ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಪ್ರಯೋಜನ ಪ್ರತಿಯೊಂದು ಮನೆಯನ್ನು ತಲುಪುತ್ತಿದೆ. ಸಮಾಜದ ಕಟ್ಟಕಡೆಯ ಜನರೊಂದಿಗೆ ಸರಕಾರ ಇದೆ ಎಂಬುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಸಾಬೀತುಪಡಿಸಿದೆ. ಸರಕಾರದ ಯೋಚನೆ, ಯೋಜನೆಗಳ ಬಗ್ಗೆ ಬಿಜೆಪಿ ಕಾರ್ಯಕರ್ತರು ಜನಸಾಮಾನ್ಯರಿಗೆ ತಿಳಿಸಬೇಕಾದ ಅಗತ್ಯತೆ ಇದೆ. ಚುನಾವಣೆಪೂರ್ವ ನೀಡಿದ ಭರವಸೆಯಂತೆ ಸಮೃದ್ಧ, ಶಕ್ತಿಶಾಲಿ ಹಾಗೂ ಸ್ವಾಭಿಮಾನಿ ಭಾರತ ನಿರ್ಮಾಣ ನಡೆಯುತ್ತಿದ್ದು, ಸರಕಾರ ಮತ್ತು ಮತದಾರರ ನಡುವೆ ಕಾರ್ಯಕರ್ತರು ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಬೇಕು ಎಂದು ಮುಜರಾಯಿ, ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ತ್ರಾಸಿಯ ಕೊಂಕಣಿ ಖಾರ್ವಿ ಸಭಾಭವನದಲ್ಲಿ ಜರಗಿದ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದ ಕೆಲವೇ ಕೆಲವು ವಿಧಾನಸಭಾ ಕ್ಷೇತ್ರಗಳಳಿಗೆ ಅತೀ ಹೆಚ್ಚು ಅನುದಾನ ದೊರೆತಿದ್ದು, ಈ ಪೈಕಿ ಬೈಂದೂರು ಮೊದಲ ಸ್ಥಾನದಲ್ಲಿದೆ. ಪ್ರವಾಸೋದ್ಯಮ, ಸೋಮೇಶ್ವರ ಮತ್ತು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ಗೃಹ ರಕ್ಷಕ ದಳದ ಬೈಂದೂರು ಘಟಕದ ವತಿಯಿಂದ ತಾಲ್ಲೂಕು ದಂಡಾಧಿಕಾರಿ ಕಛೇರಿಯ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವನಮಹೋತ್ಸವ ಸಂಕೇತವಾಗಿ ಬೈಂದೂರು ತಹಶಿಲ್ದಾರರಾದ ಶೋಭಾಲಕ್ಷ್ಮಿ ಎಚ್. ಎಸ್ ಅವರು, ಹಸಿರು ಉಡುಗೆಯಲ್ಲಿ ಆಗಮಿಸಿ ಸಸ್ಯಗಳನ್ನು ನೆಟ್ಟು ಬೆಳೆಸಿ ಪೋಷಿಸುವುದರಿಂದ ವಾತವರಣಕ್ಕೆ ಆಗುವ ಪ್ರಯೋಜನಗಳನ್ನು ವಿವರಿಸಿದರು. ಈ ಸಂದರ್ಭ ಉಪ ತಹಶಿಲ್ದಾರರಾದ ಭೀಮಪ್ಪ, ಬೈಂದೂರು ಪೊಲೀಸ್ ಅಪರಾಧ ನಿಗ್ರಹದಳದ ನೂತನ ಉಪನೀರಿಕ್ಷಕ ಅನಿಲ್ ಬಿ ಎಮ್, ಬೈಂದೂರು ಗೃಹ ರಕ್ಷಕ ದಳದ ಘಟಕಾಧಿಕಾರಿಯಾದ ರಾಘವೇಂದ್ರ ಎನ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಹಾಜರಿದ್ದ ತಾಲ್ಲೂಕು ಕಛೇರಿಯ ಸಿಬ್ಬಂದಿ ವರ್ಗದವರಿಗ ಹಾಗೂ ಬೈಂದೂರು ಗೃಹ ರಕ್ಷಕ ದಳದ ಎಲ್ಲಾ ಗೃಹ ರಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ತಹಶಿಲ್ದಾರರಿಂದ ಗಿಡಗಳನ್ನು ವಿತರಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಹಿರಿಯ ಶಿಲ್ಪಿಗಳಾದ ಉಡುಪಿ ಹೆರ್ಗದ ನಾರಾಯಣ ಆಚಾರ್ಯ ಅವರನ್ನು ಅವರ ನಿವಾಸದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಪತ್ರಕರ್ತರ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸನ್ಮಾನಿಸಿದರು. ಹಿರಿಯರು ಹಾಗೂ ಎಲೆಯ ಮರೆಯ ಕಾಯಿಯಂತೆ ಇರುವ ಪ್ರತಿಭಾವಂತರನ್ನು ಗುರುತಿಸುವ ಕೆಲಸ ನಿರಂತರವಾಗಿ ನಡೆಯುತ್ತಿರಲಿ. ನಾಡಿಗೆ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಹೊಸ ಕಲ್ಪನೆಯನ್ನು ನೀಡಿದ ಶೇಖರ ಅಜೆಕಾರು ಸದಾ ಹೊಸತನದ ಹುಡುಕಾಟದಲ್ಲಿರುವವರು ಎಂದು ಹರಿಕೃಷ್ಣ ಪುನರೂರು ಹೇಳಿದರು. ಅವರು ಪ್ರಸಕ್ತ ಸಾಲಿನ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಅವರು ಅಧ್ಯಕ್ಷತೆ ವಹಿಸಿದ್ದರು. ಗುಲಾಬಿ ನಾರಾಯಣ ಆಚಾರ್ಯ, ಉದ್ಯಮಿ ಫೆರಲಾಯ್ ಭಾಸ್ಕರ ಆಚಾರ್ಯ, ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಪರ್ಕಳ ಸುಬ್ರಾಯ ಆಚಾರ್ಯ, ಖ್ಯಾತ ಕಲಾವಿದ ಪಿ. ಎನ್. ಆಚಾರ್ಯ, ಪಂಚನಬೆಟ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸಬಹುದಾದ ಹಿನ್ನಲೆಯಲ್ಲಿ, ಮಕ್ಕಳೊಂದಿಗೆ ಮಕ್ಕಳ ಸ್ನೇಹಿಯಾಗಿ ಬೆರೆತು, ಅವರೊಂದಿಗೆ ಆಪ್ತಸಮಾಲೋಚನೆ ನಡೆಸಿ, ಕೋವಿಡ್ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ, ಮಕ್ಕಳ ಸಮಾಲೋಚಕರಿಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆದ್ಯತೆಯ ಮೇರೆಗೆ ಆಯೋಜಿಸಿ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಹ ಮಕ್ಕಳ ಸಮಾಲೋಚಕರನ್ನು ನೇಮಿಸಿ. ಮಕ್ಕಳ ಸಮಾಲೋಚಕರಾಗಿ ಕಾರ್ಯನಿರ್ವಹಿಸಲು ಆಸಕ್ತರಿರುವ ಎಂ.ಎಸ್.