ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಅರವಿಂದ ಮರಳಿಯವರು ಮಾತನಾಡಿ ಯೋಗವು ಕೇವಲ ದೈಹಿಕ ಬೆಳವಣಿಗೆ ಮಾತ್ರವಲ್ಲದೇ ಮಾನಸಿಕ ಬೆಳವಣಿಗೆಗೂ ಸಹಕಾರಿಯಾಗಿದೆ. ಕ್ರಮಬದ್ಧವಾಗಿ ಯೋಗಾಭ್ಯಾಸವನ್ನು ಮಾಡುವುದರಿಂದ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಾಧ್ಯ ಎಂದರು. ಶಾಲೆಯ ವಿದ್ಯಾರ್ಥಿಗಳು ಮತ್ತು NCC ಕೆಡೆಟ್ಗಳು ಭಾಗವಹಿಸಿದ್ದರು. ಶ್ಲೋಕದೊಂದಿಗೆ ಆರಂಭವಾದ ಈ ಕಾರ್ಯಕ್ರಮವು ಯೋಗಾಸನ, ಕಪಾಲಭಾತಿ, ಪ್ರಾಣಯಾಮ, ಧ್ಯಾನದವರೆಗೆ ಮುಂದುವರೆದು ಎಲ್ಲರಲ್ಲೂ ಶಾಂತಿ ನೆಮ್ಮದಿ ಆರೋಗ್ಯ ನೆಲಸಲಿ ಎಂಬ ಸಂಕಲ್ಪವನ್ನು ಮಾಡಿ ಶಾಂತಿಪಾಠದೊಂದಿಗೆ ಕೊನೆಗೊಂಡಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಮೇಲ್ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಹಿರಿಯ ಯೋಗಪಟು ಜಿ.ಗಣಪತಿ ಶಿಪಾ ಅವರು ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂಚಲಿತ ರೀತಿಯಲ್ಲಿ ಸುಧಾರಿಸಲು ಅಥವಾ ಅಭಿವೃದ್ಧಿಪಡಿಸಲು ಇರುವ ಒಂದು ವಿಧಾನ. ಅದು ಸಂಪೂರ್ಣ ಸ್ವಸಾಫಲ್ಯ ಪಡೆಯುವ ಒಂದು ಹಾದಿಯನ್ನು ಒದಗಿಸುತ್ತದೆ ಎಂದು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕ ರಮೇಶ ಮಹಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಉಪಾಧ್ಯಕ್ಷ ನಾಗರಾಜ ಜಿ.ಎಂ., ನಿವೃತ್ತ ಬ್ಯಾಂಕ್ ಉದ್ಯೋಗಿ ಈಶ್ವರ ಜಿ., ಅಂಗನವಾಡಿ ಶಿಕ್ಷಕಿ ಸಹನಾ, ಅಂಗನವಾಡಿ ಸಹಾಯಕಿಯರು, ಪೋಷಕರು ಉಪಸ್ಥಿತರಿದ್ದರು. ಶಾಲೆಯ ಸಹಶಿಕ್ಷಕಿ ಲಲಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಪತ್ರಕರ್ತ ನಾಗೇಂದ್ರ ಪಿ. ತ್ರಾಸಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಪತ್ರಕರ್ತ ನಾಗೇಂದ್ರ ಪಿ. ತ್ರಾಸಿಯವರು ಮಾತನಾಡಿ ಕಳೆದ ಹಲವು ವರ್ಷಗಳಿಂದ ಶೈಕ್ಷಣಿಕವಾಗಿ ಬೆಳವಣಿಗೆ ಹೊಂದುತ್ತಿರುವ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದಿದೆ. ಶಾಲೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ದಾನಿಗಳ ನೆರವಿನಿಂದ ಹೊಂದಿಸಿಕೊಂಡು ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಮುತುವರ್ಜಿ ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಕೆ., ತನ್ನ ಪುತ್ರಿ ಪ್ರಾರ್ಥನಾ ಎನ್. ತ್ರಾಸಿ ಇವಳ ಹುಟ್ಟು ಹಬ್ಬದ ಸವಿ ನೆನಪಿಗಾಗಿ ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ನೀತಿ ಕಥೆಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿರುವುದನ್ನು ಶ್ಲಾಘಿಸಿದರು. ಶಾರದಾ ನಾಗೇಂದ್ರ, ಶಾಲೆಯ ಸಹಶಿಕ್ಷಕರಾದ ಶಶಿಶಂಕರ್, ರಾಜೀವ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಿತು. ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಓಂ ಯೋಗ ಮಂದಿರ ಕೋಟೇಶ್ವರದ ವ್ಯವಸ್ಥಾಪಕರಾದ ಬಿ. ಅಣ್ಣಪ್ಪ ಬೀಜಾಡಿಯವರು ಕಾಯ ವಾಚಾ ಮನಸಾ ನಮ್ಮನ್ನು ಉತ್ತಮ ಗೊಳಿಸಿ ಇಡೀ ಬದುಕನ್ನು ಸುಂದರವಾಗಿಸುವ ಯೋಗದಂತಹ ಅತ್ಯುತ್ತಮ ವಿದ್ಯೆಯನ್ನು ಜಗತ್ತಿಗೆ ನೀಡಿದ ಭಾರತೀಯರಾದ ನಾವು ಯೋಗ ವಿದ್ಯೆಯ ಬಗೆಗೆ ಮೂಲಭೂತ ಅರಿವನ್ನು ಹೊಂದಿರುವುದು ಮತ್ತು ಅದನ್ನು ಅನುಸರಿಸುವುದು ಅತ್ಯಂತ ಪ್ರಮುಖವಾಗಿದೆ. ಯೋಗ ರೋಗದಿಂದ ದೂರವಿರುವುದನ್ನು ಕಲಿಸುತ್ತದೆ. ಉತ್ತಮ ಆರೋಗ್ಯ ಗುಣ ನಡತೆಯನ್ನು ಉದ್ದೀಪಿಸುತ್ತದೆ ಎಂದು ಅವರು ಹೇಳಿದರು. ವಿದ್ಯಾರ್ಥಿನಿ ಚೈತ್ರಾ ಯೋಗದ ಮಹತ್ವದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಥಾಮಸ್ ಪಿ ಎ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ.ಎಸ್ ಅಸೋಷಿಯೇಷನ್ ಅಧ್ಯಕ್ಷ ಡಾ.ಕಾಶೀನಾಥ್ ಪೈ, ಕಾರ್ಯದರ್ಶಿ ಹೆಚ್. ಗಣೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ವಲಯದ ಬಿದ್ಕಲ್ ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ರಚನೆಗಾಗಿ ಪ್ರಜಾಪ್ರಭುತ್ವ ಮಾದರಿಯ ಗುಪ್ತ ಮತದಾನ ಪ್ರಕ್ರಿಯೆ ಜರುಗಿತು. ದೇಶದ ಭಾವೀ ಪ್ರಜೆಗಳಾದ ನಮ್ಮ ಮಕ್ಕಳಿಗೆ, ಇಂದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಸಮಗ್ರ ತಿಳುವಳಿಕೆಯನ್ನು ಪ್ರಾಥಮಿಕ ಹಂತದಿಂದಲೇ ನೀಡಿ, ಪಾರದರ್ಶಕವಾದ ನ್ಯಾಯಬದ್ಧ ಚುನಾವಣೆಯ ರೀತಿ ನೀತಿಯನ್ನು ಮಕ್ಕಳಿಗೆ ನೈಜ ಪ್ರಾತ್ಯಕ್ಷಿಕೆಯ ಮುಖೇನ ತಿಳಿಸಿಕೊಟ್ಟಲ್ಲಿ, ಭವಿಷ್ಯದಲ್ಲಿ ಅದೇ ಮಾದರಿಯನ್ನು ಅವರು ಅನುಸರಿಸುವುದರೊಂದಿಗೆ, ಭೃಷ್ಟಾಚಾರ ಮುಕ್ತ ಸಾಮಾಜಿಕ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಕುಲಗೆಟ್ಟು ಹೋಗುತ್ತಿರುವ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸುಧಾರಿಸಲೂ ಅನುಕೂಲವಾಗುತ್ತದೆ. ಚುನಾವಣೆಗೆ 15 ದಿನ ಮುಂಚೆ ಅಧಿಸೂಚನೆ ಹೊರಬಿದ್ದಿದ್ದು, ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ, ಚುನಾವಣಾ ಪ್ರಚಾರ, ಮತದಾನ, ಮತಗಳ ಎಣಿಕೆ, ಪ್ರಮಾಣವಚನ ಸ್ವೀಕಾರ.. ಹೀಗೆ ಎಲ್ಲಾ ಪ್ರಕ್ರಿಯೆಗಳೂ ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ, ನಿಗದಿತ ಸಮಯದ ಚೌಕಟ್ಟಿನಲ್ಲೇ ನಡೆದು, 15 ದಿನಗಳಿಂದ ಜಾರಿಯಲ್ಲಿದ್ದ ಚುನಾವಣಾ ನೀತಿ ಸಂಹಿತೆ ಸಂಪನ್ನಗೊಂಡಿದೆ. ಮತದಾನಕ್ಕಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥವಡೇರ ಸ್ವಾಮೀಜಿ ಭೇಟಿ ನೀಡಿದರು. ದೇವಸ್ಥಾನದಲ್ಲಿ ನಡೆಯುತ್ತಿರುವ ವಾಸ್ತು ವಿಸ್ತಾರ ಕಾರ್ಯವನ್ನು ವೀಕ್ಷಿಸಿ ಆಶೀರ್ವಚನ ನೀಡಿದ ಶ್ರೀಮದ್ ವಿದ್ಯಾಧಿರಾಜ ತೀರ್ಥವಡೇರ ಸ್ವಾಮೀಜಿಯವರು ದೇವರ ಅನುಗ್ರಹದಿಂದ ಉತ್ತಮ ಕಾರ್ಯಗಳು ಸಂಪನ್ನಗೊಳ್ಳಲು ಸಾಧ್ಯವಿದೆ. ದೇವತಾರಾಧನೆಯಿಂದ ಜೀವನದಲ್ಲಿ ಸುಖ ಶಾಂತಿ ದೊರೆತು ಜೀವನ ಪಾವನಗೊಳ್ಳುತ್ತದೆ. ಕಲಿಯುಗದ ದೇವರಾದ ಶ್ರೀ ವೆಂಕಟರಮಣನ ಪೂಜನೆ, ಆರಾಧನೆಯಿಂದ ಕಷ್ಟದುರಿತಗಳೆಲ್ಲವೂ ದೂರವಾಗಿ ಸಕಲಾಭಿಷ್ಟಗಳು ನೆರವೇರುತ್ತದೆ ಎಂದು ಹೇಳಿದರು. 350 ವರ್ಷ ಇತಿಹಾಸವುಳ್ಳ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಲಕಾಲಕ್ಕೆ ಅಭಿವೃದ್ಧಿ ಕಾರ್ಯಗಳು ನಡೆದು ವಾಸ್ತುವಿನ್ಯಾಸ ವಿಸ್ತಾರಗೊಂಡಿದೆ. ಇದೀಗ ದೇವಳದ ಅಭಿವೃದ್ಧಿ ಹಾಗೂ ಸಮಾಜದ ಭಕ್ತರ ಇಚ್ಛೆಯಂತೆ ಸುಸಜ್ಜಿತ ಸಭಾಂಗಣ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಸದ್ಭಕ್ತರು ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ನಿಗದಿತ ಅವಧಿಯಲ್ಲಿ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದ್ದು, ಸಮಾಜಬಾಂಧವರು ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಶಾಲಾ ವಿದ್ಯಾರ್ಥಿ ನಾಯಕ, ಉಪನಾಯಕನ ಆಯ್ಕೆಗಾಗಿ ಸಾರ್ವತ್ರಿಕ ಚುನಾವಣೆಯ ಎಲ್ಲಾ ವಿಧಾನಗಳನ್ನು ಅನುಸರಿಸಿ ವಿದ್ಯಾರ್ಥಿ ಚುನಾವಣೆ ನಡೆಸುತ್ತಿದ್ದು, ಒಂದೆಡೆ ಮುಂಗಾರಿನ ಬಿರುಮಳೆ ಮಳೆಗಾಲದ ಆರಂಭಕ್ಕೆ ಮುನ್ನುಡಿ ಬರೆಯುತ್ತಿದ್ದರೆ. ಇನ್ನೊಂದೆಡೆ ಶಾಲೆಯ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭ ಶಾಲಾ ವಿದ್ಯಾರ್ಥಿ ಸರಕಾರದ ರಚನೆಯ ಪ್ರಕ್ರಿಯೆಯ ಮೂಲಕ ಬಿರುಸು ಪಡೆದಿತ್ತು. ಈ ಶೈಕ್ಷಣಿಕ ವರ್ಷದ ಚುನಾವಣೆ ಜಿಟಿ ಜಿಟಿ ಮಳೆ ನಡುವೆ ನಡೆಯಿತು. ಚುನಾವಣೆಗೆ ಒಂದು ವಾರ ಮುಂಚಿತವಾಗಿ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ನಿಗದಿಪಡಿಸಿ ನಾಮಪತ್ರ ಪರಿಶೀಲನೆ ನಡೆಸಿ ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು. ನಂತರ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಲಾಗಿತ್ತು.ಚುನಾವಣೆಗೆ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಚಿಹ್ನೆಗಳನ್ನೊಳಗೊಂಡ ಮತಪತ್ರ ಬಳಸಲಾಗಿತ್ತು. ಶಾಲಾ ನಾಯಕನ ಚುನಾವಣೆಗೆ ಕೆಂಪು ಬಣ್ಣದ ಹಾಗೂ ಉಪನಾಯಕನ ಚುನಾವಣೆಗೆ ಪಿಂಕ್ ಬಣ್ಣದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯ ವಿದ್ಯಾರ್ಥಿ ಸರಕಾರದ ರಚನೆ ಚುನಾವಣೆಯ ಮೂಲಕ ನಡೆಸಲಾಯಿತು. ಚುನಾವಣೆ ದಿನಾಂಕ ಘೋಷಣೆ, ನಾಮಪತ್ರ ಸ್ವೀಕಾರ, ನಾಮಪತ್ರ ಹಿಂದೆಗೆತ, ಅಭ್ಯರ್ಥಿಗಳ ಅಂತಿಮ ಘೋಷಣೆ, ಚುನಾವಣಾ ಚಿಹ್ನೆಯ ಆಯ್ಕೆ, ಅಭ್ಯರ್ಥಿಗಳಿಂದ ಪ್ರಚಾರ, ಬ್ಯಾಲಟ್ ಪೇಪರ್ ಪ್ರಿಂಟಿಂಗ್ ಚುನಾವಣೆ ಪ್ರಕ್ರಿಯೆಗಳನ್ನು ಸಂವಿಧಾನ ಬದ್ಧವಾಗಿ ಮಾಡಲಾಯಿತು. ಶಿಸ್ತಿನ ಮೇಲ್ವಿಚಾರಣೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಾಪಕ ವೃಂದ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಶಾಲಾ ಹಾಜರಿ ಪುಸ್ತಕವನ್ನೆ ಮತದಾರರ ಪಟ್ಟಿಯನ್ನಾಗಿ ಉಪಯೋಗಿಸಲಾಯಿತು. ಶಾಲಾ ನಾಯಕನಾಗಿ ಪ್ರಶುಮ್, ಶಿಸ್ತು ಪಾಲನಾ ಸಮಿತಿ ನಾಯಕ ಮನ್ವಿತ್, ಸಾಂಸ್ಕೃತಿಕ ಸಮಿತಿ ನಾಯಕಿ ಪ್ರಥ್ವಿ ಮತ್ತು ಕ್ರೀಡಾ ನಾಯಕನಾಗಿ ಕಾರ್ತಿಕ್ ಪ್ರತಿಜ್ಞಾ ವಿದಿಯನ್ನು ತಿಮ್ಮೇಶ್ ಬಿ.ಎನ್. ಠಾಣಾಧಿಕಾರಿ ಬೈಂದೂರು ಇವರಿಂದ ಸ್ವೀಕರಿಸಿದರು. ಚುನಾವಣಾ ಅಧಿಕಾರಿಯಾಗಿ ಯು.ಎಚ್ ರಾಜ್ರಾಮ ಭಟ್ ಹಾಗೂ ಮುಖ್ಯ ಶಿಕ್ಷಕ ರವಿದಾಸ ಶೆಟ್ಟಿ ಅವರ ಉಸ್ತುವಾರಿಯಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಯಿತು.
ಕುಂದಾಪ್ರ ಡಾಠ್ ಕಾಂ ಸುದ್ದಿ ಕುಂದಾಪುರ: ಹಕ್ಲಾಡಿ ಗ್ರಾಮ ಹಕ್ಲಾಡಿಗುಡ್ಡೆ ಶ್ರೀ ಸಿದ್ಧಲಿಂಗೇಶ್ವರ ಭಜನಾ ಮಂದಿರ ಅಧ್ಯಕ್ಷರಾಗಿ ಉಮೇಶ್ ಹಕ್ಲಾಡಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷ-ಲಕ್ಷ್ಮೀಕಾಂತ, ಕಾರ್ಯದರ್ಶಿ-ಸುರೇಶ್ ಹಕ್ಲಾಡಿ, ಪ್ರಧಾನ ಅರ್ಚಕ-ರಾಜು, ಸದಸ್ಯರು-ಗಣೇಶ್ ಬಾರಂದಾಡಿ, ಶರತ್, ನಾಗರಾಜ ಡಿ, ವಿಶ್ವನಾಥ, ಸತೀಶ್, ರವಿ ಡಿ, ರತ್ನಾಕರ, ವಸಂತ, ನಾರಾಯಣ ಹೋರ್ಣಿ, ಚೇತನ್ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರದಲ್ಲಿ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಶಿಕಲಾ ಬಿಜೂರು ಅವರು ಮಾತನಾಡಿ ಯೋಗ ಎಂದರೆ ಬರೀ ಆಸನಗಳಲ್ಲ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಸಮಾಧಿ, ಇವುಗಳನ್ನೊಳಗೊಂಡಿದ್ದು. ಮಾನಸಿಕ ನೆಮ್ಮದಿ ಮತ್ತು ಮನುಷ್ಯನ ಏಕಾಗ್ರತೆಗೆ ಯೋಗ ಅಗತ್ಯ. ವೆಚ್ಚವಿಲ್ಲದ ವೈದ್ಯ ಯೋಗವಾಗಿದೆ. ಒತ್ತಡ ನಿರ್ವಹಣೆಯಲ್ಲಿ ಯೋಗ ಪ್ರಮುಖ ಪಾತ್ರವಹಿಸುತ್ತದೆ ಹಾಗೂ ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಯೋಗ ಮನೆ ಮದ್ದು ಎಂದು ಹೇಳಿದರು. ಇನ್ನೋರ್ವ ಅತಿಥಿ ತಿಮ್ಮೇಶ್ ಬಿ ಎನ್, ಠಾಣಾಧಿಕಾರಿ ಬೈಂದೂರು ಇವರು ಯೋಗದ ಮಹತ್ವವನ್ನು ಉದಾಹರಣೆಗಳೊಂದಿಗೆ ತಿಳಿಸಿದರು. ಮುಖ್ಯ ಶಿಕ್ಷಕ ರವಿದಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು| ಶ್ರೀನಿಧಿ ಸ್ವಾಗತಿಸಿದರು, ಕು| ಮೇಘನಾ ಎಲ್. ಕಾರ್ಯಕ್ರಮ ನಿರೂಪಿಸಿದರು. ಮೇಘನಾ ಜಿ. ವಂದಿಸಿದರು.
