ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಶಿರೂರು ಘಟಕ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಡಿಯಲ್ಲಿ ಕ್ಲೀನ್ ಕಿನಾರಾ ಮೂಲಕ ಬೈಂದೂರು ಪರಿಸರದಲ್ಲಿ ನಿರಂತರ ಜನಜಾಗ್ರತಿ ಮೂಡಿಸುತ್ತಿರುವ ರಾಘವೇಂದ್ರ ಪಡುವರಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜೆಸಿಐ ಶಿರೂರಿನ ಅಧ್ಯಕ್ಷರರಾದ ಜೆಸಿ ವಿನೋದ್ ಮೇಸ್ತ, ಜೆಜೆಸಿ ಅಧ್ಯಕ್ಷರರಾದ ಜೆಸಿ ದೇವಂದ್ರ ಪಾಟೀಲ್, ಪೂರ್ವ ಅಧ್ಯಕ್ಷರರಾದ ಜೆಸಿ ಗಿರೀಶ್ ಮೇಸ್ತ, ಜೆಸಿ ನಾಗೇಶ್ ಕೆ., ಜೆಸಿ ನಾಗೇಂದ್ರ ಪ್ರಭು, ಜೆಸಿರೇಟ್ ಅಧ್ಯಕ್ಷೆ ಜೆಸಿ ಲಕ್ಷ್ಮಿ ನಾಗೇಶ್ ಕೆ, ಮತ್ತು ಬೈಂದೂರು ಕ್ಲೀನ್ ಕಿನಾರ ತಂಡ ಇದರ ಸದಸ್ಯರು ಮತು ಜೆಸಿಐ ಶಿರೂರಿನ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.











