ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಜಿಲ್ಲಾದ್ಯಂತ ವಿಜಯೋತ್ಸವ ಆಚರಿಸಲು ಕಾತರರಾಗಿರುವ ವಿವಿಧ ಪಕ್ಷಗಳಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಚುನಾವಣಾ ಫಲಿತಾಂಶದ ಬಳಿಕ ಜಿಲ್ಲೆಯಲ್ಲಿ ಗಲಭೆಯಾಗುವ ಸಂಭವ ಹೆಚ್ಚಿರುವುದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಈ ನಿರ್ಣಯ ಕೈಗೊಂಡಿದ್ದು, ಮೇ15ರ ಬೆಳಿಗ್ಗೆ 6ಗಂಟೆಯಿಂದ ಮೇ.17ರ ಬೆಳಿಗ್ಗೆ 6ಗಂಟೆಯ ತನಕ ಸೆಕ್ಷನ್ 144 ಜಾರಿಗೊಳಿಸಿದೆ. ನಿಷೇಧಾಜ್ಞೆಯ ಸಂದರ್ಭ ಗುಂಪು ಜನ ಸೇರುವುದು, ವಿಜಯೋತ್ಸವ ನಡೆಸುವುದು, ಸಭೆ ಸಮಾರಂಭಗಳನ್ನು ಆಯೋಜಿಸುವುದು, ಪರ-ವಿರೋಧ ಘೋಷಣೆ ಕೂಗುವುದು, ಸಂಜ್ಞೆ, ಚೇಷ್ಟೆ ಮಾಡುವುದು, ಚಿತ್ರ ಪ್ರದರ್ಶಿಸುವುದು ಪಟಾಕಿ ಸಿಡಿಸುವುದು ಸೇರಿದಂತೆ ಎಲ್ಲವನ್ನೂ ನಿಷೇಧಿಸಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ್ಯಂತ ಬಹುಪಾಲು ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.79.07% ಮತದಾನ ನಡೆದಿದ್ದರೇ, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.77.05% ಮತದಾನ ನಡೆದಿದೆ. ಪ್ರತಿಮತಗಟ್ಟೆಗಳಲ್ಲಿಯೂ ಹೊಸ ಮತದಾರರು ಮೊದಲ ಭಾರಿಗೆ ಮತದಾನ ಮಾಡುವ ಮೂಲಕ ಸಂಭ್ರಮ ಪಟ್ಟರೇ, ಶತಕದ ಆಸುಪಾಸಿನಲ್ಲಿರುವ ಹಿರಿಯ ಜೀವಗಳೂ ಕೂಡ ಹುರುಪಿನಿಂದ ಮತದಾನ ಮಾಡಿ ಮತದಾನಕ್ಕೆ ಪ್ರೇರೆಪಿಸಿದರು. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಬಿರುಸಿನ ಮತದಾನ ನಡೆದಿದ್ದು, ಆ ಬಳಿಕ ನಿಧಾನವಾಗಿ ಮತದಾನ ಸಾಗಿತ್ತು.
ಹೊಸ ಮತದಾರರ ಹರ್ಷ, ಹಿರಿಯ ಮತದಾರರ ಹುರುಪಿಗೆ ಸಾಕ್ಷಿಯಾದ ವಿಧಾನಸಭಾ ಚುನಾವಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ್ಯಂತ ಬಹುಪಾಲು ಮತಗಟ್ಟೆಗಳಲ್ಲಿ ಮಧ್ಯಾಹ್ನದ ತನಕ ಬಿರುಸಿನ ಮತದಾನ ನಡೆದಿದ್ದು, ಮಧ್ಯಾಹ್ನದ ಬಳಿಕ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ಮುಂದುವರಿಯಿತು. ಪ್ರತಿಮತಗಟ್ಟೆಗಳಲ್ಲಿಯೂ ಹೊಸ ಮತದಾರರು ಮೊದಲ ಭಾರಿಗೆ ಮತದಾನ ಮಾಡುವ ಮೂಲಕ ಸಂಭ್ರಮ ಪಟ್ಟರೇ, ಶತಕದ ಆಸುಪಾಸಿನಲ್ಲಿರುವ ಹಿರಿಯ ಜೀವಗಳೂ ಕೂಡ ಹುರುಪಿನಿಂದ ಮತದಾನ ಮಾಡಿ ಮತದಾನಕ್ಕೆ ಪ್ರೇರೆಪಿಸಿದರು. ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ಯಾವುದೇ ಗೊಂದಲವಿಲ್ಲದೇ ಮತದಾನ ನಡೆಯುತ್ತಿದೆ. ಮೊದಲ ಮತದಾನದ ಸಂಭ್ರಮ: ಕುಂದಾಪುರ ವಡೇರ ಹೋಬಳಿ ಪಿಂಕ್ ಮತಗಘಟ್ಟೆಯಲ್ಲಿ ಪ್ರಥಮ ಬಾರಿ ಮತ ಚಲಾಯಿಸಿ ಸೆಲ್ಫಿ ಪಾಯಿಂಟ್ನಲ್ಲಿ ಸೆಲ್ಪಿ ತೆಗೆಸಿಕೊಂಡು ಮೊದಲ ಮತದಾನದ ಖುಷಿಹಂಚಿಕೊಂಡ ಸ್ನೇಹತೆಯರು. ಕುಂದಾಪುರ ಫಿಲೋನಾ ವಾಝ್, ಸುಶ್ಮಾ ಬೆರೆಟ್ಟೊ ಹಾಗೂ ರೆಬೆರೋ ವಾಝ್ ಪ್ರಥಮ ಮತದಾನದ ನಂತರ ಪಿಂಕ್ ಮತಕೇಂದ್ರ ಸೆಲ್ಫಿ ಪಾಯಿಂಟ್ನಲ್ಲಿ ನಿಂತು ವಿಜಯದ ಸಂಕೇತ ಸಿಂಬಲ್ ತೋರಿಸುವ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ 94 ವರ್ಷದ ತಮ್ಮ ತಾಯಿ ಲಚ್ಚಿ ಪೂಜಾರ್ತಿ ಜೊತೆ ಕೋಟತಟ್ಟು ಸರ್ಕಾರಿ ಪ್ರಾಥಮಿಕ ಶಾಲೆ ಮತಕೇಂದ್ರದಲ್ಲಿ ಮತದಾನ ಮಾಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದುಬೈನಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದರೂ ಕೂಡ ಮತದಾನ ಮಾಡುವುದು ಕರ್ತವ್ಯ ಹಾಗೂ ಹಕ್ಕು ಎಂಬ ನಿಟ್ಟಿನಲ್ಲಿ ಎಲ್ಲಾ ಚುನಾವಣೆಗೂ ಊರಿಗೆ ಆಗಮಿಸುವ ಪರಿಪಾಠ ಹೊಂದಿದವರು ಕುಂದಾಪುರ ತಾಲೂಕಿನ ವಕ್ವಾಡಿ ಮೂಲದ ದುಬೈ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ. ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಅವರ ಪತ್ನಿ ರೂಪಾಲಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ವಕ್ವಾಡಿಗೆ ಆಗಮಿಸಿ ಮತದಾನದಲ್ಲಿ ಪಾಲ್ಘೊಂಡರು. ಪ್ರವೀಣ್ ಶೆಟ್ಟಿ ಬೆಳಗ್ಗೆ ವಕ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಅವರಿಗೆ ಸ್ನೇಹಿತ ಹಾಗೂ ವಕ್ವಾಡಿ ಮೂಲದ ಬೆಂಗಳೂರು ಉದ್ಯಮಿ ವಿ.ಕೆ. ಮೋಹನ್ ಸಾಥ್ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಡೇರ ಹೋಬಳಿ ಪಿಂಕ್ ಮತಗಘಟ್ಟೆಯಲ್ಲಿ ಪ್ರಥಮ ಬಾರಿ ಮತ ಚಲಾಯಿಸಿದ ಕುಂದಾಪುರ ಫಿಲೋನಾ ವಾಝ್, ಸುಶ್ಮಾ ಬೆರೆಟ್ಟೊ ಹಾಗೂ ರೆಬೆರೋ ವಾಝ್ ಪ್ರಥಮ ಮತದಾನದ ನಂತರ ಪಿಂಕ್ ಮತಕೇಂದ್ರ ಸೆಲ್ಫಿ ಪಾಯಿಂಟ್ನಲ್ಲಿ ನಿಂತು ವಿಜಯದ ಸಂಕೇತ ಸಿಂಬಲ್ ತೋರಿಸುವ ಮೂಲಕ ಸೆಲ್ಪಿತೆಗೆದುಕೊಂಡು ಸಂಭ್ರಮಿಸಿದರು. ನಾವು ಮತದಾನ ಮಾಡಿದ್ದೇವೆ. ಎಲ್ಲರೂ ಮತದಾನ ಮಾಡುವ ಮೂಲಕ ದೇಶಕಟ್ಟುವ ಕೆಲಸ ಮಾಡಬೇಕು. ದೇಶಕ್ಕಾಗಿ ನಮಗೆ ಬೇರೇನನ್ನೂ ಮಾಡಲಾಗದಿದ್ದರೂ ಮತದಾನದ ಮೂಲಕವಾದರೂ ಕಿಂಚಿತ್ ಋಣ ತೀರಿಸಲು ಸಾಧ್ಯ. ದೇಶದ ಅಭಿವೃದ್ಧಿಗೆ ನಾವು ಮೊದಲ ಮತದಾನದ ಮೂಲಕ ಕೊಡುಗೆ ನೀಡಿದ್ದೇವೆ ಎಂಬ ಹೆಮ್ಮೆ ನಮ್ಮದು. ನಾವು ಇನ್ನು ಮುಂದೆ ಯಾವತ್ತೂ ಮತದಾನದಿಂದ ದೂರ ಉಳಿಯೋದಿಲ್ಲ. ಎಲ್ಲರೂ ಮತದಾನ ಮಾಡುವ ಮೂಲಕ ಸದೃಢ, ಸಂಭೃದ್ಧ ದೇಶ ಕೊಟ್ಟೋಣ ಎಂದು ಮೂವರು ಸ್ನೇಹಿತೆಯರು ತಿಳಿಸಿದ್ದಾರೆ. ಈ ದಿನಕ್ಕಾಗಿ ಕಾದಿದ್ದೆ: ಎಲ್ಲರೂ ಮತದಾನ ಮಾಡುತ್ತಿರುವಾಗ ನಾನು ಮತದಾನ ಮಾಡಬೇಕು ಎನ್ನುವ ಉತ್ಕಟ ಆಸೆ ಪುಟಿದೇಳುತ್ತಿತ್ತು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹಾಲಾಡಿಯಲ್ಲಿ ಮತದಾನ ಮಾಡಿದರು.
