Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಭಾರತೀಯ ಸೇನೆ / ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪ  Çರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, 2006ರ ಏಪ್ರಿಲ್ 27 ರಿಂದ 2009 ರ ಏಪ್ರಿಲ್ 27 ರ ಅವಧಿಯಲ್ಲಿ ಜನಿಸಿರುವ ಅರ್ಹ ಅಭ್ಯರ್ಥಿಗಳಿಂದ (ಬಾಲಕರು ಮಾತ್ರ) ತರಬೇತಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 13 ರ ವರೆಗೆ ವಿಸ್ತರಿಸಲಾಗಿದೆ.    ತರಬೇತಿಯು ಬ್ರಹ್ಮಾವರ ತಾಲೂಕು ಬಾರ್ಕೂರು ಹನೆಹಳ್ಳಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ರ್ಯಾಲಿಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ: 304, ಬಿ ಬ್ಲಾಕ್, ಎರಡನೇ ಮಹಡಿ, ರಜತಾದ್ರಿ, ಮಣಿಪಾಲ ಉಡುಪಿ ದೂ.ಸಂಖ್ಯೆ: 0820-2574881,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ,ಎ.29: ತಾಲೂಕಿನ ತ್ರಾಸಿ – ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಭೀಕರ ಅಪಘಾತದಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಬೈಂದೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಬಸ್, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ಯಾಂಕರ್ ಮತ್ತು ಲಾರಿಗೆ ನಿಯಂತ್ರಣ ತಪ್ಪಿ ಮಧ್ಯಾಹ್ನ 1:30ರ ಸಮಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಘಟನೆಯಲ್ಲಿ ಬಸ್ಸಿನ ಹೆಚ್ಚುವರಿ ಚಾಲಕ ರಘು, ಕ್ಲೀನರ್ ರಂಗನಾಥ್ ಹಾಗೂ ಅಡುಗೆ ಸಹಾಯಕ ಹೇಮಂತ್ ಮೃತಪಟ್ಟಿದ್ದಾರೆ. ಇವರ ಜೊತೆಯಲ್ಲಿದ್ದ ವಿದ್ಯಾರ್ಥಿಯೋರ್ವನಿಗೂ ಗಂಭೀರ ಗಾಯವಾಗಿದೆ. ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ರಂಭಾಪುರಿ ಕಾಲೇಜಿನಿಂದ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿಗಳು, ಉಪನ್ಯಾಸಕರೊಂದಿಗೆ 3 ದಿನಗಳ ಪ್ರವಾಸಕ್ಕೆ ಹೊರಟ್ಟಿದ್ದರು. ನಿನ್ನೆ ಹೊನ್ನಾವರದಲ್ಲಿ ಪ್ರವಾಸಿ ಮುಗಿಸಿ ಅಲ್ಲಿಯೇ ಉಳಿದು, ಇಂದು ಉಡುಪಿ ಕಡೆಗೆ ಹೊರಟಿದ್ದರು. ಮರವಂತೆಯಲ್ಲಿ ಬಸ್ ನಿಲ್ಲಿಸಿ ಬೀಚ್‌ಗೆ ತೆರಳಿ ಅಲ್ಲಿಂದ ಪ್ರಯಾಣ ಮುಂದುವರಿಸುವ ವೇಳೆ ಏಕಾಏಕಿ ಈ ಅವಘಡ ನಡೆದಿದೆ. ಮರವಂತೆಯಿಂದ ಒಂದು ಕಿ.ಮೀ ಸಾಗಿದ್ದ ಬಸ್ಸು ಏಕಾಎಕಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ಯಾಂಕರಿನ ಮುಂಭಾಗಕ್ಕೆ ಡಿಕ್ಕಿಯಾಗಿದೆ. ಬಳಿಕ ಅಲ್ಲೇ ಎದುರಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾಗಿ ನಿಂತಿದೆ. ಅಪಘಾತದ ತೀವ್ರತೆಗೆ ನಾಲ್ವರು ಗಂಭೀರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲೇ ಮುಳುಗಿರುವ ಮಕ್ಕಳಿಗೆ ತುಳುನಾಡಿನ ವೀರ ಕ್ರೀಡೆ ‘ಕಂಬಳ’ ಹಾಗೂ ಕೃಷಿ ಸಂಸ್ಕೃತಿಯನ್ನು