ಡಬ್ಯೂ ಮತ್ತು ಮನ:ಶಾಸ್ತ್ರದ ವಿದ್ಯಾರ್ಥಿಗಳಿಗೆ, ಮಕ್ಕಳೊಂದಿಗೆ ಬೆರೆತು, ಮಕ್ಕಳು ಕೋವಿಡ್ ಮಾರ್ಗಸೂಚಿಗಳ ಪಾಲನೆ ಮತ್ತು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವಂತೆ ಮನವೊಲಿಸುವ ವಿಧಾನಗಳ ಬಗ್ಗೆ ಸೂಕ್ತ ತರಬೇತಿ ನೀಡಿ, ಅವರನ್ನು ಟೆಲಿಕೌನ್ಸಿಲಿಂಗ್ ಸೇವೆಗಳಿಗೆ ಸಹ ನಿಯೋಜಿಸಿ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಮಕ್ಕಳ ಸಹಾಯವಾಣಿ ಸಂಖ್ಯೆ 1098 ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಗೌರವಗಳಿಗೆ ಪಾತ್ರರಾದ ಎನ್.ಗುರುರಾಜ್ ಅವರಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುವ 2021ನೇ ಸಾಲಿನ ಪತ್ರಿಕಾದಿನದ ಗೌರವವನ್ನು ಅವರ ಪರ್ಕಳದ ಸ್ವಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪ್ರದಾನಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಎನ್. ಗುರುರಾಜ್ ಅವರು, ಮುದ್ರಣ ಮಾಧ್ಯಮ ಇಂದಿಗೂ ವಿಶ್ವಹಾರ್ಹತೆಯನ್ನು ಉಳಿಸಿಕೊಳ್ಳಲು ಎನ್ ಗುರುರಾಜ್ ಅವರಂತಹ ಅನೇಕ ಹಿರಿಯ ಪತ್ರಕರ್ತರು ಮಾಡಿದ ನಿಸ್ವಾರ್ಥ ಪತ್ರಕರ್ತರ ಅಪೂರ್ವ ಸೇವೆ ಕಾರಣವಾಗಿದೆ. ಗುರುರಾಜ್ ಸದಾ ಅಭಿನಂದನಾರ್ಹರು ಎಂದು ಹರಿಕೃಷ್ಣ ಪುನರೂರು ಹೇಳಿದರು. ಪತ್ರಿಕೋದ್ಯಮ ಸಂದಿಗ್ದತೆಯನ್ನು ಎದುರಿಸುತ್ತಿದೆ, ಹೀಗೆ ವಿಶ್ರಾಂತರನ್ನು ಗೌರವಿಸುವುದು ಸಂತೋಷದ ವಿಷಯ ಎಂದು ಹೇಳಿದರು. ವಿಶ್ರಾಂತ ಜೀವನ ನಡೆಸುತ್ತಿರುವ ಸಾಧಕರನ್ನು ಅವರವರ iನೆಗೆ ತೆರಳಿ ಗೌರವಿಸುವ ಸಂಪ್ರದಾಯ ವಿನೂತನವಾದುದು. 13 ವರ್ಷಗಳಿಂದ ನಿರಂತರ ಹೀಗೆ ಹಿರಿಯರೆಡೆಗೆ ನಮ್ಮ ನಡಿಗೆ ಮಾಡುತ್ತಿರುವ ಡಾ. ಶೇಖರ ಅಜೆಕಾರು ಅವರ…
ಪ್ರೆಶರ್ ಕುಕ್ಕರ್ ಮಹಿಳೆಯರ ಫೆವರೇಟ್ ಅಡುಗೆ ಸಾಧನ. ಆದರೆ ಸರಿಯಾಗಿ ಬಳಸದಿದ್ದರೆ ತುಂಬಾ ಅಪಾಯಕಾರಿ ಅಡುಗೆ ಸಾಧನವೂ ಹೌದು ಎಂದು ನಿಮಗೆ ತಿಳಿದಿದೆಯೇ? ಶಾಖ ಮತ್ತು ಒತ್ತಡದಿಂದ ಅಡುಗೆ ತಯಾರಿಸುವ ಈ ಸಾಧನದ ಯಾವುದೇ ಭಾಗ ಹಾನಿಗೊಳಗಾದರೆ ಅಪಾಯ ಎದುರಾಗಬಹುದು. ಹಾಗಾಗಿ ಅಪಾಯ ತಡೆಯಲು ಈ ಕೆಳಗೆ ಸೂಚಿಸಲಾಗಿರುವ ವಿಚಾರಗಳು ನೆನಪಿರಲಿ ಕುಕ್ಕರ್ ತುಂಬುವಂತೆ ಮಾಡಬೇಡಿ:ಒತ್ತಡ ಮತ್ತು ನೀರಿನ ಮೂಲಕ ಆಹಾರ ಬೇಯುವ ಕುಕ್ಕರ್ ನಲ್ಲಿ ಉಸಿರಾಟಕ್ಕೆ ಸ್ಥಳವಿಲ್ಲದಿದ್ದಾಗ, ಆಹಾರ ಹೇಗೆ ಬೇಯ್ಯುತ್ತದೆ ಹೇಳಿ? ಆಗಲೇ ಅದು ಸಿಡಿಯುವುದು. ಆದ್ದರಿಂದ, ನೀವು ಮೂರನೇ ಎರಡು ಅಂದರೆ ಕುಕ್ಕರಿನ ಮುಕ್ಕಾಲು ಭಾಗದಷ್ಟು ಮಾತ್ರ ಆಹಾರ ಸೇರಿಸಿ, ಮತ್ತು ಬೇಯಿಸಿದಾಗ ಉಬ್ಬುವ ಆಹಾರ ಇದ್ದರೆ, ಅರ್ಧದಷ್ಟು ಭಾಗವನ್ನು ಮಾತ್ರ ಭರ್ತಿ ಮಾಡಿ. ಸಾಕಷ್ಟು ನೀರು ಸೇರಿಸಿ:ಪ್ರೆಶರ್ ಕುಕ್ಕರ್ನ ಕಾರ್ಯವಿಧಾನದ ಪ್ರಕಾರ, ಶಾಖ ಮತ್ತು ಒತ್ತಡವನ್ನು ಸೃಷ್ಟಿಸಲು ಇದಕ್ಕೆ ಸಾಕಷ್ಟು ದ್ರವ / ನೀರು ಬೇಕಾಗುತ್ತದೆ, ಆದ್ದರಿಂದ ನೀವು ಸಾಕಷ್ಟು ನೀರು / ದ್ರವವನ್ನು ಸೇರಿಸಿದ್ದೀರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮಾ ಆಚರಿಸಲಾಯಿತು. ಶ್ರೀ ಗುರು ನಿತ್ಯಾನಂದ ಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯ ಆರ್. ಕೆ. ಬಿಲ್ಲವ, ಮುಖ್ಯ ಶಿಕ್ಷಕ ರವಿದಾಸ ಶೆಟ್ಟಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 182 ವಿದ್ಯಾರ್ಥಿಗಳಲ್ಲಿ 31 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 106 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 45 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಸನ್ನಾ ಪೈ 600ಕ್ಕೆ 600 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ರಿಫ್ಜಾ (597) ಮತ್ತು ಸನತ್ (594) ಅಂಕ ಪಡೆದಿದ್ದಾರೆ. ವಾಣಿಜ್ಯಶಾಸ್ತ್ರ ವಿಭಾಗದ ನಮಿತಾ ವಿ. ಶೇಟ್ 595 ಅಂಕಗಳನ್ನು ಗಳಿಸಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಬುದ್ಧ ಸಮಾಜ ನಿರ್ಮಾಣ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಉನ್ನತ ಆಶಯವನ್ನಿರಿಸಿಕೊಂಡು ರಾಜ್ಯಾದ್ಯಂತ ಕಳೆದ 8 ತಿಂಗಳಿಂದ ಸುಮಾರು 8000 ಕಿ.