ಕುಂದಾಪುರ: ಕಳೆದ ಶುಕ್ರವಾರ ಬೆಳ್ಳಂಬೆಳ್ಳಗೆ ಉತ್ತರ ಕನ್ನಡ ಜಿಲ್ಲೆಯ ಗುಣವಂತೆ ಗ್ರ್ರಾಮದಿಂದ ತನ್ನ ಹೀರೊ ಶೈನ್ ಬೈಕ್ ಸಹಿತ ನಾಪತ್ತೆಯಾದ ವಿಶ್ವನಾಥ ಗೌಡ (36) ಎಂಬವರ ಬೈಕ್ ಹೆಮ್ಮಾಡಿ ಸಮಿಪದ ತೊಪ್ಲುವಿಗೆ ಹೋಗುವ ತಿರುವಿನಲ್ಲಿ ಅದೇ ದಿನ ಸಂಜೆ ಪತ್ತೆ ಯಾಗಿದ್ದು ಅದರೆ ವಿಶ್ವನಾಥ ಅವರ ಸುಳಿವೇ ಇಲ್ಲವಾಗಿದೆ. ಕ್ರಷಿಕರಾಗಿದ್ದ ವಿಶ್ದವನಾಥರಿಗೆ ಹೆಂಡತಿ ಎರಡು ಮಕ್ಕಳ ಪುಟ್ಟ ಸಂಸಾರವಿದ್ದು, ಅವರ ನಾಪತ್ತೆಯಿಂದಾಗಿ ಇಡೀ ಕುಟುಂಬ ಕಳವಳಕ್ಕೀಡಾಗಿದೆ. ಶುಕ್ರವಾರ ಮದ್ಯಾಹ್ನದ ಸುಮಾರಿಗೆ ತ್ರಾಸಿ ಬಳಿಯ ವೈನ್ ಶಾಪ್ ಸಮೀಪ ಅವರನ್ನು ಅವರದ್ದೇ ಊರಿನವರು ಕಂಡು ಮಾತನಾಡಿಸಿದ್ದೇ ಕೊನೆ ತದನಂತರ ಅಲ್ಲಿಂದಲೂ ಅವರು ನಾಪತ್ತೆಯಾಗಿದ್ದರೆನ್ನಲಾಗಿದೆ. ಸಂಜೆ ವೇಳೆಗೆ ಅವರ ಬೈಕ್ ಮಾತ್ರ ಅನಾಥ ಸ್ಥಿತಿಯಲ್ಲಿ ಹೆಮ್ಮಾಡಿ ಹೆದ್ದಾರಿ ಸಮೀಪ ತೊಪ್ಲುವಿನ ಬಳಿ ಪತ್ತೆಯಾಗಿದ್ದು ಗಂಗೊಳ್ಳಿ ಪೋಲಿಸರು ಅದನ್ನು ತಮ್ಮ ಸುಪರ್ದಿಗೆ ಪಡೆದು ಕೊಂಡಿದ್ದಾರೆ. ಈಗಾಗಲೇ ಅವರ ನಾಪತ್ತೆ ಪ್ರಕರಣ ಮಂಕಿ ಪೋಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದರೂ ಪರಿಣಾಮ ಮಾತ್ರ ಶೂನ್ಯ ವಾಗಿದ್ದರಿಂದ ಅವರ ಸ್ನೇಹಿತ ಬಳಗದವರು…
Author: ನ್ಯೂಸ್ ಬ್ಯೂರೋ
ಕುಂದಾಪುರ: ಇಂದು ಪಂಚಾಯಿತಿ ರಾಜ್ ವ್ಯವಸ್ಥೆಯ ತಳಗಟ್ಟಿನ ಒಂದೋಂದೆ ಕಲ್ಲುಗಳು ಜಾರುತ್ತಿದೆ. ಸಮಾಜ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಅಧಿಕಾರ ಸಿಗಬೇಕು ಎನ್ನುವ ಉದ್ದೇಶದ ಈ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕಾಣಬಹುದಾಗಿದೆ. ಈ ಎಲ್ಲಾ ವಿಚಾರಗಳ ಕುರಿತು ವಾಸ್ತವಿಕ ನೆಲೆಗಟ್ಟಿನಲ್ಲಿ ಪಂಚಾಯಿತಿ ಹಿತೈಷಿಗಳು ಒಂದೆಡೆ ಸೇರಿ ಸಮಸ್ಯೆಗಳ ಚರ್ಚೆ ನಡೆಸಿ ನಿರ್ಣಯ ಕೈಗೊಂಡು ಸರಕಾರದ ಗಮನ ಸೆಳೆಯಬೇಕಾದ ಅಗತ್ಯತೆ ಇದೆ ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಶುಕ್ರವಾರದಂದು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದ 9ನೇ ದಿನದ ಅಂಗವಾಗಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಜನಾಧಿಕಾರ ಪ್ರತಿಷ್ಠಾನ (ರಿ.) ಕೋಟ ಮತ್ತು ಸಿ.ಎ.ಬ್ಯಾಂಕ್ ಕೋಟ ಸಂಯುಕ್ತ ಆಶ್ರಯದಲ್ಲಿ ಕೋಟತಟ್ಟು ಪಂಚಾಯಿತಿ ಸಾದರ ಪಡಿಸಿದ ಪಂಚಾಯಿತಿ ಹಬ್ಬ ಸುರಾಜ್ಯ ಸ್ವಾತಂತ್ರ್ಯದ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತನಾಡಿದರು. ರಮೇಶ್ ಕುಮಾರ್ ಅವರು ನೀಡಿದ ಪಂಚಾಯಿತಿ ರಾಜ್ಯ ತಿದ್ದು ಪಡಿ…