ಪರಿಚಯಿಸುವ ಅಪೂರ್ವ ಪ್ರಯತ್ನವೊಂದು ಯಡಾಡಿ-ಮತ್ಯಾಡಿಯಲ್ಲಿ ಜರುಗಿತು. ಇಲ್ಲಿನ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘ಮಂಥನ’ಬೇಸಿಗೆ ಶಿಬಿರದ ಎರಡನೇ ದಿನದ ಅಂಗವಾಗಿ, ವಿದ್ಯಾರ್ಥಿಗಳಿಗಾಗಿ ಸಾಂಕೇತಿಕವಾಗಿ ಆಯೋಜಿಸಲಾಗಿದ್ದ ‘ಕಂಬಳ ಪ್ರದರ್ಶನ’ವು ಅತ್ಯಂತ ವೈಭವದಿಂದ ನಡೆಯಿತು. ಹೊಂಬಾಳೆ ಬಿಡಿಸುವ ಮೂಲಕ ಕಂಬಳಕ್ಕೆ ಚಾಲನೆ:ಉಡುಪಿ ಜಿಲ್ಲಾ ಕಂಬಳ ಸಮಿತಿಯ ಸಂಚಾಲಕರಾದ ಶಾಂತರಾಮ ಶೆಟ್ಟಿ ಅವರು ಹೂವಿನ ಹೊಂಬಾಳೆಯನ್ನು ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಇಂದಿನ ಮಕ್ಕಳಿಗೆ ನಮ್ಮ ನೆಲದ ಕಲೆ, ಆಚಾರ-ವಿಚಾರ ಹಾಗೂ ಸಂಪ್ರದಾಯಗಳ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ಕಂಬಳದಂತಹ ಕ್ರೀಡೆಯನ್ನು ಪರಿಚಯಿಸುವ ಮೂಲಕ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಮಕ್ಕಳಲ್ಲಿ ಮಣ್ಣಿನ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಮಹತ್ತರ ಕಾರ್ಯ ಮಾಡುತ್ತಿದೆ” ಎಂದು ಶ್ಲಾಘಿಸಿದರು. ಕೆಸರು ಗದ್ದೆಯಲ್ಲಿ ಓಡಿದ ಕೋಣಗಳು: ಮಕ್ಕಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕೇಂದ್ರ ಸರ್ಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಬೆಳಿಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಅವರು ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಭೂಮಿ ದಿನಾಚರಣೆ’ ಸಲುವಾಗಿ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಕ್ರಿಯೇಟಿವ್‌ನ ಸಪ್ತ ಸ್ವರ ವೇದಿಕೆಯಲ್ಲಿ ಜರುಗಿತು.  ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಕೋಮಲ ಆರ್. ಸಿ. ಗೌರವಾನ್ವಿತ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರು ಕಾರ್ಕಳ ಅವರು, ಪ್ರಸ್ತುತ ದಿನಮಾನಗಳಲ್ಲಿ ಪರಿಸರವು ಮಾಲಿನ್ಯಗೊಳ್ಳುತ್ತಿದ್ದು ಶುದ್ಧವಾದ ಗಾಳಿ, ನೀರು ಸಿಗದೇ ಸಮಾಜ ಶೋಚನೀಯ ಸ್ಥಿತಿಯಲ್ಲಿದೆ ಎಂದು ಕಳವಳವನ್ನು ವ್ಯಕ್ತಪಡಿಸಿ ಪರಿಸರ ಸಂರಕ್ಷಣೆಯಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.  ಮುಖ್ಯ ಅತಿಥಿಗಳಾದ ಕಾರ್ಕಳದ ನ್ಯಾಯವಾದಿ ಸಂಘಗಳ ಪ್ರಧಾನ ಕಾರ್ಯದರ್ಶಿಗಳಾದ ಪದ್ಮಪ್ರಸಾದ್ ಜೈನ್ , ನಾವೆಲ್ಲರೂ ಕಾನೂನಿನ ಚೌಕಟ್ಟಿನಲ್ಲಿ ಸಮಾಜದಲ್ಲಿ ಜೀವನವನ್ನು ನಡೆಸಬೇಕು ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ಜನ ಸಮುದಾಯ ಕಾರ್ಯಪ್ರವೃತ್ತರಾಗಬೇಕು ಎಂದು ನುಡಿದರು. ಸಂಪನ್ಮೂಲ ವ್ಯಕ್ತಿಗಳಾದ ಸುದೇಶ್ ಶೆಟ್ಟಿ ನ್ಯಾಯವಾದಿಗಳು ಕಾರ್ಕಳ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಏರುಗತಿಯಾಗುತ್ತಿದ್ದು ಇದಕ್ಕೆಲ್ಲ ಮೂಲ ಕಾರಣ ಪರಿಸರ ನಾಶ. ಮುಂದಿನ ಪೀಳಿಗೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅವಳಿ ಸಹೋದರಿಯರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.  ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ-ನೆಂಪು ಇಲ್ಲಿನ 10ನೇ ತರಗತಿ ವಿದ್ಯಾರ್ಥಿನಿಯರಾದ ಸಮೀಕ್ಷಾ ಎಸ್. ಪೂಜಾರಿ ಹಾಗೂ ಪ್ರತೀಕ್ಷಾ ಎಸ್. ಪೂಜಾರಿ ಇಬ್ಬರೂ ಕೂಡಾ 602 ಅಂಕ ಪಡೆದಿದ್ದಾರೆ. ಸಹೋದರಿಯರು 7ನೇ ತರಗತಿ ತನಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆಯಲ್ಲಿ ಓದಿದ್ದು, ಬಳಿಕ ಕೆಪಿಎಸ್ ನೆಂಪುವಿನಲ್ಲಿ ಪ್ರೌಢಶಿಕ್ಷಣ ಮುಂದುವರಿಸಿದ್ದರು. ಅವರು ಬಸ್ರೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕ, ಇಸಿಓ ಆಗಿ ಕರ್ತವ್ಯ ನಿರ್ವಹಿಸಿದ ಸಂತೋಷ್ ಹಾಗೂ ಪ್ರೇಮಾ ಅವರ ಪುತ್ರಿಯರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಸಂಘ ಕತಾರ್ನ 2026–2028 ಅವಧಿಗೆ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧಿಕಾರ ಸ್ವೀಕರಿಸಿದ್ದು, ಕತಾರ್ನ ಕನ್ನಡ ಸಮುದಾಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಅವರು ಈ ಜವಾಬ್ದಾರಿಯನ್ನು ಅತ್ಯಂತ ನಮ್ರತೆ ಮತ್ತು ಬದ್ಧತೆಯಿಂದ ಸ್ವೀಕರಿಸಿರುವುದಾಗಿ ತಿಳಿಸಿ, ಸಮುದಾಯಕ್ಕೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಗೌರವದ ಸಂಗತಿಯಾಗಿದೆ ಎಂದು ಹೇಳಿದರು. ನಿಕಟ ಪೂರ್ವ ಅಧ್ಯಕ್ಷರಾದ ರವಿ ಶೆಟ್ಟಿ ಹಾಗೂ ಆಡಳಿತ ಸಮಿತಿ (2024–2026) ಅವರ ಸೇವೆ ಮತ್ತು ಕೊಡುಗೆಗಳನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು. ಅವರ ಶ್ರಮದಿಂದ ಸಂಘದ ಅಭಿವೃದ್ದಿಗೆ ಬಲವಾದ ಅಡಿಪಾಯ ನಿರ್ಮಾಣವಾಗಿದೆ ಎಂದು ಹೇಳಿದರು. ಸಂಘದ ಎಲ್ಲಾ ಪೂರ್ವ ಅಧ್ಯಕ್ಷರಾದ ಸತೀಶ್ ದೇಶಪಾಂಡೆ, ನಾಗರಾಜ್, ಪ್ರಕಾಶ್ ಬಾಬು, ಕೆ. ಪ್ರಭಾಕರ್, ಅರವಿಂದ ಪಾಟೀಲ, ಅರುಣ್ ಕುಮಾರ್ ಕೆ.ಎಂ., ವಿ.ಎಸ್. ಮನ್ನಂಗಿ, ದೀಪಕ್ ಶೆಟ್ಟಿ, ಎಚ್.ಕೆ. ಮಧು, ವೆಂಕಟ್ ರಾವ್, ದಿವಂಗತ ಮೈರ್ಪಾಡಿ ನಾಗೇಶ್ ರಾವ್, ಸಂಜಯ ಕುದರಿ, ಮಹೇಶ್ ಗೌಡ ಹಾಗೂ ರವಿ ಶೆಟ್ಟಿ ಅವರ ಸೇವೆಯನ್ನು ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2025-2026ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗಣೇಶ್ ಮೊಗವೀರರ ನೇತ್ರತ್ವದ ಹೊಸ ಆಡಳಿತ ಮಂಡಳಿಯ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಪರಿಪೂರ್ಣ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳು ರಾಜ್ಯ ಮಟ್ಟ ರ್ಯಾಂಕ್ ಹಾಗೂ 100% ಫಲಿತಾಂಶದೊಂದಿಗೆ ಬೈಂದೂರು ತಾಲ್ಲೂಕಿನಲ್ಲೇ ಪ್ರಶಂಸೆಗೆ ಪಾತ್ರವಾಗಿದೆ.  ವಿದ್ಯಾರ್ಥಿಗಳಾದ ಸಮೃದ್ಧಿ ಸಿ. ಖಾರ್ವಿ (616/625)  ಹಾಗೂ ಪಂಚಮಿ (616/625) ಅಂಕ ಗಳಿಸಿ ರಾಜ್ಯಮಟ್ಟದಲ್ಲಿ 10ನೇ ರ್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ.  