ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಗ್ರಾಮ ಜಟ್ಟಿಗ ಮತ್ತು ಹೋಬಳಿದಾರ್ ಮನೆ ದೊಡ್ಡ ನಾಗರ ಬನ ಹಾಗೂ ಸಪರಿವಾರ ಇದರ ಪುನ: ಪ್ರತಿಷ್ಠಾ ಮಹೋತ್ಸವ ಮತ್ತು ಆಶ್ಲೇಷಾ ಬಲಿ ಪೂಜೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಖ್ಯಾತ ಹರಿದಾಸರಾದ ಬಿ.ಸಿ.ರಾವ್ ಶಿವಪುರರವರು ಮಾತನಾಡಿ ಕರಾವಳಿಯಾದ್ಯಂತ ನಾಗಾರಾಧನೆಯು ಪ್ರಾಮುಖ್ಯತೆ ಪಡೆದಿದ್ದು ಪ್ರಕೃತಿ ಮಾತೆಗೆ ಭಕ್ತರು ಪೂಜನೀಯ ಗೌರವ ಸಲ್ಲಿಸುತ್ತಿದ್ದಾರೆ ಭಕ್ತಿ ನಿಷ್ಟೆ ಧೃಢ ನಂಬಿಕೆಯಿಂದ ಬದುಕಿನುದ್ದಕ್ಕೂ ಉತ್ತಮ ಬಾಳ್ವೆ ನಡೆಸಲು ಸಾಧ್ಯ ಎಂದು ಹೇಳಿ ನಾಗಾರಾಧನೆಯ ಮಹತ್ವದ ಬಗ್ಗೆ ಸುವಿಸ್ತಾರವಾಗಿ ಹರಿಕಥೆಯ ಮೂಲಕ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಿಕಾ ಇಂಟರ್ ನ್ಯಾಷನಲ್ ಹೋಟೆಲ್ ಮಾಲಿಕರು ಹಾಗೂ ಕೋಲ್ಲೂರು ದೇವಳದ ಮಾಜಿ ಧರ್ಮದರ್ಶಿಗಳಾದ ಶ್ರೀ ಜಯಾನಂದ ಹೋಬಳಿದಾರ್ ವಹಿಸಿದ್ದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀಅನಂತ ಹೋಬಳಿದಾರ್ ಇವರು ಸದ್ರಿ ಕ್ಷೇತ್ರದಿಂದ ಜೈನ ಮತಾವಲಂಬಿಯಾದ ಶ್ರೀ 108 ಸಂಭವಸಾಗರ ಮಹಾರಾಜರ ಕುರಿತಾದ ಪುಸ್ತಕ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಎ.ಶ್ರೀನಿವಾಸ ನಿವೃತ್ತ ಶಿಕ್ಷಕರು, ಬಾಲಯ್ಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪುರಸಭೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೋಡಿ ಬೀಚಿನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪುರಸಭಾ ಅಧ್ಯಕ್ಷರಾದ ವಸಂತಿ ಮೋಹನ್ ಸಾರಂಗ, ಉಪಾಧ್ಯಕ್ಷರಾದ ರಾಜೇಶ್ ಕಾವೇರಿ, ಪುರಸಭಾ ಮುಖ್ಯಾಧಿಕಾರಿಯಾದ ವಾಣಿ ವಿ. ಆಳ್ವ, ಪುರಸಭಾ ಸದ್ಯರಾದ ಪುಷ್ಪ ಶೇಟ್, ಜ್ಯೋತಿ , ಗುಣರತ್ನ, ಮಂಜುನಾಥ ಶೆಟ್ಟಿ ಪರಿಸರ ಅಭಿಯಂತರು, ಆರೋಗ್ಯ ನಿರೀಕ್ಷಕರಾದ ಶರತ್ ಎಸ್ ಖಾರ್ವಿ, ಕಿರಿಯ ಆರೋಗ್ಯ ನಿರೀಕ್ಷಕರಾದ ರಾಘವೇಂದ್ರ ಮಂಜುನಾಥ ನಾಯ್ಕ, ಪೌರಕಾರ್ಮಿಕರು ಮತ್ತು ಸದ್ರಿ ವಾರ್ಡಿನ ಸಾರ್ವಜನಿಕರು ಭಾಗವಹಿಸಿ ಉತ್ತಮ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಕೋಡಿ ಬ್ಯಾರೀಸ್ ಶಾಲೆ ರಾಮ ವಿದ್ಯಾಕೇಂದ್ರ ವಿಧ್ಯಾರ್ಥಿಗಳಿಗೆ ಮಂಜುನಾಥ ಶೆಟ್ಟಿ ಪರಿಸರ ಅಭಿಯಂತರು ಕುಂದಾಪುರ ಪುರಸಭೆ ಇವರು ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ವಿವರಣೆಯನ್ನು ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಮತ್ತು ಕುಂದಾಪುರ ವ್ಯಾಸರಾಜ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ವ್ಯಾಸರಾಜ ಮಠದ ಮಠಾಧೀಶರಾದ ಶ್ರೀಶ್ರೀಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳವರ ಚಾತುರ್ಮಾಸ ಕಾರ್ಯಕ್ರಮದ ಪೂರ್ವಭಾವಿ ಸಭೆಯು ನಡೆಯಿತು. ಕುಂದಾಪುರ ವ್ಯಾಸರಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ.ಲಕ್ಷ್ಮಣ್ ಮಾತನಾಡಿ ಮುನ್ನೂರು ವರ್ಷಗಳ ಬಳಿಕ ಕುಂದಾಪುರ ವ್ಯಾಸರಾಜ ಮಠದಲ್ಲಿ ಈಗೀನ ಸ್ವಾಮೀಜಿ ಲಕ್ಷ್ಮೀಂದ್ರ ತೀರ್ಥರ ಚಾತುರ್ಮಾಸ ಕಾರ್ಯಕ್ರಮ ನಡೆಯುತ್ತಿರುವುದು ಗಾಣಿಗ ಸಮಾಜದವರಾದ ನಮಗೆಲ್ಲರಿಗೂ ಹೆಮ್ಮೆ ಎನಿಸಿದೆ. ಈ ಪುಣ್ಯ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರ ಮೂಲಕ ಗಾಣಿಗ ಸಮಾಜದವರಾದ ನಾವೆಲ್ಲ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು. ಸ್ವಾಮೀಜಿವರ ಚಾತುರ್ಮಾಸಕ್ಕೆ ಪ್ರತಿಯೋರ್ವರು ಒಗ್ಗಟ್ಟಿನಿಂದ ಕೆಲಸ ಮಾಡಿ ಈ ಕಾರ್ಯಕ್ರಮದ ಯಶಸ್ವಿಗೆ ದುಡಿಯಬೇಕು. ಜತೆಗೆ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆಯುವುದರ ಮೂಲಕ ಸಮಾಜವನ್ನು ಬಲಪಡಿಸಬೇಕು ಎಂದರು. ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಕೆ.ಗೋಪಾಲ್ ಕಿನ್ನಿಮೂಲ್ಕಿ, ಕುಮಟ ಗಾಣಿಗ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಭಟ್ಕಳ ಗಾಣಿಗ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಹಳೆ ವಿದ್ಯಾರ್ಥಿಸಂಘದ ಉದ್ಘಾಟನೆಯನ್ನು ಮಾಡಿದ ಟಿ.