Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ನಿರಂತರ ಚಟುವಟಿಕೆಗಳನ್ನು ಕಂಡು ಬೆಂಗಳೂರಿನ ಉದ್ಯಮಿ ನಾರಾಯಣ ಹರಿದಾಸ್ ಕಾಮತ್ ರವರು ಸಿ.ಸಿ.ಕ್ಯಾಮೆರಾ ಹಾಗೂ ಟಾಟಾ ಮೋಟರ್ ಫೈನಾನ್ಸ್ ಉಪಾಧ್ಯಕ್ಷರಾದ ಸುಜೀರ್ ಲಕ್ಷ್ಮೀನಾರಾಯಣ ನಾಯಕ್ ಸೋಲಾರ್ ಲೈಟ್‌ನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರಿಬ್ಬರನ್ನೂ ಇತ್ತೀಚೆಗೆ ಗೊಂಬೆಯಾಟ ಅಕಾಡೆಮಿಯ ವತಿಯಿಂದ ಗೊಂಬೆ ಮನೆಯಲ್ಲಿ ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು ,ಕನ್ನಡ ಸಾಹಿತ್ಯ ಪರಿಷತ್ತು ,ರಘುನಾಥ್ ನಾಯಕ್, ಮಾಜಿ ಡೆಪ್ಯೂಟಿ ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್, ಕೊಂಕಣ್ ರೈಲ್ವೆ , ಪ್ರೊ. ವರದೇಶ್ ಹಿರೇಗಂಗೆ, ಮುಖ್ಯಸ್ಥರು, ಗಾಂಧಿಯನ್ ಸೆಂಟರ್ ಫಾರ್ ಫಿಲೋಸೊಫಿಕಲ್ ಆಟ್ಸ್ ಆಂಡ್ ಸೈನ್ಸ್, ಮಾಹೆ, ಮಣಿಪಾಲ, ನಿವೃತ್ತ ಉಪನ್ಯಾಸಕ ಪ್ರೊ. ವೆಂಕಟೇಶ್ ಪೈ, ಪತ್ರಿಕೆ ವರದಿಗಾರರಾದ ಜಾನ್ ಡಿ’ಸೋಜಾ, ಕಾಸರಗೋಡಿನ ಉದ್ಯಮಿ ಸದಾಶಿವ ಭಟ್, ಮಣಿಪಾಲದ ಪನವಾರ ಕೊಂಕಣಿ ಮಾಸ ಪತ್ರಿಕೆಯ ಸಂಪಾದಕ ಜ್ಞಾನದೇವ ಮಲ್ಯ ಮುಂತಾದ ಗಣ್ಯರ ಸಮ್ಮಖದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್‌ರು ಸನ್ಮಾನಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಹಾಗೂ ಮಾರಿಕಾಂಬಾ ಮಹಿಳಾ ಸಂಘ ಕೊಡಪಾಡಿ ಗುಜ್ಜಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಿದ್ದ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಭಾನುವಾರ ನಡೆಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಮಾತನಾಡಿ, ಮಹಿಳೆಯರ ಸಬಲೀಕರಣ ಆಗಬೇಕು ಪ್ರತಿಯೊಬ್ಬ ಮಹಿಳೆ ಸ್ವಂತ ದುಡಿಮೆಯಿಂದ ಬದುಕು ಕಟ್ಟಿಕೊಳ್ಳಬೇಕು. ಮಹಿಳೆ ಕೇವಲ ನಾಲ್ಕು ಗೋಡೆಗಳ ನಡುವೆ ಇರದೇ ತನ್ನದೇ ಪರಿಶ್ರಮದಿಂದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದೆಬರಬೇಕು ಹಾಗೂ ಇಲ್ಲಿ ತರಬೇತಿ ಪಡೆದ ಎಲ್ಲಾ ಮಹಿಳೆಯರು ಒಳ್ಳೆಯ ಅಭಿವೃದ್ದಿಯನ್ನು ಹೊಂದಲಿ ಎಂದು ಹಾರೈಸಿದರು. ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್. ಶುಭಾಶಂಸನೆಗೈದರು. ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ. ಪೂಜಾರಿ, ಜಿಲ್ಲಾ ಪಂಚಾಯಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ರಾಗಿಣಿ ಅವರು ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಕಾಣಬೇಕಾದರೆ ವಿದ್ಯಾರ್ಥಿಗಳಾದ ನೀವು ಪ್ರಾಮಾಣಿಕವಾಗಿ, ಸ್ಪರ್ಧೆಯಿಂದ, ಕಠಿಣ ಪರಿಶ್ರಮದಿಂದ ಓದಿನ ಕಡೆಗೆ ಗಮನ ಹರಿಸಬೇಕು. ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕವನ್ನು ಪಡೆದು ರಾಜ್ಯ ಮಟ್ಟದಲ್ಲಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಉಪಪ್ರಾಂಶುಪಾಲಾದ ಮಮತಾ ರೈ ಅವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾಕರ ಶಾನುಭಾಗ್ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕ ಸುಜಯ್ ಉಪ್ಪೂರ್ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕರಾದ ಅಶೋಕ್ ಹಾಗೂ ಸುಪ್ರೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಶಂಕರನಾರಾಯಣ ಜ್ಯೂನಿಯರ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರು ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಮಚ್ಚಟ್ಟು ಕಳೀನಜೆಡ್ಡು ಎಂಬಲ್ಲಿ ನಡೆದಿದೆ. ಉಳ್ಳೂರು-74 ನಿವಾಸಿಗಳಾದ ಸುಮಂತ ಮಡಿವಾಳ (18), ಗಣೇಶ್ (18) ಮೃತಪಟ್ಟಿದ್ದಾರೆ. ಸುಮಂತ್ ಹಾಗೂ ಗಣೇಶ್ ಸ್ನೇಹಿತರಾಗಿದ್ದು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನದ ವೇಳೆಗೆ ಮಚ್ಚಟ್ಟು ಕಳೀನಜೆಡ್ಡು ಹೊಳೆಗೆ ತೆರಳಿ ಸ್ನಾನಕ್ಕೆಂದು ಹೊಳೆಗೆ ಇಳಿದ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆನ್ನಲಾಗಿದೆ. ಇದನ್ನು ಗಮನಿಸಿದ ವ್ಯಕ್ತಿಯೊರ್ವರು ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದರು. ಸ್ಥಳೀಯರು ರಕ್ಷಿಸಲು ಮುಂದಾದರೂ‌ ಫಲಕಾರಿಯಾಗದೇ ಇಬ್ಬರು ಯುವಕರು ನೀರಿನಲ್ಲಿ‌ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅಮಾಸೆಬೈಲು ಠಾಣಾ ಪಿಎಸ್ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ 27ನೇಯ ವಾರ್ಷಿಕ ಅಧಿವೇಶನದಲ್ಲಿ ನಿವೃತ್ತ ಮುಖ್ಯೋಪಾದ್ಯಾಯ ಮತ್ತು ಹಿರಿಯ ಕಲಾವಿದ ಬಿಜೂರು ವಿಶ್ವೇಶ್ವರ ಅಡಿಗರು ರಚಿಸಿದ ಐದು ನಾಟಕಗಳು ಎನ್ನುವ ಪುಸ್ತಕವನ್ನು ಹಿರಿಯ ಸಾಹಿತಿ ಯು. ರಮೇಶ ವೈದ್ಯ ಬಿಡುಗಡೆಗೊಳಿಸಿದರು. ಬಳಿಕ ಅವರು ಮಾತನಾಡಿ, ಅಡಿಗರ ಐದು ನಾಟಕಗಳು ಈ ಕೃತಿಯು ಭಾರತೀಯ ಸಂಸ್ಕೃತಿಯ ಆಳವಾದ ಹೂರಣವನ್ನು ತೆರೆದಿಡುವಲ್ಲಿ ಸಫಲವಾಗಿದೆ, ಸತ್ಯಂ-ಶಿವಂ-ಸುಂದರಂ ಎಂಬ ನಿಜ ಸತ್ಯ ಧರ್ಮದ ಪಂಚಾಗದ ಮೇಲೆ ನಿಂತಿದೆ ಹಾಗೂ ಇದೆಲ್ಲವನ್ನು ಮೀರಿದ ಹೃದಯದ ಭಾಷೆಯ ಸೆಲೆ ಇರುವುದೇ ಧಯೆಯ ಸಿಂಚನದಲ್ಲಿ ಇವೆಲ್ಲಕ್ಕೂ ಮುಕುಟ ಪ್ರಾಯವಾಗಿ ಜೀವನ ಹೇಗಿದ್ದರೆ ಚೆನ್ನ ಎಂದು ಜಿಜ್ನಾಸೆಯು ಜವಬ್ದಾರಿಯುತವಾಗಿ ಮುಂದಿನ ಜನಾಂಗಕ್ಕೆ ಅದರಲ್ಲೂ ಯುವ ಜನಾಂಗಕ್ಕೆ ಮನದಟ್ಟು ಮಾಡುವ ಬದ್ಧತೆಯಿರುವುದೆ ಐದು ನಾಟಕಗಳ ಕೃತಿಯ ವಿಶೇಷವಾಗಿದೆಯೆಂದು ಹೇಳಿದರು. ಐದು ನಾಟಕಗಳ ಕೃತಿಯ ಲೇಖಕರಾದ ಬಿ. ವಿಶ್ವೇಶ್ವರ ಅಡಿಗರು ಮಾತನಾಡಿ ಯುವಸಮುದಾಯಕ್ಕೆ ಸಾಹಿತ್ಯ ಸಂಸ್ಕೃತಿ ಜೊತೆಯಲ್ಲಿ ಕಲಾಪ್ರಾಕಾರಗಳನ್ನು ಪರಿಚಯಿಸಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ರತ್ತೂಬಾಯಿ ಜನತಾ ಪ್ರೌಢಶಾಲೆಯ ಹಳೆವಿದ್ಯಾರ್ಥಿ ಸಂಘದಿಂದ ಇತ್ತೀಚಿಗೆ ಶಾಲೆಗೆ ಸೌಂಡ್ ಸಿಸ್ಟಮ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ತಿರುಮಲೇಶ್ ಭಟ್, ಮುಖ್ಯ ಶಿಕ್ಷಕ ಮಂಜು ಕಾಳವಾರ, ಆನಂದ್ ಮದ್ದೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಾಗರತ್ನ, ಕಾರ್ಯದರ್ಶಿ ಶಶಿಕಲಾ, ಶಾಲೆಯ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಮಾ.30: ಆನ್ಲೈನ್ ಮೂಲಕ ಬ್ಯಾಂಕ್ ಗ್ರಾಹಕರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಿಲ್ಲೆಯ ಗ್ರಾಮೀಣ ಭಾಗದ ಬ್ಯಾಂಕ್ ಗ್ರಾಹಕರಿಗೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಂಚನೆಯಿAದ ತಡೆಯುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ನ ಅಧಿಕಾರಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಸೂಚನೆ ನೀಡಿದರು. ಅವರು ಇಂದು ಜಿ.ಪಂ. ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬ್ಯಾಂಕ್ನ ಗ್ರಾಹಕರ ಮೊಬೈಲ್ಗೆ ಬರುವ ವಿವಿಧ ರೀತಿಯ ವಂಚನೆ ಕರೆಗಳ ಕುರಿತಂತೆ ಮಾಹಿತಿ, ತಮ್ಮ ಮೊಬೈಲ್ಗೆ ಬರುವ ಓ.ಟಿ.ಪಿ.ಯನ್ನು ಇತರರಿಗೆ ನೀಡದಂತೆ ಹಾಗೂ ವಂಚನೆಗೊಳಗಾದಲ್ಲಿ ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಸಾರ್ವಜನಿಕರು ಆನ್ಲೈನ್ ವಂಚನೆಗಳಿಗೆ ಒಳಗಾಗದಂತೆ ತಡೆಯಿರಿ ಎಂದರು. ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆ ಸಭೆಯಲ್ಲಿ, ವಿವಿಧ ಯೋಜನೆಗಳಡಿಯಲ್ಲಿ ಅರ್ಜಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ದೇಶದ ಜನರನ್ನು ಕಾಡಿದ ಕೋವಿಡ್ ಮಹಮಾರಿ ನಿರ್ಮೂಲನೆಗಾಗಿ ಜೀವವನ್ನು ಪಣಕ್ಕಿಟ್ಟು ಕೋವಿಡ್ ವಿರುದ್ಧ ಹೋರಾಡಿದ ಕೋವಿಡ್ ವಾರಿಯರ‍್ಸ್‌ಗಳ ಕಾರ್ಯ ಪ್ರಶಂಸನೀಯ. ಕೋವಿಡ್ ಸಂದರ್ಭ ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡ ನೌಕರರು ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದು, ಕೋವಿಡ್ ಪ್ರಕರಣ ಕಡಿಮೆಯಾದ ಹಿನ್ನಲೆಯಲ್ಲಿ ಸರಕಾರ ಅವರ ಸೇವೆಯನ್ನು ನಿಲ್ಲಿಸಿದೆ. ಸರಕಾರ ಒಪ್ಪಿಗೆ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಅವರನ್ನು ಪುನರ್ ನೇಮಕ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಹೇಳಿದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಜರಗಿದ ಬೀಳ್ಕೊಡುಗೆ ಸಮಾರಂಭದಲ್ಲಿ ಕೋವಿಡ್ ವಾರಿಯರ‍್ಸ್‌ಗಳನ್ನು ಸನ್ಮಾನಿಸಿ ಅವರು ಮಾತನಾಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸಿದ ಫಾರ್ಮಸಿಸ್ಟ್ ವಿಶ್ವನಾಥ ನಾಯಕ್, ಲ್ಯಾಬ್ ಟೆಕ್ನಿಶಿಯನ್ ಶ್ವೇತಾ, ರಶ್ಮಿತಾ ಹಾಗೂ ಕಾರ್ತಿಕ್ ಅವರನ್ನು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪರವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗ್ರಾಪಂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪುರಸಭೆಯ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ಕುಂದಾಪುರ ಪುರಸಭೆ ಸಾಮಾನ್ಯ ಸಭೆ ಜರುಗಿತು. ಸಾಮಾನ್ಯ ಸಭೆಯಲ್ಲಿ ಪುರಸಭೆ ಅಭಿವೃದ್ಧಿ ಚರ್ಚೆ – ಸಮಸ್ಯೆಗಳ ಪರಿಹಾರಕ್ಕಿಂತ, ಗಲಾಟೆಯಲ್ಲಿ ಕಾಲಹರಣವಾಗಿದೆ. ವಿರೋಧ ಪಕ್ಷದ ಸದಸ್ಯೆ ದೇವಕಿ ಪಿ. ಸಣ್ಣಯ್ಯ ಮಾತನಾಡಿ ಸ್ಥಾಯಿ ಸಮಿತಿ ಆಯ್ಕೆ, ಟೆಂಡರ್ ಕರೆಯದೆ ಕಾಮಗಾರಿ ನಡೆಸಿರುವ ಬಗ್ಗೆ ಡಿಸಿಗೆ ದೂರು ನೀಡಲಾಗಿದ್ದು, ನಗರಾಭಿವೃದ್ಧಿ ಕೋಶದ ಪಿಡಿ ತನಿಖೆ ಮಾಡಿ ನೀಡಿದ ವರದಿ ಪ್ರತಿಗೆ ಒತ್ತಾಯಿಸಿದ್ದು, ಆಡಳಿತ ವಿರೋಧಿ ಸದಸ್ಯರ ನಡುವೆ ಗಲಾಟಿಗೆ ಕಾರಣವಾಯಿತು. ಸ್ಥಾಯಿ ಸಮಿತಿ ಆಯ್ಕೆ ಹಿನ್ನೆಲೆಯಲ್ಲಿ ಸಣ್ಣಪುಟ್ಟ ದೋಷಗಳಿದ್ದು, ಸರಿಪಡಿಸಿಕೊಂಡು ಹೋಗುವ ನಿರ್ಣಯ ಕೂಡಾ ಆಗಿದ್ದು, ಅದನ್ನು ದೊಡ್ಡ ಸಂಗತಿ ಮಾಡದೆ ಪುರಸಭೆ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಸಹಕಾರ ನೀಡುವಂತೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಮನವಿ ಮಾಡಿದರೂ ಸದಸ್ಯರ ಗಲಾಟೆ ಶಾಂತವಾಗಲಿಲ್ಲ. ವಿರೋಧ ಸದಸ್ಯ ಚಂದ್ರಶೇಖರ್ ಖಾರ್ವಿ ಪ್ರತಿಕ್ರಿಯಿಸಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ನಮ್ಮ ವಿರೋಧವಿಲ್ಲ.…

Read More

ಕುಂದಾಪ್ರ ಕನ್ನಡ ಕಲಾವಿದರಾದ ಓಂಗುರು ಬಸ್ರೂರು – ಚಂದ್ರಶೇಖರ ಬಸ್ರೂರು ಅವರೊಂದಿಗೆ ಕುಂದಾಪ್ರ ಡಾಟ್ ಕಾಂ ಸಂದರ್ಶನ

Read More