Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸಂಭವಿಸಿರುವ ಸಮುದ್ರ ಕೊರೆತಕ್ಕೆ 100 ಕೋಟಿ ರೂ. ವಿಶೇಷ ಪರಿಹಾರ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಗೃಹ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು. ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ತೌಖ್ತೆ ಚಂಡಮಾರುತ ಹಾಗೂ ಪ್ರಾಕೃತಿಕ ವಿಕೋಪದಿಂದ 9115 ಮೀ.ಉದ್ದದ ಸಮುದ್ರ ಕೊರೆತ ಸಂಭವಿಸಿ ಅಂದಾಜು 90 ಕೋಟಿ ರೂ. ಗಿಂತ ಹೆಚ್ಚು ಹಾನಿ ಸಂಭವಿಸಿದ್ದು, ಜಿಲ್ಲೆಯಲ್ಲಿ ಸಮುದ್ರ ಕೊರೆತೆ ತಡೆಯಲು ಶಾಶ್ವತ ಪರಿಹಾರವಾಗಿ 100 ಕೋಟಿ ರೂ. ಗಳನ್ನು ವಿಶೇಷ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚಿಸಿದ ಸಚಿವ ಬೊಮ್ಮಾಯಿ, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ತಡೆಗೆ ಪೂರ್ಣ ಪ್ರಮಾಣದ ಒಂದು ಎಸ್.ಡಿ.ಆರ್.ಎಫ್ ತಂಡವನ್ನು ಜಿಲ್ಲೆಗೆ ಮಂಜೂರು ಮಾಡಲಾಗುವುದು.ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಮನೆ ಹಾನಿಯಾದವರಿಗೆ ಗರಿಷ್ಠ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ನಾವುಂದ ರೈಲ್ವೇ ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕೊಡೇರಿ ಬೈಲ್ಕಿನಬಾಗಿಲು ನಿವಾಸಿ ಜಾಫರ್ ಸಾದಿಕ್ (42) ಎಂಬಾತನನ್ನು ಸೋಮವಾರ ಸಂಜೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ವ್ಯಕ್ತಿಯಿಂದ ರೂ.15,000 ಮೌಲ್ಯದ ಅರ್ಧ ಕೆಜಿ ತೂಕದ ಗಾಂಜಾ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮೊಬೈಲ್ ಪೋನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರ ಮಾಹಿತಿ ಮೇರೆಗೆ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜಾ ನಾಯ್ಕ ಹಾಗೂ ಬೈಂದೂರು ಪೊಲೀಸ್ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ನಾವುಂದ ರಿಚರ್ಡ್ ಆಲ್ಮೇಡ ಮೆಮೋರಿಯಲ್ ಕಾಲೇಜಿನ ಒಟ್ಟು 380 ವಿದ್ಯಾರ್ಥಿಗಳಿಗೆ ಸೋಮವಾರ ಮೊದಲ ಹಂತದ ಕೋವಿಡ್-19 ಸೋಂಕು ತಡೆ ಲಸಿಕೆ ನೀಡಲಾಯಿತು. ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಬೈಂದೂರು ಕಾಲೇಜಿನಲ್ಲಿ ಮತ್ತು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನಾವುಂದ ಕಾಲೇಜಿನಲ್ಲಿ ಲಸಿಕೆ ಅಭಿಯಾನ ನಡೆಸಿದರು. ನಾವುಂದದಲ್ಲಿ 130 ವಿದ್ಯಾರ್ಥಿಗಳು ಮತ್ತು ಬೈಂದೂರಿನಲ್ಲಿ 250 ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡರು. ಎರಡೂ ಕಡೆ ಕೊವ್ಯಾಕ್ಸೀನ್ ಲಸಿಕೆ ನೀಡಲಾಯಿತು. ನಾವುಂದ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರೊ. ಜಿ. ಎಸ್. ಹೆಗಡೆ ಮತ್ತು ಬೈಂದೂರು ಕಾಲೇಜಿನಲ್ಲಿ ಪ್ರಾಂಶುಪಾಲ ಡಾ. ರಘು ನಾಯ್ಕ್ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿಗೆ ಅಗತ್ಯ ನೆರವು ಒದಗಿಸಲಾಯಿತು. ಇನ್ನು ಎರಡು ವಾರಗಳಲ್ಲಿ ಕಾಲೇಜು ಆರಂಭವಾಗಿ, ಭೌತಿಕ ತರಗತಿಗಳು ನಡೆಯಲಿವೆ. ಅದರ ಪೂರ್ವದಲ್ಲಿ ಲಸಿಕೆ ನೀಡಿ, ಕೋವಿಡ್ ತಗಲುವ ಭಯವನ್ನು ಕಡಿಮೆ ಮಾಡಿರುವುದಕ್ಕಾಗಿ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೋವುಗಳ ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 23 ಜಾನುವಾರುಗಳನ್ನು ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಗುಲ್ವಾಡಿ ಕಾಂಡ್ಲಗದ್ದೆ ಎಂಬಲ್ಲಿ ನಡೆದಿದೆ. ಗುಲ್ವಾಡಿಯ ಅಬೂಬಕ್ಕರ್ ಎಂಬವರ ಮನೆಗೆ ಜೂನ್ 27ರ ರವಿವಾರ ಪೊಲೀಸ್ ದಾಳಿ ನಡೆಸಿದ್ದು ಸುಮಾರು ರೂ. 55,000 ಮೌಲ್ಯದ 23 ಜಾನುವಾರು ಹಾಗೂ ಜಾನುವಾರು ಕಟ್ಟಲು ಉಪಯೋಗಿಸುತ್ತಿದ್ದ ಹಗ್ಗವನ್ನು ವಶಪಡಿಸಿಕೊಳ್ಳಳಾಗಿದೆ. ಪೊಲೀಸರು ದಾಳಿ ನಡೆಸುತ್ತಿರುವುದು ತಿಳಿಯುತ್ತಿದ್ದಂತೆ ಆಪಾದಿತ ಅಬೂಬಕ್ಕರ್ ಪರಾರಿಯಾಗಿದ್ದಾನೆ. ಗೋ ಕಳ್ಳತನಕ್ಕೆ ಸಂಬಂಧಿಸಿದಂತೆ ಹಿಂದೂಸಂಘಟನೆ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್ಐ ಸುಧಾ ಪ್ರಭು ಅವರ ನೇತೃತ್ವದಲ್ಲಿ ದಾಳಿ ನಡೆಸಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಕರ್ನಾಟಕ ಸರಕಾರದ ವಿದ್ಯಾರ್ಥಿ ಲಸಿಕಾ ಅಭಿಯಾನದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದೊಂದಿಗೆ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋವಿಶೀಲ್ಡ್ ಲಸಿಕೆ ವಿತರಿಸಲಾಯಿತು. ಆಳ್ವಾಸ್ ಕಾಲೇಜು ಸೇರಿದಂತೆ ಮೂಡುಬಿದಿರೆಯ ವಿವಿಧ ಕಾಲೇಜುಗಳ ಸುಮಾರು 1616 ವಿದ್ಯಾರ್ಥಿಗಳು ಲಸಿಕೆಯ ಪ್ರಥಮ ಡೋಸ್ ಪಡೆದರು. ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಪುರಸಭೆ ಅಧಿಕಾರಿ ಇಂದು, ಎಂ.ಸಿ.ಎಸ್. ಬ್ಯಾಂಕ್‌ನ ಅಧ್ಯಕ್ಷ ಬಾಹುಬಲಿಪ್ರಸಾದ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಲಸಿಕಾ ಅಭಿಯಾನದ ನೋಡಲ್ ಆಫೀಸರ್ ಡಾ. ಸುಭಾಷ್ ಶೆಟ್ಟಿ, ಡಾ.ಮನಿಷಾ, ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್ ಖಾದರ್, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಶ್ರೀಧವಳಾ ಕಾಲೇಜಿನ ಪ್ರಾಂಶುಪಾಲ ಡಾ.