Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ, ಐತಿಹಾಸಿಕ ಕಂಬಳ ನಡೆಯುವ ತಗ್ಗರ್ಸೆ ಕಂಠದಮನೆ ಕುಟುಂಬಸ್ಥರ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ನಾಟಿ ಕಾರ್ಯ ಪೂರ್ಣಗೊಂಡಿದೆ. ಕಂಠದಮನೆಯ ಕುಂಟುಂಬಿಕರಲ್ಲಿ ಹಿರಿಯವರಾದ ಟಿ. ನಾರಾಯಣ ಹೆಗ್ಡೆ ಅವರ ಮಾರ್ಗದರ್ಶನಲ್ಲಿ ನೂರಾರು ಮಂದಿ ಕೃಷಿ ಕಾರ್ಮಿಕರಿಂದ ವಾಡಿಕೆಯಂತೆ ಒಂದೇ ದಿನದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ. ಸಾಂಪ್ರದಾಯಿಕ ಕೃಷಿ ಕಾರ್ಯ: ಕಂಠದಮನೆಯ ಎದುರೇ 5.14 ಎಕರೆ ವಿಸ್ತೀರ್ಣವಾದ ಕಂಬಳಗದ್ದೆ ಇದ್ದು, ಇದು ದೇವರಗದ್ದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಇಲ್ಲಿರುವ ವೀರಗಲ್ಲು, ಶಾಸನಗಳು ಇದು ಪುರಾತನವಾದುದು ಎಂಬುದಕ್ಕೆ ಪುಷ್ಠಿ ನೀಡುತ್ತದೆ. ಇಂದಿಗೂ ಕೂಡ ಇಲ್ಲಿ ಹಿಂದಿನ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆ ನಾಟಿ ಕಾರ್ಯಕ್ಕೆ ತಯಾರಿ ನಡೆಯುತ್ತದೆ. ಇಡಿ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ ಮಾಡಬೇಕು ಎಂಬ ಸಂಪ್ರದಾಯವಿದ್ದು ಟ್ರಾಕ್ಟರ್ ಬಳಸಿ ಉಳುಮೆ ಮಾಡಲಾಗುತ್ತದೆ. ನೂರಾರು ಕೃಷಿ ಆಳುಗಳು ಒಂದೇ ದಿನದಲ್ಲಿ ಗದ್ದೆ ನಾಟಿ ಮಾಡಿ ಮುಗಿಸುತ್ತಾರೆ. ಈ ಕಾರ್ಯ ಶುದ್ಧಾಚಾರದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಧ್ಯಪ್ರದೇಶದ ಮಾಂಡ್‌ಸರನಲ್ಲಿ ಎಂಟು ವರ್ಷದ ಶಾಲಾ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ನಾವುಂದ ನಾವುಂದ ರಿರ್ಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು ಹಾಗೂ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕಾಲೇಜಿನಿಂದ ಕಾಲ್ನಡಿಗೆ ಜಾಥಾದ ಮೂಲಕ ನಾವುಂದ ಗ್ರಾಮ ಪಂಚಾಯತ್ ತೆರಳಿ ಅಲ್ಲಿ ಸಭೆ ಸೇರಿದರು. ಆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಗಲ್ಲು ಶಿಕ್ಷೆ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರ ಒತ್ತಾಯಿಸಿ ಮನವಿ ಪತ್ರವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಿದರು. ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿ ಭಾಗವಹಿಸಿದ್ದರು. ಈ ಸಂದರ್ಭ ಅಹಿತಕರ ಘಟನೆ ನಡೆಯದಂತೆ ಬೈಂದೂರು ವೃತ್ತನೀರಿಕ್ಷಕ ಪರಮೇಶ್ವರ ಆರ್ ಗುನಗ ಹಾಗೂ ಪೊಲೀಸ್ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್. ಬಿಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪತ್ರಿಕಾ ದಿನಾಚರಣೆಯ ಪ್ರಯುಕ್ತ ಜೆ.ಸಿ.