರಿಯಾಗಿದೆ ಎಂದರು. ಯಡ್ತರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರುಕ್ಕಣ್ಣ ಗೌಡ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷರಾದ ಮಣಿಕಂಠ ಸ್ವಾಗತಿಸಿದರು. ಹಾಗೂ ಭಾಸ್ಕರ ಬಿಲ್ಲವ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕು ನೂತನ ಗ್ರಾಮಕರಣಿಕರ ಸಂಘದ ನೂತನ ಅಧ್ಯಕ್ಷರಾಗಿ ಸತೀಶ ಹೋಬಳಿದಾರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಿವಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ವೀರೇಶ್, ಉಪ ಕಾರ್ಯದರ್ಶಿಯಾಗಿ ಪ್ರಕಾಶ್ ರಾಥೋಡ್, ಕ್ರೀಡಾ ಕಾರ್ಯದರ್ಶಿಯಾಗಿ ಮಾಧವ ಕೊಠಾರಿ, ಸಂಘಟನಾ ಕಾರ್ಯದರ್ಶಿಯಾಗಿ ಮಂಜು, ಖಜಾಂಚಿಯಾಗಿ ಇಜಾರ್ ಶಾಬೀರ್, ಜಿಲ್ಲಾ ಪ್ರತಿನಿಧಿಯಾಗಿ ಮಂಜುನಾಥ ಬಿಲ್ಲವ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಅಕ್ಟೋಬರ್ ೧೬ರಿಂದ ಮರಳು ತೆಗೆಯಲು ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಅವರು ದ.ಕ ಹಾಗೂ ಉಡುಪಿ ಜಿಲ್ಲೆಯ ಶಾಸಕರು ಹಾಗೂ ಸಂಸದರ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅವಕಾಶ ನೀಡುವುದರಿಂದ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬಹುದೆಂದು ಶಾಸಕರುಗಳು ಸಿಎಂಗೆ ಮನವರಿಗೆ ಮಾಡಿದ್ದರು. ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಮರಳು ಲಭ್ಯತೆಯ ಬಗ್ಗೆ ಸಮೀಕ್ಷೆ ನಡೆದಿದ್ದು, ಈ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಬಳಿಕ ಮರಳು ಗಣಿಗಾರಿಕೆಯ ದರ ನಿಗದಿ ಮಾಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: 2018 ನೇ ಸಾಲಿನ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಅಮೃತಾ ಉಪಾಧ್ಯ ಡಿಸ್ಟಿಂಕ್ಷನಲ್ಲಿ ಉತ್ತೀರ್ಣರಾಗಿದ್ದಾಳೆ. ಈಕೆ ವಿದ್ವಾನ್ ಸುಧೀರ್ ರಾವ್ ಕೊಡವೂರು ಇವರ ಶಿಷ್ಯೆ ಹಾಗೂ ಮಂಜುನಾಥ ಉಪಾಧ್ಯ ಮತ್ತು ವನಿತಾ ಉಪಾಧ್ಯರ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸ್ಥಳಾಂತರಗೊಂಡ ಕುಂದಾಪುರ ಶಾಖೆಯು ಮುಖ್ಯರಸ್ತೆಯ ಅಥರ್ವ ಕಾಂಪೆಕ್ಸ್ ಮೊದಲ ಮಹಡಿಯಲ್ಲಿ ಸುಸಜ್ಜಿತ ಹವಾನಿಯಂತ್ರಿತ ಕೊಠಡಿ ಉದ್ಘಾಟನೆಗೊಂಡಿತು. ಶಾಖೆಯನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಸ್.ದಿನಕರ ಶೆಟ್ಟಿ, ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘ ಅಧ್ಯಕ್ಷ ಹೆಚ್. ಹರಿಪ್ರಸಾದ್ ಶೆಟ್ಟಿ, ಸಹಕಾರಿ ಸಂಘಗಳ ಉಪ ನಿಬಂಧಕಿ ಚಂದ್ರಪ್ರತಿಮಾ ಎಂ. ಜಿ, ಕುಂದಾಪುರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಕೃಷ್ಣಮೂರ್ತಿ, ಎಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದೇವಿಪ್ರಸಾದ ಶೆಟ್ಟಿ, ಬಿ.ರಘುರಾಮ ಶೆಟ್ಟಿ, ಶಶಿಕುಮಾರ್ ರೈ, ಪ್ರಭಾರ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಬಿ. ರವೀಂದ್ರ ಇದ್ದರು. ಕಟ್ಟಡ ಮಾಲೀಕ ಗಶೇಶ್ ನಾಯಕ್ ಹಾಗೂ ಶಾಖಾ ವ್ಯವಸ್ಥಾಪಕ ಮೋಹನ್ ದಾಸ್ ಹೆಬ್ಬಾರ್ ಅವರ ಡಾ.ರಾಜೇಂದ್ರ ಕುಮಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷರಾಗಿ ಭರತ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ ಬಿಲ್ಲವ ಶಿರೂರು, ಕಾರ್ಯದರ್ಶಿಯಾಗಿ ಆನಂದ ಆಯ್ಕೆಯಾಗಿದ್ದಾರೆ.

Read More