ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶಿರೂರು ರಾಗತರಂಗ ಟ್ರಸ್ಟ್ ನೂತನವಾಗಿ ಆರಂಭಿಸಿದ ರಾಗತರಂಗ ಸೇವಾಸಂಗಮ ಶಿಶುಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಯಳಜಿತ್ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದಜೀ ಮಕ್ಕಳಿಗೆ ಬಾಲ್ಯದಲ್ಲಿ ಭಾರತೀಯ ಸಂಸ್ಕೃತಿ ಆಧಾರಿತ ಹಾಗೂ ನೈತಿಕ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ದೇಶಪ್ರೇಮ ಬೆಳೆಸಲು ಪೋಷಕರು ಸಹಕರಿಸಬೇಕು. ಗುರುಹಿರಿಯರನ್ನು ಗೌರವಿಸುವ ಪ್ರವೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು. ಬಾಲ್ಯದಲ್ಲಿ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಮಕ್ಕಳು ದಾರಿ ತಪ್ಪದಂತೆ ಎಚ್ಚರವಹಿಸಿ ಜತೆಗೆ ಮಕ್ಕಳಲ್ಲಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಂತಹ ಮಹತ್ಕಾರ್ಯವನ್ನು ಶಿಶು ಮಂದಿರಗಳು ನಿಸ್ವಾರ್ಥತೆಯಿಂದ ಮಾಡುತ್ತಿದೆ. ಸದಾ ಕ್ರಿಯಾಶೀಲವಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತಾ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತಿರುವ ಶಿಶು ಮಂದಿರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಾತಾಜಿಯವರ ಸೇವೆ ಮತ್ತು ತ್ಯಾಗ ಹಾಗೂ ಶಿಶುಮಂದಿರದ ಕಾರ್ಯ ಅವಿಸ್ಮರಣೀಯ ಎಂದು ಸ್ವಾಮೀಜಿ ಶ್ಲಾಘಿಸಿದರು. ಕುಂದಾಪುರ ಸೇವಾಸಂಗಮ ಟ್ರಸ್ಟ್ನ ವಿಶ್ವಸ್ಥ ಸುಬ್ರಹ್ಮಣ್ಯ ಹೊಳ್ಳ, ಕಾರ್ಯದರ್ಶಿ ಚಂದ್ರಿಕಾ ಧನ್ಯ, ಗೋಪಾಲಕೃಷ್ಣ ಶಿರೂರು, ಕಟ್ಟಡ ಮಾಲೀಕ ರಮೇಶ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಜಪಾನ್ನ ಗಿಫುನಲ್ಲಿ ಜೂನ್ 6ರಿಂದ 10ರವರೆಗೆ ನಡೆಯಲಿರುವ 18ನೇ ಏಷ್ಯನ್ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ 5 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಕಳೆದ ತಿಂಗಳು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಈ ಕ್ರೀಡಾಪಟುಗಳು ಪದಕದ ಸಾಧನೆಯನ್ನು ಮಾಡಿದ್ದು, ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿರುತ್ತಾರೆ. 100 ಮೀ.ನಲ್ಲಿ ಪ್ರಜ್ವಲ್ ಮಂದಣ್ಣ, ಶಾಟ್ಪುಟ್ನಲ್ಲಿ ಆಶಿಷ್, 400 ಮೀ.