Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ತನ್ನ ಮೊದಲ ಪ್ರಯತ್ನದಲ್ಲೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಆಯ್ಕೆಯಾದ ಸುಗಂಧಿ ಮಕ್ಕಳ ಚಲನಚಿತ್ರ ನಿರ್ಮಿಸಿದ ನೆನಪು ಮೂವೀಸ್ ಕೋಟ ಇದೀಗ ಮಕ್ಕಳ ಕಿರುಚಿತ್ರ ರಾಷ್ಟ್ರೀಯ ಶಿಕ್ಷಣ ಕ್ರಮ ಪ್ರೇರಿತ ‘ಕುದ್ರು’ ಚಿತ್ರಕ್ಕೆ ಚಾಲನೆ ದೊರೆಯಿತು. ಚಾಲನೆ ನೀಡಿ ಮಾತನಾಡಿದ ಯುವವಾಹಿನಿ ರಿ. ಯಡ್ತಾಡಿ ಘಟಕದ ಅಧ್ಯಕ್ಷ ಉದ್ಯಮಿ ರಾಜು ಪೂಜಾರಿ ಅವರು ಸದಾ ಮಕ್ಕಳ ಸಮಸ್ಯೆಗಳ ಕುರಿತು ಚಿಂತಿಸುವ , ಯೋಜನೆಗೆ ಈಡು ಮಾಡುವ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುವ ಚಿತ್ರ ನಿರ್ಮಿಸುವ ನೆನಪು ಮೂವೀಸ್ ತಂಡದ ಈ ಪ್ರಯತ್ನವೂ ಯಶಸ್ವಿಯಾಗಲಿ ಎಂದು ನುಡಿದರು. ಮಾತಿಲ್ಲದೇ ಮಾತಾನಾಡುವ ಈ ಕಿರುಚಿತ್ರದ ಕಥೆ-ಚಿತ್ರಕಥೆ -ನಿರ್ದೇಶನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಅವರದ್ದು. ಸಂಗೀತ ರವಿ ಕಾರಂತ್, ಡಿ.ಓ.ಪಿ. ಎ.ಕೆ ಐತಾಳ್, ಸಹನಿರ್ದೇಶಕರಾಗಿ ಸತೀಶ್ ವಡ್ಡರ್ಸೆ, ಕಲೆ ಗಿರೀಶ್ ಆಚಾರ್ಯ, ಕುಮಾರ, ಗೀತೆ ರಾಘವೇಂದ್ರ ರಾಜ್, ಮಾರ್ಗದರ್ಶಕರಾಗಿ ಪ್ರಕಾಶ್ ಪೂಜಾರಿ, ಶಿವರಾಮ ಕೊಠಾರಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಉಪ್ಪುಂದದ ಪೂರ್ವಾಧ್ಯಕ್ಷರಾದ ಜೇಸಿ ವೈ. ಮಂಗೇಶ್ ಶಾನ್‌ಭಾಗ್ ಅವರು ಜೆಸಿಐನಿಂದ ಕೊಡಮಾಡುವ ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರಿಗೆ ಜೆಸಿಐ ವಲಯ 15ರ ವತಿಯಿಂದ ನವೆಂಬರ್ 7ರಂದು ಜೆಸಿಐ ಕುಂದಾಪುರ ಸಿಟಿ ಸಹಯೋಗದಲ್ಲಿ ಸಹನಾ ಕನ್ವೆನ್ಸನ್ ಸೆಂಟರಿನಲ್ಲಿ ನಡೆಯುವ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಮತ್ತು ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಆಸುಪಾಸಿನ ಆಯ್ದ ಪ್ರೌಢಶಾಲೆಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸವಿ ಪ್ರತಿಭಾ ಶೋಧ ಎನ್ನುವ ಶೈಕ್ಷಣಿಕ ಸ್ಪರ್ಧೆಯನ್ನು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಸಲಾಯಿತು. ಗಂಗೊಳ್ಳಿಯ ಜಿ.ಎಸ್. ವಿ.ಎಸ್ ಅಸೋಸಿಯೇಷನ್ ರಿ. ಕಾರ್ಯದರ್ಶಿ ಎಚ್ ಗಣೇಶ್ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಭಿನ್ನ ರೀತಿಯ ಪ್ರತಿಭೆಗಳು ಅಡಗಿರುತ್ತದೆ ಅದನ್ನು ಶೋಧಿಸಲು ಇಂತಹ ಶೈಕ್ಷಣಿಕ ಸ್ಪರ್ಧೆಗಳು ಅನುಕೂಲ ಮಾಡಿಕೊಡುತ್ತವೆ. ಶೈಕ್ಷಣಿಕ ಸಂಸ್ಥೆಗಳ ನಡುವೆ ಸಹಕಾರಯುತ ಸೌಹಾರ್ದ ಮನೋಭಾವನೆಯನ್ನು ಬೆಳೆಸಲು ಕೂಡ ನೆರವಾಗುತ್ತವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ವಹಿಸಿದ್ದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ನಾಗರಾಜ ಶೆಟ್ಟಿ ಸ್ವಾಗತಿಸಿದರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್. ಕೆ ಪ್ರಾಸ್ತಾವಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿಯೊಂದು ಭಾಷೆಗೆ ಅದರದ್ದೆ ಆದ ಅಸ್ತಿತ್ವ ಹಾಗೂ ಐತಿಹಾಸಿಕ ಹಿನ್ನೆಲೆ ಇರುತ್ತದೆ. ಆ ನೆಲೆಯಲ್ಲಿ ಕನ್ನಡ ಭಾಷಿಕರಾದ ನಾವು ಪುಣ್ಯವಂತರು. ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವ ಕನ್ನಡ ಭಾಷೆಯನ್ನು ನಾವು ಉಳಿಸಿ ಬೆಳೆಸಬೇಕು. ಜೊತೆಗೆ ದೇಶಾಭಿಮಾನ, ದೇಶ ಭಕ್ತಿ, ಸೈನ್ಯದ ಕುರಿತಾದ ಅಭಿಮಾನವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಯೋಧ ಹಾಗೂ ಸಾಹಿತಿಗಳಾದ ಬೈಂದೂರು ಚಂದ್ರಶೇಖರ ನಾವಡ ಹೇಳಿದರು. ಅವರು ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ 66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ‘ಕನ್ನಡಕ್ಕಾಗಿ ನಾವು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ ಉಮೇಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಸುಕುಮಾರ ಶೆಟ್ಟಿ ಕಮಲಶಿಲೆ ಸ್ವಾಗತಿಸಿದರು, ಉಪನ್ಯಾಸಕರಾದ ಅಮೃತಾ ಅತಿಥಿಗಳನ್ನು ಪರಿಚಯಿಸಿ, ಪ್ರವೀಣಾ ಮಹಾಬಲ ಪೂಜಾರಿ ವಂದಿಸಿ, ರೇಷ್ಮಾ ಶೆಟ್ಟಿ ನಿರೂಪಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ರೋಟರಿ ಕ್ಲಬ್ ವತಿಯಿಂದ ವಕ್ವಾಡಿ ಸರಕಾರಿ ಪ್ರೌಢಶಾಲೆಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾ ಸೇತು ಪುಸ್ತಕವನ್ನು ವಿತರಿಸಲಾಯಿತು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ಹೊಳ್ಳ,ರೋಟರಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ್ ಬಿ ಕುಂಭಾಶಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಮಣೂರು ಅವಳಿ ಕೊಲೆ ಪ್ರಕರಣದ ಆರೋಪಿ, ಜಿಪಂ ಮಾಜಿ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್ ಜಾಮೀನು ಅರ್ಜಿಗೆ ತಿರಸ್ಕೃತಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆಯನ್ನು ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆದೇಶ ನೀಡಿದೆ. 