ಕುಂದಾಪುರ: ಕಥೊಲೀಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಸ್ಟಾನ್ (ರಿ) ಇವರ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಸ್ಮಿ ನರಸಿಂಹ ಕಲಾಮಂದಿರದಲ್ಲಿ ಶಿಕ್ಷಣ ಭಾಷಣ ಮತ್ತು ಕ್ರೀಡಾ ಪ್ರತಿಭಾವಂತರಿಗೆ ಸನ್ಮಾನಿಸುವ ಪ್ರತಿಭಾ ಸಂಜೆ ಕಾರ್ಯಕ್ರಮ ನೆಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮೈಸೂರಿನ ಉದ್ಯಮಿ ವಿಕ್ರಮ್ ಕ್ರಾಸ್ಟೊ ’ನಾವೇನು ಆಗ ಬೇಕೆಂದು ನಾವು ಮೊದಲೇ ನಿರ್ದರಿಸಿ ಕೊಳ್ಳಬೇಕು, ನಮ್ಮ ಭಾರತದಲ್ಲಿ ಮೊದಲು ಶ್ರೇಷ್ಠ ಜಾತಿಯವರಿಗೆ ಮಾತ್ರ ವಿಧ್ಯೆ ಸಿಗುತಿತ್ತು, ನಮ್ಮ ಮಿಶನರಿಗಳು ವಿಧ್ಯೆ ನೀಡಲು ಆರಂಭಿಸಿದ ಮೇಲೆ, ಭಾರತೀಯರೆಲ್ಲರಿಗೂ ವಿಧ್ಯೆ ದೊರೆಯುವಂತಾಯಿತು, ಆದರೆ ನಮ್ಮ ಸಮಾಜ ಮಾತ್ರ ಉನ್ನತ ವ್ಯಾಸಂಗವನ್ನು ಪಡೆಯುವಲ್ಲಿ ಸಫಲವಾಗಲಿಲ್ಲಾ, ಹಾಗಾಗಿ ನಾವು ಎಚ್ಚೆತ್ತು ಕೊಳ್ಳ ಬೇಕೆಂದು’ ಸಂದೇಶ ನೀಡಿದರು. ಇನ್ನೊರ್ವ ಮುಖ್ಯ ಅತಿಥಿ ಕಥೊಲೀಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷ ವಿಲಿಯಮ್ ಮಚಾದೊ. ವಲಯ ಪ್ರಧಾನ ಧರ್ಮಗುರು ಅನೀಲ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷ, ವಲಯ ಅಧ್ಯಕ್ಷರಾದಾ, ಪ್ಲೈವನ್ ಡಿಸೋಜಾ ಇವರೆಲ್ಲರೂ ಸಂದೇಶ…
Author: ನ್ಯೂಸ್ ಬ್ಯೂರೋ
ಕುಂದಾಪುರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2015ನೇ ಸಾಲಿನ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಮತ್ತು ಯುವ ಪುರಸ್ಕಾರಗಳನ್ನು ಪ್ರಕಟಿಸಿದ್ದು ಕುಂದಾಪುರ ತಾಲೂಕಿನ ಉಪ್ಪುಂದದ ಜಾದೂಗಾರ ಹಾಗೂ ಸಾಹಿತಿ ಓಂಗಣೇಶ್ ಅವರಿಗೆ ಭಾಷಾಂತರ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟಾರ್ ಡಾ. ನಿ. ದೇವದಾಸ ಪೈ ಮಾಹಿತಿ ನೀಡಿದರು. ಮಾರ್ಚ್ 5ರಂದು ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 6ರಂದು ಭಟ್ಕಳದ ನಾಗಯಕ್ಷೆ ಸಭಾ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಶಿರಸಿಯ ರಾಮಚಂದ್ರ ಎಂ.ಶೇಟ್ (ಸಾಹಿತ್ಯ), ಕಾಸರಗೋಡು ಚಿನ್ನಾ (ಕಲೆ) ಮತ್ತು ತೊಳಸಾಣಿಯ ಆಲೂ ಪೀಲೂ ಮರಾಠಿ (ಜಾನಪದ) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು ಒಳಗೊಂಡಿದೆ ಎಂದರು. ಪುಸ್ತಕ ಬಹುಮಾನ ಪ್ರಶಸ್ತಿಗೆ ಓಂ ಗಣೇಶ್ ಉಪ್ಪುಂದ (ಭಾಷಾಂತರ), ರೊನಿ ಅರುಣ್ (ಅಧ್ಯಯನ) ಮತ್ತು ಡೆನಿಸ್ ಕ್ಯಾಸ್ತಲಿನೋ (ಲೇಖನ) ಆಯ್ಕೆಯಾಗಿದ್ದು, ಪ್ರಶಸ್ತಿಯು ೨೫ ಸಾವಿರ ನಗದು ಒಳಗೊಂಡಿದೆ.…
ಬೈಂದೂರಿನ ನಾಲ್ವರಿಗೆ ಜಿಪಂ ಸ್ಥಾನ ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಒಂದೇ ಊರಿನವರು ರಾಜಕೀಯದಲ್ಲಿರುವುದು ಸಾಮಾನ್ಯ. ಗ್ರಾಪಂ, ತಾಪಂ ಸದಸ್ಯರಾಗುವುದು ಸಾಮಾನ್ಯ ಸಂಗತಿಯೇ. ಆದರೆ ಒಂದೇ ಊರಿನವರು, ಅದರಲ್ಲೂ ಒಂದೇ ವಾರ್ಡಿನವರು ಜಿಲ್ಲಾ ಪಂಚಾಯತ್ ಸದಸ್ಯರಾಗುವುದೆಂದರೆ ಸುಮ್ಮನೆಯೇ? ರಾಜ್ಯದಲ್ಲಿಯೇ ಇಂತಹದ್ದೊಂದು ವಿಶಿಷ್ಟ್ಯಕ್ಕೆ ಪಾತ್ರವಾಗಿದೆ ತಗ್ಗರ್ಸೆ ಗ್ರಾಮ. ಹೌದು ಮೂವರು ಜಿಲ್ಲಾ ಪಂಚಾಯತ್ ಸದಸ್ಯರು ಒಂದೇ ಗ್ರಾಮದವರು, ಅಷ್ಟೇಕೆ ಒಂದೇ ವಾರ್ಡಿನವರು. ಹಾಗೆ ನೋಡಿದರೇ ನೆರಮನೆಯವರು! ಉಡುಪಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ವರ್ಧಿಸಿದ ಕೇತ್ರಗಳು ಬೇರೆ ಬೇರೆಯೇ ಆದರೂ, ಒಂದೇ ಗ್ರಾಮ ಮೂವರು ಜಿಲ್ಲಾ ಪಂಚಾಯತ್ಗೆ ಆಯ್ಕೆ ಆದದ್ದು ಮಾತ್ರ ವಿಶೇಷವೇ ಸರಿ. ಇನ್ನು ಶಿರೂರು ಜಿಪಂ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿಯ ಕಾರ್ಯಕ್ಷೇತ್ರ ಕೂಡಾ ಬೈಂದೂರು ಎನ್ನೋದು ಮತ್ತೊಂದು ವಿಶೇಷ. ಕುಂದಾಪ್ರ ಡಾಟ್ ಕಾಂ ವರದಿ ವಂಡ್ಸೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಆಯ್ಕೆಯಾಗಿರುವ ಬಾಬು ಶೆಟ್ಟಿ ತಗ್ಗರ್ಸೆ, ಬೈಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಆಯ್ಕೆಯಾಗಿರುವ ಶಂಕರ…
ಕುಂದಾಪುರ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪಕ್ಷ ನಿರೀಕ್ಷಿತ ಗೆಲುವು ಸಾಧಿಸದೆ ತೀವ್ರ ಮುಖಭಂಗ ಅನುಭವಿಸಿರುವ ಹಿನ್ನೆಲೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ.