ನಲ್ಲಿ ಶುಭ ವಿ, ಶಾಟ್ಪುಟ್ನಲ್ಲಿ ಅನಾಮಿಕ ಹಾಗೂ ಎತ್ತರಜಿಗಿತದಲ್ಲಿ ಅಭಿನಯ ಶೆಟ್ಟಿ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: 2018ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಗರಿಷ್ಠ ವಿದ್ಯಾರ್ಥಿಗಳ ತೇರ್ಗಡೆಯೊಂದಿಗೆ ಅತ್ಯುನ್ನತ ಸಾಧನೆ ಮಾಡಿದೆ. ಇಂಜಿನಿಯರಿಂಗ್, ಬಿ.ಎಸ್ ಅಗ್ರಕಲ್ಚರ್, ವಟರ್ನರಿ ಸೈನ್ಸ್, ಬಿ.ಫಾರ್ಮ, ಡಿ.ಫಾರ್ಮ, ಬಿ.ಎಸ್ ಅಗ್ರಿಕಲ್ಚರ್ ಪ್ರಾಕ್ಟಿಕಲ್, ವೆಟರರ್ನರಿ ಸೈನ್ಸ್ ಪ್ರಾಕ್ಟಿಕಲ್ ವಿಷಯಗಳನ್ನು ಸೇರಿ 1ರಿಂದ 100 ಒಳಗಡೆ 99 ರ್ಯಾಂಕ್, 200 ಒಳಗಡೆ 224, 300 ಒಳಗಡೆ 312 ರ್ಯಾಂಕ್, 400 ಒಳಗಡೆ 412 ರ್ಯಾಂಕ್, 500 ಒಳಗಡೆ 498 ರ್ಯಾಂಕ್ ಗಳಿಸಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಶಶಾಂಕ್ ಡಿ. 12ನೇ ರ್ಯಾಂಕ್, ಕಾರ್ತಿಕ್ ಎಸ್.ಮರಾಠೆ 59ನೇ ರ್ಯಾಂಕ್, ಬಿ.ಎಸ್ ಅಗ್ರಿಕಲ್ಚರ್(ಪ್ರಾಕ್ಟಿಕಲ್)- ಮೆಲಿಶಾ ರೊಡ್ರಿಗಸ್ 2ನೇ ರ್ಯಾಂಕ್, ಹಲ್ಲೆಪ್ಪ ಗೌಡ 10ನೇ ರ್ಯಾಂಕ್, ವಟರ್ನರಿ ಸೈನ್ಸ್(ಪ್ರಾಕ್ಟಿಕಲ್) ದರ್ಶನ್ 4ನೇ ರ್ಯಾಂಕ್, ಬಿಎಸ್ ಅಗ್ರಿಕಲ್ಚರ್ನಲ್ಲಿ ಸೌರವ್ ಪಪತಿ 7ನೇ ಹಾಗೂ ಪ್ರಸನ್ನ ಭಟ್ 10ನೇ ರ್ಯಾಂಕ್ ಪಡೆದಿದ್ದಾರೆ. ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪುರಸಭೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಖಾರ್ವಿಕೇರಿ ವಾರ್ಡಿನಲ್ಲಿ ಸ್ವಚ್ಛತಾ ಕಾರ್ಯವನ್ನು ಆಯೋಜಿಸಲಾಯಿತು. ಪುರಸಭಾ ಅಧ್ಯಕ್ಷರಾದ ವಸಂತಿ ಮೋಹನ್ ಸಾರಂಗ, ಉಪಾಧ್ಯಕ್ಷರಾದ ರಾಜೇಶ್ ಕಾವೇರಿ, ಪುರಸಭಾ ಮುಖ್ಯಾಧಿಕಾರಿಯಾದ ಶ್ರೀಮತಿ ವಾಣಿ ವಿ. ಆಳ್ವ, ಹಿರಿಯ ಆರೋಗ್ಯ ನಿರೀಕ್ಷಕರಾದ ಶರತ್ ಎಸ್ ಖಾರ್ವಿ, ಕಿರಿಯ ಆರೋಗ್ಯ ನಿರೀಕ್ಷಕರಾದ ರಾಘವೇಂದ್ರ ಮಂಜುನಾಥ ನಾಯ್ಕ, ಪೌರಕಾರ್ಮಿಕರು ಮತ್ತು ಸದ್ರಿ ವಾರ್ಡಿನ ಸಾರ್ವಜನಿಕರು ಭಾಗವಹಿಸಿ ಉತ್ತಮ ಪ್ರತಿಕ್ರಿಯೆ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸರತಿಯಲ್ಲಿ ಮಳೆ ಹಾಗೂ ಬಿಸಿಲಿನ ತಾಪದ ಅನುಭವವಾಗದಂತೆ ಹೊರ ಪೌಳಿಯಲ್ಲಿ ಸರತಿ ಸಾಲಿನ ನೆರಳಿಗೆ ’ಗಾಲ್ವ ನೂಮ್ ಶೀಟ್’ನ ಚಪ್ಪರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಭಕ್ತರ ಆಶ್ರಯಕ್ಕೆ ಸಮರ್ಪಣೆಯಾಗಿದೆ. ತಮಿಳುನಾಡಿನ ಭಕ್ತರೋರ್ವರ ಕಾಣಿಕೆಯ ಅನುದಾನದೊಡನೆ ಮಿಕ್ಕುಳಿದ ಹಣವನ್ನು ಕ್ರೋಢಿಕರಿಸಿ ರೂ. 11 ಲಕ್ಷ ವೆಚ್ಚದಲ್ಲಿ ’ಗಾಲ್ವ ಲೂಮ್ ಶೀಟ್’ನಿಂದ ಆಕರ್ಷಣೀಯ ನೆರಳಿನ ಚಪ್ಪರ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ. ದೇಶದ ನಾನಾ ಕಡೆಯಿಂದ ಆಗಮಿಸುವ ಸಹಸ್ರಾರು ಸಂಖ್ಯೆಯ ಭಕ್ತರಿಗೆ ದೇವಿ ದರ್ಶನಕ್ಕೆ ಗಂಟೆಗಟ್ಟಲೇ ಬಿಸಿಲು ಹಾಗೂ ಮಳೆಯಲ್ಲಿ ನಿಲ್ಲಬೇಕಾದ ಪ್ರಸಂಗವನ್ನು ಅರಿತ ಭಕ್ತರೋರ್ವರು ನೆರಳಿನ ಚಪ್ಪರದ ನಿರ್ಮಾಣಕ್ಕೆ ದೇಣಿಗೆ ನೀಡುವುದರ ಮೂಲಕ ಭಕ್ತರಿಗೆ ನೆರವಾಗಿರುತ್ತಾರೆ. ವರ್ಷಂಪ್ರತಿಯ ರಥೋತ್ಸವದ ಸಂದರ್ಭದಲ್ಲಿ ರಥ ಸಂಚಾರಕ್ಕೆ ನೆರಳಿನ ಚಪ್ಪರವನ್ನು ತೆಗೆಯುವ ಅನಿವಾರ್ಯತೆ ಇರುವುದರಿಂದ ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ’ಗಾಲ್ವ ಲೂಮ್ ಶೀಟ್’ ನಲ್ಲಿ ಅಳವಡಿಸಲಾಗಿದ್ದು ಯಾವುದೇ ಕ್ಷಣದಲ್ಲಿ ಅದನ್ನು ಬೇರ್ಪಡಿಸುವ ವ್ಯವಸ್ಥೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪುರಸಭಾ ಸಭಾಂಗಣದಲ್ಲಿ ಪುರಸಭಾಧ್ಯಕ್ಷೆ ವಸಂತಿ ಮೋಹನ್ ಸಾರಂಗ ಅಧ್ಯಕ್ಷತೆಯಲ್ಲಿ ಮಾಸಿಕ ಸಾಮಾನ್ಯ ಸಭೆ ಜರುಗಿತು. ಈ ಸಭೆಯನ್ನು ಉದ್ದೇಶಿಸಿ ಪುರಸಭಾ ಸದಸ್ಯೆ ಗುಣರತ್ನಾ ಅವರು ಮಾತನಾಡಿ ಪುರಸಭೆಯ ವ್ಯಾಪ್ತಿಯಲ್ಲಿ ಮನೆ ಕಟ್ಟಲು ಅನುಮತಿ ನೀಡುವುದು ಪುರಸಭೆಯ ಆಡಳಿತದ ಜವಾಬ್ದಾರಿಯಾಗಿದ್ದು, ಆದರೆ ಇಲ್ಲಿ ಅವರ ಹೆಸರಲ್ಲಿ ಜಾಗವಿಲ್ಲದಿದ್ದರೂ, ಮನೆ ಕಟ್ಟಲು ಅನುಮತಿ ನೀಡಲಾಗಿದೆ. ಇಂತಹದ್ದೆ ಪ್ರಕರಣವೊಂದು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿದ್ದು, ಆದರೆ ಅವರಿಗೆ ಕಾನೂನು ಪ್ರಕಾರ ಲೈಸೆನ್ಸ್ ನೀಡಲಾಗಿಲ್ಲ. ಆದರೆ ಈಗ ಮತ್ತೂಂದು ಪ್ರಕರಣದಲ್ಲಿ ನೀಡಲಾಗಿದೆ. ಅದರಲ್ಲಿ ಮುಖ್ಯಾಧಿಕಾರಿ ಸಹಿ ಕೂಡ ಇದೆ ಎಂದು ತಿಳಿಸಿದರು. ಈ ವಿಷಯದ ಕುರಿತಂತೆ ಮಾತನಾಡಿದ ಮುಖ್ಯಾಧಿಕಾರಿ ವಾಣಿ ಬಿ. ಆಳ್ವ ಅವರು, ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎನ್ನುವ ಭರವಸೆ ನೀಡಿದರು. ಸಭೆಯಲ್ಲಿ ಹಾಜರಿದ್ದ ಸಂಚಾರಿ ಪೊಲೀಸ್ ಎಸ್ಐ ಸುದರ್ಶನ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸ್ಥಳಾವಕಾಶ ಕಡಿಮೆಯಿದೆ ಎಂದಾಗ, ಮಧ್ಯಪ್ರವೇಶಿಸಿದ ಸದಸ್ಯರು, ಎಕ್ಸ್ಪ್ರೆಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಇಲ್ಲಿಯ ರೋಟರಿ ಸಭಾಂಗಣದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳ ಆರಂಭೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿ.ಎಸ್.ವಿ.