2019ರ ಜ.26ರಂದು ಗೆಳೆಯರಾದ ಯತೀಶ್ ಕಾಂಚನ್ ಹಾಗೂ ಭರತ್ ರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರಿಕೆರೆ ರಾಘವೇಂದ್ರ ಕಾಂಚನ್ ಸೇರಿದಂತೆ ಒಟ್ಟು 18 ಮಂದಿ ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದರು. ಆರೋಪಿಗಳ ಪೈಕಿ ರಾಘವೇಂದ್ರ ಕಾಂಚನ್‌ಗೆ ಹೈಕೋರ್ಟ್ 2019ರಲ್ಲಿ ಜಾಮೀನು ನೀಡಿತ್ತು. ಆದರೆ ಭರತ್ ತಾಯಿ ಪಾರ್ವತಿ, ಈ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ 2020ರ ಜ.20ರಂದು ರಾಘವೇಂದ್ರ ಕಾಂಚನ್ನ ಜಾಮೀನು ವಜಾಗೊಳಿಸಿ ಆದೇಶ ನೀಡಿತ್ತು. ಇದೀಗ ಎರಡನೇ ಬಾರಿಗೆ ರಾಘವೇಂದ್ರ ಕಾಂಚನ್ ಜಾಮೀನಿಗಾಗಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸಾರ್ವಜನಿಕ ಸ್ಥಳಗಳ ಸ್ವಚ್ಚತೆಯನ್ನು ಕಾಪಾಡಲು ಪ್ರತಿಯೊಬ್ಬರೂ ಕ್ರಿಯಾಶೀಲ ಪ್ರಯತ್ನಗಳನ್ನು ಮಾಡಿದರೆ ಸ್ವಚ್ಛ ಭಾರತ ಪರಿಕಲ್ಪನೆ ಸಾಕಾರಗೊಳ್ಳುವುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು. ಅವರು, ಭಾರತ ಸರ್ಕಾರದ ನೆಹರು ಯುವ ಕೇಂದ್ರ ಉಡುಪಿ ಜಿಲ್ಲೆ ನೇತೃತ್ವದಲ್ಲಿ, ಭಾರತೀಯ ರೈಲ್ವೆ, ರೋವರ್ಸ್ ರೇಂಜರ್ಸ್, ಲಯನ್ಸ್ ಕ್ಲಬ್ ಸಂತೆಕಟ್ಟೆ ಹಾಗೂ ಇತರ ಸಹಯೋಗದೊಂದಿಗೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ನಡೆದ ಕ್ಲೀನ್ ಇಂಡಿಯಾ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರವಾಸಿ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡಲು ಪ್ರವಾಸಿಗರು ಮಹತ್ವದ ಪಾತ್ರವನ್ನು ನಿರ್ವಹಿಸಬೇಕು. ಮರುಬಳಕೆಯ ವಸ್ತುಗಳನ್ನು ಹೆಚ್ಚೆಚ್ಚು ಉಪಯೋಗಿಸಿದರೆ ತ್ಯಾಜ್ಯ ಉತ್ಪತ್ತಿ ಕಡಿಮೆಯಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದರೆ ಕ್ಲೀನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳ್ಳುತ್ತದೆ ಎಂದರು. ಲಯನ್ಸ್ ಕ್ಲಬ್ ಸಂತೆಕಟ್ಟೆ ಅಧ್ಯಕ್ಷರಾದ ಶಿಲ್ಪ ಸುದರ್ಶನ್, ರೈಲ್ವೇ ಇಲಾಖೆಯ ಸ್ಟೀವನ್ ಜಾರ್ಜ್, ಕಮರ್ಷಿಯಲ್ ಸೂಪರ್ವೈಸರ್ ಎಸ್.ಕೆ. ಭಟ್, ಸುದರ್ಶನ್ ನಾಯಕ್, ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಉಡುಪಿ ಜಿಲ್ಲೆಯ ಆನಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ದೇಶದ ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲಾ ಅಭಿವೃದ್ದಿಗೆ ಭ್ರಷ್ಠಾಚಾರವು ಪ್ರಮುಖ ಅಡಚಣೆಯಾಗಿದ್ದು, ಇದರ ನಿರ್ಮೂಲನೆಯಿಂದ ದೇಶದ ಅಭಿವೃದ್ದಿ ಸಾಧ್ಯವಾಗಲಿದ್ದು, ಇದರ ನಿರ್ಮೂಲನೆಗೆ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಹೇಳಿದರು. ಅವರು ಉಡುಪಿಯ ಅಬಕಾರಿ ಭವನದಲ್ಲಿ, ಜಾಗೃತ ಅರಿವು ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಕಚೇರಿಗಳಲ್ಲಿ, ಸಮಾಜದಲ್ಲಿ ಭ್ರಷ್ಠಾಚಾರ ಆಳವಾಗಿ ಬೇರೂರಿದ್ದು, ಕೆಟ್ಟ ಪಿಡುಗು ಆಗಿದೆ. ಇದನ್ನು ನಿರ್ಮೂಲನೆ ಮಾಡಲು ಎಲ್ಲಾ ನಾಗರೀಕರು,ಸರ್ಕಾರಿ ನೌಕರರು ಒಟ್ಟಾಗಿ ಕೆಲಸ ಮಾಡಬೇಕಿದೆ, ನೌಕರರು ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಬಕ್ಕೆ ಆಸ್ಪದ ನೀಡದೇ , ಸಕಾಲದಲ್ಲಿ , ಪ್ರಾಮಾಣಿಕವಾಗಿ ಮಾಡಿಕೊಡಬೇಕು, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಮುಂದಿನ ಪೀಳಿಗೆಗೆ ಸ್ಪೂರ್ತಿ ಮತ್ತು ಆದರ್ಶಪ್ರಾಯವಾಗಬೇಕು. ಭ್ರಷ್ಠಾಚಾರ ಪ್ರಕರಣಗಳಲ್ಲಿ ಸಿಲುಕಿದರೆ ಮಾನಸಿಕ ಮತ್ತು ದೈಹಿಕ ಖಿನ್ನತೆ ಅನುಭವಿಸಬೇಕಾಗುತ್ತದೆ. ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಲೋಕಾಯುಕ್ತ ಸಂಸ್ಥೆಯೊಂದಿಗೆ ಸಮಾಜದ ಎಲ್ಲರೂ ಕೈ ಜೋಡಿಸ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ಕಂಬಳ ಸಮಿತಿಯ ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು ಅಧ್ಯಕ್ಷತೆಯಲ್ಲಿ 2021-22ನೇ ಸಾಲಿನ ಕಂಬಳದ ಪೂರ್ವಭಾವಿ ಸಭೆ ಉಪ್ಪುಂದದ ಮಾತಾಶ್ರೀ ಸಭಾ ಭವನದಲ್ಲಿ ನಡೆಯಿತು. ಕಂಬಳ ಸಮಿತಿಯ ಕಾರ್ಯಕಾರಿಯನ್ನು ಮುಂದಿನ ಒಂದು ವರ್ಷದ ಅವಧಿಗೆ ಪುನರಾಯ್ಕೆ ಮಾಡಲಾಯಿತು. ಗಂತಿನಲ್ಲಿ ಕೋಣವನ್ನು ಸ್ಪರ್ಧೆಗೆ ಅಣಿಮಾಡುವ ಸಮಯವನ್ನು ಗರಿಷ್ಠ ಐದು ನಿಮಿಷಕ್ಕೆ ಸೀಮಿತ ಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭ ಸಮಿತಿ ಉಪಾಧ್ಯಕ್ಷರಾದ ವೆಂಕಟರಮಣ ಗಾಣಿಗ, ಶ್ರೀರಾಮ್ ಚೈತ್ರ ಪರಮೇಶ್ವರ ಭಟ್ ಬೋಳಂಬಳ್ಳಿ, ರಾಜು ದೇವಾಡಿಗ ಮಿಯ್ಯಾಣಿ, ಕೊಡೇರಿ ಕಂಬಳದ ಯಜಮಾನ ಚನ್ನಕೇಶವ್ ಕಾರಂತ್, ಗುಡಾಡಿ ಶೆಖರ ಪೂಜಾರಿ, ಸುರೇಶ್ ಕಾಡಿತಾರ್, ಕಂಬಳ ಸಮಿತಿಯ ಕಾರ್ಯದರ್ಶಿ ಸುಧೀರ್ ದೇವಾಡಿಗ, ಕೋಶಾಧಿಕಾರಿ ಜನಾರ್ದನ ದೇವಾಡಿಗ, ಕಂಬಳ ಗದ್ದೆ ಯಜಮಾನರು, ಹಗ್ಗದ ಜೋಟಗಾರರು, ಗೋರಿ ಸವಾರಿಗರು, ಕಂಬಳ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಶಿರೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಒಂದರಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ, ದಟ್ಟ ಹೊಗೆ ಕಾಣಿಸಿಕೊಂಡ ಘಟನೆ ಶನಿವಾರ ಅರಾಟೆಯಲ್ಲಿ ರಾ.ಹೆ. 66ರಲ್ಲಿ ಸಂಭವಿಸಿದೆ. ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರನ್ನು ಕೆಳಗಿಳಿಸಿ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಅವಘಢ ಸಂಭವಿಸುವುದನ್ನು ತಪ್ಪಿಸಿದ್ದಾರೆ.

Read More