ಕುಂದಾಪುರ: ತಾಲೂಕಿನ ಗೋಳಿಯಂಗಡಿಯ ಕಾರಿಕೋಡ್ಲು ಎಂಬಲ್ಲಿ ಯುವತಿಯೋರ್ವಳನ್ನು ಅತ್ಯಾಚಾರಗೈದು ಕೊಲೆ ಮಾಡಿದ ಅಮಾನುಷ ಘಟನೆ ವರದಿಯಾಗಿದೆ. ಮೃತ ಯುವತಿಯನ್ನು ಕಾರಿಕೋಡ್ಲು ನಿವಾಸಿ ಸುಚಿತ್ರಾ ನಾಯ್ಕ್(19) ಎಂದು ಗುರುತಿಸಲಾಗಿದ್ದು, ಅತ್ಯಾಚಾರ ಹಾಗೂ ಕೊಲೆ ಶಂಕೆಯ ಮೇಲೆ ಮಣಿಕಂಠ ಎನ್ನುವವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ವಿವರ: ಗೋಳಿಯಂಗಡಿಯ ಹಾರ್ಡ್ವೇರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಚಿತ್ರಾ ಎಂದಿನಂತೆ ಸಂಜೆಯ ವೇಳೆಗೆ ಮನೆಗೆ ಬಾರದಿದ್ದುದರಿಂದ ಆಕೆಯ ಮನೆಯವರು ಅಂಗಡಿ ಮಾಲಿಕರಲ್ಲಿ ವಿಚಾರಿಸಿದಾಗ, ಸಂಜೆ 5:30 ಸುಮಾರಿಗೆ ಆಕೆ ಮನೆಗೆ ಹೊರಟಿರುವುದನ್ನು ಅವರು ಖಾತರಿಪಡಿದ್ದರು. ಆದರೆ ರಾತ್ರಿಯಾಗುತ್ತಾ ಬಂದರೂ ಸುಚಿತ್ರಾ ನಾಯ್ಕ್ ಮನೆಗೆ ಬಾರದಿದ್ದುದರಿಂದ ಗಾಬರಿಗೊಂಡ ಹುಡುಕಾಟ ನಡೆಸಿದಾಗ ಮನೆಯ ಸಮೀಪದಲ್ಲೇ ಸುಚಿತ್ರಾ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮನೆಯಿಂದ ಬಹಳ ಹಿಂದೆಯೇ ಅತ್ಯಾಚಾರಗೈದು, ಕೊಲೆ ಮಾಡಿ ಬಳಿಕ ನಿರ್ಜನ ಕಾಡು ಪ್ರದೇಶದಲ್ಲಿ ಮೃತ ದೇಹವನ್ನು ತಂದು ಹಾಕಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಮೃತ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದೆ. ಕ್ರಿಮಿನಲ್ ಹಿನ್ನೆಲೆಯ ಮಣಿಕಂಠ ಕೆಲವು ದಿನಗಳಿಂದ ಸುಚಿತ್ರಾಳನ್ನು ಹಿಂಬಾಲಿಸುತ್ತಿದ್ದ ಬಗ್ಗೆ ಮಾಹಿತಿ ಇದ್ದುದರಿಂದ, ಅಲ್ಲದೇ…
ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿರುವ ಮರಳು ಗಣಿಗಾರಿಕೆಗೆ ಪುರಸಭೆಯಿಂದ ನಿರಪೇಕ್ಷಣಾ ಪತ್ರ ಪಡೆಯದ ಹಾಗೂ ಅನಧಿಕೃತ ಮರಳು ಕಡುವುಗಳನ್ನು ನಿಷೇಧಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ವಾದವಿವಾದಗಳೆದ್ದಿತು. [quote