Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕಳವಾಡಿಯ ‘ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ’ದ ನೂತನ ಶಿಲಾಮಯ ಗರ್ಭಗುಡಿಯ ಕೆಲಸ ಪ್ರಗತಿಯಲ್ಲಿದ್ದು ದೇವಸ್ಥಾನದ ‘ನಾಗಬನ’ ನಿರ್ಮಾಣಕ್ಕೆ ತಗಲುವ ರೂ. 1,00,000 ವೆಚ್ಚವನ್ನು ಕಳವಾಡಿಯ ಶ್ರೀ ಮಾರಿಕಾಂಬಾ ಯುತ್ ಕ್ಲಬ್’ನ ಸದಸ್ಯರು ದೇವಸ್ಥಾನದ ಜೀರ್ಣೋದ್ದಾರ ಸಮಿತಿಗೆ ಹಸ್ತಾಂತರ ಮಾಡಲಾಯಿತು . ಈ ಸಂದರ್ಭದಲ್ಲಿ ಶ್ರೀ ಮಾರಿಕಾಂಬಾ ಯುತ್ ಕ್ಲಬ್ ಕಳವಾಡಿ ಇದರ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಕಳವಾಡಿ, ಪೂರ್ವಾಧ್ಯಕ್ಷ ಪ್ರದೀಪ ಕುಮಾರ್ ಕಾರಿಕಟ್ಟೆ, ಕಾರ್ಯದರ್ಶಿ ಸುಬ್ರಹ್ಮಣ್ಯ ಪೂಜಾರಿ, ಪ್ರವೀಣ ಕಳವಾಡಿ, ಕೃಷ್ಣ ಕಳವಾಡಿ, ಗಣಪತಿ ಪೂಜಾರಿ  ಸಂಸ್ಥೆಯ ಸರ್ವ ಸದಸ್ಯರು ಹಾಜರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಯಡ್ತರೆ ಜೆ.ಎನ್‌.ಆರ್. ಕಲಾಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೈಂದೂರು ನೂತನ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಅವರು ಮಾತನಾಡಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಗಲಿರುಳೆನ್ನದೇ ದುಡಿದ ಪರಿಶ್ರಮದ ಫಲವಾಗಿ ಈ ಭಾರಿ ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ೨೪ ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯದ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಜೀವನದಲ್ಲಿ ಎಂದೂ ಸೋಲನ್ನು ಕಾಣದ ನನಗೆ ಕಳೆದ ಚುನಾವಣೆಯ ಸೋಲು ಸ್ವಲ್ಪಮಟ್ಟಿನ ಆಘಾತವಾದರೂ ಕೂಡಾ ಧೃತಿಗೆಡದೇ ಐದು ವರ್ಷಗಳಕಾಲ ಕ್ಷೇತ್ರದ ಜನರ ಸಂಪರ್ಕ ಇಟ್ಟುಕೊಂಡು ಅವರೆಲ್ಲರ ವಿಶ್ವಾಸಗಳಿದ್ದೇನೆ. ಆ ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಅತ್ಯಧಿಕ ಮತಗಳಿಂದ ನನಗೆ ಆಶೀರ್ವದಿಸಿದ್ದಾರೆ. ನನ್ನ ಜೀವನ, ನಾನು ಮಾಡುವ ವ್ಯವಹಾರಗಳು ತೆರೆದಿಟ್ಟ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಕೊಲ್ಲೂರು ದೇವಳದ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ನಿಫಾ ವೈರಸ್ ಸೋಂಕು ಕುರಿತು ಮುಂಜಾಗ್ರತಾ ಸಭೆ ನಡೆಸಲಾಯಿತು. ಈ ತರ್ತುಸಭೆಯಲ್ಲಿ ಕೊಲ್ಲೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೆನಿಟಾ ಫೆರ್ನಾಂಡೀಸ್ ಅವರು ನೆರೆಯ ಕೇರಳದಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ನಿಫಾ ವೈರಸ್ ಸೋಂಕು ಪ್ರಕರಣ ಕೊಲ್ಲೂರು ಭಾಗಗಳಲ್ಲಿ ಈವರೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಹಾಗೂ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಕ್ಷೇತ್ರಕ್ಕಾಗಮಿಸುವ ಭಕ್ತರ ಮತ್ತು ವಸತಿಗೃಹಗಳಲ್ಲಿ ಉಳಿದುಕೊಳ್ಳುವವರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ದೇವಳದ ಆಡಳಿತ ಮಂಡಳಿ, ವ್ಯವಸ್ಥಾಪನಾ ಸಮಿತಿ ಮತ್ತು ಗ್ರಾಮ ಪಂಚಾಯತ್ ಜತೆಗೂಡಿ ಮುನ್ನೆಚ್ಚಿರಿಕಾ ಕ್ರಮಕೈಗೊಳ್ಳಲಾಗಿದೆ. ಯಾತ್ರಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಅಂತವರ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಪ್ರಥಮ ತುರ್ತು ಚಿಕಿತ್ಸಾ ವಿಭಾಗ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸಲಿದೆ. ಸಿಬ್ಬಂದಿಗಳ ಕೊರತೆಯಿದ್ದರೂ ಇರುವ ಸಿಬ್ಬಂದಿಗಳು ಪ್ರತಿ ಮನೆಮನೆಗೂ ತೆರಳಿ ರೋಗದ ಲಕ್ಷಣಗಳು, ಬರದಂತೆ ತಡೆಯುವ ಕುರಿತು ಮತ್ತು ಮುನ್ನೆಚ್ಚರಿಕಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಜೇಸಿಐ ಮಂಗಳೂರು ಸಾಮ್ರಾಟ್ ಇವರು ವಿಶೇಷ ಆಕರ್ಷಣಾ ಕಾರ್ಯಕ್ರಮವಾದ ”ಅಶ್ವಮೇಧ” “PEACE IS POSSIBLE”* ಎಂಬ ಧ್ಯೇಯದೊಂದಿಗೆ ಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಂಡ ಯಾತ್ರೆ 26/5/2018 ರಂದು ಮಂಗಳೂರಿಂದ ಪ್ರಾರಂಭಿಸಿದರು. ಈ ಅಶ್ವಮೇಧ ಯಾತ್ರೆಯು 31/5/2018 ಕ್ಕೆ ಮಂಗಳೂರಿನಲ್ಲಿ ಕೊನೆಗೊಳ್ಳಲಿದೆ. ಈ ಅಶ್ವಮೇಧ ಯಾತ್ರೆಗೆ ಕುಂದಾಪುರ ,ಜೇಸಿಐ ಕುಂದಾಪುರ ಹಾಗೂ ಜೆಸಿಐ ಸಾಸ್ತಾನ ವೈಬ್ರಂಟ್ ನವರು ಸ್ವಾಗತಿಸಿ, ಶುಭ ಹಾರೈಸಿದರು. ಹಾಗೆಯೇ ಜೇಸಿಐ ಭವನದ ಮಹಮ್ಮದ್ ಅನ್ವರ್ ವೇದಿಕೆಯಲ್ಲಿ ,ಯಾತ್ರೆ ಯ ನೇತೃತ್ವ ವಹಿಸಿದ ಜೇಸಿಐ ಸಾಮ್ರಾಟನ ಅಧ್ಯಕ್ಷ ರಾಘವೇಂದ್ರ ಹೊಳ್ಳರನ್ನು ಗೌರವಿಸಿ ಸನ್ಮಾನಿಸಲಾಯಿತು. ಕುಂದಾಪುರ ಜೇಸಿಐ ಅಧ್ಯಕ್ಷ ಜೇಸಿ ಶ್ರೀನಾಥ್ ಗಾಣಿಗ ಅಧ್ಯಕ್ಷ ತೆ ವಹಿಸಿದ್ದರು. ವೇದಿಕೆಯಲ್ಲಿ ಜಿ&ಡಿ ನಿರ್ದೇಶಕರಾದ ಕಾರ್ತಿಕೇಯ ಮಧ್ಯಸ್ಥರವರು,ಜೇಸಿ ಸುರತ್ಕಲ್ ಅಧ್ಯಕ್ಷ ರಾದ ಪ್ರವೀಣ್ ಶೆಟ್ಟಿ, ಜೇಸಿ ಸಾಸ್ತಾನ ವೈಬ್ರೆಂಟ್ ನ ಅಧ್ಯಕ್ಷ ರಾದ ಕೇಶವ್ ಆಚಾರ್, ಕಾರ್ಯದರ್ಶಿ ಜೇಸಿ ಚೇತನ್, ಜೇಸಿಐ ನ ಕುಂದಾಪುರ ರ ಸದಸ್ಯರಾದ ನಿತಿನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೆಂಗಳೂರು: ದುಬೈನ ಉದ್ಯಮಿ, ಬೈಂದೂರು ತಾಲೂಕಿನ ನಾಗೂರಿನ ದಿನೇಶ್ ಚಂದ್ರಶೇಖರ ದೇವಾಡಿಗ ಅವರು ಇತ್ತಿಚಿಗೆ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದು, ಬೆಂಗಳೂರಿನಲ್ಲಿ ಜರುಗಿದ 43 ನೇ ಆರ್ಯಭಟ ಅಂತರಾಷ್ಟ್ರೀಯ ಸಮಾರಂಭದಲ್ಲಿ ಪ್ರಧಾನಿಸಲಾಯಿತು. ಪ್ರಸ್ತುತ ದಬೈನಲ್ಲಿ ನೆಲೆಸಿರುವ ಇವರು ಎಲಿಗೆಂಟ್ ಗ್ರೂಫ್ ಆಫ್ ಕಂಪನಿ ಶಾರ್ಜಾ, ದುಬೈ, ಅಬುದಾಬಿಯ ಮ್ಯಾನೇಜಿಂಗ್ ಡೈರೆಕ್ಟರ್‌ರಾಗಿ ಕಾರ್ಯನಿರ್ವಹಿಸಿರುತ್ತಾರೆ. ಹಾಗೂ ಕುಂದಾಪುರ ದೇವಾಡಿಗ ಮಿತ್ರ ದುಬೈ ಇದರ ಅಧ್ಯಕ್ಷರಾಗಿ , ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ ರಿ. ಬಾರ್ಕೂರು ಇದರ ವಿಶ್ವಸ್ಥರಾಗಿಯೂ ಮತ್ತು ನಮ್ಮ ಕುಂದಾಪುರ ಕನ್ನಡ ಬಳಗ ದುಬೈ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವ ಇವರು ಸಾಮಾಜಿಕ, ಸಾಂಸ್ಕ್ರತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆಯು ಪ್ರತಿ ವರ್ಷದಂತೆ ಈ ಬಾರಿ ಕೂಡ ಶಿಕ್ಷಕಿಯರಿಗಾಗಿ ವಿಶೇಷ ಕಾರ‍್ಯಾಗಾರವೊಂದನ್ನು ಆಯೋಜಿಸಿತ್ತು. ಈ ಕಾರ‍್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ.ಶೆರಿನ್.ಪಿ ಆಂತೋನಿ, ಮೇಲ್ವಿಚಾರಕಿ/ನಿರ್ದೇಶಕಿ ಹಾಗೂ ಮಕ್ಕಳ ಮನೋತಜ್ಞೆ ಬೆಂಗಳೂರು ಮತ್ತು ಕು. ರಕ್ಷಿತಾ ಜೊತೆಗಿದ್ದರು. ವಿಶೇಷ ಚಟುವಟಿಕೆಯನ್ನು ಶಿಕ್ಷಕಿಯರಿಗೆ ನೀಡಲಾಯಿತು ಹಾಗೂ ವಿವಿಧ ವಸ್ತುಗಳನ್ನು ನೆಲದ ಮೇಲೆ ಕ್ರಮವಾಗಿ ಜೋಡಿಸಲಾಗಿತ್ತು. ಶಿಕ್ಷಕಿಯರು ಒಂದು ವಸ್ತುವನ್ನು ಆಯ್ಕೆ ಮಾಡಿ ಆ ವಸ್ತುವಿನ ಗುಣ ವಿಶೇಷದ ಜೊತೆ ನಮ್ಮ ಯಾವ ಗುಣವನ್ನು ಹೊಂದಾಣಿಕೆ ಮಾಡಬಹುದು ಎಂಬುದನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತೋರಿಸಿದರು. ಈ ರೀತಿಯ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳನ್ನು ಶಿಕ್ಷಕಿಯರಿಗೆ ತಿಳಿಸಿದರು. ತರಗತಿ ಕೋಣೆಯಲ್ಲಿ ಮಕ್ಕಳನ್ನು ಪ್ರಾಯೋಗಿಕವಾಗಿ ವಿವಿಧ ಕಾರ‍್ಯ ಚಟುವಟಿಕೆಗಳಲ್ಲಿ ಹೇಗೆ ತೋಡಗಿಸಿಕೊಳ್ಳಬಹುದು ಹಾಗೂ ಮಕ್ಕಳು ಸ್ವ ಇಚ್ಛೆಯಿಂದ ತಮ್ಮ ಅಭಿಪ್ರಾಯ ಆಲೋಚನೆಗಳನ್ನು ಹೇಗೆ ಕ್ರಿಯಾಶೀಲವಾಗಿ ಹೊರಹಾಕಲು ಬೇಕಾದ ವಾತಾವರಣವನ್ನು ಹೇಗೆ ಸೃಷ್ಟಿಸಬಹುದು ಎಂಬುದನ್ನು ತಿಳಿಸಿದರು. ಮಕ್ಕಳ ಜೊತೆಗಿನ ಶಿಕ್ಷಕರ…

Read More

ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದ ಚಾರ್ಸಾಲು ವಿದ್ಯುತ್ ಸಂಪರ್ಕ ವಂಚಿತ ಗ್ರಾಮವಾಗಿತ್ತು. ರಕ್ಷತಾರಣ್ಯದ ತಪ್ಪಲಿನ ಪ್ರದೇಶವಾಗಿದ್ದರಿಂದ ವಿದ್ಯುತ್ ಸಂಪರ್ಕಕ್ಕೆ ಅರಣ್ಯ ಇಲಾಖೆ ತೊಡಕುಂಟುಮಾಡಿತ್ತು. ಪರಿಣಾಮವಾಗಿ ಕೃಷಿ ಹಾಗೂ ಕೂಲಿ ಕೆಲಸವನ್ನೇ ನೆಚ್ಚಿಕೊಂಡಿರುವ ಮರಾಠಿ ಸಮುದಾಯದ ಸುಮಾರು 24 ಮನೆಗಳಿರುವ, 150ಕ್ಕೂ ಹೆಚ್ಚು ಮಂದಿ ವಾಸಿಸುತ್ತಿರುವ ಈ ಪುಟ್ಟ ಗ್ರಾಮ ವಿದ್ಯುತ್ ವಂಚಿತವಾಗಿಯೇ ಉಳಿದಿತ್ತು. ಆ ಪುಟ್ಟ ಹಳ್ಳಿಯ ಮನೆಗಳಲ್ಲಿ ಪ್ರಥಮ ಭಾರಿಗೆ ವಿದ್ಯುತ್ ದೀಪ ಬೆಳಗಿದೆ. ಹಲವು ದಶಕಗಳ ಗ್ರಾಮಸ್ಥರ ಬೇಡಿಕೆಗೆ ಕೊನೆಗೂ ಶಾಶ್ವತ ಫಲ ದೊರೆತಿದೆ. ಅಲ್ಲಿನ ಜನರ ಮನೆ ಮನಗಳಲ್ಲಿ ಸಂತಸದ ಬೆಳಕು ಮೂಡಿದೆ. ವಿದ್ಯುತ್ ಸಂಪರ್ಕಕ್ಕಾಗಿ ಹಲವು ದಶಕಗಳಿಂದ ಹೋರಾಡುತ್ತಲೇ ಬಂದಿದ್ದ ಈ ಭಾಗದ ಜನರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬೇಡಿಕೆ ಇಡುತ್ತಲೇ ಬಂದಿದ್ದರು. ಈ ಭಾಗದ ಮೂಲ ಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಪತ್ರಿಕೆಗಳೂ ಕೂಡ ಆಡಳಿತ ವರ್ಗವನ್ನು ಎಚ್ಚರಿಸುತ್ತಲೇ ಬಂದಿದ್ದವು. ಪರಿಣಾಮವಾಗಿ ಅಂದಿನ ಶಾಸಕಾಗಿದ್ದ ಕೆ. ಲಕ್ಷ್ಮೀನಾರಾಯಣ ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಜೆಡಿಎಸ್ – ಕಾಂಗ್ರೇಸ್ ಜಂಟೀ ಸರಕಾರದಿಂದ ಕರ್ನಾಟಕ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಕುಮಾರಸ್ವಾಮೀ ನೇತೃತ್ವದ ಸರಕಾರಕ್ಕೆ ದೇವರ ಅನುಗ್ರಹ ಇರಲಿ ಹಾಗೂ ರಾಜ್ಯ ಜನತೆಗೆ ಒಳಿತಾಗಲಿ ಎಂದು ಬೈಂದೂರು ಜೆಡಿಎಸ್ ಕಾರ್ಯಕರ್ತರು ಕೊಲ್ಲೂರು ಮುಕಾಂಬಿಕಾ ದೇವಾಲಯದಲ್ಲಿ ಶ್ರೀದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕರಾದ ಹರೀಶ್ ಶೆಟ್ಟಿ, ಬೈಂದೂರು ಬ್ಲಾಕ್ ಅಧ್ಯಕ್ಷ ಯು. ಸಂದೇಶ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಶೆಟ್ಟಿ ಬೈಂದೂರು, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜಯಶೀಲ ಶೆಟ್ಟಿ, ಉಪಾಧ್ಯಕ್ಷ ರಾಜು ದೇವಾಡಿಗ ಬ್ಲಾಕ್ ವಕ್ತಾರ ಗುರುರಾಜ್ ಶೆಟ್ಟಿ, ಕೊಲ್ಲೂರು ಘಟಕದ ಅಧ್ಯಕ್ಷ ಮಾರುತಿ ಮೊಗವೀರ ಹಾಗೂ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಂ ಸುದ್ದಿ ಬೈಂದೂರು: ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ರಿ. ಕಳವಾಡಿ-ಬೈಂದೂರು ಸಂಸ್ಥೆ ಹಾಗೂ ಬಸ್ರೂರು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಅಂಗವಿಕಲಚೇತನರಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ಕಳವಾಡಿಯ ಮಾತೃಭೂಮಿಯ ವಠಾರದಲ್ಲಿ ನಡೆಯಿತು. ಬಸ್ರೂರು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮುಖ್ಯಸ್ಥ ರಾಜೀವ ಶೆಟ್ಟಿ ಹಾಗೂ ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿ ಸಂಸ್ಥೆಯ ಗೌರವ ಸಲಹೆಗಾರ ವಸಂತ ಹೆಗ್ಡೆ ಕಳವಾಡಿ ಇವರ ಸಹಕಾರದೊಂದಿಗೆ ಅಂಗವಿಕಲ ಚೇತನರಿಗೆ ಉಚಿತ ಸೈಕಲ್ ವಿತರಣೆ ಮಾಡಿದರು. ಸಂಸ್ಥೆಯಿಂದ ಆಯ್ಕೆ ಮಾಡಿದ ಎಲ್ಲಾ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡರು. ಮುಖ್ಯಅತಿಥಿಯಾಗಿ ಆಗಮಿಸಿ ನಿವೃತ್ತ ಸೈನಕ ಮಹಾಬಲ ನಾಗುಮನೆ ಕಳವಾಡಿ ಇವರು ಅಂಗ ವಿಕಲಚೇತನರಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬರೂ ಆರೋಗ್ಯವಂತ ಆಗಿದ್ದಾರೆ ಮಾತ್ರ ಬಲಿಷ್ಠವಾದ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಮಾಜದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬಿರುತ್ತದೆ. ಇಂತಹ ಸಂಘ ಸಂಸ್ಥೆಗಳು ಬಡ ಅಂಗವಿಕಲ ಚೇತನರಿಗೆ ಉಚಿತ ಸೈಕಲ್…

Read More

ಕುಂದಾಪ್ರ ಡಾಟ್ ಕಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ  ನಿನಾದ ಸಂಸ್ಥೆಯ 13ನೇ ವಾರ್ಷಿಕೋತ್ಸವ ಜರುಗಿತು. ಸಮಾರಂಭವನ್ನು ಉದ್ದೇಶಿಸಿ ಕೊಕ್ಕರ್ಣೆಯ ಉದ್ಯಮಿ ಎಚ್.ಹರೀಶ ಶ್ಯಾನುಭಾಗ್ ಮಾತನಾಡಿ ದೇಶ ವಿದೇಶಗಳಲ್ಲಿ ನೆಲೆಸಿರುವ ಗೌಡ ಸಾರಸ್ವತ ಸಮಾಜಬಾಂಧವರು ತಮ್ಮದೇ ಆದ ಉದ್ಯಮ, ಉದ್ಯೋಗ ನಡೆಸಿ ಸಮಾಜದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಸಮಾಜದ ಪ್ರತಿಯೊಬ್ಬರು ಮುಖ್ಯವಾಹಿನಿಗೆ ಬರಬೇಕು ಮತ್ತು ಅವರು ಅಭಿವೃದ್ಧಿ ಹೊಂದಬೇಕು ಎಂಬ ಸದುದ್ದೇಶ ಸಮಾಜದ ಪ್ರತಿಯೊಬ್ಬರಲ್ಲೂ ಮೂಡಬೇಕು. ಕಾಲೆಳೆಯುವ ಪ್ರವೃತಿಯನ್ನು ಬಿಟ್ಟು ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು. ನಿನಾದ ಸಂಸ್ಥೆಯು ಕಳೆದ 13 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಾ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಉತ್ತಮ ಚಟುವಟಿಕೆ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಪ್ರತಿನಿಧಿ ಜಿ.ವೆಂಕಟೇಶ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.…

Read More