Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹೊಸಂಗಡಿ ಸ.ಪ.ಪೂ ಕಾಲೇಜು: ವಿವಿಧ ಕ್ಲಬ್‌ಗಳ ಉದ್ಘಾಟನೆ, ವಿದ್ಯಾರ್ಥಿನಿಯರ ಸುಸಜ್ಜಿತ ಶೌಚಾಲಯ ಕೀ ಹಸ್ತಾಂತರ
    ಊರ್ಮನೆ ಸಮಾಚಾರ

    ಹೊಸಂಗಡಿ ಸ.ಪ.ಪೂ ಕಾಲೇಜು: ವಿವಿಧ ಕ್ಲಬ್‌ಗಳ ಉದ್ಘಾಟನೆ, ವಿದ್ಯಾರ್ಥಿನಿಯರ ಸುಸಜ್ಜಿತ ಶೌಚಾಲಯ ಕೀ ಹಸ್ತಾಂತರ

    Updated:05/08/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ತಾಲೂಕಿನ ಹೊಸಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ವಿದ್ಯಾರ್ಥಿ ಕ್ಲಬ್‌ಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಲಾದ ಸುಸಜ್ಜಿತ ಶೌಚಾಲಯದ ಕೀಲಿಕೈ ಹಸ್ತಾಂತರ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

    Click Here

    Call us

    Click Here

    ಸಭಾ ಕಾರ್ಯಕ್ರಮವನ್ನು ಶ್ರೀ ಶನೈಶ್ವರ ದೇವಳದ ಆಡಳಿತ ಮೊಕ್ತೇಸರರಾದ ಅಶೋಕ್ ಶೆಟ್ಟಿ ಚೋನ್ಮನೆ  ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ, ಗುರುವಿನ ಮಹತ್ವ ಹಾಗೂ ವಿದ್ಯಾರ್ಥಿಗಳ ಉದ್ದೇಶ‌ ಹಾಗೂ ಜವಬ್ದಾರಿಯ  ಬಗ್ಗೆ ತಿಳಿಸಿದರು.‌

    ವಿವಿಧ ವಿದ್ಯಾರ್ಥಿ ಸಂಘ ಹಾಗೂ ಕ್ಲಬ್‌ಗಳ ಉದ್ಘಾಟನೆ

    1. ಸಾಂಸ್ಕೃತಿಕ ಸಂಘ:
    ಸಾಂಸ್ಕ್ರತಿಕ ಸಂಘವನ್ನು ಸಂಸ್ಕೃತಿಯ ಅಭಿವ್ಯಕ್ತಿಯಾಗಿ ಯಕ್ಷಗಾನ ಹಾಗೂ ಭರತನಾಟ್ಯದ ಝಲಕ್ ಪ್ರಸ್ತುತ‌ ಪಡಿಸಲಾಯಿತು. ನಂತರ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಕೋಟ ವಿಶ್ವನಾಥ್  ತುಂಬಿಕಲ್ಲಾಯ ಸಂಸ್ಕೃತಿಯ ಪ್ರತೀಕ ಎಂಬಂತೆ ಜೋಡು ದೀಪ‌ ಬೆಳಗಿಸಿದರು. ಮಾಲತಿ ಸಂತೋಷ್ ನಾಯ್ಕ ಅವರು ಸಾಂಸ್ಕೃತಿಕ ಸಂಘದ ಬಿತ್ತಿಯನ್ನು ವಿನೂತನವಾಗಿ ಅನಾವರಣಗೊಳಿಸಿದರು ಹಾಗೂ ಎಲ್ಲರೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಕನ್ನಡ ಉಪನ್ಯಾಸಕಿಯಾದ ವಿಲಾಸಿನಿ ಶೆಟ್ಟಿ ಅವರು ಆಯೋಜಿಸಿದರು.