ಸುದರ್ಶನ್ ಅಭಿಯಾನದಲ್ಲಿ ಭಾಗಿಯಾಗಿದ್ದರು. ಆಳ್ವಾಸ್ ಕಾಲೇಜಿನ ಸುಂದರಿ ಆನಂದ ಆಳ್ವ ಆವರಣದ ನುಡಿಸಿರಿ ವೇದಿಕೆಯಲ್ಲಿ ಲಸಿಕೆ ಅಭಿಯಾನದ ವ್ಯವಸ್ಥೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲೆಯ ಕೊಡವೂರಿನಲ್ಲಿರುವ ಟಿಪ್ಪು ಸುಲ್ತಾನ್ ಕಾಲದ ಐತಿಹಾಸಿಕ ಮಸೀದಿಯ ವಿಚಾರದಲ್ಲಿ ಜಿಲ್ಲೆಯ ಶಾಂತಿಗೆ ಕೊಳ್ಳಿ ಇಡುವ ಪ್ರಯತ್ನಗಳು ಆಗುತ್ತಿದೆ. 1980ರಿಂದಲೇ ಮಸೀದಿಗೆ ಸರಕಾರದಿಂದ ತಸ್ಘೀಕ್ ದೊರೆಯುತ್ತಿದ್ದು ಮಸೀದಿಯ ಜಾಗವು ವಕ್ಫಬೋಡ್ನಲ್ಲಿ ನೋಂದಾವಣೆಗೊಂಡಿದ್ದು, ಕಾನೂನಾತ್ಮಕ ದಾಖಲೆಗಳಿದ್ದರೂ ಮಸೀದಿಯ ಜಾಗವನ್ನು ವಶಪಡಿಸಿಕೊಂಡಿರುವುದರ ಹಿಂದೆ ಜಿಲ್ಲೆಯಲ್ಲಿ ಶಾಂತಿ ಕದಡುವ ಹುನ್ನಾರ ಅಡಗಿದೆ ಎಂದು ಪ್ರಗತಿಪರ ಚಿಂತಕ ಶಶಿಧರ ಹೆಮ್ಮಾಡಿ ಹೇಳಿದರು. ಸರ್ವೆ ನಂ 53A/6 ರಲ್ಲಿ ಮಸ್ಜೀದ್ಗೆ ಸೇರಿದ 67 ಸೆಂಟ್ಸ್ ಜಾಗದ ಬಗ್ಗೆ ಕೊಡವೂರು ಗ್ರಾಮದ ಅಡಂಗಲ್ನಲ್ಲಿ ಉಲ್ಲೇಖವಿದೆ. ಸರ್ವೆಯ ನಕ್ಷೆಯಲ್ಲಿ ಮಸ್ಜೀದ್ ಕಟ್ಟಡ ಮತ್ತು ಕೊಳವಿರುವುದು ಸ್ಪಷ್ಟವಾಗಿರುತ್ತದೆ. ಕಾನೂನು ಬದ್ದವಾಗಿ ವಕ್ಫನಲ್ಲಿ ನೋದಾವಣಿ ಹಾಗೂ ಗೆಝೆಟ್ ನೋಟಿಫಿಕೇಶನ್ ಆದ ಕಲ್ಮತ್ ಜಮ್ಮಾ ಮಸೀದಿಯು ಸ್ಥಿರಾಸ್ಥಿಯ ಪಹಣಿ ಪತ್ರದಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಕಲ್ಮತ್ ಜುಮ್ಮಾ ಮಸೀದಿಯ ಹಕ್ಕನ್ನು ಕಸಿದುಕೊಂಡು ಕಾನೂನು ಬಾಹಿರವಾಗಿ ಸರಕಾರದ ಹೆಸರನ್ನು ನಮೂದಿಸಲಾಗಿದೆ ಈ ಕೂಡಲೇ ಸರಕಾರವು ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಇದೇ ಜುಲೈ 19 (ಕೋರ್ ಸಬ್ಜೆಕ್ಟ್) ಮತ್ತು ಜುಲೈ 22 (ಭಾಷಾ ವಿಷಯ) ರಂದು ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್ ಸೇರಿ ಒಂದು ಪ್ರಶ್ನೆ ಪತ್ರಿಕೆ ಇರಲಿದೆ. ಎರಡನೇಯದ್ದು ಗಣಿತ, ವಿಜ್ಞಾನ ಮತ್ತು ಸಮಾಜದ ಪ್ರಶ್ನೆ ಪತ್ರಿಕೆ ಇರಲಿದೆ. ಎಲ್ಲವೂ ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದರು. ಪರೀಕ್ಷೆ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರಗಳಿರಲಿವೆ. ಯಾವುದೇ ಆತಂಕ ಇಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷೆ ಸಮಯ 10.30ರಿಂದ 1.30 ಗಂಟೆವರೆಗೆ ಇರಲಿದೆ. ಈ ಬಾರಿ ಒಟ್ಟು 8,76,581 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ 8 ಲಕ್ಷ 46 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೊರೊನಾ ಹಿನ್ನೆಲೆ ಪರೀಕ್ಷಾ ಕೊಠಡಿಗಳನ್ನು ಹೆಚ್ಚು ಮಾಡಲಾಗಿದೆ. ಈ ಬಾರಿ 73066 ಪರೀಕ್ಷಾ ಕೊಠಡಿಗಳು ಇರಲಿವೆ.