bgcolor=”#ffffff” arrow=”yes” align=”right”]ಉಪಾಧ್ಯಕ್ಷ ಕುರ್ಚಿ ತ್ಯಜಿಸಿದ ಕಾಮಧೇನು ಪುರಸಭಾ ಉಪಾಧ್ಯಕ್ಷ ನಾಗರಾಜ ಕಾಮಧೇನು ಸಭೆಯ ಆರಂಭದಲ್ಲಿ ಉಪಾಧ್ಯಕ್ಷರ ಖುರ್ಚಿಯಲ್ಲಿ ಕುಳಿತುಕೊಳ್ಳದೇ ಉಳಿದ ಸದಸ್ಯರುಗಳೊಂದಿಗೆ ಕುಳಿತಿದ್ದರು. ಅಧ್ಯಕ್ಷೆ ಕಲಾವತಿ ಉಪಾಧ್ಯಕ್ಷರ ಕುರ್ಚಿಯಲ್ಲೇ ಕುಳಿತುಕೊಳ್ಳುವಂತೆ ಕೇಳಿಕೊಂಡಾಗ, ಕಳೆದ ಬಾರಿಯ ನಾಮನಿರ್ದೇಶಿತ ಸದಸ್ಯೆ ದೇವಕಿ ಸಣ್ಣಯ್ಯ ಅವರು ತನಗೆ ಸಭೆಯಲ್ಲಿ ಅಗೌರವ ತೋರಿ ಮಾತನಾಡಿದ್ದಾರೆ. ಅವರು ಬಂದು ಕ್ಷಮೆ ಕೇಳುವವರೆಗೂ ತಾನು ಅಲ್ಲಿ ಕೂರುವುದಿಲ್ಲ ಎಂದು ಪಟ್ಟು ಹಿಡಿದರು. ಇವರಿಗೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸುರೇಶ್ ನಾಯಕ್ ಸಾಥ್ ನೀಡಿದರು. ಸಭೆಯಲ್ಲಿ ಗೈರು ಹಾಜರಿದ್ದ ದೇವಕಿ ಸಣ್ಣಯ್ಯ ಅವರು ಪತ್ರಮುಖೇನ ಕ್ಷಮಾಪಣೆ ಕೋರಿದ್ದರೂ ಸಭೆಯ ಮುಂದೆ ಬಂದು ಕ್ಷಮೆ ಕೋರಬೇಕು ಎಂದು ಕಾಮಧೇನು ಪಟ್ಟುಹಿಡಿದಾಗ ಪರಿಸ್ಥಿತಿ ತಿಳಿಗೊಳಿಸಲು 10 ನಿಮಿಷ ಸಭೆಯನ್ನು ಮುಂದೂಡಲಾಯಿತು.[/quote] ಸಂಗಮ್ ಸೇತುವೆಯ ಬಳಿ ಹಾಗೂ ಕೋಡಿ…
ಕುಂದಾಪುರ: ಬೀಜಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಜಯಮಾಲಳನ್ನು (36) ಕೊಲೆಗೈದ ಆರೋಪದಲ್ಲಿ ಆಕೆಯ ಜೊತೆಯಲ್ಲಿ ವಾಸಿಸುತ್ತಿದ್ದ ಪಾಪಣ್ಣ (33) ಎಂಬುವವನನ್ನು ಸಾಲಿಗ್ರಾಮದ ಚೇಂಪಿಯಲ್ಲಿ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ಕಳೆದ ಮೂರು ವರ್ಷಗಳಿಂದ ಕುಂಭಾಶಿ ಕೊರಗರ ಕಾಲೋನಿಯಲ್ಲಿ ಪಾಪಣ್ಣ ಮತ್ತು ಜಯಮಾಲ ಜೊತೆಯಾಗಿ ಬಾಳುತ್ತಿದ್ದರು. ಜಲಮಾಲ ಕೊಲೆಯಾದ ರಾತ್ರಿ ಅವರಿಬ್ಬರೂ ಕಂಠಪೂರ್ತಿ ಕುಡಿದು ಜಗಳವಾಡುತ್ತಿದ್ದರು. ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಪಾಪಣ್ಣ ಜಯಮಾಲಳ ದೊಣ್ಣೆಯಿಂದ ಮೇಲೆ ಹಲ್ಲೆ ನಡೆಸಿದ್ದು ಆಕೆಯ ಹಣೆಗೆ ಬಿದ್ದ ಬಲವಾದ ಏಟಿನಿಂದ ತಲೆ ರಕ್ತ ಹೆಪ್ಪುಗಟ್ಟಿ ಮರಣವನ್ನಪ್ಪಿದ್ದಳು. ಬಳಿಕ ಆರೋಪಿ ಪಾಪಣ್ಣ ತಲೆಮರೆಸಿಕೊಂಡಿದ್ದ. ಪೊಲೀಸರು ಘಟನೆ ನಡೆದು ಒಂದು ದಿನದೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಪಣ್ಣನ ಹೆಂಡತಿ ಕೆಲವು ವರ್ಷದ ಹಿಂದೆ ಸಾವನ್ನಪ್ಪಿದ್ದು, ಜಯಮಾಲ ಗಂಡನಿಂದ ದೂರವಾಗಿ ಪಾಪಣ್ಣನ ಜೊತೆಗಿದ್ದಳು. ಅತಿಯಾದ ಕುಡಿತ ಈ ದುರಂತಕ್ಕೆ ದಾರಿಮಾಡಿಕೊಟ್ಟಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ, ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ ಪಿ ಅಣ್ಣಾಮಲೈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ…
ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಪ್ರಕೃತಿ ವಿಕೋಪ, ಮನೆ ನಿವೇಶನ, ಪಡಿತರ ಚೀಟಿ, ಆಧಾರ್ ಕಾರ್ಡು ಹಾಗೂ ಇತರ ಇಲಾಖೆಗಳ ಪ್ರಗತಿಗಯ ಬಗ್ಗೆ ಅವಲೋಕಿಸಿದ ಬಳಿಕ ಮಾತನಾಡಿ ಈ ಬಾರಿಯ ಇಲಾಖೆಗಳ ಅಂಕಿ ಅಂಶಗಳನ್ನು ಅವಲೋಕಿಸುವಾಗ ಕಳೆದ ಬಾರಿಗಿಂತ ಸ್ವಲ್ಪಮಟ್ಟಿನ ಪ್ರಗತಿ ಸಾಧಿಸಿರುವುದು ಕಂಡು ಬಂದಿದ್ದು, ಮುಂದೆಯೂ ಅಧಿಕಾರಿಗಳು ಈ ಬಗ್ಗೆ ಮತ್ತಷ್ಟು ನಿಗಾವಹಿಸಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು. ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯಕ್ ವರದಿ ನೀಡಿ ಸುಮಾರು ರೂ. 49.18 ಲಕ್ಷ ಮೊತ್ತವನ್ನು ಪ್ರಕೃತಿ ವಿಕೋಪದ ಪರಿಹಾರವಾಗಿ ನೀಡಿದ್ದು ಇನ್ನು ಸುಮಾರು 7 ಲಕ್ಷ ರೂ. ಬಾಕಿ ಇದೆ. ಪಡಿತ ಚೀಟಿ ಹಳೆ ಅರ್ಜಿಗಳೆಲ್ಲಾ ವಿಲೇವಾರಿಯಾಗಿದ್ದು ಹೆಚ್ಚೆಚ್ಚು ಹೊಸ ಅರ್ಜಿಗಳು ಬರುತ್ತಿದ್ದು ಶೀಘ್ರ ವಿಲೇವಾರಿಗೆ ಶ್ರಮಿಸುತ್ತಿದ್ದೇವೆ ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ| ವಿಶಾಲ್ ಮಾತನಾಡಿ ಉಡುಪಿ…
ಕುಂದಾಪುರ: ಕಸ್ತೂರಿ ರಂಗನ್ ವರದಿಯ ಬಗ್ಗೆ ಮತ್ತೆ ಸಾಕಷ್ಟು ಜಿಜ್ಞಾಸೆಗಳು ಹುಟ್ಟಿಕೊಳ್ಳುತ್ತಿದೆ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಕೇಂದ್ರಕ್ಕೆ ಜನವಸತಿ ಪ್ರದೇಶವನ್ನು ವರದಿಯಿಂದ ಹೊರಗಿಡುವಂತೆ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಿಕೊಡಲಾಗಿದ್ದು, ನಮ್ಮ ಆಕ್ಷೇಪಣೆಯನ್ನು ಪುನಃ ಮನವರಿಕೆ ಮಾಡಲಾಗುವುದು. ಅಲ್ಲದೇ ಸಿ.ಆರ್.ಜೆಡ್ ವಿಚಾರದಲ್ಲಿ ಕೇರಳ, ಗೋವಾ ಮಾದರಿಯಂತೆ ರಿಯಾಯತಿ ನೀಡಲು ಮನವಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಉಡುಪಿ ಜಲ್ಲಾಡಳಿತ ಹಾಗೂ, ಜಿ.ಪಂ. ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಜನ ಸಂಪರ್ಕ ಸಭೆ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮರಳಿನ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಗೊಂದಲಗಳಿದ್ದು, ಇವುಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಏಕರೂಪದ ಮರಳು ನೀತಿಯ ಬಗ್ಗೆ ಜಿಲ್ಲಾ ಮಟ್ಟದಲ್ಲಿ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸುವ ಕೆಲಸ ಆಗಿದೆ. ಶೀಘ್ರ ಜಿಲ್ಲೆಯಲ್ಲಿ ಏಕರೂಪದ ಮರಳಿ ನೀತಿ ಅನುಷ್ಠಾನಗೊಳ್ಳಲಿದೆ. ಮನೆ ನಿವೇಶನಗಳನ್ನು ನೀಡುವ ಸಲುವಾಗಿ ತಾಲೂಕಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ ವಿಶ್ವದ ಜನಪ್ರಿಯ ಸಾಮಾಜಿಕ ತಾಣ ಫೇಸ್ಬುಕ್ ಸಂಸ್ಥಾಪಕ ಹಾಗೂ ಸಿಇಓ ಮಾರ್ಕ್ ಜುಕರ್ಬರ್ಗ್ ಭಾರತ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಡಿಜಿಟಲ್ ಇಂಡಿಯಾ’ವನ್ನು ಬೆಂಬಲಿಸಿ ತನ್ನ ಪ್ರೋಪೈಲ್ ಪೋಟೋವನ್ನು ಬದಲಿಸಿಕೊಂಡಿದ್ದಾರೆ. ಭಾರತದ ಯೋಜನೆಗಳನ್ನು ವಿಶ್ವದ ಜನ ಬೆರಗುಗಣ್ಣಿನಿಂದ ನೋಡಿ ಬೆಂಬಲ ಸೂಚಿಸುತ್ತಿರುವುದಕ್ಕೆ ಇದೊಂದು ನಿದರ್ಶನ. ವಿದೇಶಿ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾದ ಕುರಿತು ವಿವಿಧ ಸಾಫ್ಟ್ವೇರ್ ಕಂಪೆನಿಗಳ ಜೊತೆಗೆ ಮಾತುಕತೆ ನಡೆಸಿದ್ದು, ಭಾರತದಲ್ಲಿ ಬಂಡವಾಳ ಹೂಡಲು ಕಂಪೆನಿಗಳು ಒಪ್ಪಿಕೊಂಡಿರುವ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ. [quote bgcolor=”#ffffff”]ಗ್ರಾಮೀಣ ಪ್ರದೇಶಗಳಿಗೂ ಅಂತರ್ಜಾಲ ಬಳಕೆಯನ್ನು ವಿಸ್ತರಿಸುವ ಮತ್ತು ಹೆಚ್ಚಿನ ಸೇವೆಗಳನ್ನು ಅಂತರ್ಜಾಲದಡಿಯಲ್ಲಿ ತರುವ ಭಾರತ ಸರಕಾರದ ಶ್ರಮ ಶ್ಲಾಘನಾರ್ಹ. ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫೇಸ್ಬುಕ್ ಕಛೇರಿಯಲ್ಲಿ ಮಾತನಾಡಲು ಕಾಯುತ್ತಿದ್ದೇನೆ ಎಂದು ಜುಕರ್ಬರ್ಗ್ ತಮ್ಮ ಪೇಜಿನಲ್ಲಿ ಬರೆದುಕೊಂಡಿದ್ದಾರೆ.[/quote] ಇದು ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಹಲವು ಮಂದಿಯ ಡಿಜಿಟಲ್ ಇಂಡಿಯಾಕ್ಕೆ ಬೆಂಬಲ ಸೂಚಿಸಿದ್ದರು. 30 ನಿಮಿಷಗಳಲ್ಲಿ 63,500…
