ಬೈಂದೂರು: ವಿಕಲಚೇತನರಿಗೆ ಉಚಿತ ಸೈಕಲ್ ವಿತರಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಂ ಸುದ್ದಿ
ಬೈಂದೂರು: ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ರಿ. ಕಳವಾಡಿ-ಬೈಂದೂರು ಸಂಸ್ಥೆ ಹಾಗೂ ಬಸ್ರೂರು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಅಂಗವಿಕಲಚೇತನರಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ಕಳವಾಡಿಯ ಮಾತೃಭೂಮಿಯ ವಠಾರದಲ್ಲಿ ನಡೆಯಿತು.

Call us

Click Here

ಬಸ್ರೂರು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮುಖ್ಯಸ್ಥ ರಾಜೀವ ಶೆಟ್ಟಿ ಹಾಗೂ ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿ ಸಂಸ್ಥೆಯ ಗೌರವ ಸಲಹೆಗಾರ ವಸಂತ ಹೆಗ್ಡೆ ಕಳವಾಡಿ ಇವರ ಸಹಕಾರದೊಂದಿಗೆ ಅಂಗವಿಕಲ ಚೇತನರಿಗೆ ಉಚಿತ ಸೈಕಲ್ ವಿತರಣೆ ಮಾಡಿದರು. ಸಂಸ್ಥೆಯಿಂದ ಆಯ್ಕೆ ಮಾಡಿದ ಎಲ್ಲಾ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡರು.

ಮುಖ್ಯಅತಿಥಿಯಾಗಿ ಆಗಮಿಸಿ ನಿವೃತ್ತ ಸೈನಕ ಮಹಾಬಲ ನಾಗುಮನೆ ಕಳವಾಡಿ ಇವರು ಅಂಗ ವಿಕಲಚೇತನರಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬರೂ ಆರೋಗ್ಯವಂತ ಆಗಿದ್ದಾರೆ ಮಾತ್ರ ಬಲಿಷ್ಠವಾದ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಮಾಜದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬಿರುತ್ತದೆ. ಇಂತಹ ಸಂಘ ಸಂಸ್ಥೆಗಳು ಬಡ ಅಂಗವಿಕಲ ಚೇತನರಿಗೆ ಉಚಿತ ಸೈಕಲ್ ಕಾರ್ಯಕ್ರಮ ಏರ್ಪಡಿಸುವ ಮೂಲಕ ಸಮಾಜ ನಿರ್ಮಾಣಕ್ಕೆ ಒತ್ತು ಕೊಡಬೇಕಿದೆ. ನಾಗರಿಕ ಸಮಾಜದಲ್ಲಿ ಇರುವ ನಾವು ಕಷ್ಟದಲ್ಲಿರುವವರಿಗೆ ನಮ್ಮ ಕೈಯಲಾದ ಸಹಾಯ ಮಾಡಬೇಕು, ಅದರಿಂದ ಸಿಗುವಷ್ಟು ಆತ್ಮತೃಪ್ತಿ ಬೇರೆ ಯಾವುದರಿಂದ ಸಿಗುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಆಚಾರ್ಯ ಕಳವಾಡಿ, ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಾರಿಕಟ್ಟೆ, ಸಂಸ್ಥೆಯ ಕಾರ್ಯದರ್ಶಿ ಸುಬ್ರಹ್ಮಣ್ಯ ಪೂಜಾರಿ, ಪ್ರವೀಣ ಕಳವಾಡಿ, ಗಣೇಶ್ ಕಳವಾಡಿ, ಕೃಷ್ಣ ಕಳವಾಡಿ, ಗಣಪತಿ ಪೂಜಾರಿ, ರಾಜು ಟೈಲರ್ ಯಡ್ತರೆ ಹಾಗೂ ಸಂಸ್ಥೆಯ ಸರ್ವಸದಸ್ಯರು ಹಾಜರಿದ್ದರು.

 

Click here

Click here

Click here

Click Here

Call us

Call us

Leave a Reply