ಪರೀಕ್ಷೆಗೆ ಹಾಜರಾದ 68 ವಿದ್ಯಾರ್ಥಿಗಳಲ್ಲಿ ಹಾಗೆಯೇ 25 ವಿದ್ಯಾರ್ಥಿಗಳು ವಿಶೇಷ ಶ್ರೇಣಿ, 41 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯನ್ನು ಹೊಂದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಗಣೇಶ ಮೊಗವೀರರು ಹಾಗೂ ಕಾರ್ಯದರ್ಶಿಯಾಗಿರುವ ಶ್ಯಾಮಲಾ ಗಣೇಶ್ ಮೋಗವೀರರು ಮತ್ತು ಬೋಧಕ, ಬೋಧಕೇತರ ವೃಂದದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ  ಅತಿ ಕ್ಲಿಷ್ಟಕರವೆನಿಸಿದ  ಪರೀಕ್ಷೆಗಳಲ್ಲೊಂದಾದ  ಜೆಇಇ ಮೈನ್ಸ್ (ಸೆಷನ್-2) 2026ನೇ ಸಾಲಿನ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 3 ಮಂದಿ ವಿದ್ಯಾರ್ಥಿಗಳು 99 ಪರ್ಸೆಂಟೈಲ್ ಗಿಂತ ಅಧಿಕ ಅಂಕವನ್ನು ಪಡೆದು ವಿಶಿಷ್ಟ ಸಾಧನೆ ಗೈದು ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ತೇರ್ಗಡೆಯನ್ನು ಹೊಂದಿದ್ದಾರೆ.  ವಿದ್ಯಾರ್ಥಿಗಳಾದ ನಮಿತ್ ಕೃಷ್ಣಮೂರ್ತಿ ಹೆಗಡೆ 99.4981217 ಪರ್ಸೆಂಟೈಲ್, ನಾಗದೇವ್ ಎಂ.ಜಿ. – 99.5970242 ಪರ್ಸೆಂಟೈಲ್, ಪ್ರಥಮ್ ತಮ್ಮಣ್ಣ ಗೌಡರ್ – 99.1416986 ಪರ್ಸೆಂಟೈಲ್ ಪಡೆದುಕೊಳ್ಳುವ ಮೂಲಕ ವಿಶಿಷ್ಟ ಶ್ರೇಣಿಗಳಿಸಿದ್ದಾರೆ. ಬಸವರೆಡ್ಡಿ ವಿಷ್ಣುರೆಡ್ಡಿ – 98.9823753ತೇಜಸ್ ಆರ್. ಬಿ.- 98.9615457ನಿನಾದ್ ರಾಜೇಶ್ ನಾಯ್ಕ್- 98.946358ಧನುಷ್  ಹೆಚ್. ಎ.- 98.8634496ಸಂವಿತ್ ಅಮಿತ್ ಗೋಕರ್ಣ- 98.5729919ದೃಶ್ಯ್- 98.4130581ಸುಕ್ಷಿತ್ ಗಿರೀಶ್ ಗೌಡ- 98.3503888ತೇಜಸ್  ಎನ್. ಇ. – 98.3454350ತೇಜಸ್ ಹೆಗಡೆ ಎಚ್. ಡಿ.-98.1925416ಅಕ್ಷತಾ ಮೋಹನ್ ಹೆಗಡೆ -98.168271ಪ್ರಜ್ವಲ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಕುಂದಾಪುರದ ಯಡಾಡಿ-ಮತ್ಯಾಡಿಯ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯು ಉತ್ತಮ ಸಾಧನೆ ಮಾಡಿದೆ. ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಒಟ್ಟು 625 ಅಂಕಗಳಿಗೆ 621 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ 5ನೇ ರ್ಯಾಂಕ್ ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.‌ ಈ ಬಾರಿ ಪರೀಕ್ಷೆಗೆ ಹಾಜರಾದ ಶಾಲೆಯ ಒಟ್ಟು 129 ವಿದ್ಯಾರ್ಥಿಗಳ ಪೈಕಿ ಎಲ್ಲರೂ ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ. 100ರಷ್ಟು ಫಲಿತಾಂಶ ಲಭಿಸಿದೆ. ಶ್ರೇಯಸ್ ಎಸ್ ಚಿಕ್ಕಮಠ (615) ಆಯಿಷ ಆನಾಮ್ (611) ಮನ್ವಿತ್ ಬಿ (611) ಅಭಿಕ್ಷಾ(610) ಸೂರ್ಯಪ್ರಕಾಶ್ ಬಿ.ಗಾಣಿಗ (610) ನಿವೇದಿತಾ ಚಂದ್ರ ಮೌಳೇಶ್ವರ ಬಾದಾಮಿ (609) ಶ್ರೀಹರಿ ಮನೀಷ್ (607) ಸನ್ವಿತ್ ಜಿ ಪೂಜಾರಿ (607) ಚಾರ್ವಿ ಪಿ ಶೆಟ್ಟಿ (605) ಕೌಶಿಕ್ ಶೆಣೈ (600) ಶ್ರೇಯಾ (599)…

Read More