ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಅಕ್ಷಯತೃತೀಯದ ಶುಭದಿನ ಉಪ್ಪುಂದ ಜಿಎಸ್ಬಿ ಸಮಾಜ ಬಾಂಧವರ ಶ್ರೀ ಲಕ್ಷ್ಮೀವೆಂಕಟರಣ ದೇವರ ಪುನರ್ಪ್ರತಿಷ್ಟೆ ದೇವಳದ ಪರ್ಯಾಯ ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ವೈಭವದಿಂದ ಜರುಗಿತು. ಎ.15ರ ಮೇಷ ಸಂಕ್ರಂತಿಯಂದು ದೇವರ ಪ್ರಾರ್ಥನೆಯೊಂದಿಗೆ ಚೋರಶಾಂತಿ, ಶ್ವಾನಶಾಂತಿ, ಗರ್ಭಗೃಹಶುದ್ದಿಯಿಂದ ಆರಂಭಗೊಂಡ ಧಾರ್ಮಿಕ ವಿಧಿಗಳು ಎ.16ರ ಸೋಮವತಿ ಅಮಾವಾಸ್ಯೆಯಂದು ಪಂಚಗವ್ಯ ಹವನ, ಪವಮಾನ ಪಾರಾಯಣ, ಪ್ರಾಯಶ್ಚಿತ ಹವನ, ಶುದ್ಧಕಲಶ, ರಾಕ್ಷೋಘ್ನಹವನ, ವಾಸ್ತುಹವನ, ವಾಸ್ತುಬಲಿ, ಪ್ರಾಕಾರಬಲಿ ನಡೆಯಿತು. ಎ.17ರಂದು ನವಗೃಹಹವನ, ಗರ್ಭಗೃಹ ಪೀಠಕ್ಕೆ ನವಕಲಶ, ಗಣಪತಿಹವನ, ದ್ವಾದಶಕಲಶ ಸಂಪ್ರೋಕ್ಷಣೆ, ವಿಗ್ರಹಗಳ ಸಪ್ತಾಧಿವಾಸ ಪೂಜೆ, ಕಲಶಾಭಿಷೇಕ ನಡೆಯಿತು. ಬುಧವಾರ ಸುಪ್ರಭಾತ ಪೂಜೆ, ನಿಲಂಜನ ಆರತಿ, ಸಾನಿಧ್ಯಹವನ, 108 ಕಲಶಾಭಿಷೇಕ, ಸಾನಿಧ್ಯಹವನ, ಪೂರ್ಣಾಹುತಿಯೊಂದಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವರ ಪುನರ್ಪ್ರತಿಷ್ಟೆ ನಡೆಯಿತು. ರಾತ್ರಿ ದೀಪೋತ್ಸವ, ಅವಭೃತಸ್ನಾನ, ವಸಂತಪೂಜೆ ಜರುಗಿತು. ಶ್ರೀಲಕ್ಷ್ಮೀವೆಂಕಟರಮಣ ಟ್ರಸ್ಟ್ನ ಅಧ್ಯಕ್ಷ ದಾಮೋದರ ಶೆಣೈ, ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್ ಹಾಗೂ ಟ್ರಸ್ಟಿನ ಸದಸ್ಯರ ಮಾರ್ಗದರ್ಶನದಿಂದ ನಡೆದ ಕಾರ್ಯಕ್ರಮಕ್ಕೆ ಊರ-ಪರವೂರ ಸಮಾಜ ಬಾಂಧವರು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಶ್ರೀ ಪದ್ಮಾವತಿ ಅಮ್ಮನವರ ಕಲ್ಯಾಣ ಮಂಟಪ ಬೊಳಂಬಳ್ಳಿಯಲ್ಲಿ ‘ಛತ್ರಪತಿ ಯುವ ಸೇನೆ’ ಉಡುಪಿ ಜಿಲ್ಲೆ ಇವರು ಆಯೋಜಿಸಿದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ‘ಸಡಗರ-2018’, ‘ಅಂಬೇಡ್ಕರ್ ಜಯಂತಿ’ ಆಚರಣೆ ಮತ್ತು ‘ಮಹಿಳಾ ಘಟಕ’ ಉದ್ಘಾಟನಾ ಕಾರ್ಯಕ್ರಮಗಳು ನೆಡೆದವು. ಛತ್ರಪತಿ ಯುವ ಸೇನೆಯ ‘ಮಹಿಳಾ ಘಟಕ’ ಉದ್ಘಾಟಿಸಿ ಮಾತನಾಡಿದ ಕುಂದಾಪುರ ತಾಲೂಕು ಬಾಲ ಸ್ವಾಸ್ತ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ. ಶ್ರುತಿ ಕನ್ನಂತ, ಸಂಘಟಿತ ಸಮಾಜದ ಉನ್ನತಿಯ ಅಗತ್ಯತೆ, ಅರಿವು, ಕಾರ್ಯ ಮತ್ತು ಕಾರ್ಯಕ್ರಮಗಳು ನೆಡೆದಾಗ ಮಾತ್ರ ಸಾಮಾಜಿಕ ತೊಡಕು ತೊಂದರೆಗಳನ್ನು ನಿವಾರಿಸಿ, ಸಾಂಸ್ಕ್ರತಿಕ ನೆಲೆಯಲ್ಲಿ ಸುಸಂಬದ್ಧ ಜೀವನವನ್ನು ನೆಡೆಸಲು ಸಾಧ್ಯ. ಆ ನೆಲೆಯಲ್ಲಿ ಇಂದಿನ ಸಮಾಜಕ್ಕೆ ಮಹಿಳಾ ಸಂಘಟನೆಗಳು ಅಗತ್ಯ ಮತ್ತು ಅನಿವಾರ್ಯ ಎಂದು ನುಡಿದರು. ಸಂಘಟನೆಗಳು ಯಶಸ್ವಿಯಾಗಿ ಮುನ್ನಡೆಯಬೇಕಾದರೆ, ಪ್ರತಿ ಸದಸ್ಯರ ಸಕರಾತ್ಮಕ ತೊಡಗುವಿಕೆ ಯೋಜನೆ, ಯೊಚನೆ ಮತ್ತು ಆರ್ಥಿಕ ವಿಚಾರಗಳ ಪಾರದರ್ಶಕತೆ ಮತ್ತು ಸಂಘಟಿತ ಮನೋಭಾವ ಬಹಳ ಅಗತ್ಯವೆಂದು ಸಂಪನ್ಮೂಲ ವ್ಯಕ್ತಿಗಳಾದ ಬಸ್ರೂರು ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶಿರೂರು ದಾಸನಾಡಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಅಷ್ಟಬಂಧ, ಬ್ರಹ್ಮಕಲಶ ಕಾರ್ಯಕ್ರಮ ವೈಭವದಿಂದ ನಡೆಯಿತು.. ವಿಘ್ನೇಶ್ವರ ಭಟ್ ಕತ್ಗಾಲ್ ಇವರ ನೇತ್ರತ್ವದಲ್ಲಿ ಹಾಗೂ ದೇವಸ್ಥಾನದ ಅರ್ಚಕರಾದ ರವೀಂದ್ರ ಅಯ್ಯಂಗಾರ್ ಸಹಯೋಗದಲ್ಲಿ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಧಾರ್ಮಿಕ ವಿಧಿಗಳು ಬ್ರಹ್ಮಕಲಶಾಭಿಷೇಕ, ಮಹಾವಿಷ್ಣುಯಾಗ ಅವಭೃತ, ಪೂರ್ಣಾಹುತಿ, ಮಹಾಪೂಜೆ ಮಹಾಪ್ರಾರ್ಥನೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ತೀರ್ಥ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು. ಹಾಗೂ ಮದ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ ವೈವಿಧ್ಯ ಮತ್ತು ಶ್ರೀ ವೆಂಕಟೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಸತತ ಮೂರು ದಿನಗಳಿಂದ ನಡೆದ ಈ ದೇವತಾ ಕಾರ್ಯದ ಯಶಸ್ಸಿಗೆ ಸಹಕರಿಸಿದ ದೇವಳದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕವೃಂದ, ಗ್ರಾಮಸ್ಥರು ದಾನಿಗಳು ಹಾಗೂ ಭಕ್ತಾದಿಗಳಿಗೆ ದೇವಳದ ಆಡಳಿತ ಮೊಕ್ತೇಸರ ಎಸ್. ನಾಗಯ್ಯ ಶೆಟ್ಟಿ ಹೊಸ್ಮನೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ನಿರಂತರ ಗುಣಮಟ್ಟದ ಶಿಕ್ಷಣ ಮತ್ತು ವಿಭಿನ್ನ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಕರಾವಳಿ ಕರ್ನಾಟಕದ ಭಾಗದಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆಯೆಂದು ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ನಿದರ್ಶನವೆಂಬತೆ ಕರ್ನಾಟಕ ಚದುರಂಗ ಪಂದ್ಯಾವಳಿಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಹೊನಲು ಬೆಳಕಿನ ರಾಪಿಡ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲು ಈ ಸಂಸ್ಥೆ ಸಕಲ ಸಿದ್ಧತೆಗಳನ್ನು ಮಾಡುತ್ತಿದೆ. ಎಪ್ರಿಲ್ 23 ,2018 ಸೋಮವಾರದಂದು ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ರಾಜ್ಯಮಟ್ಟದ ಚದುರಂಗ ಸ್ಪಧೆಯು ನಡೆಯಲಿದೆ. ಇಂದಿನ ಮಕ್ಕಳಲ್ಲಿ ಚದುರಂಗ ಆಟದ ಮಹತ್ವ ಮತ್ತು ಅದರಿಂದಾಗುವ ಗುಣಾತ್ಮಕ ಬದಲಾವಣೆಗಳ ಕುರಿತು ಜಾಗ್ರತೆ ಮೂಡಿಸುವ ಮೂಲ ಉದ್ದೇಶ ಈ ಸಂಸ್ಥೆಯದ್ದಾಗಿದೆ. ಈ ಐತಿಹಾಸಿಕ ಚದುರಂಗ ಪಂದ್ಯಾಟವು ಗುರುಕುಲ ಪಬ್ಲಿಕ್ ಶಾಲೆಯ ಪ್ರಧಾನ ನೇತ್ರತ್ವದಲ್ಲಿ ಕಶ್ವಿ ಚೆಸ್ ಸ್ಕೂಲ್ ಕುಂದಾಪುರ , ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೆಶನ್ ಹಾಗೂ ಉಡುಪಿ ಜಿಲ್ಲೆ ಚೆಸ್ ಅಸೋಸಿಯೆಶನ್ರವರ ಸಹಾಕಾರದೊಂದಿಗೆ ನಡೆಯಲಿದೆ. ಈ ಪಂದ್ಯಾಟವು ವಯೋಮಿತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಾಂಸ್ಕೃತಿಕ ಪ್ರೀತಿ ಮಾನವೀಯ ಮೌಲ್ಯ ವೃದ್ಧಿಸಿ ಸಮಾಜಮುಖಿ ಚಿಂತನೆಗಳನ್ನು ಕಲ್ಪಿಸುತ್ತದೆ. ಹಾಗೆಯೇ ಕೇವಲ ಪುಸ್ತಕದ ಜ್ಞಾನ ಜೀವನಕ್ಕೆ ಸಾಕಾಗುವುದಿಲ್ಲ. ಶಿಕ್ಷಣೇತರ ಚಟುವಟಿಕೆಗಳು ಜೀವನದದ್ದುಕ್ಕಕ್ಕೂ ನೆನಪಿನಲ್ಲಿ ಉಳಿದು ಸಾಂಸ್ಕೃತಿಕವಾಗಿ ಎಲ್ಲವನ್ನು ಎದುರಿಸುವ ಧೈರ್ಯ ಮಕ್ಕಳಲ್ಲಿ ತುಂಬಲು ರಂಗ ಶಿಬಿರಗಳು ಸಹಕಾರಿಯಾಗುತ್ತದೆ ಎಂದು ಲಾವಣ್ಯ ಕಲಾಕುಟುಂಬದ ಅಧ್ಯಕ್ಷ ಗಿರೀಶ್ ಬೈಂದೂರು ಹೇಳಿದರು. ಬೈಂದೂರು ಲಾವಣ್ಯ ರಂಗಮನೆಯಲ್ಲಿ 21 ನೇ ವರ್ಷದ ಮಕ್ಕಳ ರಂಗತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸ್ವಕೇಂದ್ರಿತ ಸಮಾಜ ನಿರ್ಮಾಣವಾಗುತ್ತಿರುವ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳು ಮುಖ್ಯ ಎಂದೆನಿಸಿಕೊಳ್ಳುತ್ತವೆ. ರಂಗಭೂಮಿಗಳು ಸಮಾಜಕ್ಕೆ ಹೊಸ ಸಂದೇಶ ನೀಡಿ, ಮನುಷ್ಯನ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವುದಲ್ಲದೇ, ಜೀವನದಲ್ಲಿನ ಲೋಪದೋಷಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ರಂಗ ತರಬೇತಿ ಶಿಬಿರದ ನಿರ್ದೇಶಕ ನಿನಾಸಂ ಪದವೀಧರ ವಾಸುದೇವ ಗಂಗೇರ, ಸಹಾಯಕ ನಿರ್ದೇಶಕ ರೋಶನ್ ಬೈಂದೂರು, ಲಾವಣ್ಯ ಗೌರವಾಧ್ಯಕ್ಷ ಉಪ್ಪುಂದ ಶ್ರೀನಿವಾಸ ಪ್ರಭು, ವ್ಯವಸ್ಥಾಪಕ ಗಣಪತಿ ಎಸ್., ಉಪಾಧ್ಯಕ್ಷ ರವೀಂದ್ರ ಶ್ಯಾನುಭಾಗ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿ ನಿನಾದ ಸಂಸ್ಥೆಯ ವತಿಯಿಂದ ಜರಗಿದ ಚಾತುರ್ಮಾಸ್ಯಾವಧಿ ಅಖಂಡ ಭಜನಾ ಮಹೋತ್ಸವ ಸವಿನೆನಪಿಗಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ 11 ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನ ಮೂಲಕ ಚಾಲನೆ ನೀಡಲಾಯಿತು. ದೇವಳದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ ದೀಪ ಪ್ರಜ್ವಲಟಿ ಮಾಡುವ ಮೂಲಕ ಏಕಾಹ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರತಿನಿಧಿ ಜಿ.ವೇದವ್ಯಾಸ ಆಚಾರ್ಯ, ಜಿ.ವೆಂಕಟೇಶ ನಾಯಕ್, ಜಿ.ಶೇಷಗಿರಿ ನಾಯಕ್, ಎಚ್.ಸಂಜೀವ ನಾಯಕ್, ಬಿ.ಪ್ರಕಾಶ ಶೆಣೈ, ಜಿ.ಗಣಪತಿ ನಾಯಕ್, ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ, ಕಾರ್ಯದರ್ಶಿ ಎನ್.ಗಜಾನನ ನಾಯಕ್, ಎಂ.ನಾಗೇಂದ್ರ ಪೈ, ಎನ್.ಕೃಷ್ಣಾನಂದ ನಾಯಕ್, ವನಮಾಲಾ ಶೆಣೈ, ಎನ್.ಕೀರ್ತನಾ ಎಸ್. ನಾಯಕ್, ಎಂ.ಭಾನುಶ್ರೀ ಎಸ್.ಪೈ ಮತ್ತಿತರರು ಉಪಸ್ಥಿತರಿದ್ದರು. ಎ.೧೮ರಂದು ಬೆಳಿಗ್ಗೆ ದೀಪ ವಿಸರ್ಜನೆಯೊಂದಿಗೆ ಏಕಾಹ ಭಜನೆ ಸಂಪನ್ನಗೊಳ್ಳಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು ಇಲ್ಲಿ ವಾರ್ಷಿಕೋತ್ಸವ ಸಮಾರಂಭವು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ವಾಣಿಜ್ಯಶಾಸ್ತ್ರ ವಿಬಾಗದ ಮುಖ್ಯಸ್ಥರಾದ ರಘು ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ಡಾ.ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಡಾ. ಉಮೇಶ ಮಯ್ಯ ಹಾಗೂ ಮಾಜಿ ಸೈನಿಕರು ಮತ್ತು ಕಾರ್ಪೋರೇಷನ್ ಬ್ಯಾಂಕ್ ಉದ್ಯೋಗಿಗಳಾದ ಚಂದ್ರಶೇಖರ ನಾವಡ ಬೈಂದೂರು, ಕ್ರೀಡಾ ಸಮಿತಿಯ ಸಂಚಾಲಕರು ಹಾಗೂ ಸಹಪ್ರಾಧ್ಯಾಪಕರಾದ ಶಿವಕುಮಾರ ಪಿ.ವಿ, ನಾಗರಾಜ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಸತೀಶ ಎಂ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ನವೀನ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕರಾದ ಲತಾ ಪೂಜಾರಿ ವರದಿ ವಾಚಿಸಿದರು. ಕ್ರೀಡಾ ಸಂಚಾಲಕರಾದ ಶಿವಕುಮಾರ ಪಿ.ವಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಬಾರ್ ಅಸೋಸಿಯೇಶನ್ ರಿ. ಕುಂದಾಪುರ ಇದರ ವತಿಯಿಂದ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪೂರ್ಣಚಂದ್ರ ಎಲ್ ಪುರಾಣಿಕರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ನೆರವೇರಿಸಿದ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸದ್ರ ನ್ಯಾಯಾದೀಶರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಮಾಡುವ ಸಾಧನೆಗಳು ಮುಂದೆ ನಮ್ಮನ್ನು ಉನ್ನತ ಹುದ್ದೆ ಮತ್ತು ಸ್ಥಾನ ಮಾನಗಳು ಲಭಿಸಲು ಸಾದ್ಯವಾಗುತ್ತೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಸಲ್ವಾಡಿ ನಿರಂಜನ್ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸದ್ರ ನ್ಯಾಯಾದೀಶರಾದ ಪ್ರಕಾಶ ಖಂಡೇರಿ ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾದೀಶರಾದ ಡಿಪಿ ಕುಮಾರ ಸ್ವಾಮಿ, 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾದೀಶರಾದ ಚಂದ್ರಶೇಖರ್ ಬಣ್ಕರ್ ಉಪಸ್ಥಿತರಿದ್ದರು. ರವಿಕಿರಣ ಮುರ್ಡೇಶ್ವರ ಅಭಿನಂದನಾ ಭಾಷಣ ಮಾಡಿದರು, ಶ್ರೀಕಾಂತ್ ಆರ್ಡಿ ಅಭಿನಂದನಾ ಪತ್ರ ವಾಚಿಸಿದರು, ಶರತ್ ಶಟ್ಟಿ ಸ್ವಾಗತಿಸಿ, ರಮೇಶ್ ಹತ್ವಾಲ್ ಕಾರ್ಯಕ್ರಮ ನಿರೂಪಿಸಿದರು, ಸಂಸ್ಥೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಐತಿಹಾಸಿಕ ಮಹತೋಭಾರ ಶ್ರೀ ಸೇನೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು ಎ.15ರಿಂದ ಮೊದಲ್ಗೊಂಡು ಎ.23ರ ತನಕ ಜರುಗಲಿದ್ದು, ಆ ಪ್ರಯುಕ್ತ ದೇವಳದ ತಂತ್ರಿ ಕೃಷ್ಣ ಸೋಮಯಾಜಿ ಆಚಾರ್ಯತ್ವದಲ್ಲಿ ಧ್ವಜಾರೋಹಣ ನೆರವೇರಿತು. ಬೆಳಿಗ್ಗೆ ದೇವಳದಲ್ಲಿ ಕಲಶಪ್ರತಿಷ್ಠೆ, ಕಂಕಣ ಧಾರಣೆಯ ನಂತರ ರುಜ್ಜು ಬಂಧನ ಮುಂತಾದ ಧಾರ್ಮಿಕ ವಿಧಾನಗಳು ನಡೆಯಿತು. ಈ ಸಂದರ್ಭ ದೇವಳದ ಅಧ್ಯಕ್ಷ ಚೆನ್ನಕೇಶವ ಉಪಾಧ್ಯಾಯ, ಅರ್ಚಕ ವೃಂದ, ಸ್ಥಳೀಯ ಜನಪ್ರತಿನಿಧಿಗಳು, ದೇವಳದ ಸಿಬ್ಬಂದಿವರ್ಗ ಹಾಗೂ ಊರಿನ ಹತ್ತು ಸಮಸ್ತರು ಭಾಗವಹಿಸಿದ್ದರು. ಪ್ರತಿದಿನ ಅಪ್ಪಿಕಟ್ಟೆ, ಬಿಯಾರಕಟ್ಟೆ, ಜಟ್ಕನಕಟ್ಟೆ, ನಾಕಟ್ಟೆ, ಪಡುವರಿಕಟ್ಟೆ, ಬಂಕೇಶ್ವರಕಟ್ಟೆ ಉತ್ಸವಗಳು ಜರುಗಲಿದ್ದು, ಎ.21ರ ಶನಿವಾರ ಶ್ರೀ ಸೇನೇಶ್ವರ ದೇವರ ಶ್ರೀಮನ್ಮಹಾರಥೋತ್ಸವ ಹಾಗೂ ಎ.22ರಂದು ಅವಭೃತ ಸ್ನಾನ, ಓಕುಳಿ ಮತ್ತು ನಗರೋತ್ಸವ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ದಲಿತರಿಗೆ ಮೀಸಲು, ದೌರ್ಜನ್ಯ ತಡೆ ಕಾಯ್ದೆಯ ವಿಶೇಷ ಸವಲತ್ತು ನೀಡಿದ ಪರಿಣಾಮ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ. ಕೆಲ ಜಾತಿವಾದಿ ಶಕ್ತಿಗಳು ಅದನ್ನು ಕಸಿದು ದಲಿತರ ನಿರ್ಮೂಲನೆಗೆ ಪಣ ತೊಟ್ಟಿವೆ ಎಂದು ದಸಂಸ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಹೇಳಿದರು. ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಡಾ. ಅಂಬೇಡ್ಕರ್ ಅವರ 127 ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯ ದಸಂಸ ಬೈಂದೂರು ತಾಲೂಕು ಶಾಖೆ ಇವರ ಸಹಕಾರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮಹಿಳಾ ಸಂಘ ಬೈಂದೂರು ಮತ್ತು ದಸಂಸ ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ಜನ್ಮ ಜಯಂತಿ ಹಾಗೂ ಭೀಮ ಭಾರತ ಮಹಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಮಾಜದಲ್ಲಿ ಬಹುಸಂಖ್ಯೆಯಲ್ಲಿರುವ ದಲಿತರ ಕೈಗಿನ್ನು ರಾಜಕೀಯ ಅಧಿಕಾರದ ಚುಕ್ಕಾಣಿ ಸಿಕ್ಕಿಲ್ಲ. ಇದರಿಂದಾಗಿ ದಲಿತರ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ ಎಂದ ಅವರು…
