ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: “ಮಾನವ ಧರ್ಮ ಶ್ರೇಷ್ಠ ಧರ್ಮ ಎಂಬ ಪರಿಕಲ್ಪನೆಯ ಮೂಲಕ ಧರ್ಮಗಳ ನಡುವೆ ಸಂಸ್ಕೃತಿಯ ಸಮಾನತೆಯನ್ನು ಪ್ರತಿಪಾದಿಸಿದ `ಗೋವಿಂದ ಭಟ್ಟ- ಶಿಶುನಾಳ ಶರೀಫ’ ಎಂಬ ಗುರುಶಿಷ್ಯರು ವಿಶ್ವಕ್ಕೇ ಮಾದರಿಯುತ ಜೀವನವನ್ನು ತೋರಿಸಿಕೊಟ್ಟರು”ಎಂದು ನಾಡೋಜ ಡಾ.ಮಹೇಶ್ ಜೋಶಿ ಹೇಳಿದರು. ಆಳ್ವಾಸ್ ನುಡಿಸಿರಿಯ ಭಾಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ `ಸಂತ ಶಿಶುನಾಳ ಶರೀಫ- ದ್ವಿಶತಮಾನದ ನಮನ’ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಈಶ್ವರ ಅಲ್ಲಾ ನೀನೇ ಎಲ್ಲಾ’ ಎನ್ನುವಂತ ತತ್ವನುಡಿಗಳ ಮೂಲಕ ಜನಸಾಮಾನ್ಯರಿಗೆ ಲಾವಣಿ ಹಾಕಿ ನೀತಿ ಬೋಧಿಸಿದ ಶರೀಫರು ತನ್ನ ಗುರುಗಳಾದ ಗೋವಿಂದ ಭಟ್ಟರಲ್ಲಿ ದೇವರನ್ನು ಕಂಡರು. ಅವರಿಬ್ಬರ ಅವಿನಾಭಾವ ಸಂಬಂಧವು ಜಾತಿ,ಧರ್ಮಗಳ ನಡುವಿನ ಸಮೈಕ್ಯತೆಯನ್ನು ಸಾರುವಂತದ್ದು ಎಂದರು. ಗುರುಗಳಾದ ಕಳಸ ಗೊವಿಂದ ಭಟ್ಟರು ಅವರ ಜೀವನದ ಮೇಲೆ ಅದೆಷ್ಟು ಪ್ರಭಾವ ಬೀರಿದ್ದರು ಎನ್ನುವುದಕ್ಕೆ “ಕುರಾನ್ ಮತ್ತು ಪುರಾಣವನ್ನು ನನ್ನ ಹೆಗಲಮೇಲಿಟ್ಟರೆ ಶರಣ ಸಂಸ್ಕೃತಿಯನ್ನು ತಲೆ ಮೇಲೆ ಹೊರುವೆ”ನೆಂದ ಶರೀಫರ ಮಾತುಗಳೇ ಸಾಕ್ಷಿಯಾಗಿವೆ ಎಂದರು. ವೇದಿಕೆಯಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಆಳ್ವಾಸ್ ನುಡಿಸಿರಿ ೨೦೧೮ರ ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ನುಡಿಸಿರಿ ೨೦೧೭ರ ನೆನಪಿನ ಸಂಚಿಕೆ ‘ಕರ್ನಾಟಕ: ಬಹುತ್ಮದ ನೆಲೆಗಳು’ ಸರ್ವಾಧ್ಯಕ್ಷರಾದ ಡಾ. ಮಲ್ಲಿಕಾ ಎಸ್. ಘಂಟಿ ಅನಾವರಣಗೊಳಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಬಹುರೂಪಿಗೆ ಇರುವ ಅಂತಃಶಕ್ತಿ ಏಕರೂಪತ್ವಕ್ಕೆ ಇರಲು ಸಾಧ್ಯವಿಲ್ಲ. ಆದರೆ ಇಂದು ಏಕರೂಪಿ ಸಂಸ್ಕೃತಿ ಭಾಷೆಯೆಡೆಗೆ ನಮ್ಮನ್ನು ಕೊಂಡೊಯ್ಯುಲಾಗುತ್ತದೆ. ಇದೊಂದು ಅನಾರೋಗ್ಯಕರ ಬೆಳವಣಿಗೆಯಾಗಿದೆ. ಈ ದೃಷ್ಠಿಯಿಂದ ನುಡಿಸಿರಿ ಯೋಚಿಸಿದ ಪರಿಕಲ್ಪನೆಗಳು ಪ್ರಸ್ತುತ ಬಿಕ್ಕಟ್ಟುಗಳಿಗೆ ಉತ್ತರ ರೂಪದಲ್ಲಿವೆ ಎಂದು ೧೫ನೆ ಆಳ್ವಾಸ್ ನುಡಿಸಿರಿ ೨೦೧೮ರ ಸರ್ವಾಧ್ಯಕ್ಷೆ ಡಾ. ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು. ಅವರು ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೮ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ಬುದ್ಧ ಹೇಳುವಂತೆ ಜಗತ್ತಿನಲ್ಲಿ ಸ್ಥೂಲ- ಸೂಕ್ಷ್ಮ ವಸ್ತುಗಳನ್ನೊಳಗೊಂಂಡತೆ ಎಲ್ಲವೂ ನಾಶವಾಗುತ್ತದೆ. ಹೀಗಾಗಿ ಇಲ್ಲಿ ಯಾವುದೂ ಶಾಶ್ವತವಲ್ಲ. ಕ್ಷಣಕ್ಷಣಕ್ಕೂ ಪ್ರತಿಯೊಂದು ಕಣಕಣವೂ ಅಮೂಲಾಗ್ರವಾದ ಬದಲಾವಣೆಗಳನ್ನು ಹೊಂದುತ್ತಲೇ ಇರುತ್ತದೆ. ಬೆಳಕನ್ನು ಕುರಿತು ಚರ್ಚೆ ಮಾಡುವುದರ ಬದಲು ಬೆಳಕನ್ನು ಕಾಪಾಡಿಕೊಳ್ಳುವುದು ಮುಖ್ಯ ಈ ದಾರಿಯಲ್ಲಿಯೇ ನಾವು ಭಾರತವನ್ನು, ಕರ್ನಾಟಕವನ್ನು ದರ್ಶಿಸಬೇಕಾಗಿದೆ ಎಂದರು. ದರ್ಶನ ಎನುವುದು ಸಿದ್ದ ಮಾದರಿಯದ್ದಲ್ಲ ಅದನ್ನು ಪ್ರಯತ್ನದ ಮೂಲಕವೇ ದರ್ಶಿಸಬೇಕಾಗಿದೆ. ಆ ಪ್ರಯತ್ನದ ಹಿಂದೆ ಇರುವ ಕನಸೇ ಸಮಾನತೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಕನ್ನಡ ನಾಡಿನ ಸಂಸ್ಕೃತಿ ಹಿಂದಿನಿಂದಲೂ ಬಹೂತ್ವವನ್ನು ಪ್ರತಿಪಾದಿಸಿತ್ತು. ಸಂಸ್ಕೃತಿಯ ಬುನಾದಿಯೇ ವರ್ಣ ವಿಮುಕ್ತಿಯನ್ನು ಹೊಂದಿತ್ತು. ಆದರೆ ೧೨ನೇ ಶತಮಾನದ ನಂತರ ಧರ್ಮ ವೈಷಮ್ಯತೆ ಹೆಚ್ಚುತ್ತಾ, ಉಗ್ರಮತಿ ಬೆಳೆಯುತ್ತಾ ಸಹಿಷ್ಟುತೆಗೆ ಉಳಿಗಾಲವಿಲ್ಲ ಎಂಬ ಪರಿಸ್ಥಿತಿ ಬಂದಿದೆ ಎಂದು ಸಂಶೋಧಕ ಡಾ. ಷ. ಶೆಟ್ಟರ್ ಹೇಳಿದರು. ಅವರು ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೮ ೧೫ನೇ ಆವೃತ್ತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಯಾವಾಗಲೂ ಬಹುತ್ವದ ಪರಂಪರೆಯಿತ್ತು. ರಾಜ ವಿಷ್ಟುವರ್ಧನನ ಕುಟುಂಬವೇ ಇದಕ್ಕೊಂದು ನಿದರ್ಶನ. ಆತನ ಮಡದಿ ಬೇರೆ ಧರ್ಮವನ್ನು ಪಾಲಿಸಿದ್ದರೂ ಮದವೆಯ ಬಳಿಕ ಮತ ಬದಲಾವಣೆ ಆಗಿರಲಿಲ್ಲ. ಇಂತಿಹ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಕಾಣಸಿಗುತ್ತದೆ ಎಂದ ಅವರು ಇಂದು ಏಕತ್ವವನ್ನು ಕಾಣುವ ದಿನಗಳು ಬಂದಿವೆ. ಬರಹಗಾರ ಏನನ್ನು ಬರೆಯಬೇಕು ಏನನ್ನು ಬರೆಯಬಾರದು ಎಂಬುದನ್ನು ಸರಕಾರ ನಿರ್ಧರಿಸುವ ದಿನಗಳು ಬಂದಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಇತಿಹಾಸಕಾರರು ನಮ್ಮ ಪರಂಪರೆಯನ್ನು ಬೇರೆ ಬೇರೆ ದೃಷ್ಟಿಯಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಕನ್ನಡ ನಾಡಿನ ವೈವಿಧ್ಯತೆ ಬೆಡಗಿ ಭಿನ್ನಾಣಗಳು ಮಾರ್ದನಿಸುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಅದ್ದೂರಿ ಚಾಲನೆ ದೊರೆಯಿತು. ಕರ್ನಾಟಕ: ಬಹುರೂಪಿ ಆಯಾಮಗಳು ಎಂಬ ಪರಿಕಲ್ಪನೆಯೊಂದಿಗೆ ನಡೆಯುತ್ತಿರುವ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಾಹಿತ್ಯ, ಸಾಂಸ್ಕೃತಿಕ ಪ್ರೀಯರು ಭಾಗವಹಿಸುತ್ತಾರೆ. ಬೆಳಿಗ್ಗೆ ೮:೩೦ಕ್ಕೆ ಸಾಂಸ್ಕೃತಿಕ ಮೆರವಣಿಗೆ ಉದ್ಘಾಟನೆಗೊಂಡಿತು. ಕರ್ನಾಟಕದ ವಿವಿಧ ರಾಜ್ಯಗಳ ಜನಪದ ಕಲೆ ಪ್ರದರ್ಶನ ವಿಶಿಷ್ಟ ಲೋಕವೊಂದನ್ನೇ ತೆರೆದಿಟ್ಟಿತ್ತು. ಧ್ವಜಾರೋಹಣದ ಬಳಿಕ ರತ್ನಾಕgವರ್ಣಿ ವೇದಿಕೆಯಲ್ಲಿ ಡಾ. ಷ. ಶೆಟ್ಟರ್ ಅವರು ಸಮ್ಮೇಳನಕ್ಕೆ ಚಾಲನೆ ನೀಡಿದರು. ಆಳ್ವಾಸ್ ನುಡಿಸಿರಿ ರೂವಾರಿಡಾ.ಎಂ.ಮೋಹನ ಆಳ್ವ ನುಡಿಸಿರಿ ಹಾಗೂ ಸಮ್ಮೇಳನದ ಪರಿಕಲ್ಪನೆಯಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿ ಅಭ್ಯಾಗತರನ್ನು ಸ್ವಾಗತಿಸಿದರು. ಇದೇ ವೇಳೆಯಲ್ಲಿಉದ್ಘಾಟಕರನ್ನು, ಸಮ್ಮೇಳನದ ಅಧ್ಯಕ್ಷರನ್ನುಗೌರವಿಸಲಾಯಿತು.ನಾರಾಯಣೀದಾಮೋದರ ವಿರಚಿತ “ನುಡಿ ನುಡಿತ” ಕೃತಿಯನ್ನು ಹಾಗೂ ಮಿಜಾರಿನ ಶೋಭಾವನದಕ್ಯೂ.ಆರ್‌ಕೋಡನ್ನು ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಶಾಸಕ ಎ. ಉಮಾನಾಥಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರಜೈನ್, ಕೆ.ಅಮರನಾಥ ಶೆಟ್ಟಿ, ಉದ್ಯಮಿಗಳಾದ ಶಶಿಧರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಆಳ್ವಾಸ್ ನುಡಿಸಿರಿ ೨೦೧೮ರ ಸಾಂಸ್ಕೃತಿಕ ಮೆರವಣಿಗೆ ಕರ್ನಾಟಕದ ವಿವಿಧ ರಾಜ್ಯಗಳ ಜನಪದ ಕಲೆ ಪ್ರದರ್ಶನ ವಿಶಿಷ್ಟ ಲೋಕವೊಂದನ್ನೇ ತೆರೆದಿಟ್ಟಿತ್ತು. ಉದ್ಯಮಿ ಶಶಿಧರ ಶೆಟ್ಟಿ ಮೆರವಣಿಗೆಯನ್ನು ಉದ್ಘಾಟಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಸ್ತೆ ಅಪಘಾತದಲ್ಲಿ ಮೃತರಾದ ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿ ನಾಗೇಶ್ ಬಿಲ್ಲವ ಅವರಿಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ, ಡಿವೈಎಸ್ಪಿ ಬಿ. ಪಿ. ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಗುನಗ, ಠಾಣಾಧಿಕಾರಿ ತಿಮ್ಮೇಶ್ ಮೊದಲಾದವರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತಿಷ್ಟಿತ ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಿಖಿಲ್ ಮಂಜೂ ಲಿಂಗಯ್ಯ ನಿರ್ದೇಶನದ ತುಳು ಕಲಾತ್ಮಕ ಚಲನಚಿತ್ರ “WHITE” (ಬೊಲ್ದು) ಸ್ಪರ್ಧಾತ್ಮಕ ವಿಭಾಗದಲ್ಲಿ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಕೋಸ್ಟಲ್‌ವುಡ್‌ನ ಪ್ರಥಮ ತುಳು ಚಿತ್ರ ಇದಾಗಿರುವುದಲ್ಲದೇ, ಕರ್ನಾಟಕದಿಂದ ಆಯ್ಕೆಯಾದ ಏಕೈಕ ಚಿತ್ರ ಎನಿಸಿಕೊಂಡಿದೆ. ನಟ, ನಿರ್ದೇಶಕ ಗಿರೀಶ್ ಬೈಂದೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಹಣ- ಪಿ.ವಿ.ಆರ್.ಸ್ವಾಮಿ., ಸಂಭಾಷಣೆ-ಬಿ.ಶಿವಾನಂದ., ಸಂಕಲನ-ಆದಿತ್ಯ ಕುಣಿಗಲ್. ಚಿತ್ರದ ಸಂಭಾಷಣೆ ತುಳುವಿಗೆ ಅನುವಾದಿಸಿದ್ದಾರೆ ವಿಜೇಶ್ ದೇವಾಡಿಗ ಮಂಗಳಾದೇವಿ. ಸಿನೆಮಾ ಕಥಾ ಹಂದರ: ಅಂಗಾರ ತನ್ನ ಮಾನಸಿಕ ಅಸ್ವಸ್ಥತೆಯ ಹೆಂಡತಿ ಮತ್ತು ತಾಯಿಯೊಂದಿಗೆ ಬುದ್ಧಿಮಾಂದ್ಯ ಮಗಳ ಸಂಸಾರದ ಜವಾಬ್ದಾರಿ ಹೊತ್ತಿದ್ದ. ಮಗಳನ್ನು ಹಿಂಸಿಸುತ್ತಿದ್ದ ಸೊಸೆಯಿಂದ ಮೊಮ್ಮಗಳು ಸೂಜಿಯನ್ನು ಕಾಪಾಡಲು ಅಜ್ಜಿ ಬೇರೆ ಊರಿಗೆ ಮೊಮ್ಮಗಳೊಂದಿಗೆ ಗುಟ್ಟಾಗಿ ಹೋಗುತ್ತಾಳೆ. ಇತ್ತ ಹೆಂಡತಿಯ ಮರಣಾನಂತರ ಪ್ರೀತಿಯ ಮಗಳನ್ನು ಕಾಣದೇ ಅಂಗಾರ ಕಂಗಾಲಾಗುತ್ತಾನೆ. ಹದಿವಯಸ್ಸಿಗೆ ಬಂದ ಸೂಜಿಯನ್ನು ಸಾಕಲು ತನ್ನಿಂದ ಸಾಧ್ಯವಾಗದೇ ಓಉಔ ಒಂದರ ಸಹಾಯ ಪಡೆಯಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಆಳ್ವಾಸ್ ವಿದ್ಯಾರ್ಥಿಸಿರಿಯ ಅಂಗವಾಗಿ ಕಾಲೇಜಿನ ರತ್ನಾಕರವರ್ಣಿ ವೇದಿಕೆಯಲ್ಲಿ `ನಾವು ಮತ್ತು ನಮ್ಮ ಪರಿಸರ’ ಎಂಬ ವಿಷಯದ ಕುರಿತು ಸಂವಾದ ಗೋಷ್ಠಿ ನಡೆಯಿತು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಗುಣೇಶ್ ಭಾರತೀಯ, ತೋಕೂರಿನ ಡಾ. ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿಘ್ನೇಶ್ ಮಲ್ಯ, ಮೂಡಬಿದ್ರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರದ್ಯುಮ್ನ ಮೂರ್ತಿ ಕಡಂದಲೆ ಹಾಗೂ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಭಕ್ತಿಶ್ರೀ ಸಂವಾದದಲ್ಲಿ ಪಾಲ್ಗೊಂಡು ವಿಚಾರ ಮಂಡಿಸಿದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್.ಡಿ..ಎಮ್ ಪದವಿಪೂರ್ವ ಕಾಲೇಜಿನ ಶ್ಯಾಮ್ ಪ್ರಸಾದ್ ಸಮಾಪನ ಮಾತುಗಳನ್ನಾಡಿ “ಪ್ರಕೃತಿಯನ್ನು ನಾವು ಅದರ ದೃಷ್ಟಿಯಲ್ಲಿ ನೋಡಬೇಕೇ ಹೊರತು ನಮ್ಮ ರೀತಿಯಲ್ಲಲ್ಲ. ಇದರಿಂದಲೇ ಪ್ರಕೃತಿ ವಿಕೋಪಗಳು ಹೆಚ್ಚಾಗಿ ಜರುಗುತ್ತಿವೆ. ಪರಿಸರಕ್ಕೆ ನಾವು ಅವಶ್ಯಕವಲ್ಲ, ಬದಲಿಗೆ ನಮಗೆ ಅದು ಅನಿವಾರ್ಯ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು” ಎಂದು ತಿಳಿಸಿದರು. “ನಾವೆಲ್ಲಾ ಇಂದು ಅಭಿವೃದ್ಧಿ ಎಂಬ ಮಾರಕಾಸ್ತ್ರದಿಂದ ಪ್ರಕೃತಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಆಧುನಿಕ ಜಗತ್ತಿನಲ್ಲಿ ಮಾನವನ ದಿನಚರಿಯು ಅನಾರೋಗ್ಯ ಸ್ವರೂಪವನ್ನು ಪಡೆಯುತ್ತಿದ್ದು ಇದನ್ನು ಬದಲಿಸಿಕೊಳ್ಳಬೇಕಾದ್ದು ತುಂಬಾ ಮುಖ್ಯ ಎಂದು ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಪ್ರಭು ಅಭಿಪ್ರಾಯಿಸಿದರು. ೧೫ನೇ ಆಳ್ವಾಸ್ ನುಡಿಸಿರಿಯ ಪ್ರಯುಕ್ತ ನಡೆದ ವಿದ್ಯಾರ್ಥಿಸಿರಿಯಲ್ಲಿ `ದಿನಚರಿ: ಹಿಂದುಮುಂದು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು, ಹುಟ್ಟು, ಜೀವನ ಹಾಗೂ ಮರಣ ನಮ್ಮ ಬದುಕಿನ ದಿನಚರಿಯಾದರೆ ಇದಕ್ಕೆ ಪೂರಕವಾಗಿ ನಮ್ಮ ನಿತ್ಯ ಚಟುವಟಿಕೆಗಳು ನಡೆಯಬೇಕು. ಅದರೆ ಇಂದು ಮಾನವನು ಸಂಪತ್ತಿನ ಜೀವನದೆಡೆಗೆ ಮುಖಮಾಡಿ ನಿಂತಿದ್ದಾನೆ. ತನ್ನ ಸುತ್ತ ನಡೆಯುವಂತಹ ಯಾವುದೇ ಘಟನೆಗಳ ಬಗ್ಗೆ ಅರಿತುಕೊಳ್ಳದಾಗದಷ್ಟು ಮಾನವ ಬದಲಾಗಿದ್ದು, ಆತನ ನಿತ್ಯದ ಜೀವನ ಶೈಲಿಯು ಮಾರ್ಪಡಾಗುತ್ತಲೇ ಹೋಗುತ್ತಿದೆ ಎಂದರು. ಬದಲಾಗುತ್ತಿರುವ ಜೀವನಶೈಲಿಯ ಬಗ್ಗೆ ವಿಶ್ಲೇಷಿಸಿದ ಪ್ರಜ್ಞಾ ಪ್ರಭು, ಇಂದಿನ ಕೈಗಾರಿಕಾ ಕ್ರಾಂತಿ, ಯಾಂತ್ರೀಕೃತ ಬದುಕು ಮನುಷ್ಯ ಅನಾರೋಗ್ಯಕರ ಜೀವನ ವಿಧಾನವನ್ನು ಹೊಂದುವಂತೆ ಮಾಡುತ್ತಿವೆ ಎಂದು ತಿಳಿಸಿದರು. ಇಂತಹ ದಿನಚರಿಗಳು ಬದಲಾಗಬೇಕಿದ್ದು, ಓದು, ಬರಹ,…
