Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೊಗವೀರ ಯುವ ಸಂಘಟನೆ ಬೈಂದೂರು ಶಿರೂರು ಘಟಕದ ೨೦೧೮-೨೦ನೇ ಸಾಲಿನ ನೂತನ ಅಧ್ಯಕ್ಷರಾಗಿ ವಸಂತ್ ಬಿ. ತಗ್ಗರ್ಸೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಚಂದನ್ ಕಳವಾಡಿ ಆಯ್ಕೆಯಾಗಿದ್ದಾರೆ. ವಸಂತ ಅವರು ಈ ಹಿಂದೆ ಮೊಗವೀರ ಸಂಘಟನೆ ಕಾರ್ಯದರ್ಶಿ ಹಾಗೂ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ವಿವಿಧ ಸಂಘಟನೆಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಾಯುಮಾಲೀನ್ಯ, ಪರಿಸರ ರಕ್ಷಣೆ, ಸ್ವಚ್ಛತೆಯ ಬಗ್ಗೆ ಕೇವಲ ಮಾತನಾಡಿದರೆ ಅದು ಪ್ರಯೋಜನವಾಗದು. ಇದರಲ್ಲಿ ಮೊದಲು ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಂತರ ನಮ್ಮ ಕುಟುಂಬ ಸದಸ್ಯರ ಒಗ್ಗೂಡುವಿಕೆಯಲ್ಲಿ ಕೈಜೋಡಿಸಿದಾಗ ಮಾತ್ರ ಬದಲಾವಣೆ ತರಬಹುದು. ಸಾಮರಸ್ಯದಿಂದ ಒಟ್ಟಾಗಿ ಮಾಡುವ ಸಮಾಜ ಸೇವೆಯಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದು ರೋಟರಿ ವಲಯ ೪ರ ಸಹಾಯಕ ಗವರ್ನರ್ ಬಾಲಕೃಷ್ಣ ಮದ್ದೋಡಿ ಹೇಳಿದರು. ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ರೋಟರಿ ಜಾಗತಿಕ ತಿಳುವಳಿಕೆ (ವರ್ಡ್ ಅಂಡರ್‌ಸ್ಟ್ಯಾಂಡಿಗ್ ಡೇ) ದಿನಾಚರಣೆ ಅಂಗವಾಗಿ ನಡೆದ ಕುಟುಂಬ ಸ್ನೇಹ ಸಮ್ಮಿಲನ, ಶಾಂತಿ, ಸೇವೆ, ಸಾಂಗತ್ಯ ಮತ್ತು ಸಾಮರಸ್ಯಗಳಿಗಾಗಿ ರೋಟರಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಬೃಹತ್ ಗಾತ್ರದ ನಮ್ಮ ಜನಸಂಖ್ಯೆ ವಾತಾವರಣದಿಂದ ಉಷ್ಣತೆ ಅತ್ಯಂತ ವೇಗವಾಗಿ ಹೆಚ್ಚಿಸುತ್ತಿದೆ ಎಂಬ ಸತ್ಯ ನಮಗೆ ಇನ್ನೂ ಕೂಡಾ ಅರಿವಾಗಲಿಲ್ಲ. ಪ್ರಕೃತಿಯಲ್ಲಾಗುತ್ತಿರುವ ಸೂಕ್ಷ್ಮ ಪರಿವರ್ತನೆ ಅರ್ಥಮಾಡಿಕೊಳ್ಳುವ ವೈಚಾರಿಕತೆ ನಮ್ಮಲ್ಲಿ ಬೆಳೆಯಬೇಕಾಗಿದೆ ಜಾಗತಿಕ ಸಿಹಿ ನೀರಿನ ಮೂಲಗಳನ್ನು ಸಂರಕ್ಷಿಸಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಅಂಚಿನ ಜಗನ್ನಾಥ ಶೆಟ್ಟಿ ಅವರ ವ್ಯವಹಾರ ಸಂಕೀರ್ಣದಲ್ಲಿ ಆರಂಭವಾದ ಕರ್ನಾಟಕ ಬ್ಯಾಂಕ್‌ನ ೭೯೫ನೆ ಶಾಖೆಯನ್ನು ಬ್ಯಾಂಕ್‌ನ ಮಾಜಿ ನಿರ್ದೇಶಕ ಎ. ಜಿ. ಕೊಡ್ಗಿ ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು ೧೯೨೪ರಲ್ಲಿ ಸ್ಥಾಪನೆಯಾದ ಕರ್ನಾಟಕ ಬ್ಯಾಂಕ್ ಶೀಘ್ರವೇ ೮೦೦ ಶಾಖೆಗಳನ್ನು ಹೊಂದಲಿದೆ. ಅದು ಸಾಧನೆಯ ಮೂಲಕ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಗ್ರಾಮೀಣ ಭಾಗದ ಜನರಿಗೆ, ರೈತರಿಗೆ ಸೇವೆ ಸಲ್ಲಿಸುವ ಮೂಲಕ ಸ್ಥಾಪಕರ ಆಶಯವನ್ನು ಈಡೇರಿಸುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಮಹಾ ಪ್ರಬಂಧಕ ವೈ. ವಿ. ಬಾಲಚಂದ್ರ ಮಾತನಾಡಿ ಕರ್ನಾಟಕ ಬ್ಯಾಂಕನ್ನು ಸಾಮಾನ್ಯ ಜನರು ರೂ. ೧೧,೫೮೨ರ ಬಂಡವಾಳದೊಂದಿಗೆ ಸ್ಥಾಪಿಸಿದರು. ಅದು ಸಾಮಾನ್ಯರಿಗೆ ಆರ್ಥಿಕ ನೆರವು ನೀಡಬೇಕು ಎನ್ನುವುದು ಅವರ ಉದ್ದೇಶವಾಗಿತ್ತು. ೯೫ನೆಯ ವರ್ಷ ತಲಪಿರುವ ಬ್ಯಾಂಕ್ ರೂ. ೫೪೦೦ ಕೋಟಿ ಬಂಡವಾಳ ಹೊಂದಿದೆ. ಉತ್ತಮ ಲಾಭ ಗಳಿಸುವ ಮೂಲಕ ೧.೬೮ ಲಕ್ಷ ಪಾಲುದಾರರಿಗೆ ಗರಿಷ್ಠ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ, ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕರ್ನಾಟಕದ ಬುಡಕಟ್ಟುಗಳು ಮತ್ತು ವರ್ತಮಾನ ಎಂಬ ವಿಷಯದ ಕುರಿತು ಎರಡು ದಿನಗಳ ಬುಡಕಟ್ಟು ಸಮ್ಮೇಳನ ಹಾಗೂ ವಿಚಾರ ಸಂರ್ಕೀಣ ಭಂಡಾರ್ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಫೆ.26 ಹಾಗೂ 27ರಂದು ಜರುಗಲಿದೆ ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಅವರು ಹೇಳಿದರು. ಅವರು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ , ಬುಡಕಟ್ಟು ಜನಾಂಗದ ಸಂಸ್ಕೃತಿ, ಆಚರಣೆಯನ್ನು ತಿಳಿದುಕೊಳ್ಳುವುದಕ್ಕಾಗಿ ಕಾರ್ಯಕ್ರಮದ ಮೂಲಕ ವೇದಿಕೆ ನಿರ್ಮಿಸಿದ್ದು, ಬುಡಕಟ್ಟು ಸಮುದಾಯದ ಜನರ ಸಮಸ್ಯೆಗಳ ಪರಿಹಾರಕ್ಕೆ ದಾರಿ ಕಂಡುಕೊಳ್ಳುವ ಜೊತೆಗೆ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಅಮೃತ ಮಹೋತ್ಸವ ಹಾಗೂ ಮಣಿಪಾಲ್ ಅಕಾಡೆಮಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದ ಪ್ರಧಾನಿ ಪ್ರತಿಯೊಬ್ಬ ಪ್ರಜೆಗೂ 15 ಲಕ್ಷ ಹಣ ಕೊಡುತ್ತೇನೆ ಎಂದರು. ಕೋಟಿ ಲೆಕ್ಕದಲ್ಲಿ ಉದ್ಯೋಗ ಕೊಡುವ ಭರವಸೆ ನೀಡಿದರು, ಆದರೆ ಪದವೀಧರ ಬೋಂಡಾ, ಎಂಬಿಬಿಎಸ್ ಬೋಂಡ, ಎಂಬಿಎ ಬೋಂಡ, ಬಿಕಾಂ ಬೋಂಡ ಮಾರುವಂತೆ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ‍್ಯದರ್ಶಿ ವಿಷ್ಣುನಾಥನ್ ಟೀಕಿಸಿದರು. ಕುಂದಾಪುರ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ಭೂತ್ ಮಟ್ಟದ ಕಾಂಗ್ರೆಸ್ ಕಾರ‍್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ರೂಢಿಯಲಿ ಆಡದೇ ಮಾಡುವವನು ಉತ್ತಮನು, ಆಡಿಯೂ ಮಾಡದವನು