ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬಿರುಗಾಳಿ, ಮಳೆ ಹಾಗೂ ಸಿಡಿಲಿನಂತಹ ಪ್ರಕೃತಿ ವಿಕೋಪದಿಂದ ಮನೆ, ಕೊಟ್ಟಿಗೆ, ಕೃಷಿ ಮತ್ತು ತೋಟಗಾರಿಕಾ ಬೆಳೆ ಹಾನಿಯಿಂದ ನಷ್ಟ ಅನುಭವಿಸಿದ ಬೈಂದೂರು ಹೋಬಳಿ ಮಟ್ಟದ 29 ಫಲಾನುಭವಿಗಳಿಗೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಸುಮಾರು ಒಟ್ಟು 1.5 ಲಕ್ಷ ಮೊತ್ತದ ಚೆಕ್ ವಿತರಿಸಿದರು. ಈ ಸಂದರ್ಭ ತಹಶೀಲ್ದಾರ್, ಕಂದಾಯ ನಿರೀಕ್ಷಕ ಅಣ್ಣಪ್ಪ ಬಿ., ವಿವಿಧ ಗ್ರಾಮದ ಗ್ರಾಮಲೆಕ್ಕಿಗರು, ರೈತಸಂಘದ ಅಧ್ಯಕ್ಷ ಎನ್. ದೀಪಕ್‌ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಯಡ್ತರೆ ಗ್ರಾಪಂ ವ್ಯಾಪ್ತಿಯ ಕೊರಾಡಿ ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ ಮದ್ದೋಡಿ ಮತ್ತು ಆಲಂದೂರು ಭಾಗದ ಗ್ರಾಮಸ್ಥರಿಂದ ನೂತನ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಯವರಿಗೆ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಯವರು ರಾಜ್ಯದ ಜನತೆ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಬೇಸತ್ತು ಈ ಬಾರಿ ಬಿಜೆಪಿಯ ಹೆಚ್ಚಿನ ಸ್ಥಾನವನ್ನು ಗಳಿಸಿಕೊಟ್ಟರೂ ಕೆಲವೇ ಸೀಟುಗಳ ಕೊರತೆಯಿಂದಾಗಿ ಬಹುಮತ ಬರದ ಹಿನ್ನೆಲೆಯಲ್ಲಿ ಜಿಜೆಪಿಗೆ ಆಡಳಿತ ನಡೆಸಲಾಗಿಲ್ಲ. ತಿಂಗಳು ಕಳೆದರೂ ಇನ್ನೂ ಟೇಕ್‌ಅಪ್ ಆಗದ ಈಗಿನ ಸಮ್ಮಿಶ್ರ ಸರ್ಕಾರ ಆರು ತಿಂಗಳೊಳಗೆ ಪಥನಗೊಂಡು ಮುಂದೆ ಯಡಿಯೂರಪ್ಪನವರ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನಡಿದರು. ಸಮಾಜದ ಕಟ್ಟಕಡೆಯ ಮಗುವು ಕೂಡಾ ವಿದ್ಯಾವಂತನಾದರೆ ಭಾರತ ಬಲಿಷ್ಠಗೊಳ್ಳುತ್ತದೆ. ಆ ನೆಲೆಯಲ್ಲಿ ಮೊದಲಿನಿಂದಲೂ ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳನ್ನು ಸ್ವಂತ ಲಾಭಕ್ಕಾಗಿ ಮಾಡದೇ ನಿಸ್ವಾರ್ಥದಿಂದ ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದ್ದೇನೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರಿನ ಸಮನ್ವಯಾಧಿಕಾರಿ ಕಚೇರಿಯಲ್ಲಿ ವಲಯದ ವಿಶೇಷ ಮಕ್ಕಳಿಗೆ ಸರ್ಕಾರದಿಂದ ಪೂರೈಕೆಯಾದ ಸಾಧನ-ಸಲಕರಣೆಗಳ ವಿತರಣಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಮಾತನಾಡಿ ಅಂಗವಿಕಲತೆ ಶಾಪವಲ್ಲ. ಇವರಲ್ಲಿಯೂ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿದ್ದಾರೆ. ಅಂತವರನ್ನು ಸ್ಪೂರ್ತಿಯಾಗಿಟ್ಟುಕೊಂಡು ದೈಹಿಕ ಸಾಮರ್ಥ್ಯ ಕೊರತೆಯಿಂದ ಬಳಲುವ ವಿಶೇಷ ಮಕ್ಕಳಿಗೆ ಹೆತ್ತವರು ಮನಸಿಕವಾಗಿ ಸಧೃಡರಾಗಲು ಆತ್ಮವಿಶ್ವಾಸ ತುಂಬಬೇಕು ಎಂದು ಹೇಳಿದರು. ತಾಪಂ ಸದಸ್ಯೆ ಮಾಲಿನಿ ಕೆ. ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಸದಸ್ಯೆ ಸುಜಾತಾ ದೇವಾಡಿಗ, ಕ್ಷೇತ್ರ ಸಂಪನ್ನೂಲ ವ್ಯಕ್ತಿ ಕರುಣಾಕರ ಶೆಟ್ಟಿ, ಸ್ಕಂದ ಸಂಸ್ಥೆಯ ಅಧಿಕಾರಿಗಳಾದ ಶಿವರಾಜ್ ಉಪಸ್ಥಿತರಿದ್ದರು. ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕರಾದ ಕುಪ್ಪಯ್ಯ ಮರಾಠಿ ಸ್ವಾಗತಿಸಿ, ನಿರೂಪಿಸಿದರು. ನಾಗರತ್ನ ವಂದಿಸಿದರು. ಈ ಸಂದರ್ಭ ೬೫ ವಿಶೇಷ ಮಕ್ಕಳಿಗೆ ವಿವಿಧ ಸಲಕರಣೆಗಳನ್ನು ನೀಡಲಾಯಿತು. ವಿಕಲಚೇತನ ಮಕ್ಕಳಿಗೆ ಯಾರೂ ಅನುಕಂಪ ತೋರಿಸದೇ, ಧೈರ್ಯದಿಂದ ಬದುಕುವಂತೆ ಸ್ಪೂರ್ತಿ ಹೆಚ್ಚಿಸುವ ಮೂಲಕ ಹೆತ್ತವರು ಪ್ರೇರಿಸಬೇಕು. ಅವರು ಶಾರೀರಿಕವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ರಾಮಕ್ಷತ್ರೀಯ ಯುವಕ ಮಂಡಲದ 2018-19 ನೇ ಸಾಲಿನ ಅಧ್ಯಕ್ಷರಾಗಿ ಗಣೇಶ್ ಸಿ.ಎಚ್. ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಕುಂದಾಪುರದ ಶ್ರೀ ಮೈಲಾರೇಶ್ವರ ಯುವಕ ಮಂಡಲದಲ್ಲಿ 3 ಅವಧಿ ಕಾರ್ಯದರ್ಶಿಯಾಗಿ, 36ನೇ ವರ್ಷದ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ನ ದಶಮಾಮಾನೋತ್ಸವ ಸಮಿತಿ ಕಾರ್ಯದರ್ಶಿಯಾಗಿ, ರಾಮಕ್ಷತ್ರೀಯ ಯುವಕ ಮಂಡಳಿಯಲ್ಲಿ ನಾಲ್ಕು ಬಾರಿ ಕಾರ್ಯದರ್ಶಿಯಾಗಿ, ಕೈರಾಳಿ ಸುಹೃದ್ವೇದಿ ನಿರ್ದೇಶಕರಾಗಿ, ಜೇಸಿಐ ಕುಂದಾಪುರದ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕಳೆದ ಹದಿನೈದು ದಿನಗಳಿಂದ ಪ್ರತಿ ಬಾನುವಾರ ದಿನಾಂಕ ಜೂನ್ 03, 10, ಹಾಗೂ 17 ರಂದು ದೇವಾಲಯದ ಜೀರ್ಣೋದ್ದಾರದ ಬಗ್ಗೆ ದೇಣಿಗೆ ಸಂಗ್ರಹಕ್ಕಾಗಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ, ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರು ಜೊತೆಯಾಗಿ ಪರಿಸರದಲ್ಲಿ ಸುಮಾರು 225 ಮನೆಗಳಿಗೆ ಭೇಟಿ ನೀಡಿ ಮಾಹಿತಿಯನ್ನೊಳಗೊಂಡ ಪತ್ರವನ್ನು ವಿತರಿಸಿ ದೇಣಿಗೆಯನ್ನು ನೀಡುವಂತೆ ಮನವಿ ಮಾಡಿಕೊಂಡರು. ಪ್ರತಿಯೊಂದು ಮನೆಯ ಮುಖ್ಯಸ್ಥರು ಸಂತೋಷದಿಂದ ಮನವಿಯನ್ನು ಸ್ವೀಕರಿಸಿ ಸಕಾರಾತ್ಮಕ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಕೆಲವರು ಪ್ರಥಮ ಕಂತಿನ ತಮ್ಮ ದೇಣಿಗೆಯನ್ನು ಪಾವತಿಸಿರುಸುತ್ತಾರೆಂದು ದೇವಾಲಯದ ಆಡಳತ ಮೊಕ್ತೇಸರರಾಗಿರುವ ಬಿ.ಎಸ್.ಶಾನುಭೋಗ್ ಅವರು ತಿಳಿಸಿರುತ್ತಾರೆ. ದೇಗುಲ ನಿರ್ಮಾಣದ ಶಿಲ್ಪಿ ಮೊಳಹಳ್ಳಿ ರಾಘವೇಂದ್ರ ಆಚಾರ್ಯ ಅವರಿಗೆ ಈಗಾಗಲೇ ಮುಂಗಡ ಪಾವತಿಯ ಮುಹೂರ್ತವನ್ನು ಮಾಡಲಾಗಿದ್ದು ,ದಿನಾಂಕ 24.06.2018 ರಂದು ದ್ವಿತಿಯ ಕಂತನ್ನು ಪಾವತಿ ಮಾಡವ ವಿಚಾರವನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನರಸಿಂಹ ಪೂಜಾರಿ ಪಡುಕೋಣೆ, ಉಪಾಧ್ಯಕ್ಷರುಗಳಾದ ವಿಜಯಕುಮಾರ ಶೆಟ್ಟಿ ಖಂಬದಕೋಣೆ, ಡಾ.ಬಾಲಚಂದ್ರ ಭಟ್ಟ ,ವ್ಯವಸ್ಥಾಪನಾ ಸಮಿತಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ ತೆಕ್ಕಟ್ಟೆ: ಬೇಳೂರು ಸ್ಫೂರ್ತಿಧಾಮದ ಮೇಲೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸಂಸ್ಥೆಯ ಪರವಾನಿಗೆ ರದ್ದುಗೊಳಿಸಿ, ವೃದ್ಧರನ್ನು ಸ್ಥಳಾಂತರಿಸುವಂತೆ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಎರಡು ಬಾರಿ ವೃದ್ದರನ್ನು ಸ್ಥಳಾಂತರಿಸಲು ಅಧಿಕಾರಿ ಬಂದರೂ ಇಲ್ಲಿ ಆಶ್ರಯಿಸಿರುವ ವೃದ್ಧರು ಹೊರಹೋಗಲು ಕೇಳಲಿಲ್ಲ. ನನ್ನ ಮೇಲಿನ ಅಪವಾದಗಳಿಗೆ ಏನೂ ತಪ್ಪು ಮಾಡದ ವೃದ್ಧರನ್ನು ಬಲಾತ್ಕಾರವಾಗಿ ಸ್ಥಳಾಂತರಿಸುವ ಪ್ರಯತ್ನ ಬೇಡ, ಬದಲಿಗೆ ನನ್ನ ಹುದ್ದೆಗೆ ರಾಜೀನಾಮೆ ನೀಡಿ ಹೊರ ಬರುತ್ತೇನೆ ಎಂದು ಸ್ಫೂರ್ತಿಧಾಮದ ಮುಖ್ಯ ಕಾರ್ಯನಿರ್ವಾಹಕ ಡಾ|ಕೇಶವ ಕೋಟೇಶ್ವರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸಂಸ್ಥೆಯ ಮುಖ್ಯಸ್ಥನಾಗಿ ನನ್ನ ಮೇಲಿನ ಅಪವಾದಗಳಿಗೆ ಉತ್ತರಿಸುವ ಪ್ರಯತ್ನ ಮಾಡಿ ಸೋತಿದ್ದೇನೆ. ಮುಂದಿನ ದಿನದಲ್ಲಿ ಸ್ಫೂರ್ತಿ ಸಂಸ್ಥೆಯ ಆಡಳಿತ ಮಂಡಳಿಯ ಸಭೆ ಕರೆದು ರಾಜೀನಾಮೆ ಸಲ್ಲಿಸಿ ಹೊರಬರುತ್ತೇನೆ. ಸಂಸ್ಥೆಯನ್ನು ಮುನ್ನಡೆಸುವ ಆಸಕ್ತಿ ಹೊಂದಿರುವ ಪ್ರಮೀಳಾ ಜೆ.