ಎ.ಎಸ್.ಎನ್ ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ ಭಾರತದ ಸದನಗಳು ಹಕ್ಕುಬಾಧ್ಯತೆ ಎಂತ ಪ್ರತಿಪಾದಿಸುತ್ತಿರುವುದರ ಮೂಲ ಇಂಗ್ಲಂಡಿನ ಹೌಸ್ ಆಫ್ ಕಾಮನ್ಸ್ನ ಸದಸ್ಯರ ಹಕ್ಕುಗಳನ್ನು ಕಂಡು. ಇಂಗ್ಲಂಡಿನ ಸದಸ್ಯರಿಗೆ ಇಷ್ಟೆಲ್ಲ ಹಕ್ಕುಬಾಧ್ಯತೆಗಳಿರುವಾಗ ನಮಗೇಕಿರಬಾರದು ಎನ್ನುವುದು ಒಂದು ವಾದ. ಈ ಹಕ್ಕುಬಾಧ್ಯತೆ ಎಷ್ಟು ಸೂಕ್ಷ್ಮ ಸಂಗತಿ ಎಂದರೆ ಕೆಲವೊಮ್ಮೆ ಅದರ ಶಕ್ತಿ ಭಸ್ಮಾಸುರನಂತೆಯೂ ಇರಬಲ್ಲುದು. ಜೈಲಿನಲ್ಲಿ ಅಶ್ಲೀಲ ಸಾಹಿತ್ಯ 1839ರಲ್ಲಿ ಹನ್ಸಾರ್ಡ್ ಎಂಬಾತ ಇಂಗ್ಲಂಡಿನ ಹೌಸ್ ಆಫ್ ಕಾಮನ್ಸ್ನ ಆದೇಶದಂತೆ ಜೈಲುಗಳ ಪರಿವೀಕ್ಷಣೆ (ಇನ್ಸ್ಪೆಕ್ಷನ್) ಮಾಡಿ ತನ್ನ ವರದಿ ಸಲ್ಲಿಸಿದ. ಇಲ್ಲಿಗೆ ನಿಂತಿದ್ದರೆ ಏನೂ ಆಗುತ್ತಿರಲಿಲ್ಲ. ಆತ ಅದನ್ನು ಸಾರ್ವಜನಿಕವಾಗಿ ಮುದ್ರಿಸಿ, ಮಾರಿದ. ಈ ವರದಿಯಲ್ಲಿ ಆತ ಬರೆದಿದ್ದ ಒಂದು ಸಂಗತಿ ಸ್ಟಾಕ್ ಡೇಲ್ ಎಂಬ ಪ್ರಕಾಶಕರ ಕೆಂಗಣ್ಣಿಗೆ ಗುರಿಯಾಯಿತು. ವರದಿಯಲ್ಲಿ ಹನ್ಸಾರ್ಡ್, ನ್ಯೂಗೇಟ್ ಎಂಬ ಜೈಲಿನಲ್ಲಿ ಈ ಸ್ಟಾಕ್ ಡೇಲ್ ಪ್ರಕಟಿಸಿದ ಒಂದು ಅಶ್ಲೀಲ ಪುಸ್ತಕ ಸ್ವಚ್ಛಂದವಾಗಿ ಸುತ್ತಾಡುತ್ತಿತ್ತು ಎಂದು ಬರೆದಿದ್ದ. ಸ್ಟಾಕ್ ಡೇಲ್ಗೆ ಇದು ಮಾನಹಾನಿಕರ ಎನ್ನಿಸಿತು. ಅವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಅವರು ಅಂಕದಕಟ್ಟೆ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಂ ಸುಕುಮಾರ ಶೆಟ್ಟಿ ಅವರು ಬೆಳಿಗ್ಗೆ ಮತ ಚಲಾಯಿಸಿದರು.