ಐ ಶಿರೂರು ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಂದರ್ಭ ಪತ್ರಕರ್ತ ಅರುಣಕುಮಾರ್ ಶಿರೂರು ಹಾಗೂ ವಿಂದಿಯಾ ದಂಪತಿಗಳನ್ನು, ಪತ್ರಕರ್ತ ಗಿರಿ ಶಿರೂರು ಅವರನ್ನು ಸನ್ಮಾನಿಸಲಾಯಿತು. ಶಿರೂರು ಜೆ.ಸಿ.ಐ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ ಮಾತನಾಡಿ ಸಮಾಜದ ಅಭಿವೃದ್ದಿಯಲ್ಲಿ ಹಾಗೂ ಜನಪರ ಕಾಳಜಿಯಲ್ಲಿ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಜೆ.ಸಿ.ಐ ವತಿಯಿಂದ ಇವರ ಸೇವೆಯನ್ನು ಗುರುತಿಸುವ ಸಣ್ಣ ಪ್ರಯತ್ನ ಎಂದರು. ಯಡ್ತರೆ ಗ್ರಾ.ಪಂ ಸದಸ್ಯ ಉದಯ ಮಾಕೋಡಿ, ಜೆಜೆಸಿ ಅಧ್ಯಕ್ಷ ಆದರ್ಶ ಶೇಟ್, ವಿನೋದ ಮೇಸ್ತ, ಕೃಷ್ಣ ಪೂಜಾರಿ ಹಾಜರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಜೆಸಿಐ ಶಿರೂರು ಸದಸ್ಯರು ಶಿರೂರಿನ ನಿರೋಡಿಯ ರೈತರ ಗದ್ದೆಯಲ್ಲಿ ಒಂದು ದಿನ ನಡೆದ ಗದ್ದೆ ನೆಟ್ಟಿ ಕಾರ್ಯದಲ್ಲಿ ಭತ್ತದ ಸಸಿಯನ್ನು ನೆಡುವುದರ ಮೂಲಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆ ಮೂಲಕ ರೈತರ ಕಾರ್ಯಗಳಿಗೆ ಪ್ರೋತ್ಸಾಹ ಮಾಡಿದರು. ಈ ಸಂದರ್ಭದಲ್ಲಿ ಜೆಸಿಐ ಶಿರೂರು ವತಿಯಿಂದ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಿರೂರು ಜೆಸಿ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ ಅಧ್ಯಕ್ಷತೆ ವಹಿಸಿದರು. ಜೆಸಿಐ ಶಿರೂರು ಸ್ಥಾಪಕ ಅಧ್ಯಕ್ಷ ಮೋಹನ ರೇವಣ್ಕರ್, ಶ್ರೀಕಾಂತ ಕಾಮತ್, ಮಂಜುನಾಥ ಪೂಜಾರಿ, ರಾಜು ಪೂಜಾರಿ, ಗಿರೀಶ ಮೇಸ್ತ, ವೆಂಕಟೇಶ ಕಾಮತ್, ಕೃಷ್ಣಮೂರ್ತಿ ಶೇಟ್, ನಾಗೇಶ ಕೆ, ಅಬ್ದುಲ್ ರವೂಫ್ , ರಮೇಶ ನಾಯ್ಕ, ಜೆಜೆಸಿ ಆದರ್ಶ ಶೇಟ್, ವಿನೋದ ಮೇಸ್ತ, ಕೃಷ್ಣ ಪೂಜಾರಿ, ನಾಗೇಂದ್ರ ಪ್ರಭು, ಅವಿನಾಶ ಪ್ರಭು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಗಂಗೊಳ್ಳಿ ಪ್ರಧಾನ ಕಛೇರಿಯಲ್ಲಿ ಶತಮಾನೋತ್ಸವ ಠೇವಣಿ ಪತ್ರ ಬಿಡುಗಡೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಮಾತನಾಡಿ ಗ್ರಾಮದ ಪ್ರತಿಯೊಬ್ಬರು ಆರ್ಥಿಕವಾಗಿ ಸಬಲರಾಗಬೇಕು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಅವರ ಜೀವನದಕ್ಕೆ ಸಹಕಾರ ನೀಡಬೇಕೆಂಬ ಉದ್ದೇಶದಿಂದ ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ 1920 ರಲ್ಲಿ ಆರಂಭಗೊಂಡ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂಸ್ಥೆಯು ಅನೇಕ ವಿಶಿಷ್ಟ ಕಾರ್ಯಕ್ರಮ, ಯೋಜನೆಗಳನ್ನು ಸಹಕಾರಿಯ ಸದಸ್ಯರಿಗೆ ನೀಡುವ ಮೂಲಕ ರಾಜ್ಯದಲ್ಲೇ ಉತ್ತಮ ಹೆಸರು ಪಡೆದುಕೊಂಡಿದೆ ಎಂದು ಹೇಳಿದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಉತ್ತಮ ಕಾರ್ಯಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿರುವುದು ಶ್ಲಾಘನೀಯ. ಪ್ರಸ್ತುತ ಶತಮಾನದ ಹೊಸ್ತಿಲಿನಲ್ಲಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಶತಮಾನೋತ್ಸವ ಠೇವಣಿ ಯೋಜನೆಯನ್ನು ಆರಂಭಿಸಿರುವುದು ಸ್ತುತ್ಯಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಸಹಕಾರಿಯು ಇನ್ನಷ್ಟು ಜನಪ್ರಿಯಗೊಂಡು ಸದಸ್ಯರ ಅವಶ್ಯಕತೆಗಳಿಗೆ ಸ್ಪಂದಿಸುವಂತಾಗಲಿ ಎಂದು ಶುಭ ಹಾರೈಸಿದರು. ಸಹಕಾರಿಯ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್‌ಆಂಗ್ಲ ಮಾಧ್ಯಮ ಶಾಲೆಯಲ್ಲಿ ’ಹದಿಹರೆಯದ ಜಾಗೃತಿ ಕಾರ‍್ಯಾಗಾರ’ ನೆರವೇರಿತು. ಕಾರ‍್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ, ಡಾ| ರವೀಂದ್ರ ತಲ್ಲೂರು, ಡಾ| ಅಮ್ಮಾಜಿ ಮತ್ತು ಡಾ| ವಿಜಯಲಕ್ಷೀ ಆಗಮಿಸಿದ್ದರು. ಕಾರ‍್ಯಾಗಾರದಲ್ಲಿ ಮಾತನಾಡಿದ ಡಾ| ರವೀಂದ್ರರವರು ಲೈಂಗಿಕ ಶಿಕ್ಷಣದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆ ದೂರವಾಗಬೇಕು. ಲೈಂಗಿಕ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ ಎಂದರು. ಹಾಗೆಯೇ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ನಮಗೆ ನಮ್ಮ ದೇಹದ ಪ್ರತಿಯೊಂದೂ ಅಂಗಗಳ ಬಗ್ಗೆ ಇರಬೇಕಾದ ಅರಿವು, ಗುಪ್ತಾಂಗಗಳ ರಕ್ಷಣೆ, ಹದಿಹರೆಯದವರಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ವಿಷಯವಾಗಿ ಮಾಹಿತಿ ನೀಡಿದರು. ಉಪ ಪ್ರಾಂಶುಪಾಲರಾದ ಶುಭಾ.ಕೆ.ಎನ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಅನಿತಾ ಆಲಿಸ್ ಡಿಸೋಜಾ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಶಿಕ್ಷಕಿ ಕವಿತಾ ಭಟ್‌ಉಪಸ್ಥಿತರಿದ್ದರು. ಶಿಕ್ಷಕ ಲಕ್ಷ್ಮೀಗಣೇಶ್ ಕಾರ‍್ಯಕ್ರಮವನ್ನು ನಿರೂಪಿಸಿ, ಶ್ರೀನಿವಾಸ್ ಬೈಂದೂರು ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪ್ರತಿಷ್ಠಿತ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಇದರ 2018-19 ರ ಸಾಲಿನ ಅಧ್ಯಕ್ಷರಾಗಿ ರೋಟರಿ ವಲಯ 01 ರ ಮಾಜಿ ಜೋನಲ್ ಲೆಫ್ಟಿನೆಂಟ್ ಹಾಜಿ ಅಬ್ಬುಶೇಖ್ ಸಾಹೇಬ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶಿವಾನಂದ ಎಂ.ಪಿ., ಕೋಶಾಧಿಕಾರಿಯಾಗಿ ನಾಗರಾಜ್ ನಾಯ್ಕ್, ಕ್ಲಬ್ ಸರ್ವೀಸ್ ಬಿ.ಎಮ್. ಚಂದ್ರಶೇಖರ್, ವಕೇಷನಲ್ ಸರ್ವೀಸ್ ಅಜಯ್ ಹವಾಲ್ದಾರ್, ಕಮ್ಯೂನಿಟಿ ಸರ್ವೀಸ್ ಎಲ್.ಜೆ. ಫೆರ್ನಾಂಡೀಸ್, ಇಂಟರ್‌ನ್ಯಾಷನಲ್ ಸರ್ವೀಸ್ ದಿನಕರ್ ಆರ್. ಶೆಟ್ಟಿ, ಯೂತ್ ಸರ್ವೀಸ್ ನಾಗೇಶ್ ನಾವುಡ, ಟಿ.ಆರ್.ಎಫ್. ಚೇರ್‌ಮೆನ್ ಸತೀಶ್ ಎನ್. ಶೇರೆಗಾರ್, ಪೋಲೀಯೋ ಪ್ಲಸ್ ಯೂಸುಫ್ ಹಂಜ್ಞ, ಲಿಟರಸಿ ರಾಜಶೇಖರ್ ಹೆಗ್ಡೆ, ವಾಶ್ ಇನ್ ಸ್ಕೂಲ್ ಪೂರ್ಣಿಮಾ ಬಿ.ಎಸ್., ಬುಲೆಟಿನ್ ಸಂಪಾದಕರಾಗಿ ಉಲ್ಲಾಸ್ ಕ್ರಾಸ್ತಾ ಆಯ್ಕೆ ಆಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇತ್ತೀಚೆಗೆ ನಿಧನರಾದ ಡಾ.