ಎಸ್ ಅಸೋಷಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ ವಿದ್ಯಾರ್ಥಿ ಜೀವನ ಎನ್ನುವುದು ಮನುಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಶಿಸ್ತು ಸಂಯಮ ಗೌರವ ಛಲ ಇತ್ಯಾದಿಗಳ ಮೂಲಕ ನಾವು ಗುರಿಯನ್ನು ತಲುಪಲು ನಿರಂತರ ಪರಿಶ್ರಮ ಪಟ್ಟರೆ ಗೆಲುವು ನಮ್ಮದಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸರಸ್ವತಿ ವಿದ್ಯಾಲಯ ಕಾಲೇಜಿನ ಕಾರ್ಯದರ್ಶಿ ಎನ್ ಸದಾಶಿವ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪನ್ಯಾಸಕ ಭಾಸ್ಕರ್ ಶೆಟ್ಟಿ ವಿದ್ಯಾಲಯ ಬಳಗವನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಶಿಸ್ತು ಪಾಲನೆ ನೀತಿ ನಿಯಮಗಳ ಬಗೆಗೆ ಮಾಹಿತಿ ನೀಡಿದರು.ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ದೊರೆಯುವ ವಿವಿಧ ಸೌಲಭ್ಯಗಳ ಬಗೆಗೆ ಉಪನ್ಯಾಸಕರಾದ ಸುಜಯೀಂದ್ರ ಹಂದೆ. ಪ್ರವೀಣ್ ಕಾಮತ್, ನರೇಂದ್ರ ಎಸ್ ಗಂಗೊಳ್ಳಿ ಮತ್ತು ಕಛೇರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಕ್ಷೇತ್ರದ ಅಭಿವೃದ್ಧಿ ಕುರಿತು ಹಲವು ಚಿಂತನೆಗಳಿವೆ. ಜನರ ಸೇವಕನಾಗಿ ಕ್ಷೇತ್ರದ ಅಭಿವೃದ್ದಿಗೆ ಹಗಲಿರುಳು ಶ್ರಮಿಸುತ್ತೇನೆ ಮತ್ತು ಯಾವುದೇ ಸಮಸ್ಯೆಗಳಿದ್ದರೂ ಕೂಡ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ನನ್ನನು ಸಂಪರ್ಕಿಸಬಹುದಾಗಿದೆ ಮತ್ತು ಕ್ಷೇತ್ರದ ಜನರ ಸೇವೆಗೆ ಸದಾ ಬದ್ದನಾಗಿದ್ದೇನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಹೇಳಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರ ಕಛೇರಿಯನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕ್ಷೇತ್ರ ರಸ್ತೆ, ಆಸ್ಪತ್ರೆ, ಕುಡಿಯುವ ನೀರಿನ ಸಮರ್ಪಕ ಪೂರೈಕೆ ಬಗ್ಗೆ ಯೋಜನೆ ರೂಪಿಸುತ್ತೇನೆ. ಮಳೆಗಾಲದಲ್ಲಿ ಐ.ಆರ್.ಬಿ ಕಾಮಗಾರಿಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಜಿ.ಪಂ ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ್ ಬಟ್ವಾಡಿ,…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಕುಂದಾಪುರದ ಹೆಮ್ಮೆಯ ಸಂಸ್ಥೆಯಾದ ಸಾಧನ ಕಲಾ ಸಂಗಮ ರಿ, 2009 ಪ್ರಾರಂಭವಾಗಿ, ಈ ವರ್ಷ ತನ್ನ ದಶಮಾನ ವರ್ಷ ಆಚರಣೆಯ ಸಂಭ್ರಮದಲ್ಲಿದೆ. ಕರಾವಳಿಯಲ್ಲೆ ವಿಶಿಷ್ಟ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಂಸ್ಥೆ ಒಂದೇ ಸೂರಿನಡಿ ಭಾರತೀಯ ಲಲಿತ ಕಲೆಗಳ ವಿವಿಧ ಪ್ರಕಾರವನ್ನು ಆಸಕ್ತ ಸಾಧಕರಿಗೆ ಉಣಬಡಿಸುತ್ತಿದೆ. ಈ ದಶಮಾನ ವರ್ಷಾಚರಣೆಯನ್ನು ಅರ್ಥ ಪೂರ್ಣವಾಗಿಸಲು, ಈ ವರ್ಷ ಪೂರ್ತಿ ನಿರಂತರ ಲಲಿತಕಲೆಗಳಿಗೆ ಸಂಭಂದಪಟ್ಟ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ನಮ್ಮ ಹೆಮ್ಮೆಯ ಕಾರ್ಯಕ್ರಮಗಳಾದ ಗಜವರ್ಣ, ಸಂಕಲನ ಹಾಗೂ ತ್ರಿಮಧುರದ ಜೊತೆಯಲ್ಲಿ ನಿಮ್ಮ ವೇದಿಕೆ – ನಮ್ಮ ಪ್ರತಿಭೆಗಳು, ನಿಮ್ಮಂಗಳದಲ್ಲಿ ಚಿತ್ರಕಲೆ, ನವಸಾಹಿತ್ಯ ವೇದಿಕೆ ಕಥಾ ಕಮ್ಮಟ, ಉಡುಪಿ ಜಿಲ್ಲಾ ಮಟ್ಟದ ಭಾವಗಾನ ಸ್ಪರ್ಧೆ, ಹೀಗೆ ಹಲವಾರು ಸರಣಿ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ಹಲವಾರು ಕಲಾವಿದರ ಕೊಡುಗೆಯಿಂದ ಈ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮುಖ್ಯವಾಗಿ ಹಿಂದುಸ್ಥಾನಿ ಸಂಗೀತದಲ್ಲಿ ವಿದ್ವಾನ್ ಗಜಾನನ ಹೆಬ್ಬಾರ್, ಹಿನ್ನೆಲೆ ಗಾಯನದಲ್ಲಿ ಶ್ರೀಮತಿ ಕೆ. ಎಸ್. ಸುರೇಖಾ, ಬೆಂಗಳೂರೂ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹಟ್ಟಿಕುದ್ರುವಿನಲ್ಲಿ ಶ್ರೀ ಪಂಜುರ್ಲಿ ಚಿಕ್ಕಮ್ಮ ಹೈಗುಳಿ ಸಪರಿವಾರ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಆಶೀರ್ವಚನ ನೀಡಿದ ಶ್ರೀ ಮಠ ಬಾಳೆಕುದ್ರು ಹಂಗಾರಕಟ್ಟೆ ಪರಮಪೂಜ್ಯ ಸ್ವಾಮೀಜಿಯವರಾದ ನೃಸಿಂಹಾಶ್ರಮ ಸ್ವಾಮಿಜಿಯವರು ಶ್ರದ್ಧಾ ಕೇಂದ್ರಗಳಾದ ಮಠ ಮಂದಿರ ದೇವಸ್ಥಾನಗಳ ಮೂಲಕ ಆದ್ಯಾತ್ಮಿಕ ಚಿಂತನೆಗಳನ್ನು ಹೆಚ್ಚಿಸಿಕೊಂಡಲ್ಲಿ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯ. ಭಾರತದಲ್ಲಿ ಹಲವಾರು ದೇವರುಗಳು ಅವತಾರ ಎತ್ತಿದ್ದು ವಿದೇಶಿಯರು ಕೂಡ ಸಾಧನೆಗೋಸ್ಕರ ನಮ್ಮಲ್ಲಿ ಬರುತ್ತಿರುವುದು ಭಾರತದ ವೈಶಿಷ್ಠ್ಯ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಬಿ.ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ನ ದಕ್ಷಿಣ ಪ್ರಾಂತ ಮಠ ಮಂದಿರಗಳ ಸಂಪರ್ಕ ಪ್ರಮುಖರಾದ ಕೆ.ಪ್ರೇಮಾನಂದ ಶೆಟ್ಟಿ ಧಾರ್ಮಿಕ ಪ್ರವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಹಟ್ಟಿಯಂಗಡಿ ಸಿದ್ದಿವಿನಾಯಕ ದೇವಸ್ಥಾನದ ಬಾಲಚಂದ್ರ ಭಟ್, ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ನರಸಿಂಹ ದೇವಾಡಿಗ ,ಬಸ್ರೂರು ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ಗೋಪಾಲ ಪೂಜಾರಿ, ಶ್ರೀ…