ಮಧ್ಯಮನು, ಆಡಿಯೂ ಮಾಡದವರು ರೂಢಿಯೊಳು ಅಧಮರು! ಸಿದ್ದರಾಮಯ್ಯ ಆಡದೇ ಮಾಡುವ ಮೂಲಕ ಉತ್ತಮರಾದರೆ, ನರೇಂದ್ರ ಮೋದಿ ಆಡಿಯೂ ಮಾಡದೆ ರೂಢಿಯಲಿ..? ಎಂದು ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದರು. ರಾಜ್ಯದಲ್ಲಿ 53 ಸಾವಿರ ಭೂತಮಟ್ಟದ ಕಮಿಟಿ ರಚಿಸಿ, ಮನೆ ಮನೆಗೆ ಕಾಂಗ್ರೆಸ್ ಕಾರ‍್ಯಕ್ರಮ ಯಶಸ್ವಿಗೊಳಿಸಿದೆ. ಭೂತಮಟ್ಟದಲ್ಲಿ ಪಕ್ಷ ಗಟ್ಟಿಯಾದರೆ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಿದ್ದು, ಪ್ರತಿ ಮನೆಯ ಜೊತೆ ಲಿಂಕ್ ಬೆಳೆಸುವ ಮೂಲಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಫೆ.20: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ತಾಲೂಕಿನ ಪಡುಗೋಪಾಡಿಯ ಗರ್ಭಿಣಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಪ್ರಶಾಂತ ಮೊಗವೀರ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಆರೋಪಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಅವರು ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಆರೋಪಿಯು ಮನೆಯೊಳಕ್ಕೆ ಅಕ್ರಮ ಪ್ರವೇಶ ಮಾಡಿದ್ದಕ್ಕಾಗಿ 448 ಸೆಕ್ಷನ್‌ನಲ್ಲಿ ಒಂದು ವರ್ಷ ಕಠಿಣ ಸಜೆ, ಅಪರಣ ಮಾಡುವ ಉದ್ದೇಶದಿಂದ ಮನೆಯೊಳಕ್ಕೆ ಪ್ರವೇಶಿಸಿದ್ದಕ್ಕಾಗಿ 4 ವರ್ಷ ಕಠಿಣ ಸಜೆ, ಕರಿಮಣಿ ಸರ ಅಪಹರಿಸಿದಕ್ಕಾಗಿ 10 ವರ್ಷ ಕಠಿಣ ಸಜೆ, ಅತ್ಯಾಚಾರ ಮಾಡಿದ್ದಕ್ಕಾಗಿ 10 ವರ್ಷ ಕಠಿಣ ಸಜೆ ಹಾಗೂ ಮಹಿಳೆಯ ಕೊಲೆ ಹಾಗೂ ಭ್ರೂಣ ಹತ್ಯೆ ಮಾಡಿರುವುದಕ್ಕಾಗಿ 302 ಸೆಕ್ಷನ್ ಅಡಿಯಲ್ಲಿ ಮರಣ ದಂಡಣೆ ಶಿಕ್ಷೆ ವಿಧಿಸಲಾಗಿದೆ. ಮೃತ ಮಹಿಳೆಯ ಕುಟುಂಬದ ಪರ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು. ಪ್ರಕರಣದ ವಿವರ: ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮದ ಪಡುಗೋಪಾಡಿಯ ಸಮುದ್ರ ಕಿನಾರೆ ಸಮೀಪದ ನಿವಾಸಿಯಾಗಿದ್ದ ಗರ್ಭಿಣಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಅನೇಕ ಮಂದಿ ಸಾಧಕರಿದ್ದು, ಬ್ಯಾಂಕಿಂಗ್, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ನಮ್ಮ ಸಮಾಜದವರಿಗೆ ಉತ್ತಮ ಸ್ಥಾನಮಾನ ಗೌರವ ಇದೆ. ಈ ಗೌರವವನ್ನು ಕಾಪಾಡಿಕೊಂಡು ಹೋಗಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಹಿರಿಯರನ್ನು