Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಮುದ್ರಾಡಿಯ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯು ಸಿಜಿಕೆ ಬೀದಿರಂಗ ದಿನದ ನೆನಪಿನಲ್ಲಿ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಸ್ಥಳೀಯ ನಟ, ನಿರ್ದೇಶಕ ಯೋಗೀಶ ಬಂಕೇಶ್ವರ ಅವರಿಗೆ ಪುರಸ್ಕಾರ ಪ್ರದಾನ ಕಾರ್ಯಕ್ರಮ ಜರುಗಿತು. ಸಿಜಿಕೆ ರಂಗ ಪುರಸ್ಕಾರ ಪ್ರದಾನ ಮಾಡಿದ ಹಿರಿಯ ರಂಗನಿರ್ದೇಶಕ ಗುರುರಾಜ ಮಾರ್ಪಳ್ಳಿ ಮಾತನಾಡಿ ರಂಗಭೂಮಿಯು ಎಲ್ಲ ಕಲೆಗಳ ತವರು. ಅದರಲ್ಲೂ ನವ್ಯ ರಂಗಭೂಮಿ ಹೊಸರೀತಿಯ ಚಿಂತನೆಗೆ, ಸೃಜನಶೀಲ ಕ್ರಿಯೆಗೆ ಸೂಕ್ತ ವೇದಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ರಂಗಭೂಮಿಗೆ ಸಾಕಷ್ಟು ಬೇಡಿಕೆಯಿದ್ದು, ಇದು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ರಂಗಭೂಮಿ ಮನುಷ್ಯ ಜೀವನದ ಅರ್ಥ, ಗುರಿ ಏನು ಎನ್ನುವುದನ್ನು ಶೋಧಿಸಿ, ಪ್ರಚುರಪಡಿಸುವ ಕೆಲಸ ಮಾಡುತ್ತದೆ. ಅದರಲ್ಲಿ ತೊಡಗಲು ಮನಸ್ಸು ಇರುವವರಿಗೆಲ್ಲ ಇಂದು ವಿಪುಲ ಅವಕಾಶಗಳಿವೆ. ಆಸಕ್ತ ವಿದ್ಯಾರ್ಥಿಗಳು ಅದರತ್ತ ಗಮನ ಹರಿಸಬೇಕು ಎಂದ ಅವರು ಯೋಗೀಶ ಬಂಕೇಶ್ವರ ಒಬ್ಬ ಪ್ರತಿಭಾವಂತ ಮತ್ತು ಕ್ರಿಯಾಶೀಲ ರಂಗಕರ್ಮಿ ಆಗಿರುವುದರಿಂದ ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ವೇದಮೂರ್ತಿ ಕಟ್ಟೆ ಶಂಕರ ಭಟ್ ಹಾಗೂ ಕುಲ ಪುರೋಹಿತ ಸುಬ್ರಹ್ಮಣ್ಯ ಭಟ್ ಬಾಡ ಇವರ ನೇತೃತ್ವದಲ್ಲಿ ನಡೆಯಿತು. ಭಾಗೀರಥಿ ಮತ್ತು ಹೆಚ್.ಆರ್.ಶಶಿಧರ್ ನಾಯ್ಕ್ ಚನ್ನಗಿರಿ ಹಾಗೂ ಮೀನಾಕ್ಷಿ ಮತ್ತು ಕೊರಗ ಹೋಬಳಿದಾರ್ ಅವರ ಪರವಾಗಿ ನಿರ್ಮಲ ನಾಗರಾಜ ಹೋಬಳಿದಾರ್ ಮತ್ತು ಮಕ್ಕಳು ಪಡುವರಿ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಸೇವಾಕರ್ತರಾಗಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಭಕ್ತಾದಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಬಂದರು ಪ್ರದೇಶದ ಸಮೀಪ ನಿರ್ಮಿಸಲಾಗಿರುವ ಘನ ದ್ರವ ತ್ಯಾಜ್ಯ ವಿಂಗಡಣ ಕೇಂದ್ರ ನಿರ್ಮಾಣ ಕಾಮಗಾರಿಯ ತನಿಖೆ ಮತ್ತು ಅವ್ಯವಹಾರದ ತನಿಖೆ ನಡೆಸುವಂತೆ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ ಬುಧವಾರ ಮನವಿ ಸಲ್ಲಿಸಿದೆ. ಗಂಗೊಳ್ಳಿಯಲ್ಲಿ ಘನ ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಕಾರ್ಯಕ್ರಮ ನಡೆಸಲು ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದ ಸಮೀಪದಲ್ಲಿ ರೋಟರಿ ಸಂಸ್ಥೆಯವರು ನಿರ್ಮಿಸಿದ ಶೌಚಾಲಯ ಪ್ರದೇಶದಲ್ಲಿ ಸುಮಾರು 7.