ಪುಟ್ಟ ಹಳ್ಳಿಯ ದಶಕಗಳ ಬೇಡಿಕೆ ನೀಗಿತು. ಚಾರ್ಸಾಲುವಿನಲ್ಲಿ ವಿದ್ಯುತ್ ಬೆಳಗಿತು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು: ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದ ಚಾರ್ಸಾಲು ವಿದ್ಯುತ್ ಸಂಪರ್ಕ ವಂಚಿತ ಗ್ರಾಮವಾಗಿತ್ತು. ರಕ್ಷತಾರಣ್ಯದ ತಪ್ಪಲಿನ ಪ್ರದೇಶವಾಗಿದ್ದರಿಂದ ವಿದ್ಯುತ್ ಸಂಪರ್ಕಕ್ಕೆ ಅರಣ್ಯ ಇಲಾಖೆ ತೊಡಕುಂಟುಮಾಡಿತ್ತು. ಪರಿಣಾಮವಾಗಿ ಕೃಷಿ ಹಾಗೂ ಕೂಲಿ ಕೆಲಸವನ್ನೇ ನೆಚ್ಚಿಕೊಂಡಿರುವ ಮರಾಠಿ ಸಮುದಾಯದ ಸುಮಾರು 24 ಮನೆಗಳಿರುವ, 150ಕ್ಕೂ ಹೆಚ್ಚು ಮಂದಿ ವಾಸಿಸುತ್ತಿರುವ ಈ ಪುಟ್ಟ ಗ್ರಾಮ ವಿದ್ಯುತ್ ವಂಚಿತವಾಗಿಯೇ ಉಳಿದಿತ್ತು.

Call us

Click Here

ಆ ಪುಟ್ಟ ಹಳ್ಳಿಯ ಮನೆಗಳಲ್ಲಿ ಪ್ರಥಮ ಭಾರಿಗೆ ವಿದ್ಯುತ್ ದೀಪ ಬೆಳಗಿದೆ. ಹಲವು ದಶಕಗಳ ಗ್ರಾಮಸ್ಥರ ಬೇಡಿಕೆಗೆ ಕೊನೆಗೂ ಶಾಶ್ವತ ಫಲ ದೊರೆತಿದೆ. ಅಲ್ಲಿನ ಜನರ ಮನೆ ಮನಗಳಲ್ಲಿ ಸಂತಸದ ಬೆಳಕು ಮೂಡಿದೆ.

ವಿದ್ಯುತ್ ಸಂಪರ್ಕಕ್ಕಾಗಿ ಹಲವು ದಶಕಗಳಿಂದ ಹೋರಾಡುತ್ತಲೇ ಬಂದಿದ್ದ ಈ ಭಾಗದ ಜನರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಬೇಡಿಕೆ ಇಡುತ್ತಲೇ ಬಂದಿದ್ದರು. ಈ ಭಾಗದ ಮೂಲ ಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಪತ್ರಿಕೆಗಳೂ ಕೂಡ ಆಡಳಿತ ವರ್ಗವನ್ನು ಎಚ್ಚರಿಸುತ್ತಲೇ ಬಂದಿದ್ದವು. ಪರಿಣಾಮವಾಗಿ ಅಂದಿನ ಶಾಸಕಾಗಿದ್ದ ಕೆ. ಲಕ್ಷ್ಮೀನಾರಾಯಣ ಅವರು ವಿದ್ಯುತ್ ಸಂಪರ್ಕ ಕೊಡಿಸುವ ಬಗ್ಗೆ ಆರಂಭದಲ್ಲಿ ಪ್ರಯತ್ನಿಸಿದ್ದರು. ಬಳಿಕ ಶಾಸಕರಾಗಿ ಬಂದ ಕೆ. ಗೋಪಾಲ ಪೂಜಾರಿಯವರು ನಿರಂತರವಾಗಿ ವಿದ್ಯುತ್ ಸಂಪರ್ಕದ ಪ್ರಸ್ತಾಪವನ್ನಿರಿಸಿಕೊಂಡು ಎಲ್ಲಾ ಇಲಾಖೆಗಳೊಂದಿಗೂ ಸಮನ್ವಯ ಸಾಧಿಸಿ ವಿದ್ಯುತ್ ಸಂಪರ್ಕ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಅರಣ್ಯ ಭಾಗದಲ್ಲಿ ಕೇಬಲ್ ಹಾಗೂ ಉಳಿದ ಭಾಗಗಳಲ್ಲಿ ಲೈನ್ ಎಳೆದು ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕಾಮಗಾರಿ ಭರದಿಂದ ನಡೆಸಿ ಇಲ್ಲಿನ ಮನೆಗಳು ವಿದ್ಯುತ್ ಬೆಳಕು ಕಂಡಿವೆ.

ಗ್ರಾಮದ ರಸ್ತೆ ಅಭಿವೃದ್ಧಿ:
ಚಾರ್ಸಾಲುವಿಗೆ ತೆರಳುವ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗಿದ್ದು, ಗ್ರಾಮಸ್ಥರಿಗೆ ಸರ್ವಋತು ರಸ್ತೆ ಆಗಿದೆ. ಇನ್ನೂ ಸ್ವಲ್ಪ ಭಾಗ ಬಾಕಿ ಉಳಿದಿದ್ದು, ನೂತನ ಶಾಸಕರು ಗ್ರಾಮದ ಬೇಡಿಕೆಯನ್ನು ಈಡೆರಿಸುವರೆಂಬ ಭರವಸೆಯಲ್ಲಿ ಗ್ರಾಮಸ್ಥರಿದ್ದಾರೆ.

Click here

Click here

Click here

Click Here

Call us

Call us

Leave a Reply