Read More

ಬದುಕಿನಲ್ಲಿ ಪ್ರತಿಯೊಬ್ಬರು ಸುಖಿಯಾಗಿರಲು ಬಯಸುತ್ತಾರೆ. ಆದರೆ ಒಂದಿಲ್ಲೊಂದು ಕಾರಣದಿಂದ ಅವರು ತಮ್ಮ ಬದುಕಿನ ಸಂತೋಷದ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಹಾಗೆ ಮಿಸ್ ಮಾಡಿಕೊಳ್ಳಬಾರದ ಈ ಐದು ಅಂಶಗಳು ನಿಮ್ಮ ಸುಖಿ ಜೀವನದ ಕೀಲಿಕೈ ಆಗಲಿದೆ. ಪ್ರೀತಿಸಿ: ನಮಗೆ ತುಂಬಾ ಖುಷಿಯನ್ನು ಕೊಟ್ಟ ಕ್ಷಣಗಳು ಯಾವುದು ಅಂತ ಒಮ್ಮೆ ನೆನಪು ಮಾಡಿಕೊಳ್ಳಿ. ಅಮ್ಮನ ಜೊತೆ ಹಾಡು ಗುನುಗುತ್ತ ಕಳೆದ ಸಂಜೆ, ಅಪ್ಪನ ಕೈ ಹಿಡಿದು ಜಾತ್ರೆಗೆ ಹೋದ ದಿನ, ತಂಗಿಯ ಜೊತೆಗೆ ಜಾರುಬಂಡಿ ಆಟವಾಡಿ ದಣಿದ ದಿನ, ಅಕ್ಕನ ಜೊತೆಗೆ ಒಂದೇ ಕೊಡೆಯಲ್ಲಿ ಜೋರು ಮಳೆಯ ದಿನ ಶಾಲೆಯಿಂದ ಬಂದ ಸಂಜೆ, ಹೆಂಡತಿಯ ಜೊತೆಗೆ ಹನಿಮೂನ್ ಹೋದಾಗ ಕಳೆದ ಕ್ಷಣಗಳು, ಮಗಳು ತನ್ನ ಮೊದಲ ತೊದಲು ಮಾತಿನಿಂದ ಅಪ್ಪಾ- ಅಮ್ಮಾ ಅಂತ ಕರೆದಾಗ ಆದ ಭಾವುಕ ಕ್ಷಣ ಇತ್ಯಾದಿ. ಇಲ್ಲೆಲ್ಲಾ ನಮ್ಮ ಸಂಬಂಧಗಳೇ ನಮ್ಮ ಖುಷಿಗೆ ಮೂಲವಾಗಿರುವುದನ್ನು ನೀವು ನೋಡಬಹುದು. ಹಾಗೇ ನಿಮ್ಮ ಸಂಬಂಧದಲ್ಲೂ ನಿಮ್ಮ ಕೆರಿಯರ್ನಲ್ಲೂ ಇನ್ನೊಬ್ಬರನ್ನು ಅತ್ಯಂತ ಕಾಳಜಿಯಿಂದ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರು ತಮ್ಮ ಗೃಹ ಕಛೇರಿಯಲ್ಲಿ ಭಾನುವಾರ ಖಾಸಗಿ ನೆಟ್‌ವರ್ಕ್ ಆಪರೇಟರ್ಗಳ ಸಭೆ ನಡೆಸಿದರು. ಗ್ರಾಮೀಣ ಭಾಗಗಳನ್ನು ಹೆಚ್ಚು ಒಳಗೊಂಡಿರುವ ಕ್ಷೇತ್ರ ಬೈಂದೂರು. ಇಲ್ಲಿನ ಬಹಳಷ್ಟು ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದ್ದು, ಜನರು ಸಂವಹನ ಸಮಸ್ಯೆಯನ್ನು ಎದುರಿಸುತಿದ್ದಾರೆ. ಪ್ರಸ್ತುತ ಲಾಕ್ಡೌನ್ ಕಾರಣದಿಂದ ಎಲ್ಲಾ ಶಾಲಾ ಕಾಲೇಜುಗಳ ಶಿಕ್ಷಣ ಆನ್ಲೈನ್ ಮೂಲಕ ನಡೆಯುತ್ತಿದೆ. ಮೊಬೈಲ್ ಅವಲಂಬಿತ ಪ್ರಸಕ್ತ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್ ಅತಿ ಅಗತ್ಯವಾಗಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಯಲ್ಲಿ ನಿಂತುಕೊಳ್ಳುವುದು, ಕಿಲೋಮಿಟರಗಳುಗಟ್ಟಲೆ ಹೋಗಬೇಕಾದ್ದು, ಕಾಡು ಪ್ರಾಣಿಗಳ ಕಾಟ, ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಮಗ್ರ ಬೈಂದೂರಿನ ನೆಟ್ವರ್ಕ್ ಸಮಸ್ಯೆಗೆ ಮುಕ್ತಿ ಕೊಡುವಂತೆ ನೆಟ್‌ವರ್ಕ್ ಆಪರೇಟರ್ಗಳೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು. ಟವರ್ ಹಾಕಿಸಲು ಕನ್ವರ್ಷನ್ ಭೂಮಿ ಬೇಕು ಎಂಬ ಕಾರಣಕ್ಕೆ ಹೊಸದಾಗಿ ಟವರ್ ಮಾಡುವಲ್ಲಿ ಕನ್ವರ್ಷನ್ ಜಾಗಗಳ ಸಮಸ್ಯೆ ಎದುರಾಗುತಿತ್ತು. ಹಾಗಾಗಿ ಅದರಿಂದ ವಿನಾಯತಿ…

Read More

ಹಿಂದಿನ ಕಾಲದಲ್ಲಿ ಮನೆಯ ಹಿತ್ತಲಿನಲ್ಲಿಯೇ ತರಕಾರಿ ಹಣ್ಣು ಹಂಪಲುಗಳ ಜೊತೆಗೆ ಔಷಧೀಯ ಸಸ್ಯಗಳನ್ನು ಕೂಡ ಹಿರಿಯವರು ಬೆಳೆಸುತ್ತಿದ್ದರು. ಇದರಿಂದ ಮನೆಯ ಔಷಧೋಪಚಾರದ ಸಮಸ್ಯೆಯೂ ಬಗೆಹರಿಯುತ್ತಿತ್ತು ಜೊತೆಗೆ ಮನೆಗೂ ಕೀಟಗಳಿಂದ ಸಂರಕ್ಷಣೆ ದೊರೆಯುತ್ತಿತ್ತು. ಆದರೆ ಇಂದಿನ ಅಪಾಂಟ್‌ಮೆಂಟ್ ಯುಗದಲ್ಲಿ ಹಿತ್ತಲು ಎಂಬುದಕ್ಕೆ ಜಾಗವೇ ಇಲ್ಲದಂತಾಗಿದೆ. ಅದಾಗ್ಯೂ ಪ್ಲಾಟ್ಗಳಲ್ಲಿ ಬೆಳೆಯಬಹುದಾದ ಔಷಧೀಯ ಸಸ್ಯಗಳನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ. ತುಳಸಿ: ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚಿನ ಸ್ಥಾನವಿದೆ. ಪವಿತ್ರ ಗಿಡವೆಂಬ ಮನ್ನಣೆ ಇದೆ. ತನ್ನ ಔಷಧೀಯ ಗುಣಗಳಿಂದ ಇದು ಸಸ್ಯ ಜಗತ್ತಿನ ರಾಣಿ ಎಂದೆನಿಸಿದೆ. ಇದನ್ನು ಹರ್ಬಲ್ ಚಹಾ ರೂಪದಲ್ಲಿ ಅಂತೆಯೇ ಹಸಿಯಾಗಿ ಕೂಡ ಸೇವಿಸಬಹುದು. ತುಳಸಿಯಲ್ಲಿ ಹಲವಾರು ವಿಧಗಳಿದ್ದು ರಾಮ ತುಳಸಿ, ವನ ತುಳಸಿ, ಕೃಷ್ಣ ತುಳಸಿ, ಕರ್ಪೂರ ತುಳಸಿ ಎಂಬವುಗಳಿವೆ. ದೇಹದ ಹೊರಗಿನ ಸಮಸ್ಯೆಗಳಿಗೆ ಕರ್ಪೂರ ತುಳಸಿಯನ್ನು ಬಳಸಬಹುದಾಗಿದೆ. ಕಿವಿ ನೋವಿಗೆ ಇಯರ್ ಡ್ರಾಪ್ಸ್ನಂತೆ ಇದು ಕೆಲಸ ಮಾಡುತ್ತದೆ. ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ತುಳಸಿ ಪಡೆದುಕೊಂಡಿದ್ದು ಜ್ವರ, ಸಾಮಾನ್ಯ ಶೀತಕ್ಕೆ…

Read More