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಘನ ದ್ರವ ತ್ಯಾಜ್ಯ ವಿಂಗಡಣ ಕೇಂದ್ರ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದ್ದು, ಕಾಮಗಾರಿ ಕೂಡ ಕಳಪೆಯಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ಅವರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ ಅವರಿಗೆ ಗ್ರಾಮ ಪಂಚಾಯತ್ ಕಛೇರಿಯಲ್ಲಿ  ಮನವಿ ಸಲ್ಲಿಸಿದ್ದಾರೆ. ಶೌಚಾಲಯದ ಪ್ರಥಮ ಅಂತಸ್ತಿನಲ್ಲಿರುವ ಸ್ನಾನಗೃಹದ ಎಲ್ಲಾ ಜೋಡಣೆಗಳನ್ನು ತೆಗೆದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಹಳೆ ವಿದ್ಯಾರ್ಥಿ ಶಿಕ್ಷಣ ಪ್ರೇಮಿ ಬಳಗ ಮೇಲ್‌ಗಂಗೊಳ್ಳಿ ಇವರ ವತಿಯಿಂದ ದಾನಿಗಳ ಮತ್ತು ಸಂಸ್ಥೆಗಳ ನೆರವಿನಿಂದ ಮೇಲ್‌ಗಂಗೊಳ್ಳಿ ಅಂಗನವಾಡಿ ಕೇಂದ್ರಕ್ಕೆ ನೀಡಲಾದ ಕೊಡುಗೆ ಹಸ್ತಾಂತರ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕರ್ಣಾಟಕ ಬ್ಯಾಂಕಿನ ಹೊನ್ನಾವರ ಶಾಖೆಯ ಪ್ರಬಂಧಕ ಮಹಾಬಲ ಕೆ. ಮಾತನಾಡಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಬೇಕಾದರೆ ಸಂಘ ಸಂಸ್ಥೆಗಳ, ದಾನಿಗಳ ಸಹಕಾರ ಅಗತ್ಯ. ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳಿಗೆ ನೀಡುವ ಕೊಡುಗೆಗಳು ಮಹತ್ವವೆನಿಸುತ್ತದೆ. ಶಿಕ್ಷಣಕ್ಕೆ ದಾನ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಎಳವೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗಂಗೊಳ್ಳಿ ಕ್ಲಸ್ಟರ್‌ನ ಸಿಆರ್‌ಪಿ ತಿಲೋತ್ತಮ ನಾಯಕ್, ನಿವೃತ್ತ ಮುಖ್ಯೋಪಾಧ್ಯಾಯ ಮುಡೂರ ಅಂಬಾಗಿಲು, ಶಾಲೆಯ ಮುಖ್ಯಶಿಕ್ಷಕ ರಮೇಶ ಮಹಾಲೆ, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಪ್ರಭಾವತಿ ಶೆಡ್ತಿ, ಸಹಶಿಕ್ಷಕಿ ಲಲಿತಾ ಶುಭ ಹಾರೈಸಿದರು. ನಾಗರಾಜ ಜಿ.ಎಂ., ಗಂಗೊಳ್ಳಿ ಫ್ರೆಂಡ್ಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗುರುಕೃಪಾ ಕೊಂಕಣಿ ಮಹಿಳಾ ಮಂಡಳಿ ಕುಂದಾಪುರ ಇವರ ವತಿಯಿಂದ ಹಾಲಾಡಿ ಲಕ್ಷ್ಮೀದೇವಿ ಕಾಮತ್ ಇವರ ಅಧ್ಯಕ್ಷತೆಯಲ್ಲಿ ’ಗುರುಕೃಪಾ’ ಕೊಂಕಣಿ ಸಾಂಸ್ಕೃತಿಕ ಕಲಾಸಂಘ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶೋಭಾ ಮೋಹನದಾಸ ಶಣೈ, ಮುಖ್ಯ ಅತಿಥಿಗಳಾಗಿ ವಾಮನ ಪೈ, ಯಕ್ಷಗಾನ ತರಭೇತುದಾರರಾಗಿ ರಾಮಚಂದ್ರ ಭಟ್, ವಿಠ್ಹಲ ಕಾಮತ್ ಉಪ್ಪಿನಕುದ್ರು ಹಾಗೂ ಮಹಾ ಪೋಷಕರಾದ ಶ್ರೀಯುತ ಹಾಲಾಡಿ ವಾಸುದೇವ ಕಾಮತ್‌ರವರು ಉಪಸ್ಥಿತರಿದ್ದರು. ವಿಜಯಾ ಸದಾಶಿವ ಕಾಮತ್‌ರವರು ಧನ್ಯವಾದ ಸಮರ್ಪಣೆ ಮಾಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬಿ.ಎಮ್.ಸುಕುಮಾರ್ ಶೆಟ್ಟಿ ಅಧ್ಯಕ್ಷತೆಯ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್‌ಎಮ್‌ಎಮ್ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಈ ಶೈಕ್ಷಣಿಕ ವರ್ಷದ ಮೊದಲ ಪೋಷಕರ ಮತ್ತು ಶಿಕ್ಷಕರ ಸಭೆಯು ಜರುಗಿತು. ಹೊಸ ಪೋಷಕರನ್ನು ಸಭೆಗೆ ಪರಿಚಯಿಸಿ ವಿಶೇಷವಾಗಿ ಸ್ವಾಗತಿಸಲಾಯಿತು. ಚಿಂತನಾರಾಜೇಶ್ ಅವರು ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರವನ್ನು ವಿವರಿಸಿದರು. ಮಕ್ಕಳಲ್ಲಿ ಸಕಾರಾತ್ಮಕ ಭಾವನೆಯನ್ನು ಬೆಳೆಸುವ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಶುಭಾ ಕೆ.ಎನ್ ಮತ್ತು ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಲತಾ ಜಿ.ಭಟ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಜ್ಯೋತಿ ಮತ್ತು ಕೃಪಾಶ್ರೀ ನಿರೂಪಿಸಿದರು. ಶಿಕ್ಷಕಿ ರೋಶನಿ ಸ್ವಾಗತಿಸಿದರು ಮತ್ತು ಶಿಕ್ಷಕಿ ಆರತಿ ವಂದಿಸಿದರು.

Read More

ಸುನಿಲ್ ಹೆಚ್. ಜಿ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಶಿಕ್ಷಕರಾದವರು ತರಗತಿಯಲ್ಲಿ ಪಾಠ, ದೈಹಿಕ ಶಿಕ್ಷಣ ಶಿಕ್ಷಕರಾದರೆ ಮಕ್ಕಳಿಗೆ ಆಟ ಇವಿಷ್ಟನ್ನೇ ಮಾಡಿದರೆ ಸಾಕೆಂದು ವೃತ್ತಿಯಲ್ಲಿ ತೊಡಗಿಕೊಂಡಿರುವವರ ನಡುವೆ ಈ ಶಾಲೆಯ ಶಿಕ್ಷಕರೋರ್ವರ ಕಾರ್ಯಕ್ಷಮತೆ ಇತರರಿಗೂ ಮಾದರಿ. ತನ್ನ ಶಿಕ್ಷಕ ವೃತ್ತಿಯ ಜೊತೆಗೆ ಅದೇ ಶಾಲೆಯ ಮಕ್ಕಳನ್ನು ಕರೆತರಲು ಶಾಲಾ ವಾಹನ ಚಾಲನೆ ಮಾಡುವುದರ ಮೂಲಕ ವೃತ್ತಿ ಬದುಕಿನ ನಡುವೆ ಹೊಸ ಸಾಧ್ಯತೆಯನ್ನು ತೆರೆದಿಟ್ಟು ಶಾಲೆಯ ದಾಖಲಾತಿ ಹೆಚ್ಚಲು ಒಂದು ದಾರಿ ಮಾಡಿದ್ದಾರೆ. ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜು ಎಸ್. ಮಯ್ಯಾಡಿಯವರು ಕಳೆದ 7 ವರ್ಷಗಳಿಂದ ಇಂತಹದ್ದೊಂದು ಸಾಹಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಆಟ-ಪಾಠದೊಂದಿಗೆ ಅವರನ್ನು ಶಾಲಾ ವಾಹನದಲ್ಲಿ ಮನೆಯಿಂದ ಕರೆತಂದು ಮರಳಿ ಮನೆಗೆ ಬಿಡುವಲ್ಲಿ ವಾಹನ ಚಾಲನೆಯ ಹೆಚ್ಚುವರಿ ಕೆಲಸವನ್ನೂ ಖುಷಿಯಿಂದ ತಾವೇ ನಿರ್ವಹಿಸುತ್ತಿದ್ದಾರೆ. ವಾಹನದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ: ಮಯ್ಯಾಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದಾಗ ಶಾಲೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಾರಣಕಟ್ಟೆ-ಸನ್ಯಾಸಿಬೆಟ್ಟು ಸಂಪರ್ಕ ಕಿರುಸೇತುವೆ ನಿರ್ಮಾಣಗೊಂಡು ಒಂದೂವರೆ ವರ್ಷ ಕಳೆದರೂ ‘ರಿವೀಟ್‌ಮೆಂಟ್’ ಕಾಮಗಾರಿ ಪೂರ್ಣಗೊಳ್ಳದೇ ಸಂಚಾರಕ್ಕೆ ತೊಡಕಾಗಿರುವುದು ನಿತ್ಯ ಪ್ರಯಾಣಿಕರ ಪಾಲಿಗೆ ಗೋಳಾಗಿದೆ. ಸುತ್ತಿ ಬಳಸಿ ಮಾರಣಕಟ್ಟೆ ಸಾಗುವ ಹಾದಿಯ ನಡುವೆ ಹರಿಯುವ ಹೊಳೆಗೆ ಮರದ ದಿಮ್ಮೆಯ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದ್ದು ಆ ಮಾರ್ಗವಾಗಿ ಮಳೆಗಾಲದಲ್ಲಿ ಆ ಭಾಗದ ನಿವಾಸಿಗಳು ಸಾಗುವ ಪರಿಪಾಠ ಹೊಂದಿದ್ದರು. ಕಳೆದ ವರುಷ ಮಳೆಗಾಲದಲ್ಲಿ ಆ ಮಾರ್ಗವಾಗಿ ಶಾಲೆಗೆ ಸಾಗುತ್ತಿದ್ದ ವಿದ್ಯಾರ್ಥಿನಿ ವಿಸ್ಮಯ ದೇವಾಡಿಗ ಆಕಸ್ಮಿಕವಾಗಿ ಕಾಲು ಜಾರಿ ನದಿ ಪಾಲಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ರೂ. 10 ಲಕ್ಷ ವೆಚ್ಚದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕಿರುಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಸೇತುವೆ ನಿರ್ಮಾಣವಂತೂ ಪೂರ್ಣವಾಗಿದೆ. ಆದರೆ ಅವುಗಳ ಇಕ್ಕೆಲಗಳ ರಸ್ತೆಯ ಅಂಚಿಗೆ ಮಣ್ಣು ತುಂಬಿಸಿ ರಿವೀಟ್ಮೆಂಟ್ ಕಾಮಗಾರಿ ಆರಂಭಗೊಳ್ಳದಿರುವುದು ಸಂಚಾರಕ್ಕೆ ತೊಡಕಾಗಿದೆ. ರಿಕ್ಷಾ ಸಮೇತ ದ್ವಿಚಕ್ರ ವಾಹನಗಳು ಈ ಮಾರ್ಗವಾಗಿ ಸಂಚರಿಸುವುದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ನೂರಾರು ಸಂಖ್ಯೆಯ ಕಾರ್ಯಕರ್ತರು ಮಂಗಳವಾರ ಶಾಸಕರ ನಿವಾಸ ನೆಂಪುವಿನಿಂದ ಕೊಲ್ಲೂರಿಗೆ ಪಾದಯಾತ್ರೆ ಮಾಡಿದರು. ಬೆಳಿಗ್ಗೆ ೪.