ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಾದ್ಯಂತ ಶಾಂತಿಯುತ ಮತದಾನ

Click Here

Call us

Call us

Call us

ಹೊಸ ಮತದಾರರ ಹರ್ಷ, ಹಿರಿಯ ಮತದಾರರ ಹುರುಪಿಗೆ ಸಾಕ್ಷಿಯಾದ ವಿಧಾನಸಭಾ ಚುನಾವಣೆ

Call us

Click Here

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ್ಯಂತ ಬಹುಪಾಲು ಮತಗಟ್ಟೆಗಳಲ್ಲಿ ಮಧ್ಯಾಹ್ನದ ತನಕ ಬಿರುಸಿನ ಮತದಾನ ನಡೆದಿದ್ದು, ಮಧ್ಯಾಹ್ನದ ಬಳಿಕ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ಮುಂದುವರಿಯಿತು. ಪ್ರತಿಮತಗಟ್ಟೆಗಳಲ್ಲಿಯೂ ಹೊಸ ಮತದಾರರು ಮೊದಲ ಭಾರಿಗೆ ಮತದಾನ ಮಾಡುವ ಮೂಲಕ ಸಂಭ್ರಮ ಪಟ್ಟರೇ, ಶತಕದ ಆಸುಪಾಸಿನಲ್ಲಿರುವ ಹಿರಿಯ ಜೀವಗಳೂ ಕೂಡ ಹುರುಪಿನಿಂದ ಮತದಾನ ಮಾಡಿ ಮತದಾನಕ್ಕೆ ಪ್ರೇರೆಪಿಸಿದರು. ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ಯಾವುದೇ ಗೊಂದಲವಿಲ್ಲದೇ ಮತದಾನ ನಡೆಯುತ್ತಿದೆ.

ಮೊದಲ ಮತದಾನದ ಸಂಭ್ರಮ:
ಕುಂದಾಪುರ ವಡೇರ ಹೋಬಳಿ ಪಿಂಕ್ ಮತಗಘಟ್ಟೆಯಲ್ಲಿ ಪ್ರಥಮ ಬಾರಿ ಮತ ಚಲಾಯಿಸಿ ಸೆಲ್ಫಿ ಪಾಯಿಂಟ್‌ನಲ್ಲಿ ಸೆಲ್ಪಿ ತೆಗೆಸಿಕೊಂಡು ಮೊದಲ ಮತದಾನದ ಖುಷಿಹಂಚಿಕೊಂಡ ಸ್ನೇಹತೆಯರು. ಕುಂದಾಪುರ ಫಿಲೋನಾ ವಾಝ್, ಸುಶ್ಮಾ ಬೆರೆಟ್ಟೊ ಹಾಗೂ ರೆಬೆರೋ ವಾಝ್ ಪ್ರಥಮ ಮತದಾನದ ನಂತರ ಪಿಂಕ್ ಮತಕೇಂದ್ರ ಸೆಲ್ಫಿ ಪಾಯಿಂಟ್‌ನಲ್ಲಿ ನಿಂತು ವಿಜಯದ ಸಂಕೇತ ಸಿಂಬಲ್ ತೋರಿಸುವ ಮೂಲಕ ಸೆಲ್ಪಿತೆಗೆದುಕೊಂಡು ಸಂಭ್ರಮಿಸಿದರು. ನಾವು ಮತದಾನ ಮಾಡಿದ್ದೇವೆ. ಎಲ್ಲರೂ ಮತದಾನ ಮಾಡುವ ಮೂಲಕ ದೇಶಕಟ್ಟುವ ಕೆಲಸ ಮಾಡಬೇಕು. ದೇಶಕ್ಕಾಗಿ ನಮಗೆ ಬೇರೇನನ್ನೂ ಮಾಡಲಾಗದಿದ್ದರೂ ಮತದಾನದ ಮೂಲಕವಾದರೂ ಕಿಂಚಿತ್ ಋಣ ತೀರಿಸಲು ಸಾಧ್ಯ. ದೇಶದ ಅಭಿವೃದ್ಧಿಗೆ ನಾವು ಮೊದಲ ಮತದಾನದ ಮೂಲಕ ಕೊಡುಗೆ ನೀಡಿದ್ದೇವೆ ಎಂಬ ಹೆಮ್ಮೆ ನಮ್ಮದು. ನಾವು ಇನ್ನು ಮುಂದೆ ಯಾವತ್ತೂ ಮತದಾನದಿಂದ ದೂರ ಉಳಿಯೋದಿಲ್ಲ. ಎಲ್ಲರೂ ಮತದಾನ ಮಾಡುವ ಮೂಲಕ ಸದೃಢ, ಸಂಭೃದ್ಧ ದೇಶ ಕೊಟ್ಟೋಣ ಎಂದು ಮೂವರು ಸ್ನೇಹಿತೆಯರು ವಿಜಯವಾಣಿಗೆ ತಿಳಿಸಿದ್ದಾರೆ.

