ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಿದ್ಧಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ರೋಹಿತ್ ಕುಮಾರ್ ಶೆಟ್ಟಿ ಅವರು ತಮ್ಮ ಸಮೀಪದ ಪ್ರತಿಸ್ವರ್ಧಿ ಕಾಂಗ್ರೆಸ್ ಪಕ್ಷದ ಪ್ರಸನ್ನ ಕುಮಾರ್ ಶೆಟ್ಟಿ ಅವರನ್ನು 3360 ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಸಿದ್ಧಾಪುರ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ತಾರನಾಥ ಶೆಟ್ಟಿ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ರೋಹಿತ್ ಶೆಟ್ಟಿ 11,926 ಮತಗಳನ್ನು ಪಡೆದಿದ್ದರೇ, ಕಾಂಗ್ರೆಸ್ ಪಕ್ಷದ ಪ್ರಸನ್ನಕುಮಾರ್ ಶೆಟ್ಟಿ 8566 ಮತಗಳು ಹಾಗೂ ಜೆಡಿಎಸ್ ಪಕ್ಷದ ಅರುಣ ಶೆಟ್ಟಿ 276 ಮತಗಳನ್ನು ಪಡೆದಿದ್ದರು. ಚಲಾವಣೆಯಾದ 21,048 ಮತಗಳ ಪೈಕಿ 280 ನೋಟಾ ಮತಗಳು ಬಿದ್ದಿದ್ದವು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ, ಕುಂದೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಡಾ. ಎಚ್. ವಿ. ನರಸಿಂಹಮೂರ್ತಿ ಅವರು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಬಹುಭಾಷಾ ವಿದ್ವಾಂಸ, ನಿಗರ್ವಿ, ಸದಾ ನಗುಮೊಗದ ಡಾ. ಎಚ್.ವಿ.ನರಸಿಂಹ ಮೂರ್ತಿಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ೭೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ನೂರಾರು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕುಂದಾಪುರದ ಕುಂದೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ಡಾ. ಎಚ್. ವಿ. ನರಸಿಂಹಮೂರ್ತಿ ಅವರ ಕೊಡುಗೆ ಗಣನೀಯವಾದದ್ದು. ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಕುಂದಾಪುರದ ಹತ್ತಾರು ಸಂಸ್ಥೆಗಳಲ್ಲಿ ಡಾ. ಮೂರ್ತಿ ಸಕ್ರಿಯರಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ತೋಟದೂರು ಗ್ರಾಮದ ಮಾವಿನಕುಡಿಯವರಾದ ಡಾ. ಎಚ್. ವಿ. ನರಸಿಂಹಮೂರ್ತಿ ಅವರು ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸ ವೃತ್ತಿ ಆರಂಭಿಸಿದ ಬಳಿಕ ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ಪೈಕಿ ಬೈಂದೂರು ತಾಲೂಕಿನಲ್ಲಿ ಅತಿ ಹೆಚ್ಚು ಕಬ್ಬಡ್ಡಿ ಪಂದ್ಯಾಟಗಳು ಪ್ರತಿ ವರ್ಷ ನಡೆಯುತ್ತಿದ್ದು, ಉತ್ತಮ ಕ್ರೀಡಾಪಟುಗಳು ಈ ಭಾಗದಲ್ಲಿದ್ದಾರೆ. ಕಬ್ಬಡ್ಡಿ ಅಸೋಸಿಯೆಷನ್ ಮೂಲಕ ಅಂತಹ ಪ್ರತಿಭೆಗಳನ್ನು ಬೆಳಕಿಗೆ ತರುವ ಪ್ರಯತ್ನವಾಗಬೇಕಿದೆ ಎಂದು ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಹೇಳಿದರು. ಅವರು ಬೈಂದೂರು ಶಾರದಾ ಕನ್ವೆನ್ಷನ್ ಹಾಲ್‌ನಲ್ಲಿ ಬೈಂದೂರು ತಾಲೂಕು ಅಮೇಚ್ಯೂರ್ ಕಬಡ್ಡ ಅಸೋಸಿಯೇಷನ್ ರಚನೆಗೆ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಅಮೇಚೂರ್ ಕಬ್ಬಡ್ಡಿ ಅಸೋಸಿಯೇಷನ್ ಕಾಯೋನ್ಮುಖವಾಗಿದ್ದು, ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ವ್ಯವಸ್ಥಿತವಾಗಿ ಕಬಡ್ಡಿ ಕ್ರೀಡೆ ಆಯೋಜನೆ ಹಾಗೂ ಹೊಸ ಪ್ರತಿಭೆಗಳಿಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಅವಕಾಶ ದೊರೆಯುವಂತೆ ಮಾಡುವುದೇ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದರು. ಈ ಸಂದರ್ಭ ಬೈಂದೂರು ತಾಲೂಕು ಅಮೇಚ್ಯೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರನ್ನಾಗಿ ಪ್ರಥ್ವಿ ಕ್ರೀಡಾ ಸಂಘದ ಜಯಾನಂದ ಹೋಬಳಿದಾರ್ ಅವರನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊಟೇಶ್ವರದ ಶ್ರೀ ಕಾಳವಾರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಸುಬ್ರಹ್ಮಣ್ಯ ಎ. ಅವರು ಮಂಡಿಸಿದ ಅಧ್ಯಯನ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ನೀಡಿದೆ. ಸುಬ್ರಹ್ಮಣ್ಯ ಅವರು ‘ಖಜಾನೆ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಮಸೂದೆ – 2003 ನಂತರದಲ್ಲಿ ಕೇಂದ್ರ ಸರಕಾರದ ಖಜಾನೆ ನೀತಿ ಪರಿಪಾಲನೆ: ಒಂದು ಸಮಗ್ರ ಅಧ್ಯಯನ’ ಎಂಬ ವಿಷಯದ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ ಅರಬಿ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಸುಬ್ರಹ್ಮಣ್ಯ ಅವರು ಬೈಂದೂರು ಪಡುವರಿಯ ಅಪ್ಪಯ್ಯನ ಮನೆ ದಿ. ವೆಂಕಟರಮಣ ಹಾಗೂ ಲಕ್ಷ್ಮೀ ಅವರ ಪುತ್ರ.
2004ರ ಬಳಿಕ ಕ್ಲಿಷ್ಟಕರ ಶಿಖರವೇರಿದ ಮೊದಲಿಗ ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: 2016ರಲ್ಲಿ ವಿಶ್ವದ ಅತೀ ಎತ್ತರದ ಮೌಂಟ್ ಎವರೆಸ್ಟ್ ಶಿಖರವೇರಿದ್ದ ಕುಂದಾಪುರದ ಆರ್ಡಿ ಮೂಲದವರಾದ ಹರ್ಷದ್ ರಾವ್ ಈ ವರ್ಷ ಭಾರತದ ಅತೀ ಎತ್ತರದ ಪರ್ವತವಾಗಿರುವ ಸಿಕ್ಕಿಂ ರಾಜ್ಯ ಹಾಗೂ ನೇಪಾಳ ದೇಶದ ಮಧ್ಯೆ ಬರುವ ಕಾಂಚನಜುಂಗಾವನ್ನು ಏರುವ ಮೂಲಕ ಭಾರತದ ಶ್ರೇಷ್ಠ ಪರ್ವತಾರೋಹಿತಗಳ ಯಾದಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹರ್ಷ್‌ದ್ ರಾವ್ ಮೇ 20ರಂದು ಸುಮಾರು 28,169 ಅಡಿ ಎತ್ತರದ ಕಾಂಚನಜುಂಗಾ (ಕಾಂಚನಗಂಗಾ- ಕೆ-2) ಪರ್ವತವೇರುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ. 2014ರ ಅನಂತರ ಕಾಂಚನ ಜುಂಗಾ ಶಿಖರವೇರುತ್ತಿರುವವರ ಪೈಕಿ ಹರ್ಷದ್ ಮೊದಲಿಗರು. ಅಲ್ಲಿಯ ತನಕ ಕಾಂಚನಜುಂಗಾ ಶಿಖರವೇರಲು ಹಲವು ಮಂದಿ ಪ್ರಯತ್ನಪಟ್ಟರೂ ಕೂಡ ಯಾರೂ ಅದರಲ್ಲಿ ಸಫಲತೆ ಕಂಡಿರಲಿಲ್ಲ. 2016ರಲ್ಲಿಯೂ ಅನೇಕ ಮಂದಿ ಪರ್ವತಾವೇರಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ 29ರ ಹರೆಯದ ಹರ್ಷದ್ ರಾವ್, ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿದ್ದು, ಆರ್ಡಿಯ ಕಮಲಾಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪುರಸಭೆಯ ವಾರ್ಡುವಾರು ಮೀಸಲಾತಿ ಪ್ರಕಟಗೊಂಡಿದೆ. 23 ವಾರ್ಡುಗಳ ಪೈಕಿ ಮಹಿಳೆಯರಿಗೆ ಕೇವಲ 10 ಸ್ಥಾನಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಸ್ಥಳೀಯಾ ಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಪ್ರಾತಿನಿಧ್ಯ ನೀಡಬೇಕು ಎನ್ನುವ ನಿಯಮ ಇಲ್ಲಿಗೆ ಮಾತ್ರ ಅನ್ವಯ ಆಗಿಲ್ಲ. ಈ ಬಾರಿ ಕುಂದಾಪುರ ಪುರಸಭೆಯಲ್ಲಿ ಮಾತ್ರ 23 ವಾರ್ಡ್ಗಳ ಪೈಕಿ ಕೇವಲ 10 ವಾರ್ಡ್ಗಳಲ್ಲಿ ಮಾತ್ರ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. 2007 ರಲ್ಲಿದ್ದ ವಾರ್ಡುವಾರು ಮೀಸಲಾತಿ ಪಟ್ಟಿಯನ್ನೇ 2013 ರಲ್ಲಿಯೂ ಮುಂದುವರಿಸಿದ್ದು, ಈಗ 10 ವರ್ಷಗಳ ಅನಂತರ ವಾರ್ಡುವಾರು ಮೀಸಲಾತಿಯನ್ನು ಬದಲಿಸಲಾಗಿದೆ. ಪ್ರತಿ 5 ವರ್ಷಕ್ಕೊಮ್ಮೆ ವಾರ್ಡುವಾರು ಮೀಸಲಾತಿ ಬದಲಾಗಬೇಕು ಎನ್ನುವ ನಿಯಮವಿದ್ದರೂ, ಕಳೆದ 3 ಅವಧಿಯಿಂದಲೂ ಕುಂದಾಪುರ ಪುರಸಭೆಯ ಹುಂಚಾರುಬೆಟ್ಟು ವಾರ್ಡಿನಲ್ಲಿ ಸಾಮಾನ್ಯ ಮಹಿಳೆಗೆ, ಮದ್ದುಗುಡ್ಡೆ ವಾರ್ಡಿನಲ್ಲಿ ಸಾಮಾನ್ಯ, ಸೆಂಟ್ರಲ್ ವಾರ್ಡ್ನಲ್ಲಿ ಸಾಮಾನ್ಯ ಕೋಡಿ ಉತ್ತರ ವಾರ್ಡ್ನಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಲಾಗಿದೆ. ಈ ಬಗ್ಗೆ ಈಗಾಗಲೇ ಕೆಲವರು ಆಕ್ಷೇಪ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಜನಮನ್ನಣೆ ಗಳಿಸಿದ್ದ ಮಂಗಳೂರು – ಭಟ್ಕಳ ವೋಲ್ವೋ ಬಸ್‌ಗಳ ಪ್ರಯಾಣ ದರವನ್ನು ಕೆಎಸ್‌ಆರ್‌ಟಿಸಿ ಸಂಸ್ಥೆ ಏಕಾಏಕಿ ಹೆಚ್ಚಿಸುವ ಮೂಲಕ ಪ್ರಯಾಣಿಕರ ಕಿಸೆಗೆ ಕತ್ತರಿ ಹಾಕಿದೆ. ಭಟ್ಕಳದಿಂದ ಮಂಗಳೂರಿಗೆ ಸರಾಸರಿ 40 ರೂ. ಹೆಚ್ಚಾಗಿರುವುದರಿಂದ ನಿತ್ಯ ಪ್ರಯಾಣಿಕರು ತೀವ್ರ ಅಸಮಾಧಾನಗೊಂಡಿದ್ದಾರೆ. ವೋಲ್ವೋ ಪ್ರಾರಂಭವಾದ ಬಳಿಕ ಪ್ರಯಾಣಿಕರ ಸ್ಪಂದನ ಉತ್ತಮವಾಗಿತ್ತು. ಬಹುತೇಕ ಬಸ್‌ಗಳು ತುಂಬಿ ತುಳುಕುತ್ತಿದ್ದವು. ಈ ಸರಕಾರಿ ಬಸ್ ವ್ಯವಸ್ಥೆ ಖಾಸಗಿ ವಾಹನಗಳ ಮೇಲೆಯೂ ಸಾಕಷ್ಟು ಪರಿಣಾಮ ಬೀರಿತ್ತು. ಇದೀಗ ಏಕಾಏಕಿ ದರ ಹೆಚ್ಚಿಸಿರುವುದರಿಂದ ಜನತೆ ವೋಲ್ವೋ ಬಸ್‌ಗಳಿಂದ ದೂರವಾಗುವ ಸಾಧ್ಯತೆಗಳಿವೆ. 3 ಕೋ.ರೂ. ನಷ್ಟ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ಕಳೆದ ಆರ್ಥಿಕ ವರ್ಷದಲ್ಲಿ 22.52 ಕೋ.ರೂ. ನಷ್ಟದಲ್ಲಿದೆ. ಜನವರಿಯಲ್ಲಿ ಭಟ್ಕಳ – ಮಂಗಳೂರು ನಡುವೆ 8 ವೋಲ್ವೋ ಬಸ್‌ಗಳನ್ನು ಪ್ರಾರಂಭಿಸಲಾಗಿತ್ತು. ಇದರಿಂದ ಲಾಭವಾಗುವ ಬದಲು ನಷ್ಟವೇ ಅಧಿಕವಾಗಿದೆ. ಭಟ್ಕಳ-ಮಂಗಳೂರು ವೋಲ್ವೋ ಬಸ್ ಸಂಚಾರದಲ್ಲೇ ಜನವರಿಯಿಂದ ಇಲ್ಲಿನ ವರೆಗೆ 3 ಕೋ.ರೂ. ನಷ್ಟವಾದರೆ ಕಳೆದ ಆರ್ಥಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಯಡ್ತರೆ ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ಮಹಾದ್ವಾರ ಮೂಹೂರ್ತ ಧಾರ್ಮಿಕ ಕಾರ್ಯಕ್ರಮ ಶುಕ್ರವಾರ ನೆರವೇರಿತು. ವೇ. ಮೂ. ಸೀತಾರಾಮ ಅಡಿಗ ಅವರು ಧಾರ್ಮಿಕ ಕಾರ್ಯಕ್ರಮದ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ನಾಕಟ್ಟೆಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವೆಂಕಟ ಪೂಜಾರಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಗರಡಿಯ ಅರ್ಚಕ ಕುಟುಂಬದ ಮಂಜುನಾಥ ಮೇಲ್ಹಿತ್ಲು, ಸ್ಥಳೀಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ಆನಂದ ಶೆಟ್ಟಿ ನಾಕಟ್ಟೆ, ದೊಟ್ಟಯ ಪೂಜಾರಿ ಬಳಲ್ಕಟ್ಟೆ, ಶಿಲ್ಪಿ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವಿಶ್ವ ಯೋಗ ದಿನದ ಅಂಗವಾಗಿ ಮರವಂತೆ ಗ್ರಾಮ ಪಂಚಾಯತ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಆಶ್ರಯದಲ್ಲಿ ಸಾಧನಾ ಸಮುದಾಯ ಭವನದಲ್ಲಿ 7 ದಿನಗಳ ಯೋಗ ಶಿಬಿರವನ್ನು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಭಾರತದ ಪುರಾತನ ಜ್ಞಾನವಾದ ಯೋಗ ಈಗ ವಿಶ್ವವ್ಯಾಪಿಯಾಗಿದೆ. ಅದರ ಮಹತ್ವ ಮತ್ತು ಅದನ್ನು ಅನುಸರಿಸುವುದರಿಂದ ಆಗುವ ಲಾಭವನ್ನು ಎಲ್ಲರೂ ಅರಿತಿದ್ದಾರೆ. ಇದೇ 21 ರಂದು ಆಚರಿಸಲಾಗುವ ’ವಿಶ್ವ ಯೋಗ ದಿನ’ ಯೋಗಕ್ಕೆ ದೊರೆತ ವಿಶ್ವ ಮಾನ್ಯತೆಯ ದ್ಯೋತಕ. ಯೋಗವನ್ನು ಎಳವೆಯಲ್ಲೇ ಕಲಿತು ದಿನವೂ ಅನುಸರಿಸುವುದರಿಂದ ದೇಹ, ಮನಸ್ಸುಗಳ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ ಅಧ್ಯಕ್ಷತೆ ವಹಿಸಿದ್ದರು. ಅವರು ಮತ್ತು ಅತಿಥಿಗಳಾಗಿದ್ದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಮಹೇಶ್ವರಿ, ಯೋಗದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಮರವಂತೆ ಕುಶ ಬಿಲ್ಲವ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕಳೆದ ಹಲವು ದಿನಗಳಿಂದ ಅನಿಯಮಿತ ವಿದ್ಯುತ್ ವೈಫಲ್ಯವನ್ನು ಖಂಡಿಸಿ ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ಬೈಂದೂರು ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲಾಯಿತು. ಈ ಸಂದಭದಲ್ಲಿ ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಬೈಂದೂರಿನಲ್ಲಿರುವಂತ ವಿದ್ಯುತ್ ಸಮಸ್ಯೆ ರಾಜ್ಯಮಟ್ಟದ ಅಧಿಕಾರಿಗಳಿಗೂ ತಿಳಿದಿದೆ. ಮೆಸ್ಕಾಂ ಅಧಿಕಾರಿಗಳ ನಿಷ್ಕಾಳಜಿಯಿಂದಲೇ ಸಾರ್ವಜನಿಕರು ಪರದಾಡುವಂತಾಗಿದೆ. ಬೈಂದೂರಿನ ಮೆಸ್ಕಾಂ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಬೆಲೆ ಕೊಡುತ್ತಿಲ್ಲ. ಮಾತ್ರವಲ್ಲದೇ ದೂರು ಪಡೆಯಬೇಕಾದಂತ ಸಂದರ್ಭದಲ್ಲಿ ದೂರವಾಣಿಗಳಿಗೆ ಪ್ರತಿಕ್ರಿಯೆ ನೀಡದಿರುವುದು ಇಲ್ಲಿಯ ಅಧಿಕಾರಿಗಳ ಅಹಂಕಾರದ ಪ್ರವೃತ್ತಿಯಾಗಿದೆ. ಮುಂದಿನ ದಿನದಲ್ಲಿ ಬೈಂದೂರಿನ ಹಳ್ಳಿಹಳ್ಳಿಗಳ ವಿದ್ಯುತ್ ವೈಫಲ್ಯವನ್ನು ನಿಭಾಯಿಸದಿದ್ದರೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು.ಇದೇ ರೀತಿ ವಿದ್ಯುತ್ ವೈಫಲ್ಯ ಮುಂದುವರಿದರೆ ಶಾಸಕರ ನೇತ್ರತ್ವದಲ್ಲಿ ಬಂದೂರಿನಲ್ಲಿ ಹೋರಾಟ ನಡೆಸಲಾಗುವುದು. ಬಡವರ ಸಮಸ್ಯೆಗಳಿಗೆ ಇಲಾಖೆ ಸ್ಪಂದಿಸುತ್ತಿಲ್ಲ ಶ್ರೀಮಂತರು ಕರೆ ಮಾಡಿದರೆ ತಕ್ಷಣ ಸ್ಪಂದಿಸುತ್ತಾರೆ.ಇಂತಹ ಪ್ರವೃತ್ತಿಯನ್ನು ಅಧಿಕಾರಿಗಳು ಸುಧಾರಿಸಿಕೊಳ್ಳಬೇಕಾಗಿದೆ ಎಂದರು. ಬೈಂದೂರು ಮೆಸ್ಕಾಂ…