೪೫ಕ್ಕೆ ಶಾಸಕರನ್ನು ಕೂಡಿಕೊಂಡು ಮಳೆಯಲ್ಲಿಯೇ ಹೊರಟ ಪಾದಯಾತ್ರೆ ಸುಮಾರು ೨೫ ಕಿಮಿ ಕ್ರಮಿಸಿ ೯.೪೫ರ ಹೊತ್ತಿಗೆ ಕೊಲ್ಲೂರು ಸ್ವಾಗತ ಗೋಪುರಕ್ಕೆ ತಲುಪಿತು. ಅಲ್ಲಿಂದ ನೇರವಾಗಿ ಸೌಪರ್ಣಿಕಾ ನದಿಯಲ್ಲಿ ತೀರ್ಥಸ್ನಾನ ಮಾಡಿದ ಯಾತ್ರಿಗಳು ದೇವಸ್ಥಾನಕ್ಕೆ ತೆರಳಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಈ ಮಣ್ಣಿನ ಸಂಸ್ಕಾರದಿಂದ ರಾಷ್ಟ್ರೀಯತೆ ಎದ್ದು ನಿಂತಿದೆ. ಮುಂದಿನ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಜನಾದೇಶ ದೊರೆತು ಇನ್ನೊಮ್ಮೆ ಮೋದಿಯವರು ಪ್ರಧಾನಿಯಾಗಬೇಕೆಂಬ ಸಂಕಲ್ವ ಹಾಗೂ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರ ಪುನಃ ಸ್ಥಾಪನೆಯಾಗಬೇಕೆಂಬ ಮೂಲ ಉದ್ದೇಶದಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿಭಾನ್ವಿತ ಕಲಾವಿದ, ನಿರ್ದೇಶಕ ಬೈಂದೂರಿನ ಯೊಗೀಶ್ ಬಂಕೇಶ್ವರ್ ಅವರು ಪ್ರಸಕ್ತ ಸಾಲಿನ ಸಿಜಿಕೆ ರಂಗ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮುದ್ರಾಡಿಯ ನಮ್ಮ ತುಳುವೆರ್ ಕಲಾ ಸಂಘಟನೆ ಸಿಜಿಕೆ ಬೀದಿರಂಗದ ನೆನಪಿನಲ್ಲಿ ಪ್ರಶಸ್ತಿ ನೀಡುತ್ತಿದ್ದು, ಜೂನ್ 27ರಂದು ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಳೆದ 26 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಯೋಗೀಶ್ ಅವರು ಪುಷ್ಪರಾಣಿ, ಬದುಕಿಲ್ಲದವನ ಭಾವಗೀತೆ, ಮುದ್ದಣ್ಣನ ಪ್ರಮೋಶನ್ ಪ್ರಸಂಗ, ನಮ್ಮನಿಮ್ಮೊಳಗೊಬ್ಬ ಸೇರಿದಂತೆ ಸುಮಾರು 12 ನಾಟಕಗಳ ನಿರ್ದೇಶನ ಮಾಡಿದ್ದಾರೆ. 3 ಬಾರಿ ರಾಜ್ಯಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ. ದೃಷ್ಟಿ, ಮರಣ ಮೃದಂಗ, ಪೊಲೀಸ್, ಕಾವ್ಯರಂಗ, ಕಥಾಸಂಗಮ ಸೇರಿದಂತೆ 25ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ. 13 ಧಾರಾವಾಹಿ, 6 ಕನ್ನಡ ಸಿನಿಮಾದಲ್ಲಿ ಪೋಷಕ ಹಾಗೂ ಒಂದು ತುಳು ಕಲಾತ್ಮಕ ಚಲನಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಹಂಬಲ ಥಿಯೇಟರ್‌ನ ಮೂಲಕ ಕೋಮು ಸಾಮರಸ್ಯದ ಆಶಯವನ್ನಿಟ್ಟು ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹುತಾತ್ಮ…

Read More