ವಾಜ್ ಅವರಿಗೆ ಈ ವ್ಯವಸ್ಥೆಯ ಸಂಪೂರ್ಣ ಉಸ್ತುವಾರಿ ನೀಡಲು ಆಡಳಿತ ಮಂಡಳಿಗೆ ಶಿಫಾರಸು ಮಾಡುತ್ತೇನೆ. ಸಾರ್ವಜನಿಕ ದೇಣಿಗೆಯಿಂದ ನಿರ್ಮಿತವಾದ ಈ ಇಡೀ ವ್ಯವಸ್ಥೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಇಲ್ಲಿನ ಆರ್‌ಎನ್ ಶೆಟ್ಟಿ ಸಭಾಭವನದಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆ ಜರುಗಿತು. ಈ ಸಭೆಯನ್ನು ಉದ್ದೇಶಿಸಿ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿರವರು ಮಾತನಾಡಿ ಜಿಲ್ಲೆಯಲ್ಲಿ ಮರಳು ತೆಗೆಯ ಬಾರದು ಎಂದು ನಿರ್ಬಂಧ ವಿಧಿಸುವ ಅಧಿಕಾರಿಗಳು ಜಿಲ್ಲೆಯ ಜನರಿಗೆ ಅಗತ್ಯವಾಗಿರುವ ಮರಳನ್ನು ಒದಗಿಸಬೇಕು ಎನ್ನುವ ಬದ್ದತೆಯನ್ನು ಪ್ರದರ್ಶಿಸಬೇಕು. ಜಿಲ್ಲೆಯ ಜನ ಸಾಮಾನ್ಯರ ಪರ ರೈತ ಸಂಘದ ಧ್ವನಿ ಇರುತ್ತದೆ ಹೊರತು ಇನ್ನಾರದ್ದೋ ಹಿತಾಸಕ್ತಿಯನ್ನು ಕಾಯುವ ಅನಿವಾರ್ಯತೆ ನಮಗಿಲ್ಲ ಎಂದು ಹೇಳಿದರು. ಕಪ್ಪು ಹಣದಿಂದ ಮನೆ ಹಾಗೂ ಕಟ್ಟಡ ನಿರ್ಮಿಸುವವರಿಗೆ ಮರಳು ಸಮಸ್ಯೆ ಬಾಧಿಸುವುದಿಲ್ಲ. ಕಷ್ಟದಿಂದ ದುಡಿಮೆ ಮಾಡಿ ಜೀವನದಲ್ಲಿ ಮೊದಲ ಬಾರಿ ಸ್ವಂತ ಮನೆ ಮಾಡುವವರನ್ನು ಹಾಗೂ ಸರ್ಕಾರದ ಯೋಜನೆಯ ಸಹಕಾರದಿಂದ ಮನೆ ಕಟ್ಟಿಕೊಳ್ಳುವವರನ್ನು ಇಲ್ಲಿನ ಮರಳು ಸಮಸ್ಯೆ ಕಣ್ಣೀರು ತರುಸುತ್ತಿದೆ ಎನ್ನುವ ಸತ್ಯ ಅಧಿಕಾರಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ. ಹೊರ ಜಿಲ್ಲೆಗಳಿಗೆ ಮರಳು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಮುಖ್ಯ ಜೀವವಿಮಾ ಸಲಹೆಗಾರರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಉತ್ತಮ ಜೀವಾವಿಮಾ ಪಾಲಿಸಿ ಮತ್ತು ಗ್ರಾಹಕ ಸೇವೆಯೊಂದಿಗೆ ನಿರಂತರವಾಗಿ 5ನೇ ಬಾರಿಗೆ ಅಮೇರಿಕಾದ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಸದಸ್ಯತ್ವ ಅರ್ಹತೆ ಪಡೆದಿರುತ್ತಾರೆ. ಕೋಣಿಯ ಮಾತಾ ಮೊಂಟೆಸ್ಸೋರಿ ಮಕ್ಕಳ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಇವರು ಕುಂದಾಪುರ ಪರಿಸರದ ಹೆಮ್ಮೆಯ ಪ್ರತಿನಿಧಿಯಾಗಿದ್ದು ಶಾಖೆಯ ಏಕೈಕ ಗ್ಯಾಲಕ್ಸಿ ಕ್ಲಬ್‌ನ ಸದಸ್ಯರಾಗಿರುತ್ತಾರೆ. ಅವರ ಈ ಸಾಧನೆಗೆ ಶಾಖೆಯ ಸರ್ವ ಸಿಬ್ಬಂದಿ ವರ್ಗದವರು ಅಸಿಸ್ಟೆಂಟ್ ಮ್ಯಾನೇಜರ್ ಗಿರೀಶ್ ಎಮ್. ಮತ್ತು ಮುಖ್ಯ ಪ್ರಬಂಧಕ ಕೆ. ಪ್ರಭಾಕರ ಅವರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರದ ಸೇವಾ ಸಂಗಮ ದತ್ತಾತ್ರೇಯ ಶಿಶು ಮಂದಿರದ ಪ್ರಥಮ ಮಹಡಿಯ ಸ್ವಾಮೀ ವಿವೇಕಾನಂದ ಮಂದಿರವನ್ನು ಉದ್ಘಾಟಿಸಲಾಯಿತು. ಉದ್ಘಾಟನೆ ಮಾಡಿದ ನಿವೃತ್ತಿ ಗುರುಕುಲ ಹರಿಖಂಡಿಗೆಯ ಸಂಸ್ಥಾಪಕರಾದ ಕೆ.ಶಾಂತರಾಂ ಅಚ್ಯುತ್ ಭಂಡಾರ್‌ಕಾರ್ ಮಾತನಾಡಿ ಮನುಷ್ಯ ಜನ್ಮದಲ್ಲಿ ಹುಟಿದ ನಾವು ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು. ಅದರಲ್ಲಿ ಸಂತೋಷವಿದೆ, ಆತ್ಮತೃಪ್ತಿ ಇದೆ. ನಾವು ಬದುಕಿರುವುದು ಕೆಲವೇ ಸಮಯ. ಎಲ್ಲವೂ ನಶ್ವರ. ಆದರೆ ಆತ್ಮತೃಪ್ತಿ ಮಾತ್ರ ಶಾಶ್ವತ ಎಂದು ನುಡಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸ್ವಾಮಿ ಶ್ರೀ ಸತ್ಯ ಸ್ವರೂಪಾನಂದಜೀ (ರಾಮಕೃಷ್ಣ ಕುಟೀರ, ಯಳಜಿತ್, ಬೈಂದೂರು) ಇವರು ಮಾತನಾಡುತ್ತಾ ಭಗವದ್ಗೀತೆ ಉತ್ತಮ ಜೀವನದ ದಾರಿ ಬೆಳಕು. ಮಾತೆಯರು ಈ ಬಗ್ಗೆ ಆಸಕ್ತಿವಹಿಸಿ ಮಕ್ಕಳು ಪ್ರತೀ ದಿನ ಭಗವದ್ಗೀತೆ ಪಠಣ ಮಾಡುವಂತೆ ಪ್ರಯತ್ನಿಸಬೇಕು ಎಂದರು. ಮಂದಿರವನ್ನು ನಿರ್ಮಿಸಿ ಕೊಟ್ಟ ಸೇವಾಕರ್ತರಾದ ನರಸಿಂಹ ಸುಂದರ ಹೆಗ್ಡೆ ದಂಪತಿಗಳನ್ನು ಶಿಶುಮಂದಿರದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಹೆಗ್ಡೆಯವರು ಧನವನ್ನು ಕೂಡಿಡುವುದರಲ್ಲಿ ಅರ್ಥವಿಲ್ಲ. ಅವಶ್ಯಕತೆ ಇರುವವರಿಗೆ ಅದನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮ ಕುಂದಾಪುರ ಕನ್ನಡ ಬಳಗ ದುಬೈ ವತಿಯಿಂದ ಆರ್ಯಭಟ ಪ್ರಶಸ್ತಿ ಪುರಸ್ಕೃತ ದಿನೇಶ್ ದೇವಾಡಿಗ ನಾಗೂರು ಅವರನ್ನು ಅಭಿನಂದಿಸಲಾಯಿತು. ದಿನೇಶ್ ದೇವಾಡಿಗ ಹಾಗೂ ಅವರ ಧರ್ಮಪತ್ನಿ ವಿಶಾಲಾಕ್ಷಿಯವರನ್ನು ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ನಮ್ಮ ಕುಂದಾಪುರ ಕನ್ನಡ ಬಳಗ ದುಬೈ ಇದರ ಅಧ್ಯಕ್ಷ ಸಾಧನ ದಾಸ್ ಸೇರಿದಂತೆ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