ಗೌರವಿಸುವುದು, ಹಿರಿಯರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಎಂದು ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷ ಕೆ. ಮೋಹನದಾಸ ಶೆಣೈ ಹೇಳಿದರು. ಅವರು ಗಂಗೊಳ್ಳಿಯ ವೇದಮೂರ್ತಿ ಕೃಷ್ಣಾನಂದ ವಿಶ್ವನಾಥ ಆಚಾರ್ಯ ಸ್ಮಾರಕ ದತ್ತಿನಿಧಿ ವತಿಯಿಂದ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದಿ.ಕೃಷ್ಣಾನಂದ ವಿಶ್ವನಾಥ ಆಚಾರ್ಯ ಅವರು ಸಮಾಜಕ್ಕೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು. ಅವರ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಅನೇಕ ಉತ್ತಮ ಕೆಲಸ ಕಾರ್ಯಗಳು ನಡೆದಿದ್ದು, ಅವರ ನೆನಪಿನಲ್ಲಿ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು. ಇದೇ ಸಂದರ್ಭ ವೇದಮೂರ್ತಿ ಜಗದೀಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಅಡಿಗರು ಕೇವಲ ಕನ್ನಡದ ಕವಿಯಲ್ಲ ವಿಶ್ವದ ಶ್ರೇಷ್ಟ ಕವಿಗಳಲ್ಲಿ ಒರ್ವರು. ಅವರ ಕಾವ್ಯದಲ್ಲಿ ಎಲ್ಲವೂ ಸರಳ. ಅವು ಆಳವಾದ ಬೌದ್ಧಿಕ ಅಂಶಗಳನ್ನು ಒಳಗೊಂಡಿದೆ. ಹಾಗೂ ಕಾವ್ಯಗಳಲ್ಲಿ ಅಗಾಧ ಧ್ವನಿ ಪೂರ್ಣತೆಯನ್ನು ಒಳಗೊಂಡಿದೆ ಎಂದು ಸಾಹಿತಿ ಬಿ.ವಿ. ಕೆದಿಲಾಯ ಬೆಂಗಳೂರು ಹೇಳಿದರು. ಕುಂದ ಅಧ್ಯಯನ ಕೇಂದ್ರ ಹಾಗೂ ಸುವಿಚಾರ ಬಳಗ ಟ್ರಸ್ಟ್ ಆಶ್ರಯದಲ್ಲಿ ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ರವಿವಾರ ಜರುಗಿದ ಎಂ. ಗೋಪಾಲಕೃಷ್ಣ ಅಡಿಗ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಎಂ.ಗೋಪಾಲಕೃಷ್ಣ ಅಡಿಗ ಜನ್ಮಶತಮಾನೋತ್ಸವ ಪ್ರಶಸ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಅಡಿಗರು ಕಾವ್ಯವನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡಿದ್ದರು. ಅವರ ಕಾವ್ಯದ ಸಮಗ್ರ ಮೌಲ್ಯಮಾಪನ ನಡೆಯಲಿಲ್ಲ. ಜಾಗತೀಕರಣಕ್ಕಿಂತ ಮೊದಲು ಆ ಕುರಿತು ದಾರ್ಶನಿಕ ಚಿಂತನೆ ನಡೆಸಿದ್ದ ಅಡಿಗರ ಕಾವ್ಯದ ಮೂಲದ್ರವ್ಯದ ಶೋಧನೆ ನಡೆಯಬೇಕು ಎಂದರು. ಹಿರಿಯ ಪತ್ರಕರ್ತ ಜಾನ್ ಡಿ‘ಸೋಜಾ ರಾಮಕೃಷ್ಣ ಶೇರುಗಾರ ಅಧ್ಯಕ್ಷತೆ ವಹಿಸಿದ್ದರು, ಹಿರಿಯ ಪತ್ರಕರ್ತ ಜಾನ್ ಡಿ‘ಸೋಜಾ, ಜಾನಪದ ತಜ್ಞರಾದ ಪ್ರೋ.ಎ.