ಹೆಚ್.ವಿ ನರಸಿಂಹ ಮೂರ್ತಿಯವರು ಪ್ರಕಟಿಸಿದ  ಬರಹಗಳ ಪುಸ್ತಕ ಪ್ರದರ್ಶನ ಮತ್ತು ಅವರಿಗೆ ಶೃದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಗ್ರಂಥಾಲಯದ ಗ್ರಂಥಪಾಲಕರಾದ ಆನಂದ ಅವರು ಮಾತನಾಡಿ ನರಸಿಂಹಮೂರ್ತಿಗಳು ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದರು. ಆದರೆ ಇದಕ್ಕಿಂತ ಹೆಚ್ಚಾಗಿ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಕವಾಗಿ ಕಾಲೇಜು ಗುರುತಿಸಿಕೊಳ್ಳುವಲ್ಲಿ ಅವರ ಸೇವೆ ಅಪಾರ ,ಅನನ್ಯ ಮತ್ತು ಅಜರಾಮರವಾದುದು. ಅವರು ಸಂಪಾದಕರಾಗಿದ್ದ ದರ್ಶನ ವಾರ್ಷಿಕ ಸಂಚಿಕೆ, ಆಧ್ಯಾತ್ಮಿ ಶಿಬಿರ, ಅಧ್ಯಾಪಕರ ಸಂಘ ಎನ್.ಎಸ್.ಎಸ್. ಹೀಗೆ ಹತ್ತು ಹಲವು ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಎಂದು ಹೇಳಿದರು. ಕುಂದಾಪುರದ ಕುಂದೇಶ್ವರ ದೇವಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು. ದೇವಾಲಯವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸಿದವರು. ಅವರ ಸುಮಾರು 88 ಕೃತಿಗಳನ್ನು ಪ್ರದರ್ಶಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರ ಅಭಿಮಾನಿ ಬಳಗ ಮತ್ತು ಬಿಜೆಪಿಯ ಪ್ರಮುಖ ಕಾರ್ಯಕರ್ತರು ಕೋಟ ರಾಷ್ಟ್ರೀಯ ಹೆದ್ದಾರಿ ಅಮೃತೇಶ್ವರಿ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಗೋಪಾಲ ಬಂಗೇರ ಎಂ.ಸುಬ್ರಾಯ ಆಚಾರ್ಯ,ಉಮೇಶ್ ಪೂಜಾರಿ ಕಲ್ಮಾಡಿ,ಸಂಜೀವ ಪೂಜಾರಿ ,ಶ್ರೀಧರ ಗಾಣಿಗ ಕಲ್ಮಾಡಿ,ಅನಂತ ಪ್ರಭು,ಅಭಿಮಾನಿ ಬಳಗದ ಪ್ರಸಾದ್ ಬಿಲ್ಲವ,ಸುರೇಶ್ ಗಿಳಿಯಾರು ಮಂಜುನಾಥ ಗಿಳಿಯಾರು, ರಾಘವೇಂದ್ರ ಶೆಟ್ಟಿ ಗಿಳಿಯಾರು, ಶಿವರಾಜ್ ಪೂಜಾರಿ ,ಅವಿನಾಶ್ ಶೆಟ್ಟಿ,ಭರತ್ ಶ್ರೀಯಾನ್ ಕಲ್ಮಾಡಿ,ರಘು,ಪೂಜಾರಿ,ರಾಜು ಕೆ.ಎಸ್,ಉದಯ ತಿಂಗಳಾಯ,ಪ್ರಶಾಂತ್ ಸೂರ್ಯ,ನವೀನ್ ಮಣೂರು ಮುಂತಾದವರು ಉಪಸ್ಥಿತರಿದ್ದರು. ಕೋಟ ಶ್ರೀನಿವಾಸ ಪೂಜಾರಿಯವರ ಅಭಿಮಾನಿಗಳು ಪಟಾಕಿ ಸಿಡಿಸಿದ ನಂತರ ಆ ಸ್ಥಳವನ್ನು ಸ್ವಚ್ಚಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪ್ರಾತ್ರರಾದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ರಾಧೇಯ ಎಂ. ಕಾಮತ್ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಮಟ್ಟದಲ್ಲಿ 76ನೇ ರ‍್ಯಾಂಕ್ ಪಡೆದುಕೊಂಡಿರುತ್ತಾನೆ. ಈತ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಮೋಹನ ಕಾಮತ್ ಹಾಗೂ ಗಿರೀಜಾ ಎಂ. ಕಾಮತ್‌ರವರ ಸುಪುತ್ರ. ಇವರ ಸಾಧನೆಗೆ ಕಾಲೇಜಿನ ಅಧ್ಯಕ್ಷರು, ಶಾಸಕರೂ ಆಗಿರುವ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

Read More