ಮೀ. ಕ್ರಮಿಸಿರುವ ಬೆಂಗಳೂರಿನ ಸಾಹಿತಿ ಸಮಾಜಸೇವಕ ಹೆಚ್. ಕೆ. ವಿವೇಕಾನಂದ ಅವರ ಪಾದಯಾತ್ರೆಯು ಕುಂದಾಪುರ ತಾಲೂಕಿನ ಸಿದ್ದಾಪುರಕ್ಕೆ ಬಂದು ತಲುಪಿತು. ಪಾದಯಾತ್ರೆ ಹೆಬ್ರಿಯಿಂದ ಶಂಕರನಾರಾಯಣ ತಲುಪುತ್ತಿದ್ದಂತೆ ಸಿದ್ಧಾಪುರ ಹಸಂಗಡಿ ರೋಟರಿ ಕ್ಲಬ್, ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ, ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ಸಾರ್ವಜನಿಕರು ಅವರನ್ನು ಸ್ವಾಗತಿಸಿ ಸಮ್ಮಾನಿಸಿದರು. ಈ ಸಂಧರ್ಭ ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರಾದ ಲಕ್ಷ್ಮಿನಾರಾಯಣ ಉಡುಪ, ಲೇಖಕ ಮುಷ್ತಾಕ್ ಹೆನ್ನಾಬೈಲ್, ಸಿದ್ಧಾಪುರ ಹೊಸಂಗಡಿ ರೋಟರಿ ಅಧ್ಯಕ್ಷ ಸುಭಾಷ್ಚಂದ್ರ ಶೆಟ್ಟಿ, ಕಾರ್ಯದರ್ಶಿ ನಾಗೇಂದ್ರ ಯಡಿಯಾಳ, ಯಕ್ಷ ನುಡಿಸಿರಿ ಬಳಗದ ಕಾರ್ಯದರ್ಶಿ ಭೋಜರಾಜ ಶೆಟ್ಟಿ, ಸುಭಾಷ್ ಯಡಿಯಾಳ, ನಮಿತಾ ಯಡಿಯಾಳ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮರವಂತೆ ಜನತಾ ಕಾಲನಿ ನಿವಾಸಿ ಶಂಕರ ಖಾರ್ವಿ-ಪಾರ್ವತಿ ದಂಪತಿಯ ಪುತ್ರ ಸುಭಾಸ್ ಖಾರ್ವಿ(28) ಗುಲಾಯ್ನ್ ಬೇರ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತಿದ್ದು, ಅವರ ಚಿಕಿತ್ಸೆಗೆ ಮಾನವೀಯ ನೆರವಿನ ಅಗತ್ಯವಿದೆ. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ (ಆಸ್ಪತ್ರೆ ಸಂಖ್ಯೆ: 03444242). ಚಿಕಿತ್ಸೆಗೆ ರೂ 4 ಲಕ್ಷ ವೆಚ್ಚವಾಗುವುದೆಂದು ಆಸ್ಪತ್ರೆಯ ನ್ಯೂರೊಲಜಿ ವಿಭಾಗದ ಮುಖ್ಯಸ್ಥೆ ಡಾ. ಅಪರ್ಣಾ ಪೈ ದೃಢೀಕರಿಸಿದ್ದಾರೆ. ಸುಭಾಸ್ ಅವರ ತಂದೆ ಹೃದ್ರೋಗಕ್ಕೆ ಮತ್ತು ತಾಯಿ ಪಾರ್ವತಿ ಥೈರಾಯ್ಡ್ ಸಂಬಂಧಿ ಕಾಯಿಲೆಗೆ ನಿರಂತರ ಔಷಧಿ ಸೇವಿಸುತ್ತಿದ್ದಾರೆ. ಕೇವಲ ದಿನದ ದುಡಿಮೆಯಿಂದ ಬದುಕಬೇಕಾದ ಕುಟುಂಬ ಸುಭಾಸ್ ಚಿಕಿತ್ಸೆಗೆ ಹಣ ಹೊಂದಿಸಲು ಸಾದ್ಯವಾಗದೇ ಅವರು ದಾನಿಗಳ, ಸಂಘಟನೆಗಳ ನೆರವು ಯಾಚಿಸಿದ್ದಾರೆ. ಸುಭಾಸ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಪಾರ್ವತಿ ಹೆಸರಿನಲ್ಲಿ ಮರವಂತೆ ಕೆನರಾ ಬ್ಯಾಂಕ್ನ (ಐಎಫ್ಎಸ್ಸಿ ಕೋಡ್: ಸುಭಾಸ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಪಾರ್ವತಿ ಹೆಸರಿನಲ್ಲಿ ಮರವಂತೆ ಕೆನರಾ ಬ್ಯಾಂಕ್ನ(ಐಎಫ್ಎಸ್ಸಿ ಕೋಡ್: 0ಸಿಎನ್ಆರ್ಬಿ0010282) 02822250002001 ಸಂಖ್ಯೆಯ ಉಳಿತಾಯ ಖಾತೆಗೆ…