ಹಿರಿಯ ನಾಗರಿಕರು:
ಶಿರೂರಿನಲ್ಲಿ 102 ವರ್ಷದ ಹಿರಿಯ ನಾಗರಿಕ ಅಬ್ದುಲ್ ಖಾದರ್ ಮತದಾನ ಮಾಡಿ ಯುವಕರಲ್ಲಿ ಹರುಪು ತುಂಬಿದರು. ವಡೇರಹೋಬಳಿ ಪಿಂಕ್ ಮತಘಟ್ಟೆಯಲ್ಲಿ ಇಬ್ಬರು ಮಹಿಳಾ ಮತದಾರರು ಒಂದೇ ಕುರ್ಚಿ ಹಂಚಿಕೊಂಡ ಮತದಾನದ ಸರದಿಗಾಗಿ ಕಾಯುವ ಮೂಲಕ ವೀಕ್ಷಕರ ಗಮನ ಸೆಳೆದರು. ಹಿರಿಯ ನಾಗರಿಕರಿಗೆ ಸರತಿ ಸಾಲಲ್ಲಿ ನಿಂತು ಮತದಾನ ಮಾಡಬಾರದು ಎನ್ನುವ ನಿಟ್ಟಲ್ಲಿ ರೆಸ್ಟ್ ರೂಮ್ ಹಾಗೂ ಪತ್ರಿಕೆ ಇನ್ನಿತರ ಸೌಲಭ್ಯ ಚುನಾವಣೆ ಇಲಾಖೆ ಮಾಡತ್ತು. ಮತದಾನ ಮಾಡಲು ಬಂದ ಹಿರಿಯರು ಮತಘಟ್ಟೆಯಲ್ಲಿ ಕ್ರೌಡ್ ಇದ್ದಿದ್ದರಿಂದ ಟೋಕನ್ ಕೊಟ್ಟು ಹಿರಿಯ ಮಹಿಳೆಯರಿಗೆ ಕುರ್ಚಿ ಕೊಟ್ಟು ಕೂಡಿಸಿದ್ದು, ಅವರ ಸರದಿ ಬಂದ ನಂತರ ಚುನಾವಣೆ ಅಧಿಕಾರಿ ಹಿರಿಯ ಮಹಿಳೆರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟರು.

ಪಿಂಕ್ ಮತಗಟ್ಟೆಗಳಲ್ಲಿ ಸಖಿಯರ ದರ್ಬಾರ್:
ಕುಂದಾಪುರ ವಡೇರ ಹೋಬಳಿ ಮತ್ತು ಮೇಲ್ಕಟ್ಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಖಿ ಮತಘಟ್ಟೆಯಾಗಿದ್ದು, ರಕ್ಷಣಾ ಸಿಬ್ಬಂದಿ ಸಹಿತ ಎಲ್ಲರೂ ಮಹಿಳೆಯರೇ.  ಮತಘಟ್ಟೆ ಗೋಡೆಯಿಂದ ಹಿಡಿದು ಪೋಲಿಂಗ್ ಬಾಕ್ಸ್ ತನಕ, ಸಿಬ್ಬಂದಿ ಸಮವಸ್ತ್ರ ಕೂಡಾ ಪಿಂಕ್. ಅತೀ ಹೆಚ್ಚು ಮಹಿಳಾ ಮತದಾರರುವ ಪ್ರದೇಶದಲ್ಲಿ ಪಿಂಕ್ ಮತಕೇಂದ್ರ ತೆರೆದಿದ್ದು, ಮಹಿಳೆಯರು ಖುಷಿಯಿಂದ ಬಂದ ಸರತಿ ಸಾಲಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಪಿಂಕ್ ಮತಕೇಂದ್ರ ಮಹಿಳಾ ಸ್ನೇಹಿಯಾಗಿ ಮಹಿಳೆಯರ ಆರ್ಕಷಿಸಿತು.

Click here

Click here

Click here

Click Here

Call us

Call us

ಹಿರಿಯ ಯಕ್ಷಗಾನ ಕಲಾವಿದ ಗೆಳೆಯರ ಮತದಾನದ ಹುಮ್ಮಸ್ಸು
ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಕಲಾವಿದ ಗೆಳೆಯರು ಮತದಾನ ಮಾಡುವ ಮೂಲಕ ಯುವಕರಿಗೆ ಮಾದರಿಯರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಡಗುತಿಟ್ಟುವ ಕಲಾವಿದ ನಾರಾಯಣ ಗಾಣಿಗ ವಂಡ್ಸೆ (೮೪) ಹಾಗೂ ವಿ.ನಾಗಯ್ಯ ಶೆಟ್ಟಿ (94) ಮತದಾನ ಮಾಡಿದ ಕಲಾವಿದರು. ಇಬ್ಬರೂ ಕಲಾವಿದರು ಒಂದೇ ಊರಿನವರಾಗದ್ದು, ಇಬ್ಬರೂ ಒಟ್ಟಾಗಿ ಹಲವಾರು ಮೇಳದಲ್ಲಿ ಕಲಾವಿದರಾಗಿ ದುಡಿದ್ದರು. ಇಬ್ಬರಿಗೂ ಪ್ರಜಾಪ್ರಭುತ್ವದಲ್ಲಿ ಅಚಲ ವಿಶ್ವಾಸವಿದ್ದೂ, ಮತದಾನ ಮಾಡುವುದು ಇವರು ಎಂದೂ ಮರೆತಿಲ್ಲ.

 

Leave a Reply