ಆಳ್ವಾಸ್ ನುಡಿಸಿರಿ – 2018: 15ನೇ ಆವೃತ್ತಿಗೆ ಅದ್ದೂರಿ ಚಾಲನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಕನ್ನಡ ನಾಡಿನ ವೈವಿಧ್ಯತೆ ಬೆಡಗಿ ಭಿನ್ನಾಣಗಳು ಮಾರ್ದನಿಸುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಅದ್ದೂರಿ ಚಾಲನೆ ದೊರೆಯಿತು. ಕರ್ನಾಟಕ: ಬಹುರೂಪಿ ಆಯಾಮಗಳು ಎಂಬ ಪರಿಕಲ್ಪನೆಯೊಂದಿಗೆ ನಡೆಯುತ್ತಿರುವ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಾಹಿತ್ಯ, ಸಾಂಸ್ಕೃತಿಕ ಪ್ರೀಯರು ಭಾಗವಹಿಸುತ್ತಾರೆ.

Call us

Click Here

ಬೆಳಿಗ್ಗೆ ೮:೩೦ಕ್ಕೆ ಸಾಂಸ್ಕೃತಿಕ ಮೆರವಣಿಗೆ ಉದ್ಘಾಟನೆಗೊಂಡಿತು. ಕರ್ನಾಟಕದ ವಿವಿಧ ರಾಜ್ಯಗಳ ಜನಪದ ಕಲೆ ಪ್ರದರ್ಶನ ವಿಶಿಷ್ಟ ಲೋಕವೊಂದನ್ನೇ ತೆರೆದಿಟ್ಟಿತ್ತು. ಧ್ವಜಾರೋಹಣದ ಬಳಿಕ ರತ್ನಾಕgವರ್ಣಿ ವೇದಿಕೆಯಲ್ಲಿ ಡಾ. ಷ. ಶೆಟ್ಟರ್ ಅವರು ಸಮ್ಮೇಳನಕ್ಕೆ ಚಾಲನೆ ನೀಡಿದರು.

ಆಳ್ವಾಸ್ ನುಡಿಸಿರಿ ರೂವಾರಿಡಾ.ಎಂ.ಮೋಹನ ಆಳ್ವ ನುಡಿಸಿರಿ ಹಾಗೂ ಸಮ್ಮೇಳನದ ಪರಿಕಲ್ಪನೆಯಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿ ಅಭ್ಯಾಗತರನ್ನು ಸ್ವಾಗತಿಸಿದರು.

ಇದೇ ವೇಳೆಯಲ್ಲಿಉದ್ಘಾಟಕರನ್ನು, ಸಮ್ಮೇಳನದ ಅಧ್ಯಕ್ಷರನ್ನುಗೌರವಿಸಲಾಯಿತು.ನಾರಾಯಣೀದಾಮೋದರ ವಿರಚಿತ “ನುಡಿ ನುಡಿತ” ಕೃತಿಯನ್ನು ಹಾಗೂ ಮಿಜಾರಿನ ಶೋಭಾವನದಕ್ಯೂ.ಆರ್‌ಕೋಡನ್ನು ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಎ. ಉಮಾನಾಥಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರಜೈನ್, ಕೆ.ಅಮರನಾಥ ಶೆಟ್ಟಿ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡ, ಕೆ. ಶ್ರೀಪತಿ ಭಟ್, ದ.ಕಜಿಲ್ಲಾ ಸಾಹಿತ್ಯ ಪರಿಷತ್ತುಅಧ್ಯಕ್ಷ ಪ್ರದೀಪ್‌ಕುಮಾರ್‌ಕಲ್ಕೂರ, ಕ.ಸಾ.ಪ ಮಾಜಿರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕ್ಯಾಪ್ಟನ್‌ಗಣೇಶ್‌ಕಾರ್ಣಿಕ್, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತುಅಧ್ಯಕ್ಷ ನೀಲಾವರ ಸುರೇಂದ್ರಅಡಿಗ, ಜಯಶ್ರೀ ಅಮರನಾಥ ಶೆಟ್ಟಿ ಹಾಗೂ ನುಡಿಸಿರಿಯ ಘಟಕಾಅಧ್ಯಕ್ಷರು ಮತ್ತು ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ ನಿರೂಪಿಸಿದರು, ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ವಂದಿಸಿದರು.

Click here

Click here

Click here

Click Here

Call us

Call us

Leave a Reply