ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಧ್ಯಾಪಕರ ಸಂಘದ ವತಿಯಿಂದ ಸರಕಾರಿ ಸೇವೆಯಿಂದ ನಿವೃತ್ತರಾದ ಕಾಲೇಜಿನ ಕನ್ನಡ ಪ್ರಾಧ್ಯಾಪಕರರಾದ ಪ್ರೊ. ಗಣಪತಿ ಭಟ್, ಮತ್ತು ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ದಿನಕರ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕನ್ನಡ ಪ್ರಾಧ್ಯಾಪಕರರಾದ ಪ್ರೊ. ಗಣಪತಿ ಭಟ್ ಮಾತನಾಡಿ, ಸೇವೆಯಿಂದ ನಿವೃತ್ತನಾದ ನನಗೆ ನನ್ನ ಕೃಷಿ ವೃತ್ತಿ ಮುಂದುವರೆಸಿಕೊಂಡು ಹೋಗುವಂತೆ ಮಾಡಿದೆ. ಹಾಗೆಯೇ ವಿದ್ಯಾಥಿಗಳೊಂದಿಗೆ ಮತ್ತು ಉಪನ್ಯಾಸಕರೊಂದಿಗಿನ ಭಾಂದವ್ಯವನ್ನು ನೆನಪಿಸಿಕೊಂಡರು. ಪ್ರೊ. ಗಣಪತಿ ಭಟ್ ಅವರ ಕುರಿತು ಕನ್ನಡ ವಿಭಾಗ ಮುಖ್ಯಸ್ಥೆ ಡಾ. ರೇಖಾ ಬನ್ನಾಡಿ ಮಾತನಾಡಿದರು. ದಿನಕರ ಶೆಟ್ಟಿಗಾರ್ ಕುರಿತು ಗೀತಾ ಪ್ರಭು ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ.ನಾರಾಯಣ ಶೆಟ್ಟಿ, ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎಂ. ಗೊಂಡ, ಅಧ್ಯಾಪಕರ ಸಂಘದ ಅಧ್ಯಕ್ಷರಾದ ಶಂಕರನಾರಾಯಣ ಕೆ. ಉಪಸ್ಥಿತರಿದ್ದರು. ಅಧ್ಯಾಪಕರ ಸಂಘದ ಖಜಾಂಚಿ ಮಂಜುನಾಥ ಸ್ವಾಗತಿಸಿದರು. ಕಾರ್ಯದರ್ಶಿ ಗುರುದಾಸ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಸೇವಾ ಸಂಕಲ್ಪ ತಂಡ ದಾನಿಗಳ ಸಹಕಾರದೊಂದಿಗೆ ಗಂಗೊಳ್ಳಿ ಗ್ರಾಮದ ಬೇಲಿಕೇರಿ ಸಮೀಪದ ವಸತಿರಹಿತ ಕೃಷ್ಣ ಖಾರ್ವಿ ಕುಟುಂಬಕ್ಕೆ ನಿರ್ಮಿಸಿದ ‘ಸೇವಾ ಸಂಕಲ್ಪ’ಮನೆ ಹಸ್ತಾಂತರ ಮತ್ತು ಅದರ ಪ್ರವೇಶ ಸಮಾರಂಭ ನಡೆಯಿತು. ಗಂಗೊಳ್ಳಿ ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಬಿ. ಸದಾನಂದ ಶೆಣೈ ಮನೆಯ ನಾಮಫಲಕ ಅನಾವರಣಗೊಳಿಸಿ ಮನೆಯನ್ನು ಕೃಷ್ಣ ಖಾರ್ವಿ ಕುಟುಂಬಕ್ಕೆ ಹಸ್ತಾಂತರಿಸಿದರು. ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಮಲೆಕ್ಕಿಗ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಎಸ್ಐ ಭೀಮಾಶಂಕರ ಎಸ್, ಹಿಂದು ಜಾಗರಣ ವೇದಿಕೆಯ ಕರ್ನಾಟಕ ಪ್ರಾಂತ ಪ್ರಚಾರಕ್ ಪ್ರಮುಖ್ ಅರವಿಂದ ಕೋಟೇಶ್ವರ, ಅರ್ಜುನ್ ಭಂಡಾರ್ಕಾರ್ ಮಂಗಳೂರು, ಪುರೋಹಿತ ಜಿ. ವೀರೇಶ ಭಟ್ , ಸೇವಾ ಸಂಕಲ್ಪ ತಂಡದ ಸದಸ್ಯರು, ಗಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ದಾನಿಗಳು ಇದ್ದರು. ಜೋಪಡಿಯಿಂದ ಸುಸಜ್ಜಿತ ನಿವಾಸ: ಸ್ವಂತ ನಿವೇಶನ, ಮನೆ ಇಲ್ಲದೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಕರ್ನಾಟಕ ಸ್ಟೇಟ್ ವೇಟ್ಲಿಫ್ಟರ್ಸ್ ಅಸೋಸಿಯೇಶನ್ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಯೂಥ್, ಜೂನಿಯರ್ ವಿಭಾಗಗಳಲ್ಲಿ ಆಳ್ವಾಸ್ ಕಾಲೇಜು ತಂಡ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ. ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ರನ್ನರ್ ಅಪ್ ಪ್ರಶಸ್ತಿ ಪಡೆದಿದೆ. ಮೊದಲನೇ ಯೂಥ್, 47ನೇ ಪುರುಷ ಹಾಗೂ 31ನೇ ಮಹಿಳಾ ರಾಜ್ಯಮಟ್ಟದ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ ಇದಾಗಿದ್ದು, ಯೂಥ್, ಜೂನಿಯರ್, ಸೀನಿಯರ್ ಮಟ್ಟದ ನಾನಾ ಕೆಟಗರಿಗಳಲ್ಲಿ ಈ ಸ್ಪರ್ಧೆ ನಡೆಯಿತು. ಇದರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಲಿಫ್ಟರ್ಗಳು ನಾಗರಕೊಯಿಲ್ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸುವ ಅರ್ಹತೆ ಪಡೆಯಲಿದ್ದಾರೆ. ಯೂಥ್ ಸೆಕ್ಷನ್ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ 268 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ 131 ಅಂಕಗಳೊಂದಿಗೆ ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ದ್ವಿತೀಯ ಸ್ಥಾನವನ್ನು ಪಡೆದಿವೆ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ 205 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ಆಳ್ವಾಸ್ ಏಕಲವ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದ್ದು, ಈಗಾಗಲೇ ಮುಖ್ಯ ರಸ್ತೆ ಸೇರಿದಂತೆ ಅನೇಕ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಲಾಗಿದೆ. ಇನ್ನು ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಯರಬೆಟ್ಟು ಶ್ರೀ ಗ್ರಾಮ ಜಟ್ಟಿಗೇಶ್ವರ ದೇವಸ್ಥಾನದ ರಸ್ತೆಯನ್ನು ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡಲಾಗುತ್ತಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು. ಅವರು ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು 14 ಲಕ್ಷ ರೂ. ವೆಚ್ಚದ ಮಲ್ಯರಬೆಟ್ಟು ಶ್ರೀ ಗ್ರಾಮ ಜಟ್ಟಿಗೇಶ್ವರ ದೇವಸ್ಥಾನದ ರಸ್ತೆ ಕಾಮಗಾರಿಗೆ ಮಲ್ಯರಬೆಟ್ಟು ಶ್ರೀ ಗ್ರಾಮ ಜಟ್ಟಿಗೇಶ್ವರ ದೇವಸ್ಥಾನದ ಸಮೀಪ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಸದಸ್ಯರಾದ ಶ್ರೀನಿವಾಸ ಖಾರ್ವಿ, ಲಲಿತಾ ಖಾರ್ವಿ, ಪ್ರಶಾಂತ ಖಾರ್ವಿ, ಶಾಂತಿ ಖಾರ್ವಿ, ಜಯಂತಿ ಖಾರ್ವಿ, ಶ್ರೀ ಗ್ರಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕಶ್ವಿ ಚೆಸ್ ಸ್ಕೂಲ್ನಲ್ಲಿ ಭಾನುವಾರ ಉತ್ತಮ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ಕುಂದಾಪುರದ ಓಕ್ವುಡ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯ ಸಾಥ್ವಿಕ್ ಶೇರೆಗಾರ್ (ಗೋಲ್ಡನ್ ಗ್ರೂಪ್) ಇವರ ಸತತ ಪರಿಶ್ರಮ ಮತ್ತು ಚೆಸ್ ಆಟದಲ್ಲಿನ ತಮ್ಮ ಪ್ರಯತ್ನವನ್ನು ಉತ್ತೇಜಿಸುವ ಸಲುವಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗವು ‘ಮೀಡಿಯಾ ಮಂಥನ್’ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳೊಂದಿಗೆ ನಡೆದ ಈ ಸಂವಾದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಮೆಲ್ವಿನ್ ಮೆಂಡೋನ್ಸಾ, ಅಲ್ವಿನ್ ಮೆಂಡೋನ್ಸಾ ಹಾಗೂ ಟೈಮ್ಸ್ ಆಫ್ ಇಂಡಿಯಾದ ಹಿರಿಯ ಕರೆಸ್ಪಾಂಡೆಂಟ್ ಆಗಿರುವ ಕೆವಿನ್ ಮೆಂಡೋನ್ಸಾ ಭಾಗವಹಿಸಿದ್ದರು. ಪತ್ರಿಕೋದ್ಯಮದ ವಿವಿಧ ಆಯಾಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪತ್ರಿಕೋದ್ಯಮದ ವಿಸ್ತೃತ ಕಾರ್ಯವ್ಯಾಪ್ತಿಯ ಬಗ್ಗೆ ಮಾತನಾಡಿದ ಮೆಲ್ವಿನ್ ಮೆಂಡೋನ್ಸಾ, ‘ಪತ್ರಿಕೋದ್ಯಮವೆಂದರೆ ಕೇವಲ ಬರವಣಿಗೆ, ವರದಿಗಾರಿಕೆಯಲ್ಲ. ಇದನ್ನು ಹೊರತುಪಡಿಸಿದ ವಿಪುಲ ಅವಕಾಶಗಳು ಈ ಕ್ಷೇತ್ರದಲ್ಲಿವೆ. ಡಿಜಿಟಲ್ ಮಾಧ್ಯಮಗಳು, ಸಾರ್ವಜನಿಕ ಸಂಪರ್ಕ, ಈವೆಂಟ್ ಮ್ಯಾನೇಜ್ಮೆಂಟ್, ಮೀಡಿಯಾ ಮ್ಯಾನೇಜ್ಮೆಂಟ್ ಒಳಗೊಂಡ ವಿಶಿಷ್ಟ ಕಾರ್ಯಗಳನ್ನು ಒಬ್ಬ ಪತ್ರಕರ್ತ ಮಾಡಬಹುದು. ವಿದ್ಯಾರ್ಥಿಗಳು ಇಂತಹ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ’ ಎಂದರು. ಒಬ್ಬ ಪತ್ರಕರ್ತನಿಗಿರಬೇಕಾದ ಕಾನೂನಿನ ಜ್ಞಾನದ ಬಗ್ಗೆ ತಿಳಿಸಿದ ಅಲ್ವಿನ್ ಮೆಂಡೋನ್ಸಾ, ‘ಪತ್ರಿಕೋದ್ಯಮದಲ್ಲಿರುವವರಿಗೆ ಕೆಲವು ಅಗತ್ಯ ಕಾನೂನುಗಳ ಅರಿವಿರಬೇಕು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಶಿರೂರಿನ ದ್ವಿಬಾಷಾ ಕವಿಯತ್ರಿ ಹಾಗೂ ಲೇಖಕಿ ಪುಷ್ಪಾ ರಘುರಾಮ್ ಮೇಸ್ತ ಅವರ ‘ಅಂತರಂಗದ ಅಲೆ’ ಕವನ ಸಂಕಲನವು ಚಿತ್ರದುರ್ಗದ ತ. ರಾ .ಸು ರಂಗಮಂದಿರದಲ್ಲಿ ಬಿಡುಗಡೆಗೊಂಡಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕರಾದ ಡಾ . ಮಹೇಶ್ ಜೋಶಿ, ಹೊನ್ನುಡಿಗಳ ಗಾರುಡಿಗ ಹಾಗೂ ಸಾಹಿತಿಗಳಾದ ಮಹೇಂದ್ರ ಕುರ್ಡಿ, ರಾಜು ಸೂಲೇನ ಹಳ್ಳಿ, ಪದ್ಮಶ್ರೀ ಪುರಸ್ಕೃತರಾದ ಜೋಗತಿ ಮಂಜಮ್ಮ, ಚಲನಚಿತ್ರ ನಿರ್ದೇಶಕರಾದ ಮುರಳಿ ಹಬಿ, ಬಿಂದಾಸ್ ಚಲನಚಿತ್ರ ನಟರಾದ ಗುರು ಹಾಗೂ ಅನೇಕರು ಉಪಸ್ಥಿತರಿದ್ದರು. ಪುಷ್ಪಾ ರಘುರಾಮ್ ಅವರು ಈಗಾಗಲೇ ಕೊಂಕಣಿಯಲ್ಲಿ ಒಟ್ಟು ಐದು ಕೃತಿಗಳನ್ನು ಹೊರತಂದಿದ್ದು, ರಾಷ್ಟ ಪ್ರಶಸ್ತಿ ಹಾಗು ಅನೇಕ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಡ್ಕಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ವನಜಾಕ್ಷಿ ಶೆಟ್ಟಿ, ಉಪಾಧ್ಯಕ್ಷರಾಗಿ ಲಕ್ಷ್ಮಣ್ ಶೆಟ್ಟಿ ಆಯ್ಕೆಗೊಂಡಿದ್ದಾರೆ. ಒಟ್ಟು 18 ಸದಸ್ಯಬಲ ಹೊಂದಿರುವ ಜಡ್ಕಲ್ ಗ್ರಾಮ ಪಂಚಾಯಿತಿಯಲ್ಲಿ 10 ಬಿಜೆಪಿ ಬೆಂಬಲಿತರು, 8 ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದರು. ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ನಿಗದಿಯಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಡ್ಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೆಕ್ಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಎಸ್ಡಿಎಂಸಿ ಸದಸ್ಯರ ತರಬೇತಿ ಕಾರ್ಯಗಾರ ನಡೆಯಿತು. ಎಸ್ಡಿಎಂಸಿ ಅಧ್ಯಕ್ಷೆ ರಾಧಾ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಎಸ್ಡಿಎಂಸಿ ಅಧ್ಯಕ್ಷರಾದ ಎಂ. ಜೆ. ಬೇಬಿ ಕಾರ್ಯಕ್ರಮ ಉದ್ಘಾಟಿಸಿದರು. ಸ. ಹಿ. ಪ್ರಾ. ಶಾಲೆ ಸಳ್ಕೊಡು ಇಲ್ಲಿನ ಎಸ್.ಡಿ.ಎಂ.ಸಿ ನಿಕಟಪೂರ್ವ ಅಧ್ಯಕ್ಷರಾದ ಮಾಲತಿ ಚಂದ್ರ ಶೆಟ್ಟಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಗದೀಶ್, ಶಾಲಾ ಮುಖ್ಯೋಪಾಧ್ಯಾಯರಾದ ದೇವಕಿ ಟೀಚರ್ ಉಪಸ್ಥಿತರಿದ್ದರು. ಸ ಹಿ ಪ್ರಾ ಶಾಲೆ ಸಳ್ಕೊಡು ಇಲ್ಲಿನ ಮುಖ್ಯೋಪಾಧ್ಯಾಯರಾದ ಭಾಸ್ಕರ್ ನಾಯ್ಕ್ ತರಬೇತಿ ನೀಡಿದರು. ರಾಮ ಶೆಟ್ಟಿ ಅತ್ತಿಕಾರ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ದೇವಕಿ ಸ್ವಾಗತಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕತಾರ್: ಭಾರತದ ರಾಯಭಾರಿ, ಘನತೆವೆತ್ತ ಡಾ. ದೀಪಕ್ ಮಿತ್ತಲ್ ಮತ್ತು ಭಾರತೀಯ ರಾಯಭಾರ ಕಚೇರಿಯ ಸಂಯೋಜಕ ಅಧಿಕಾರಿ ಎಸ್. ಝ್ಹೇವಿಯರ್ ಧನರಾಜ್ ಅವರ ನೇತ್ರತ್ವದಲ್ಲಿ ಭಾರತೀಯ ಸಾಂಸ್ಕ್ರತಿಕ ಕೇಂದ್ರ ( ಐಸಿಸಿ) ಕತಾರ್ನ ನೂತನ ನಿರ್ವಹಣಾ ಸಮಿತಿಯ ಮೊದಲ ಪರಿಚಯಾತ್ಮಕ ಸಭೆ ನಡೆಯಿತು. ಎಲ್ಲಾ ನಿರ್ವಹಣಾ ಸಮಿತಿಯ ಸದಸ್ಯರನ್ನು ಐಸಿಸಿ ಅಧ್ಯಕ್ಷ ಪಿ.ಎನ್. ಬಾಬು ರಾಜನ್ ಪರಿಚಯಿಸಿದರು. ಪ್ರತಿಯೊಬ್ಬ ಸದಸ್ಯರ, ತಮ್ಮ ಹಿನ್ನೆಲೆ, ಪಾತ್ರ ಮತ್ತು ಪ್ರಸ್ತುತ ಐಸಿಸಿ 2021-22ರ ಅವಧಿಯಲ್ಲಿ ನಿಗದಿಪಡಿಸಿದ ಹೊಣೆಗಾರಿಕೆಯನ್ನು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಿದರು. ಡಾ.ದೀಪಕ್ ಮಿತ್ತಲ್ ಪರಿಚಯಾತ್ಮಕ ಭಾಷಣ ಮಾಡಿದರು, ಸಮಿತಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದರು. ಈ ಸಂದರ್ಭದಲ್ಲಿ 15 ಆಗಸ್ಟ್ 2022ರಂದು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವತ್ತ ಭಾರತವನ್ನು ಪ್ರತಿನಿಧಿಸಲು ತಂಡವು ಸಂಪೂರ್ಣ ಉತ್ಸುಕವಾಗಿದೆ, ಮುಂದಿನ 75 ವಾರಗಳವರೆಗೆ ವಾರಕ್ಕೊಮ್ಮೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯಿಂದ ನಿರ್ಧರಿಸಲಾಯಿತು . ಐಸಿಸಿ ಉಪಾಧ್ಯಕ್ಷ, ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು…
