ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈಗಾಗಲೇ ಚಂಡೆ ಶಬ್ದ ಕೇಳಿಸಲು ಪ್ರಾರಂಭವಾಗಿದೆ ಆದರೆ ಬಹು ಜನರ ನಿರೀಕ್ಷೆ ಯಾವಾಗ ಪೇರ್ಡೂರು ಮೇಳದ ಎಂಟ್ರಿ ಎಂಬುದು . ಅನಿಲ್ ಕುಮಾರ್ ಶೆಟ್ಟಿ ಪೇರ್ಡೂರು ಆಯೋಜನೆಯಲ್ಲಿ ಜುಲೈ 20 ಶುಕ್ರವಾರ ಪೇರ್ಡೂರು ಮೇಳದ ಬೆಂಗಳೂರಿನ ಪ್ರಥಮ ಪ್ರದರ್ಶನ “ಅಹಂ ಬ್ರಹ್ಮಾಸ್ಮಿ” . ಊರಿನ ತಿರುಗಾಟದಲ್ಲಿ ನೂರು ಪ್ರದರ್ಶನಗಳನ್ನು ಕಂಡ ಪ್ರೋ. ಪವನ್ ಕಿರಣಕೆರೆ ವಿರಚಿತ ಕೃತಿ ಇದಾಗಿದ್ದು ಜನ್ಸಾಲೆ ಭಾಗವತಿಕೆಯಲ್ಲಿ ಪ್ರದರ್ಶನ ಕಾಣಲಿದೆ. ರಾಘವೇಂದ್ರ ಆಚಾರ್ಯ ಜನ್ಸಾಲೆ ,ಬ್ರಹ್ಮೂರು ಗಾನ ಸಾರಥ್ಯ ನಿರ್ವಹಿಸಿದರೆ ಸುನಿಲ್ ಭಂಡಾರಿ , ಸುಜನ್ ಹಾಲಾಡಿ ಸಾಥ್ ನೀಡಲಿದ್ದಾರೆ . ಥಂಡಿಮನೆ , ಸುಬ್ರಮಣ್ಯ ಯಲಗುಪ್ಪ , ಕಡಬಾಳ್ , ಕಿರಾಡಿ , ಮಾಗೋಡು , ಕೆಕ್ಕಾರು ರಂಗ ವೈಭವಕ್ಕೆ ರಮೇಶ ಭಂಡಾರಿ , ರವೀಂದ್ರ ದೇವಾಡಿಗ , ಪುರಂದರ ಮೂಡ್ಕಣಿ ತ್ರಿವಳಿ ಹಾಸ್ಯ ಸಿಂಚನ ಮಾಡಲಿದ್ದಾರೆ. ಬಹುದಿನಗಳ ನಂತರ ಪೇರ್ಡೂರು ಮೇಳದ ಪ್ರದರ್ಶನಕ್ಕೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ’ಶಾಲೆಗೆ ಬನ್ನಿ ಶನಿವಾರ ಕಲಿಕೆಗೆ ನೀಡಿ ಸಹಕಾರ’ ಕಾರ್ಯಕ್ರಮದಡಿ ತಿಂಗಳ ಕಲಿಕಾ ಪ್ರದರ್ಶನ ಕಾರ್ಯಕ್ರಮದಲ್ಲಿ ದಿಗ್ವಿಜಯ ನ್ಯೂಸ್ ವಾಹಿನಿಯ ವರದಿಗಾರ್ತಿ, ಶಾಲಾ ಹಳೆವಿದ್ಯಾರ್ಥಿ ಕುಮಾರಿ ಪವಿತ್ರ ಅವರೊಂದಿಗೆ ಮಕ್ಕಳು ಮುಕ್ತ ಸಂವಾದ ನಡೆಸಿದರು. ಮಕ್ಕಳು ವಿಭಿನ್ನವಾದ ಪ್ರಶ್ನೆಗಳನ್ನು ಕೇಳುವ ಮೂಲಕ ಟಿ.ವಿ.ವಾಹಿನಿಯ ಕಾರ್ಯಕ್ರಮಗಳು ಹೇಗೆ ರೂಪಿತವಾಗುತ್ತವೆ? ಎಂಬ ಬಗ್ಗೆ ತಮ್ಮ ಮನಸ್ಸಿನಲ್ಲಿ ಮೂಡಿದ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದರು. ಕೆಲವರು ತಾವೂ ವರದಿಗಾರರಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿ ಸಲಹೆ ಹಾಗೂ ಮಾರ್ಗದರ್ಶನ ಕೇಳಿದರು. ಇನ್ನು ಕೆಲವರು ಇದೇ ಶಾಲೆಯಲ್ಲಿ ಓದಿದ ಪವಿತ್ರಾರವರ ಬಾಲ್ಯದ ದಿನಗಳು, ಬಾಲ್ಯ ಶಿಕ್ಷಣ, ಕಲಿಸಿದ ಗುರುಗಳು, ಆಸಕ್ತಿ ಮೂಡಿದ ಬಗೆ, ಕನಸು ನನಸಾದ ಬಗೆ ಇತ್ಯಾದಿ ವಿಚಾರಗಳಬಗ್ಗೆ ಮುಕ್ತ ಪ್ರಶ್ನೆಗಳನ್ನು ಮುಂದಿಟ್ಟರು. ಮಕ್ಕಳ ತುಂಟ ಪ್ರಶ್ನೆಗಳಿಗೆ ನಗುಮೊಗದಿಂದಲೇ ಉತ್ತರಿಸಿದ ಪವಿತ್ರ ಕೊನೆಗೆ ಮಕ್ಕಳನ್ನು ಬಳಸಿಕೊಂಡು, ಸುದ್ದಿ ನಿರೂಪಣೆ ಮತ್ತು ನೇರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂಭಾಶಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪ್ರಥಮ ಬಾರಿ 21 ಸಾವಿರ ತೆಂಗಿನಕಾಯಿ ಮೂಡುಗಣಪತಿ ಸೇವೆ ನಡೆಯಿತು. ಉಡುಪಿ ಜಿಲ್ಲೆಯ ಅನಿವಾಸಿ ಭಾರತೀಯ ಅಮೆರಿಕಾ ಮೇಜರ್ ಡಾ. ಪ್ರವರ್ಧನ್ ಬಿರ್ತಿ ಹಾಗೂ ವಂದನಾ ಬಿರ್ತಿ ಸೇವೆ ಸಲ್ಲಿಸಿದ ಭಕ್ತರು. ದೇಸ್ಥಾನದ ಅನುವಂಶೀಯ ಮೊಕ್ತೇಸರ ಸೂರ್ಯನಾರಾಯಣ ಉಪಾಧ್ಯಾಯ ಹಾಗೂ ಅರ್ಚಕ ವೃದ್ಧ ಸೇವೆ ಕಾರ‍್ಯ ನೆರವೇರಿಸಿದರು. ಶ್ರೀ ನಿನಾಯಕ ದೇವಸ್ಥಾನದಲ್ಲಿ ೨೧ ಸಾವಿರ ತೆಂಗಿನಕಾಯಿ ಮೂಡು ಗಣಪತಿ ಸೇವೆ ನಡೆಯಿತು.
ಅಗಸ್ಟ 10ರಂದು ರಾಜ್ಯಾದ್ಯಂತ ‘ ಕತ್ತಲೆಕೋಣೆ’ ಬಿಡುಗಡೆಗೆ ತಯಾರಿ ನಡೆಸಿದೆ ಚಿತ್ರತಂಡ ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕನ್ನಡ ಸಿನೆಮಾ ಮಾಡೊದೆಂದರೆ ಗಾಂಧಿನಗರದಲ್ಲಿ ಚಪ್ಪಲಿ ಸವೆಸಬೇಕು ಎಂಬ ಅಲಿಕಿತ ನಿಯಮವೊಂದಿತ್ತು. ಬೆಂಗಳೂರಿನಲ್ಲಿ ಅಲೆಯದೇ, ಅಲ್ಲಿನ ಅನುಭವ ಪಡೆಯದೇ ಸಿನೆಮಾ ತಯಾರಿಸಲು ಸಾಧ್ಯವೇ ಇಲ್ಲ ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ. ಆದರೆ ನಮ್ಮ ಕುಂದಾಪುರದ ಯುವಕ ಅಂತಹ ಯೋಚನೆಯೊಂದನ್ನೂ ಮೀರಿ ತನ್ನದೇ ನಿರ್ದೇಶನದಲ್ಲಿ ಕರಾವಳಿಯ ಕಲಾವಿದರನ್ನು ತೊಡಗಿಸಿಕೊಂಡು ಹೈ ಬಜೆಟ್ ಸಿನೆಮಾವೊಂದನ್ನು ತಯಾರಿಸಿದ್ದಾರೆ. ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದು, ಅಗಸ್ಟ್ ೧೦ ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ. ಸಿನೆಮಾ ರಂಗದಲ್ಲಿ ಅಂತಹದ್ದೊಂದು ಸಾಹಸಕ್ಕೆ ಮುಂದಾಗಿದ್ದು ಕುಂದಾಪುರ ತಾಲೂಕಿನ ಆಜ್ರಿಯ ಯುವಕ ಸಂದೇಶ್ ಶೆಟ್ಟಿ ಆಜ್ರಿ. ಪತ್ರಕರ್ತನಾಗಿ, ಹೋಟೆಲ್ ಉದ್ಯಮಿಯಾಗಿ ಕುಂದಾಪುರ, ಮುಂಬೈ ಮೊದಲಾದೆಡೆ ಕಾರ್ಯನಿರ್ವಹಿಸಿದ್ದ ಸಂದೇಶ್ ಶೆಟ್ಟಿ ಪ್ರಸ್ತುತ ಸುದ್ದಿ ಟಿವಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿದ್ದಾರೆ. ಸಿನೆಮಾ ಮಾಡಬೇಕು ಎಂಬ ಅವರ ಬಹುಕಾಲದ ಕನಸೊಂದನ್ನು ಕಥೆಯಾಗಿಸಿ, ಚಿತ್ರಕಥೆ ಬರೆದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಧ್ಯಪ್ರದೇಶದ ಮಾಂಡ್ಸರನಲ್ಲಿ ಎಂಟು ವರ್ಷದ ಶಾಲಾ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾಲೇಜಿನಿಂದ ಕಾಲ್ನಡಿಗೆ ಜಾಥಾದ ಮೂಲಕ ಬೈಂದೂರು ತಹಶೀಲ್ದಾರರ ಕಛೇರಿ ಹಾಗೂ ಪೊಲೀಸ್ ಠಾಣೆಗೆ ತೆರಳಿದ ವಿದ್ಯಾರ್ಥಿಗಳು ಮನವಿ ಹಸ್ತಾಂತರಿಸಿದರು. ಆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಗಲ್ಲು ಶಿಕ್ಷೆ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.. ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿ ಭಾಗವಹಿಸಿದ್ದರು. ಈ ಸಂದರ್ಭ ಬೈಂದೂರು ಪೊಲೀಸ್ ವೃತ್ತನೀರಿಕ್ಷಕ ಪರಮೇಶ್ವರ ಆರ್ ಗುನಗ ಹಾಗೂ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್. ಬಿಗಿ ಪೊಲೀಸ್ ವ್ಯವಸ್ಥೆ ಮಾಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ (ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆ) ವತಿಯಿಂದ ಕೊಡಮಾಡುವ ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಖ್ಯಾತ ಸಾಹಿತಿ, ಪತ್ರಕರ್ತ ಜೋಗಿ ಆಯ್ಕೆಯಾಗಿದ್ದಾರೆ. ಆ.೫ರಂದು ಬ್ರಹ್ಮಾವರ ಬಂಟರ ಭವನದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ‍್ಯ ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಡ್ಡರ್ಸೆ ರಘುರಾಮ ಶೆಟ್ಟಿಯವರು ಪತ್ರಿಕೋದ್ಯಮವನ್ನು ಸಮಾಜಶಾಸ್ತ್ರೀಯ ದೃಷ್ಠಿಕೋನದೊಂದಿಗೆ ಕಂಡವರು ಹಾಗೂ ‘ಮುಂಗಾರು’ ಪತ್ರಿಕೆಯನ್ನ ಮುನ್ನೆಡೆಸಿ ನೂರಾರು ಯುವ ಪತ್ರಕರ್ತರನ್ನ ರೂಪುಗೊಳಿಸಿದವರು. ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕೆಯಲ್ಲಿ ಸುಧೀರ್ಘ ಕಾಲ ಪತ್ರಕರ್ತರಾಗಿ ದುಡಿದಿದ್ದಾರೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಿಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಕೂಡ ಕಾರ‍್ಯ ನಿರ್ವಹಿಸಿದ್ದಾರೆ. ಆದ್ದರಿಂದ ಕಳೆದ ಎರಡು ವರ್ಷದಿಂದ ಇವರ ಹೆಸರಿನಲ್ಲಿ ಬ್ರಹ್ಮಾವರ ಪತ್ರಕರ್ತರ ಸಂಘ ಪತ್ರಿಕೋದ್ಯಮ ಕ್ಷೇತ್ರದಲ್ಲಿ ದುಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಹಿಂದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕುಸುಮ ಫೌಂಡೇಶನ್ ಆಶ್ರಯದಲ್ಲಿ ಹಮ್ಮಿಕೊಂಡ ಗಾನಕುಸುಮ-೨೦೧೮ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ ನಾಗೂರು ಬ್ಲಾಸಂ ಸಂಗೀತ ಮತ್ತು ನೃತ್ಯ ಶಾಲೆಯ ಕೆ.ಎ.ಎಸ್. ಆಡಿಟೋರಿಯಂನಲ್ಲಿ ಉದ್ಘಾಟನೆಗೊಂಡಿತು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಯಾರದ್ದೋ ಮಾತುಗಳನ್ನು ಕೇಳಿ ಬರುವ ಬದುಕಿನ ಮೌಲ್ಯಕಿಂತಲೂ ಅನುಭವದಿಂದಲೇ ಒದಗುವ ಮೌಲ್ಯಗಳು ಉತ್ತಮವಾಗಿರುತ್ತದೆ. ಸಾಂಸ್ಕೃತಿಕ ಲೋಕದಿಂದ ಇಂತಹ ಅನುಭವ ಮತ್ತು ಜೀವನ ಮೌಲ್ಯಗಳು ಸಿಗುತ್ತವೆ ಎಂದು ಹೇಳಿದರು. ಕಲೆ ಮತ್ತು ಸಾಹಿತ್ಯದ ಪ್ರೀತಿ ಜೀವನದಲ್ಲಿ ಹೊಸ ಬದುಕನ್ನು ರೂಪಿಸುತ್ತದೆ. ಹಾಗೆಯೇ ಸಂಗೀತ ಇದು ಕೇವಲ ಒಂದೇ ವೇದಿಕೆಗೆ ಸೀಮಿತವಾಗದೇ ಇತರೆಡೆ ಸಿಕ್ಕ ಅವಕಾಶಗಳನ್ನು ಕೂಡಾ ಬಳಸಿಕೊಳ್ಳುವಂತಾಗಬೇಕು. ಸಂಗೀತ ಸಾರಸ್ವತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನ್ ದಿಗ್ಗಜರುಗಳು ಮಕ್ಕಳಿಗೆ ಸ್ಪೂರ್ತಿಯಾಗಬೇಕು. ಇದಕ್ಕೆ ಹೆತ್ತವರು ಕೂಡಾ ಪ್ರೇರಣೆ ನೀಡಬೇಕು. ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಸುಳಿಗೆ ಸಿಕ್ಕಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವ ವಿಚಾರವನ್ನು ಪಾಲಕರು ಗಂಭೀರವಾಗಿ…
ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ, ಐತಿಹಾಸಿಕ ಕಂಬಳ ನಡೆಯುವ ತಗ್ಗರ್ಸೆ ಕಂಠದಮನೆ ಕುಟುಂಬಸ್ಥರ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ನಾಟಿ ಕಾರ್ಯ ಪೂರ್ಣಗೊಂಡಿದೆ. ಕಂಠದಮನೆಯ ಕುಂಟುಂಬಿಕರಲ್ಲಿ ಹಿರಿಯವರಾದ ಟಿ. ನಾರಾಯಣ ಹೆಗ್ಡೆ ಅವರ ಮಾರ್ಗದರ್ಶನಲ್ಲಿ ನೂರಾರು ಮಂದಿ ಕೃಷಿ ಕಾರ್ಮಿಕರಿಂದ ವಾಡಿಕೆಯಂತೆ ಒಂದೇ ದಿನದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ. ಸಾಂಪ್ರದಾಯಿಕ ಕೃಷಿ ಕಾರ್ಯ: ಕಂಠದಮನೆಯ ಎದುರೇ 5.14 ಎಕರೆ ವಿಸ್ತೀರ್ಣವಾದ ಕಂಬಳಗದ್ದೆ ಇದ್ದು, ಇದು ದೇವರಗದ್ದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಇಲ್ಲಿರುವ ವೀರಗಲ್ಲು, ಶಾಸನಗಳು ಇದು ಪುರಾತನವಾದುದು ಎಂಬುದಕ್ಕೆ ಪುಷ್ಠಿ ನೀಡುತ್ತದೆ. ಇಂದಿಗೂ ಕೂಡ ಇಲ್ಲಿ ಹಿಂದಿನ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆ ನಾಟಿ ಕಾರ್ಯಕ್ಕೆ ತಯಾರಿ ನಡೆಯುತ್ತದೆ. ಇಡಿ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ ಮಾಡಬೇಕು ಎಂಬ ಸಂಪ್ರದಾಯವಿದ್ದು ಟ್ರಾಕ್ಟರ್ ಬಳಸಿ ಉಳುಮೆ ಮಾಡಲಾಗುತ್ತದೆ. ನೂರಾರು ಕೃಷಿ ಆಳುಗಳು ಒಂದೇ ದಿನದಲ್ಲಿ ಗದ್ದೆ ನಾಟಿ ಮಾಡಿ ಮುಗಿಸುತ್ತಾರೆ. ಈ ಕಾರ್ಯ ಶುದ್ಧಾಚಾರದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಧ್ಯಪ್ರದೇಶದ ಮಾಂಡ್ಸರನಲ್ಲಿ ಎಂಟು ವರ್ಷದ ಶಾಲಾ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ನಾವುಂದ ನಾವುಂದ ರಿರ್ಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು ಹಾಗೂ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕಾಲೇಜಿನಿಂದ ಕಾಲ್ನಡಿಗೆ ಜಾಥಾದ ಮೂಲಕ ನಾವುಂದ ಗ್ರಾಮ ಪಂಚಾಯತ್ ತೆರಳಿ ಅಲ್ಲಿ ಸಭೆ ಸೇರಿದರು. ಆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಗಲ್ಲು ಶಿಕ್ಷೆ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರ ಒತ್ತಾಯಿಸಿ ಮನವಿ ಪತ್ರವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಿದರು. ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿ ಭಾಗವಹಿಸಿದ್ದರು. ಈ ಸಂದರ್ಭ ಅಹಿತಕರ ಘಟನೆ ನಡೆಯದಂತೆ ಬೈಂದೂರು ವೃತ್ತನೀರಿಕ್ಷಕ ಪರಮೇಶ್ವರ ಆರ್ ಗುನಗ ಹಾಗೂ ಪೊಲೀಸ್ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್. ಬಿಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪತ್ರಿಕಾ ದಿನಾಚರಣೆಯ ಪ್ರಯುಕ್ತ ಜೆ.ಸಿ.ಐ ಶಿರೂರು ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಂದರ್ಭ ಪತ್ರಕರ್ತ ಅರುಣಕುಮಾರ್ ಶಿರೂರು ಹಾಗೂ ವಿಂದಿಯಾ ದಂಪತಿಗಳನ್ನು, ಪತ್ರಕರ್ತ ಗಿರಿ ಶಿರೂರು ಅವರನ್ನು ಸನ್ಮಾನಿಸಲಾಯಿತು. ಶಿರೂರು ಜೆ.ಸಿ.ಐ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ ಮಾತನಾಡಿ ಸಮಾಜದ ಅಭಿವೃದ್ದಿಯಲ್ಲಿ ಹಾಗೂ ಜನಪರ ಕಾಳಜಿಯಲ್ಲಿ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಜೆ.ಸಿ.ಐ ವತಿಯಿಂದ ಇವರ ಸೇವೆಯನ್ನು ಗುರುತಿಸುವ ಸಣ್ಣ ಪ್ರಯತ್ನ ಎಂದರು. ಯಡ್ತರೆ ಗ್ರಾ.ಪಂ ಸದಸ್ಯ ಉದಯ ಮಾಕೋಡಿ, ಜೆಜೆಸಿ ಅಧ್ಯಕ್ಷ ಆದರ್ಶ ಶೇಟ್, ವಿನೋದ ಮೇಸ್ತ, ಕೃಷ್ಣ ಪೂಜಾರಿ ಹಾಜರಿದ್ದರು.