ಬಾಲಚಂದ್ರ ಶೆಟ್ಟಿ ಹಿರಿಯ ವಕೀಲರು ಕುಂದಾಪುರ ಇವರು ತಮ್ಮ ಅನಿಸಿಕೆಗಳನ್ನು ವಿದ್ಯಾರ್ಥಿಗಳ ಜೊತೆಯಲ್ಲಿ ಹಂಚಿಕೊಂಡು ವ್ಯಕ್ತಿಯು ಯಾವತ್ತೂ ತಾನು ನಡೆದು ಬಂದ ಪಥವನ್ನು ಹಾಗೂ ಸಾಧನೆಗೆ ಪ್ರೇರೆಪಿಸಿದ ಶಾಲೆ, ಮಹಾವಿದ್ಯಾಲಯ ಹಾಗೂ ಬೋಧಕರನ್ನು ಯಾವತ್ತೂ ಮರೆಯಬಾರದು. ಯಾಕೆಂದರೆ, ನಮ್ಮ ಇವತ್ತಿನ ಏಳ್ಗೆಗೆ ಪ್ರಾಮಾಣಿಕವಾಗಿ ಹುರಿದುಂಬಿಸಿದವರು ಅವರಾಗಿರುತ್ತಾರೆ. ದೇಹ, ಮನಸ್ಸು ಹಾಗೂ ನಮ್ಮ ಕಾರ್ಯಗಳು ಅವರ ಆಶಿರ್ವಾದದೊಂದಿಗೆ ಮುಂದುವರಿಯಬೇಕು ಅಂದಾಗ ಮಾತ್ರ ಸಮಾಜದ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಹೇಳಿ ಹಳೇ ವಿದ್ಯಾರ್ಥಿಗಳ ಸಂಘ ಸಂಸ್ಥೆ ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯವನ್ನು ಮುಂದುವರಿಸಲು ಸಹಾಯಕವಾಗಲಿದೆ. ಅಲ್ಲದೇ, ಸಂಸ್ಥೆಯು ಇನ್ನು ಹೆಚ್ಚು ಏಳ್ಗೆಯನ್ನು ಕಾಣಲು ಈ ಸಂಘದ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರುಗಳಾದ ಶ್ರೀ. ಸುಭಾಶ್ಚಂದ್ರ ಶೆಟ್ಟಿ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆಯಲ್ಲಿ ಬ್ಯಾಂಕಿನ ಸಿಬ್ಬಂದಿಗಳ ವತಿಯಿಂದ ಜರಗಿದ ಬೀಳ್ಕೊಡುಗೆ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಕೆನರಾ ಬ್ಯಾಂಕಿನ ನಿವೃತ್ತ ಪ್ರಬಂಧಕ ಕೆ.ಪಿ.ಭಟ್ ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸುವುದು ಕಷ್ಟವಾಗಿದ್ದರೂ ಗ್ರಾಹಕರನ್ನು ಆತ್ಮೀಯತೆಯಿಂದ ನೋಡಿಕೊಂಡು ಹಾಗೂ ಗ್ರಾಹಕರ ಅವಶ್ಯಕತೆಗಳಿಗೆ ಸ್ಪಂದಿಸಿ ಉತ್ತಮ ಹೆಸರು ಗಳಿಸಿರುವ ಹಿರಿಯ ಪ್ರಬಂಧಕ ಓಸ್ವಾಲ್ಡ್ ಕಾರ್ವೆಲ್ಲೊ ನಿವೃತ್ತಿ ಹೊಂದುತ್ತಿರುವುದು ಬ್ಯಾಂಕಿಗೆ ತುಂಬಲಾರದ ನಷ್ಟವಾಗಿದೆ. ಬ್ಯಾಂಕಿನ ಗ್ರಾಹಕರು ಇಂತಹ ಉತ್ತಮ ಪ್ರಬಂಧಕರ ಸೇವೆಯನ್ನು ಸದಾ ಸ್ಮರಿಸುತ್ತಿರುತ್ತಾರೆ. ಇವರ ವೃತ್ತಿ ಜೀವನದ ಅನುಭವ ಹಾಗೂ ಸೇವೆ ಕಿರಿಯ ಸಿಬ್ಬಂದಿಗಳಿಗೆ ಮಾರ್ಗದರ್ಶನವಾಗಲಿದೆ ಎಂದು ಹೇಳಿದರು. ಕಳೆದ ಎರಡು ವರ್ಷಗಳಿಂದ ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆಯ ಹಿರಿಯ ಪ್ರಬಂಧಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿರುವ ಹಿರಿಯ ಶಾಖಾ ಪ್ರಬಂಧಕ ಓಸ್ವಾಲ್ಡ್ ಕಾರ್ವೆಲ್ಲೊ ಅವರನ್ನು ಸಿಬ್ಬಂದಿಗಳ ಪರವಾಗಿ ಅಭಿನಂದಿಸಿ ಬೀಳ್ಕೊಡಲಾಯಿತು. ಕೆನರಾ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 37 ವರ್ಷಗಳ ಕಾಲ ಸಲ್ಲಿಸಿದ ಸುಧೀರ್ಘ ಸೇವೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ವಿಭಾಗ ಸಹಾಯಕ ಆಯುಕ್ತ ಟಿ. ಭೂಬಾಲನ್ ಅವರು ತಾಲೂಕಿನ ವಕ್ವಾಡಿ ಹಾಗೂ ಹಕ್ಲಾಡಿ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರ ಪಾಠ ಬೋಧಿಸಿದರು. ಪಾಠ ಮಾಡುತ್ತಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ದೇಶದಲ್ಲಿ ಶೇ.26ರಷ್ಟು ಅನಕ್ಷರತೆ ಇದೆ. ಆದರೆ ದ.ಕ., ಉಡುಪಿಯಲ್ಲಿ ಎಲ್ಲರೂ ಸಾಕ್ಷರರಾಗಿದ್ದಾರೆ. ಎಲ್ಲರೂ ಶಿಕ್ಷಣ ಪಡೆಯಬೇಕು. ಈ ಮೂಲಕ ಸಾಮರಸ್ಯದ ಬದುಕು, ಪ್ರಾದೇಶಿಕ ಅಸಮತೋಲನ, ಭ್ರಷ್ಟಾಚಾರ, ಕೋಮು ಸಾಮರಸ್ಯದ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂದು ಕುಂದಾಪುರ ವಿಭಾಗ ಸಹಾಯಕ ಆಯುಕ್ತ ಟಿ. ಭೂಬಾಲನ್ ಹೇಳಿದರು. ದೇಶದ ಒಗ್ಗಟ್ಟು ಒಡೆದು ಆಳುವ ಡಿವೈಡಿಂಗ್ ಪಾಲಿಸಿ ಬ್ರಿಟಿಷರ ಕೊಡುಗೆ. ಅದನ್ನೆ ಇಂದು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಭಾಷೆಗಳ ನಡುವಿನ ಕಿತ್ತಾಟ, ಪ್ರಾದೇಶಿಕ ಅಸಮಾನತೆ, ಭ್ರಷ್ಟಾಚಾರ, ಅನಕ್ಷರತೆಗಳು ದೇಶದ ಅಭಿವೃದ್ಧಿಗೆ ತೊಡಕಾಗಿವೆ ಎಂದರು. ಹಕ್ಲಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಡಾ| ಕಿಶೋರ್ ಕುಮಾರ್ ಶೆಟ್ಟಿ , ಶಾಲಾಭಿವೃದ್ಧಿ ಸಮಿತಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿದ್ದ ಸಾಸ್ತಾನ ಕೋಡಿ ಕನ್ಯಾಣದ ನಿವಾಸಿ ಸಂತೋಷ ಕುಂದರ್ (29) ಶವವನ್ನು ದೂರು ನೀಡಿದ್ದ ಯುವತಿ ಮನೆ ಮುಂದಿರಿಸಿ ಪ್ರತಿಭಟಿಸಿದ ಘಟನೆ ರವಿವಾರ ನಡೆದಿದೆ. ಯುವತಿ ನೀಡಿದ ದೂರಿನಲ್ಲಿ ಯಾವುದೇ ಸತ್ಯಾಂಶವಿರಲಿಲ್ಲ. ಹೀಗಾಗಿ ಆತ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಿ ಸ್ಥಳೀಯರು ಯುವತಿ ಮನೆ ಎದುರು ಪ್ರತಿಭಟನೆ ನಡೆಸಿದರು. ಮೇ 2ರಿಂದ ನಾಪತ್ತೆಯಾಗಿದ್ದ ಸಂತೋಷ್ ವಿರುದ್ಧ ಸ್ಥಳೀಯ ಯುವತಿಯೋರ್ವಳು ಮೇ 2ರಂದು ಕೋಟ ಪೊಲೀಸ್ ಠಾಣೆಗೆ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದು, ಅಂದಿನಿಂದ ಆತ ಕಾಣೆಯಾಗಿದ್ದ. ಶನಿವಾರ ಆತ ಕಡೂರು ಬೀರೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಸಂತೋಷ ಕುಂದರ್ ಉತ್ತಮ ನಡತೆಯ ಯುವಕನಾಗಿದ್ದ. ಯುವತಿ ಆತನ ವಿರುದ್ಧ ದುರುದ್ದೇಶದಿಂದ ಈ ದೂರು ದಾಖಲಿಸಿದ್ದಾಳೆ. ತಪ್ಪು ಮಾಡದೆ ಶಿಕ್ಷೆ ಅನುಭವಿಸಬೇಕಾಯಿತು ಎನ್ನುವ ಬೇಸರದಲ್ಲಿ ಆತ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಹೆದ್ದಾರಿ ಬದಿಯಲ್ಲಿದ್ದು, ಕಳೆದ ವರ್ಷ ಕೊಡೇರಿ ರಸ್ತೆಯ ಕಟ್ಟಡಕ್ಕೆ ಸ್ಥಳಾಂತರಗೊಂಡು ಅಲ್ಲಿನ ನಿವಾಸಿಗಳ ತೀವ್ರ ವಿರೋಧ ಮತ್ತು ಕಾನೂನು ಹೋರಾಟದ ವಸ್ತುವಾದ ಬಾರ್ ಎಂಡ್ ರೆಸ್ಟೊರಂಟ್ ಪ್ರಕರಣದಲ್ಲಿ ಇದೀಗ ಜಿಲ್ಲಾಧಿಕಾರಿಗಳ ನ್ಯಾಯಾಲಯ ಜನರಪರ ತೀರ್ಪು ನೀಡಿದೆ. ಹೆದ್ದಾರಿ ಬದಿಯ ಬಾರ್‌ಗಳನ್ನು ತೆರವುಗೊಳಿಸುವಂತೆ ಸರ್ವೋಚ್ಛ ನ್ಯಾಯಾಲಯ ನೀಡಿದ ನಿರ್ದೇಶದನ್ವಯ ಈ ಬಾರನ್ನು ಸ್ಥಳಾಂತರಿಸಲು ಅವಕಾಶ ನೀಡಲಾಗಿತ್ತು. ಅದಕ್ಕೆ ಸ್ಥಳೀಯರಿಂದ ಪ್ರಬಲ ಪ್ರತಿರೋಧ ವ್ಯಕ್ತವಾಗಿತ್ತು. ಅದನ್ನು ಪರಿಗಣಿಸದೆ ಅಧಿಕಾರಿಗಳು ನೀಡಿದ ಅನುಮತಿಯ ವಿರುದ್ಧ ಜಿಲ್ಲಾ ಉಪ ಅಬಕಾರಿ ಆಯುಕ್ತರಿಗೆ, ಆ ಬಳಿಕ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇವು ತಿರಸ್ಕೃತವಾದ ಹಿನ್ನೆಲೆಯಲ್ಲಿ ಬಾರ್ ಸ್ಥಳಾಂತರಗೊಂಡು, ವ್ಯವಹಾರ ಆರಂಭಿಸಿತ್ತು. ಇದರಿಂದ ನೊಂದ ಗಿರಿಜಾ ರಾಜೇಶ್ ಮತ್ತು ೪೧ ಜನರು ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ ನ್ಯಾಯಾಲಯವು ’ಮೇಲ್ಮನವಿದಾರರ ಕೋರಿಕೆಯನ್ನು ಮಾನ್ಯ ಮಾಡುವುದಕ್ಕೆ ಯಾವುದೇ ಕಾನೂನಾತ್ಮಕ ತೊಡಕು ಇಲ್ಲವಾದ್ದರಿಂದ ಪ್ರಕರಣವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗಲ್ಫ್ ರಾಷ್ಟ್ರ ಕತಾರ್‌ನ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಸೋಸಿಯೇಶನ್ (ಕೆಎಂಸಿಎ)ನ 2018-19ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಇತ್ತಿಚೆಗೆ ಸಂಘದ ಸಭಾಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಇಬ್ರೈಜ್ ಖಾನ್, ಉಪಾಧ್ಯಕ್ಷರಾಗಿ ಇಕ್ಬಾಲ್ ಮನ್ನಾ, ಪ್ರಧಾನ ಕಾರ್ಯದರ್ಶಿಯಾಗಿ ಖಲೀಲ್ ಅಹ್ಮದ್, ಜೊತೆ ಕಾರ್ಯದರ್ಶಿಯಾಗಿ ಝಾಕೀರ್ ಅಹ್ಮದ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಅಬೂಬಕರ್, ಕ್ರೀಡಾ ಕಾರ್ಯದರ್ಶಿಯಾಗಿ ಶಕೀಲ್ ಅಹ್ಮದ್, ಸಲಹೆಗಾರರಾಗಿ ಅಬ್ದುಲ್ಲಾ ಮೋನು ಮೊಯ್ದಿನ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಫಯಾಜ್ ಅಹ್ಮದ್ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶಿರೂರು ರಾಗತರಂಗ ಟ್ರಸ್ಟ್ ನೂತನವಾಗಿ ಆರಂಭಿಸಿದ ರಾಗತರಂಗ ಸೇವಾಸಂಗಮ ಶಿಶುಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಯಳಜಿತ್ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದಜೀ ಮಕ್ಕಳಿಗೆ ಬಾಲ್ಯದಲ್ಲಿ ಭಾರತೀಯ ಸಂಸ್ಕೃತಿ ಆಧಾರಿತ ಹಾಗೂ ನೈತಿಕ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ದೇಶಪ್ರೇಮ ಬೆಳೆಸಲು ಪೋಷಕರು ಸಹಕರಿಸಬೇಕು. ಗುರುಹಿರಿಯರನ್ನು ಗೌರವಿಸುವ ಪ್ರವೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು. ಬಾಲ್ಯದಲ್ಲಿ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಮಕ್ಕಳು ದಾರಿ ತಪ್ಪದಂತೆ ಎಚ್ಚರವಹಿಸಿ ಜತೆಗೆ ಮಕ್ಕಳಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಂತಹ ಮಹತ್ಕಾರ್ಯವನ್ನು ಶಿಶು ಮಂದಿರಗಳು ನಿಸ್ವಾರ್ಥತೆಯಿಂದ ಮಾಡುತ್ತಿದೆ. ಸದಾ ಕ್ರಿಯಾಶೀಲವಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತಾ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತಿರುವ ಶಿಶು ಮಂದಿರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಾತಾಜಿಯವರ ಸೇವೆ ಮತ್ತು ತ್ಯಾಗ ಹಾಗೂ ಶಿಶುಮಂದಿರದ ಕಾರ್ಯ ಅವಿಸ್ಮರಣೀಯ ಎಂದು ಸ್ವಾಮೀಜಿ ಶ್ಲಾಘಿಸಿದರು. ಕುಂದಾಪುರ ಸೇವಾಸಂಗಮ ಟ್ರಸ್ಟ್‌ನ ವಿಶ್ವಸ್ಥ ಸುಬ್ರಹ್ಮಣ್ಯ ಹೊಳ್ಳ, ಕಾರ್ಯದರ್ಶಿ ಚಂದ್ರಿಕಾ ಧನ್ಯ, ಗೋಪಾಲಕೃಷ್ಣ ಶಿರೂರು, ಕಟ್ಟಡ ಮಾಲೀಕ ರಮೇಶ…