    2.ಸಾಹಿತ್ಯ ಸಂಘ:
    ಸಾಹಿತ್ಯ ಸಂಘವನ್ನು ಖ್ಯಾತ ಸಾಹಿತಿಗಳೂ,‌ ಹಳೆ ವಿದ್ಯಾರ್ಥಿಗಳೂ ಹಾಗೂ ಜಿಲ್ಲಾ‌ ರಾಜ್ಯ ಪ್ರಶಸ್ತಿ ವಿಜೇತರೂ ಆದ‌ ಮುಷ್ತಾಕ್ ಹೆನ್ನಾಬೈಲು ಅವರು ಇದರ ಉದ್ದೇಶವನ್ನು ಬಿಳಿ ಪರದೆಯ ಮೇಲೆ ಪ್ರದರ್ಶನ ಗುಂಡಿ‌ ಒತ್ತುವ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಹೊಸಂಗಡಿ ಕಾಲೇಜು ದಿನದಿಂದ‌ ದಿನಕ್ಕೆ ಪ್ರಗತಿ ಪಥದ ಮೂಲಕ ಮನೆ ಮಾತಾಗಿದೆ. ಕಾಲೇಜಿನ ಅಭಿವೃದ್ಧಿಯ ಬಗ್ಗೆ ಅನೇಕರು ಮಾತಾಡುವಾಗ ನಮ್ಮ‌ಕಾಲೇಜಿನ ಬಗ್ಗೆ ಹೆಮ್ಮೆಯೆನಿಸುತ್ತದೆ. ಕಾಲೇಜಿನ ಅಭಿವೃದ್ಧಿಯಲ್ಲಿ ಸದಾ ಜೊತೆಗಿರುತ್ತೇನೆ ಅಂದು ಭರವಸೆ ನೀಡಿದರು. ಇಂಗ್ಲಿಷ್ ಉಪನ್ಯಾಸಕಿ ಶ್ರೀಮತಿ ಕಾವ್ಯ ಅವರು ಆಯೋಜಿಸಿದರು.

    Click here

    Click here

    Click here

    Call us

    Call us

    3. ಎನ್‌ಎಸ್‌ಎಸ್‌ ಘಟಕ:
    ಹೊಸಂಗಡಿ ಕಾಲೇಜಿನ ಯಶಸ್ವಿ NSS ಘಟಕವನ್ನು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀಕರ ನಾಯ್ಕ ಅವರು ‌ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ  ಕಾಲೇಜಿನ NSS ಶಿಬಿರದೊಂದಿಗೆ ಆರಂಭವಾದ ಬಾಂಧವ್ಯ ನಾಲ್ಕು ವರ್ಷದ ಶಿಬಿರದಲ್ಲಿ ಜೊತೆಯಾಗುವಂತೆ ಮಾಡಿದೆ. ಮುಂದೆಯೂ NSS ನಲ್ಕಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ನುಡಿದರು. ರಸಾಯನ ಶಾಸ್ತ್ರ ಉಪನ್ಯಾಸಕರಾದ ವೆಂಕಟೇಶ್ ಅವರು ಆಯೋಜಿಸಿದರು.

    4. ಇಕೋ ಕ್ಲಬ್:
    ನಮ್ಮ‌ಕಾಲೇಜಿನ Eco Club ಅನ್ನು ಸ್ಥಳೀಯ ಬದ್ರಿಯಾ‌ ಜಾಮಿ‌ ಮಸೀದಿಯ  ಧರ್ಮ ಗುರುಗಳು ಹಾಗೂ ವಿದ್ಯಾರ್ಥಿ ಪೋಷಕರೂ ಆಹಿರುವ ಮೊಹಮದ್ ಮದನಿ ಅವರು ಹೂವಿನ ಗಿಡ ನೆಡುವುದರ ಮೂಲದ ಉದ್ಘಾಟಿಸಿದರು. ಹೊಸಂಗಡಿ ಕಾಲೇಜಿನ ಶಿಸ್ತು ಹಾಗೂ ಉತ್ಕೃಷ್ಟ  ಶಿಕ್ಷಣದ ಬಗ್ಗೆ ತಿಳಿದು ಅತೀ ಹೆಚ್ಚು ಅಂಕ ಗಳಿಸಿದರೂ, ಕಾಲೇಜಿನ ಮೇಲಿನ ಅಭಿಮಾನದಿಂದ ಕಾಲೇಜಿಗೆ ಸೇರಿಸಿದೆ. ಕಾಲೇಜಿನ ಪ್ರಗತಿ ಚಟುವಟಿಕೆಗಳನ್ನು ಗಮನಿಸಿ ನನ್ನ ನಿರ್ಣಯದ ಬಗ್ಗೆ ಸಾರ್ಥಕತೆ ಇದೆ ಎಂದು ನುಡಿದರು. ಜೀವಶಾಸ್ತ್ರ ಉಪನ್ಯಾಸಕಿಯಾದ ಮಧುಶ್ರೀ ಆಯೋಜಿಸಿದರು

    5.ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕ್ಲಬ್:
    ಈ ಕ್ಲಬ್ ಅನ್ನು ನಾವಿಕ ಅಧಿಕಾರಿಗಳಾಗಿ ಉನ್ನತ‌ ಉದ್ಯೋಗದಲ್ಲಿರುವ ಮಧುಸೂಧನ ಹೆಗ್ಡೆ ಅವರು ಉದ್ಘಾಟಿಸಿದರು. ಶಿಕ್ಷಣ ಮುಗಿದ ನಂತರ ನೌಕಾ ವಿಭಾಗದಲ್ಲಿ ಇರುವ ವಿಫುಲ ಅವಕಾಶಗಳ ಬಗ್ಗೆ ತಿಳಿಸಿ ಹೇಳಿ ಅದಕ್ಕೆ ‌ಮಾರ್ಗದರ್ಶನ ಕೊಡಲು‌ ನಿಮ್ಮ ಜೊತೆಗೇ ಸದಾ ಇರುತ್ತೇನೆ ಎಂದರು.‌ ಅರ್ಥಶಾಸ್ತ್ರ ಉಪನ್ಯಾಸಕಿಯಾದ ಸುಚಿತ್ರ ಆಯೋಜಿಸಿದರು.