ಕುಂದಾಪುರ: ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಮಾರಿ ಪೂಜೆ ಉತ್ಸವದ ಸಂದರ್ಭ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಕಿಶೋರ್ ಕುಮಾರ್ ಕುಂದಾಪುರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಉಪಾಧ್ಯಕ್ಷರಾದ ಪ್ರಕಾಶ್ ಆರ್. ಖಾರ್ವಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಅಧ್ಯಕ್ಷ ದಿನಕರ ಪಟೇಲ್, ದೇವಳದ ಮೋಕ್ತೆಸರರಾದ ಪಾಂಡು ಸಾರಂಗ್, ರತ್ನಾಕರ ಖಾರ್ವಿ, ದಾಸ ಹೆಗ್ಡೆ, ಶೇಖರ ಖಾರ್ವಿ, ಮಂಜುನಾಥ ಖಾರ್ವಿ, ಗಣಪತಿ ಪೀತಾಂಬರ ಇನ್ನಿತರರು ಉಪಸ್ಥಿತರಿದ್ದರು. ಮಾರಿ ಪೂಜೆ ಉತ್ಸವದ ಅಂಗವಾಗಿ ದೇವಳದಲ್ಲಿ ವಿಶೇಷ ಪೂಜೆ, ಪುಷ್ಪಾಲಂಕಾರ, ಭಕ್ತಾಧಿಗಳಿಗೆ ವಿಶೇಷ ಪ್ರಸಾದ ವಿತರಣೆ ಮಾಡಲಾಯಿತು. ಸಾವಿರಾರು ಭಕ್ತರು ಶ್ರೀದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಕುಂದಾಪ್ರ ಡಾಟ್ ಕಾಂ. ಕುಂದಾಪುರ: ಕನ್ನಡ ಚಲನಚಿತ್ರರಂಗದಲ್ಲಿ ವಾಣಿ ಜಯರಾಂ ಹೆಸರು ಚಿರಪರಿಚಿತ. ಸಂಗೀತ ಲೋಕದಲ್ಲಿ ತನ್ನ ಗಾನ ಮಾಧುರ್ಯದಿಂದ ಶೋತೃಗಳನ್ನು ಮಂತ್ರ ಮುಗ್ಧರನ್ನಾಗಿಸಿ ಕೋಟ್ಯಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದ ಗಾನ ಕೋಗಿಲೆ ವಾಣಿಜಯರಾಂ. ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೇ ಹೆಸರು ವಾಸಿಯಾದ ಗಾಯಕಿ ಇವರು. ಕನ್ನಡ, ಮಲಯಾಳಿ, ತೆಲುಗು, ಹಿಂದಿ, ಗುಜರಾತಿ ಸೇರಿದಂತೆ 19 ಭಾಷೆಗಳಲ್ಲಿ ತಮ್ಮ ಗಾನ ಸಿಂಚನವನ್ನು ಹರಡಿದ ಹೆಗ್ಗಳಿಗೆ ಇವರದು. ಇಂತಹ ಅಪ್ರತಿಮ ಸಾಧಕಿಯನ್ನು ಕುಂದಾಪುರಕ್ಕೆ ಕರೆತರುವ ಪ್ರಯತ್ನ ಮಾಡಿ ವಾಣಿಜಯರಾಂ ಅವರನ್ನು ನೇರವಾಗಿ ನೋಡುವ ಮತ್ತು ಅವರ ಗಾನ ಮಾಧುರ್ಯದ ಸವಿಯನ್ನು ನೇರವಾಗಿ ಅನುಭವಿಸಲು ಅವಕಾಶ ಕಲ್ಪಿಸಿಕೊಟ್ಟವರು ಕುಂದಾಪುರದ ಖ್ಯಾತ ವೈದ್ಯ ಹಾಗೂ ಗಾಯಕ ಡಾ. ಸತೀಶ್ ಪೂಜಾರಿಯವರು. ಅವರಿಗೆ ಸಾಥ್ ನೀಡಿದ್ದು ಖ್ಯಾತ ವೈದ್ಯ ಡಾ. ಪ್ರಕಾಶ್ ತೋಳಾರ್ ಮತ್ತು ಸಹನಾ ಡೆವೆಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಶೆಟ್ಟಿ. ವಾಣಿಯ ಗಾನಾಮೃತ ಸವಿದ ಅಭಿಮಾನಿಗಳು : ಸಂಘಟಕರು ಕಾರ್ಯಕ್ರಮದ ವೇದಿಕೆಗೆ ಕಹಳೆ…
ಕುಂದಾಪ್ರ ಡಾಟ್ ಕಾಂ ವರದಿ ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಚಿನ್ನಾಭರಣ ಕಳವು ಪ್ರಕರಣದ ತನಿಕೆ ಮುಂದುವರಿದ್ದು ಸುಮಾರು 60ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುವುದು ಸಷ್ಟವಾಗಿದೆ. ಪ್ರಕರಣದ ಆರೋಪಿ ಶಿವರಾಮ ಮಡಿವಾಳನನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದು ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಯ ತನಿಕೆ ನಡೆಸುತ್ತಿದ್ದು ಪ್ರಕರಣದ ಒಂದೊಂದೇ ಮಾಹಿತಿಗಳು ಬೆಳಕಿಗೆ ಬರುತ್ತಿದೆ. [quote font_size=”16″ bgcolor=”#ffffff” bcolor=”#dd9933″ arrow=”yes” align=”right”]* ಕೊಲ್ಲೂರು ದೇವಳದ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿಚಾರಣೆ ಪ್ರಗತಿಯಲ್ಲಿದ್ದು, ಸ್ವಲ್ಪ ಪ್ರಮಾಣದ ಒಡವೆಗಳನ್ನು ಈಗಾಗಲೇ ವಶಪಡೆಡಿದ್ದು ಉಳಿದವುಗಳನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟಿರುವ ಬಗ್ಗೆ ಆಪಾದಿತನಿಂದ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲಿಯೇ ಅವುಗಳನ್ನು ಸ್ವಾದೀನಪಡಿಸಿಕೊಳ್ಳುವುದರೊಂದಿಗೆ ಈ ಕೃತ್ಯದಲ್ಲಿ ಆತನೊಂದಿಗೆ ಇತರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಕೆ ನಡೆಸಲಾಗುತ್ತಿದೆ. – ಕೆ. ಅಣ್ಣಾಮಲೈ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.[/quote] ದೇವಳದ ತಿಜೋರಿಯಲ್ಲಿದ್ದ ಒಟ್ಟು 48 ಬಗೆಯ ಒಡವೆಗಳ ಪೈಕಿ ಒಟ್ಟು 9 ನಮೂನೆಯ…
ಕುಂದಾಪುರ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪಕ್ಷ ನಿರೀಕ್ಷಿತ ಗೆಲುವು ಸಾಧಿಸದೆ ತೀವ್ರ ಮುಖಭಂಗ ಅನುಭವಿಸಿರುವ ಹಿನ್ನೆಲೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಇಲ್ಲಿನ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಳದ ಆಭರಣ ಕಳವು ಪ್ರಕರಣ ನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಚಿನ್ನಾಭರಣ ಕಳವುಗೈದ ಘಟನೆ ಬಯಲಿಗೆ ಬರುತ್ತಿದ್ದಂತೆ ತಿಜೋರಿಯ ಕೀಲಿಕೈಯೊಂದಿಗೆ ಕಾಣಿಯಾಗಿದ್ದ ಆಪಾದಿತ ದೇವಳದ ಸಿಬ್ಬಂಧಿ ಶಿವರಾಮ ಮಡಿವಾಳ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಸಾರ್ವಜನಿಕರ ಸಮ್ಮುಖದಲ್ಲಿಯೇ ದೇವಳದ ತಿಜೋರಿಯನ್ನು ತೆರೆದು ನೋಡಿದಾಗಿ ಕಳವಾಗಿರುವ ಚಿನ್ನಾಭರಣಗಳ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಶಿವರಾಮ ಮಡಿವಾಳರ ಕೈಗೆ ತಿಜೋರಿ ಕೀಲಿಕೈ ದೊರೆತಾಗಿನಿಂದ ಇಲ್ಲಿಯವರೆಗೆ ದೇವಳಕ್ಕೆ ಹರಕೆಯ ರೂಪದಲ್ಲಿ ಸಂದಾಯವಾಗಿರುವ 47 ವಿವಿಧ ಬಗೆಯ ಚಿನ್ನಾಭರಣ ಬಗ್ಗೆ ರಶೀದಿಯಲ್ಲಿ ದಾಖಲಾಗಿದೆ. ಆದರೆ ತಿಜೋರಿ ತೆರೆದಾಗ 12 ಬಗೆಯ ಚಿನ್ನಾಭರಣದ ಹಾಗೂ ಇತರೆ ಬೆಳ್ಳಿಯ ಆಭರಣಗಳು ಮಾತ್ರ ದೊರೆತಿವೆ. ಉಳಿದ ಆಭರಣಗಳು ಖೋತಾ ಆಗಿರುವುದು ಸ್ಪಷ್ಟವಾಗಿದೆ. ಹಲವೆಡೆ ಸಾಲ ಮಾಡಿಕೊಂಡಿರುವ ಶಿವರಾಮ್, ಸಾಲ ತೀರಿಸಲು ದೇವಳದ ಚಿನ್ನಾಭರಣಗಳನ್ನೇ ಒಂದೊಂದಾಗಿ ಎಗರಿಸಿ ಬ್ಯಾಂಕಿನಲ್ಲಿ ಅಡವಿಟ್ಟಿರು ಬಗ್ಗೆ ಮಾಹಿತಿ ಲಭ್ಯವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಹಲವರು ಭಾಗಿಯಾಗಿರುವ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ,ಫೆ.24: ಇಲ್ಲಿನ ಕೋಟೇಶ್ವರ ಕೈಗಾರಿಕಾ ವಲಯದಲ್ಲಿರುವ ದಾಮೋದರ ಕೆಮಿಕಲ್ ಇಂಡಸ್ಟ್ರಿಗೆ ಬೆಂಕಿ ತಗುಲಿ ಇಡಿ ಕಾರ್ಖಾನೆಯ ಭಸ್ಮಗೊಂಡ ಘಟನೆ ಇಂದು ಬೆಳಿಗ್ಗೆ 11:30ರ ಸುಮಾರಿಗೆ ನಡೆದಿದೆ. ಕುಂದಾಪ್ರ ಡಾಟ್ ಕಾಂ ವರದಿ ಘಟನೆಯ ವಿವರ: ವಾಹನದ ಬ್ರೇಕ್ ಲೈನರ್ಗೆ ಬಳಸುವ ಆಯಿಲ್ ತಯಾರಿಸುವ ಕಾರ್ಖಾನೆಯ ಗೋಡನ್ನಲ್ಲಿ ಸುಮಾರು ೪೦ ಟನ್ ಆಯಿಲ್ ಶೇಖರಿಸಿಡಲಾಗಿತ್ತು. ಒಂದೇ ಸಮನೆ ಏರಿದ ಉಷ್ಟಾಂಶದಿಂದಾಗಿ ಆಯಿಲ್ ಟ್ಯಾಂಕಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆಗೆ ಆವರಿಸಿಕೊಂಡಿತ್ತು ಎನ್ನಲಾಗಿದೆ. ಏಕಾಏಕಿ ಬೆಂಕಿಯ ಧಗೆಯನ್ನು ಗಮನಿಸಿ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂಧಿಗಳಿಗೆ ಸುದ್ದಿ ಮುಟ್ಟಿಸಲಾಯಿತು. ಘಟನೆಯಲ್ಲಿ ಸುಮಾರು ಐವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಬೆಂಕಿ ನಂದಿಸುವಲ್ಲಿ ಹರಸಾಹಸ ಪಡಬೇಕಾಯಿತು. ದಾಮೋದರ ಕೆಮಿಕಲ್ ಇಂಡಸ್ಟ್ರೀಸ್ ಯಘ್ನೇಶ್ ಭಟ್ ಅವರ ಒಡೆತನಕ್ಕೆ ಸೇರಿದ್ದಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಘಟನೆಯ ಬಗ್ಗೆ ಮಾಹಿತಿ…