ಕುಂದಾಪುರ: ಕಸ್ತೂರಿ ರಂಗನ್ ವರದಿಯನ್ನು ಸುಪ್ರಿಂ ಕೋರ್ಟ್ ಸೂಚನೆಯಂತೆ ವರದಿಗೆ ಒಳಪಡುವ ವ್ಯಾಪ್ತಿಯಲ್ಲಿ ಇರುವ ಜನವಸತಿ ಪ್ರದೇಶ, ಕಾಡು, ಈ ಭಾಗದ ಕೃಷಿ ಪದ್ಧತಿಯನ್ನು ಸಂಪೂರ್ಣವಾಗಿ ಅವಲೋಕಿಸಿ ಗ್ರಾಮವಾರು ಸರ್ವೇ ಮಾಡಿ ಎಂದು ಕಳೆದ ಒಂದು ವರ್ಷದಿಂದ ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಸೂಚನೆ ನೀಡುತ್ತಿದ್ದರೂ ಇದ್ಯಾವುದನ್ನೂ ಲೆಕ್ಕಿಸದೇ ಪೂರ್ಣ ಪ್ರಮಾಣದ ವರದಿ ನೀಡಿದ್ದೇವೆ ಎಂದು ಹೇಳುವ ಮೂಲಕ ರಾಜ್ಯ ಸರಕಾರ ಜನಸಾಮಾನ್ಯರಿಗೆ ಸುಳ್ಳು ಮಾಹಿತಿಯನ್ನು ರವಾನಿಸಿದೆ ಎಂದು ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಆರೋಪಿಸಿದರು. ಅವರು ಕುಂದಾಪುರ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಳೆದ 10 ದಿನದ ಹಿಂದೆ ಕೇಂದ್ರ ಸರಕಾರ ಹೊರಡಿಸಿದ ಅಧಿಸೂಚನೆಯಲ್ಲಿ ರಾಜ್ಯದ ಈ ವರದಿ ಮಂಜೂರು ಮಾಡಲು ಯೋಗ್ಯವಿಲ್ಲ ಎಂದು ಹೇಳಿದೆ. ಆದರೆ ರಾಜ್ಯ ಸರಕಾರಕ್ಕೆ ಕಸ್ತೂರಿ ರಂಗನ್ ವರದಿಯನ್ನು ಸಲ್ಲಿಸಲು ಇನ್ನೂ ಒಂದು ಅವಕಾಶವಿದ್ದು, ಮುಂದಿನ 50 ದಿನಗಳಲ್ಲಿ ಕೇರಳ ಮಾದರಿಯ ವರದಿಯನ್ನು ಸಿದ್ಧಪಡಿಸಿ ತಕ್ಷಣ ಕೇಂದ್ರ ಸರಕಾರ ಹಾಗೂ ಸುಪ್ರಿಂ…
ಕುಂದಾಪುರ: ಛಾಯಾಗ್ರಾಹಕರು ಸಮಾಜದ ಕಣ್ಣಿದ್ದಂತೆ. ಆಗುಹೋಗುಗಳನ್ನು ಕ್ಯಾಮರಾದ ಮೂಲಕ ಕಟ್ಟಿಕೊಡುವ ಅವರ ಕ್ಯಾಮರಾ ಕಣ್ಣನ್ನು ತಪ್ಪಿ ನಡೆಯಲು ಸಾಧ್ಯವಿಲ್ಲ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಷನ್ ಇದರ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಎಸ್.ಕೆ.ಪಿ.ಎ ಕುಂದಾಪುರ ವಲಯದ ವತಿಯಿಂದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣಾ ವಿಭಾಗದ ಸಹಯೋಗದೊಂದಿಗೆ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ಆಯೋಜಿಸಲಾದ ನೇತ್ರದಾನ ಘೋಷಣಾ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಗರಿಷ್ಠ ರಕ್ತದಾನವನ್ನು ಮಾಡುವ ಮೂಲಕ ರಕ್ತದಾನಿಗಳ ಜಿಲ್ಲೆ ಎಂಬ ಹೆಸರನ್ನು ಪಡೆದಿರುವ ಉಡುಪಿ ಜಿಲ್ಲೆ, ಈಗ ನೇತ್ರದಾನದ ಅರಿವು ಮೂಡಿಸಲು ಮುಂದಾಗಿರುವುದು ಜಿಲ್ಲೆಯ ಜನರಲ್ಲಿನ ಆರೋಗ್ಯ ಜಾಗೃತಿಯನ್ನು ಸೂಚಿಸುತ್ತದೆ ಎಂದವರು…