     6.ಸಿಎ ಫೌಂಡೇಶನ್ ತರಗತಿ:
    CA ಫೌಂಡೇಶನ್ ಯನ್ನು ಉದ್ಹಮಿಗಳಾರುವ ಹಾಗೂ‌ ಕಾಲೇಜಿನ‌ ಅಭಿಮಾನಿಗಳಾಗಿ ಕಾಲೇಜಿಗೆ ಅನೇಕ ಕೊಡುಗೆ ಗಳನ್ನು ನೀಡಿರು ಶ್ರೀ ದೇವಿಪ್ರಸಾದ್ ಶೆಟ್ಟಿ‌ ಅವರು ನೆರವೇರಿಸಿ ಈ ಕಾಲೇಜಿನಿಂದ  ತರಬೇತಿಯ ಲಾಭವನ್ನು ಪಡೆದು ಸಂಬಂಧಿಸಿದ ಪರೀಕ್ಷೆಗಳಲ್ಲಿ  ಉತ್ತೀರ್ಣರಾದಾಗ ಇದರ ನೈಜ ಉದ್ದೇಶ ಸಾಕಾರಗೊಳ್ಳುವುದು ಎಂದರು.‌ ಲೆಕ್ಕಶಾಸ್ತ್ರದ ಉಪನ್ಯಾಸಕಿಯಾದ ಪವಿತ್ರ ಅವರು ಆಯೋಜಿಸಿದರು

    7. ಕಂಪ್ಯೂಟರ್:
    ಕಂಪ್ಯೂಟರ್‌ ಕ್ಲಬ್‌ ಅನ್ನು ರಾಮಕೃಷ್ಣ ಪೈ, ಉದ್ಯಮಿಗಳು ಹೊಸಂಗಡಿ ಅವರು ಅಲಂಕರಿಸಿದ ಫಲಕದ ಪರದೆಯನ್ನು ಉರಿಸುವ ಮೂಲಕ ಉದ್ಘಾಟಿಸಿದರು. ಕಾಲೇಜಿನ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ನಮೂರಿನ ಕಾಲೇಜಿನ ಪ್ರಗತಿ ಸಂತಸ ತಂದಿದೆ. ಇನ್ನೂ ಅಭಿವೃದ್ಧಿ ಆಗಲಿ ಎಂದು ಹಾರೈಸಿದರು. ಇದನ್ನು ಕಂಪ್ಯೂಟರ್ ಉಪನ್ಯಾಸಕಿ ಯಾದ ಯಾದ ವಿಸ್ಮಯ ಅವರು ಆಯೋಜಿಸಿದರು.

    8. ಚು‌ನಾವಣಾ ಸಾಕ್ಷರತಾ ಸಂಘ
    ಚು‌ನಾವಣಾ ಸಾಕ್ಷರತಾ ಸಂಘವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ  ಅವರು ನೆರವೇರಿಸಿ, ಕಾಲೇಜಿನ ಪ್ರಗತಿಯಲ್ಲಿ ಸದಾ ಜೊತೆಗಿರುವ ಇವರು,ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಮತ ಅಮೂಲ್ಯವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಚುನಾವಣಾ ಪ್ರಕ್ರಿಯೆ, ಮತದಾನದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು ಎಂದು,ಜಾಗೃತ ಮತದಾರರೇ ಬಲಿಷ್ಠ ಪ್ರಜಾಪ್ರಭುತ್ವದ ಅಡಿಪಾಯ ಎಂದು ಅವರು ಅಭಿಪ್ರಾಯಪಟ್ಟರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಎಜಾಸ್ ಅವರು ಆಯೋಜಿಸಿದರು.

    9.ವಿಜ್ಞಾನ ಸಂಘ:
    ವಿಜ್ಞಾನ ಸಂಫವನ್ನು ಕೆಪಿಸಿಯ ಅಭಿಯಂತರ ಕಿಶೋರ್ ಶೆಟ್ಟಿ ಅವರು ಪ್ರಯೋಗದ ಮೂಲಕ ನೆರವೇರಿಸಿ,”ವಿಜ್ಞಾನ ಸಂಘವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸಂಶೋಧನಾ ಆಸಕ್ತಿ ಹಾಗೂ ನವೀನ ಚಿಂತನೆಯನ್ನು ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು.”ಪ್ರಗತಿ ಪಥ ದತ್ತ ಸಾಗುತ್ತಿರುವ ಈ ಕಾಲೇಜಿಗೆ ನಾನೆಂದು ಜೊತೆಯಾಗಿರುತ್ತೇನೆ ಇಂದು ಆಶ್ವಾಸನೆ ಇತ್ತರು. ಭೌತಶಾಸ್ತ್ರ ಉಪನ್ಯಾಸಕಿ ಯಾದ  ದಾಕ್ಷಾಯಿಣಿ ಇವರು ಆಯೋಜಿಸಿದರು.

    10.ಕ್ರೀಡಾ ಸಂಘ:
    ಕ್ರೀಡಾ ಸಂಘವನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ನಾಯ್ಕ ಉದ್ಘಾಟಿಸಿದರು.”ಕ್ರೀಡಾ ಸಂಘವು ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ, ಕ್ರೀಡಾಸ್ಫೂರ್ತಿ, ಶಿಸ್ತು, ನಾಯಕತ್ವ ಮತ್ತು ತಂಡದ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು ಹಾಗೂ ತಮ್ಮ ಹಳೆಯ ವಿದ್ಯಾರ್ಥಿ ನೆನಪುಗಳನ್ನು ಮೆಲುಕು ಹಾಕಿದರು. ಸಮಾಜಶಾಸ್ತ್ರ ಉಪನ್ಯಾಸಕಿಯಾದ ರಾಜೇಶ್ವರಿ ಅವರು ನೆರವೇರಿಸಿದರು.

    ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಶೆಟ್ಟಿ ಹುಣ್ಸೇಡಿ ಅವರ ಸಹಕಾರದಿಂದ ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಲಾದ ಸುಸಜ್ಜಿತ ಶೌಚಾಲಯದ ಕೀಲಿಕೈಯನ್ನು ಕಾಲೇಜಿನ ಪ್ರಾಂಶುಪಾಲ ರಂಜಿತ್ ಕುಮಾರ್ ಶೆಟ್ಟಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ರಂಜಿತ್ ಕುಮಾರ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

    ಕನ್ನಡ ಉಪನ್ಯಾಸಕಿ ವಿಲಾಸಿನಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ಸಮಾಜಶಾಸ್ತ್ರ ಉಪನ್ಯಾಸಕಿ ರಾಜೇಶ್ವರಿ ಸ್ವಾಗತಿಸಿ,  ಅರ್ಥಶಾಸ್ತ್ರ ಉಪನ್ಯಾಸಕಿ ಸುಚಿತ್ರ ವಂದನಾರ್ಪಣೆ ಸಲ್ಲಿಸಿದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು  ಚೆಸ್‌ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ                    

    05/08/2026

    ಬಿಜೆಪಿ ಶಾಸಕರು ಅಭಿವೃದ್ಧಿ ಬಗ್ಗೆ ಸುಳ್ಳು ಪ್ರಚಾರ ನಿಲ್ಲಿಸಲಿ: ಕೇಶವ ಭಟ್

    05/08/2026

    ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಪುಸ್ತಕ ಮನೆ ವೆಬ್‌ಸೈಟ್‌ನಲ್ಲಿ ಭರ್ಜರಿ ಆಫರ್

    05/08/2026
    Leave A Reply Cancel Reply

    14 − 12 =

    Call us

    Click Here

    Call us

    Call us

    Call us
    Highest Viewed Recently
    • ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು  ಚೆಸ್‌ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ                    
    • ಬಿಜೆಪಿ ಶಾಸಕರು ಅಭಿವೃದ್ಧಿ ಬಗ್ಗೆ ಸುಳ್ಳು ಪ್ರಚಾರ ನಿಲ್ಲಿಸಲಿ: ಕೇಶವ ಭಟ್
    • ಹೊಸಂಗಡಿ ಸ.ಪ.ಪೂ ಕಾಲೇಜು: ವಿವಿಧ ಕ್ಲಬ್‌ಗಳ ಉದ್ಘಾಟನೆ, ವಿದ್ಯಾರ್ಥಿನಿಯರ ಸುಸಜ್ಜಿತ ಶೌಚಾಲಯ ಕೀ ಹಸ್ತಾಂತರ
    • ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲ ವಾತಾವರಣ ಕಲ್ಪಿಸಿ: ಜಿಲ್ಲಾಧಿಕಾರಿ ಕರೆ
    • ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಪುಸ್ತಕ ಮನೆ ವೆಬ್‌ಸೈಟ್‌ನಲ್ಲಿ ಭರ್ಜರಿ ಆಫರ್

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.