ವಿ. ನಾವಡ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಿನ್ನವಾದ ಕಥಾ ಹಂದರದ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಉತ್ತಮ ಚಿತ್ರಕಥೆ, ನಿರ್ದೇಶನ ಹಾಗೂ ಛಾಯಾಗ್ರಹಣದಂತೆ ಸಿನೆಮಾದಲ್ಲಿ ಉತ್ತಮ ಸಂಗೀತ ಇದ್ದಾಗಲೇ ಅದು ಯಶಸ್ವಿ ಚಿತ್ರವಾಗಿ ಮೂಡಿಬರುತ್ತದೆ ಎಂದು ಕನ್ನಡದ ಖ್ಯಾತ ಗಾಯಕಿ ಬಿ. ಕೆ ಸುಮಿತ್ರ ಹೇಳಿದರು. ಅವರು ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಆಯೋಜಿಸಿದ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನೆಮಾ ’ಕತ್ತಲೆಕೋಣೆ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಕತ್ತಲೆಕೋಣೆ ಚಲನಚಿತ್ರದ ಹಾಡಿನ ಸಾಹಿತ್ಯ ಹಾಗು ಸಂಗೀತ ಮನಮುಟ್ಟುವಂತಿದ್ದು, ಜನರ ಮನಸ್ಸನ್ನು ತಟ್ಟಲಿದೆ. ಸಂಗೀತದೊಂದಿಗೆ ಚಿತ್ರವೂ ಯಶಸ್ಸು ಕಾಣಲಿದೆ ಎಂದರು. ಮಲೆನಾಡಿನ ಮಡಿಲಲ್ಲಿರುವ ಶಿವಮೊಗ್ಗದಲ್ಲಿ ಯಾವುದಾದರೂ ಕಾರ್ಯಕ್ರಮ ಯಶಸ್ವಿಗೊಂಡರೇ ಅದು ಇಡಿ ರಾಜ್ಯದಲ್ಲೇ ಯಶಸ್ವಿಯಾಗುತ್ತದೆ ಎಂದು ನಿರ್ಧರಿಸಿಬಿಡಬಹುದು. ಇಲ್ಲಿನ ಜನರ ಕಲಾಸಕ್ತಿ ಅಂತಹದ್ದು ಎಂದ ಅವರು ಕತ್ತಲೆಕೋಣೆ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮ ಯಶಸ್ವಿಗೊಂಡಿದೆ. ಚಿತ್ರವೂ ಯಶಸ್ವಿಯಾಗುತ್ತದೆ ಎಂಬುದರಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜನಮೆಚ್ಚಿದ ಶಿಕ್ಷಕರಾಗಿದ್ದ ಭೋಜು ಹಾಂಡರು ನಮ್ಮನ್ನಗಲಿ ವರುಷ ಸಂದರೂ ಅವರ ನೆನಪು ಇನ್ನೂ ಹಸಿರಾಗಿದೆ. ಇಂದು ಭೋಜು ಹಾಂಡರ ನೆನಪಲ್ಲೇ ನಾವು ಬಣ್ಣದ ನೆನಪು ಮಾಡಿಕೊಳ್ಳಬೇಕಾಗಿದೆ. ಭಾವಕ್ಕೆ ಬಣ್ಣದ ಲೇಪನ ಮಾಡಿದವರು ಭೋಜ ಹಾಂಡರು. ಈ ಬಣ್ಣದ ಬೆಸುಗೆ ನಿರಂತರವಾಗಿ ಮುನ್ನಡೆಯಲಿ ಎಂದು ಸಮುದಾಯ ಕುಂದಾಪುರ ಕಾರ್ಯದರ್ಶಿ, ಶಿಕ್ಷಕ ಸದಾನಂದ ಬೈಂದೂರು ನುಡಿದರು. ಜ್ಞಾನ ಯುವಜನ ಹೆಮ್ಮಾಡಿ ಇದರ ಆಶ್ರಯದಲ್ಲಿ ಪ್ರಾಥಮಿಕ ಶಾಲೆ ಹೆಮ್ಮಾಡಿ ಇದರ ಸಭಾಂಗಣದಲ್ಲಿ ನಡೆದ ಬಣ್ಣದ ಲೋಕದ ಗಾರುಡಿಗ ದಿವಂಗತ ಭೋಜು ಹಾಂಡರ ನೆನಪಿನ ಕಾರ್ಯಕ್ರಮ ಚಿತ್ರಕಲಾ ಸ್ಪರ್ಧೆ ’ಬಣ್ಣದ ಬೆಸುಗೆ-2018’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭೋಜ ಹಾಂಡರು ವೃತ್ತಿಯನ್ನೇ ತನ್ನ ಪ್ರವೃತ್ತಿಯನ್ನಾಗಿಸಿಕೊಂಡವರು. ಅವರ ವೃತ್ತಿಯೇ ಅವರಿಗೆ ಇಂದು ಇಷ್ಟೊಂದು ಜನ ಗೌರವ ಕೊಡಲು ಸಾಧ್ಯವಾಯಿತು. ಒಂದೊಳ್ಳೆ ಶಿಕ್ಷಕನಿಗಿರಬೇಕಾದ ಎಲ್ಲಾ ಗುಣಗಳು ಭೋಜ ಹಾಂಡರಲ್ಲಿದ್ದವು. ಬಣ್ಣದ ಹುಡುಕಾಟದಲ್ಲಿ ಏನೋ ಒಂದು ಅವ್ಯಕ್ತವಾದ ಸಂತೋಷ ಅಡಗಿದೆ ಎನ್ನುವುದನ್ನು ತಮ್ಮ ಶಿಷ್ಯಂದಿರಿಗೆ ಮನವರಿಕೆ…

Read More