Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ಜಂಟಿ ಆಶ್ರಯದಲ್ಲಿ ನೆತ್ತರ ನೆರವು ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಇಂಡಿಯನ್ ರೆಡ್ ಕ್ರಾಸ್ ಘಟಕದ ಸಭಾಪತಿಗಳಾದ ಜಯಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತದ ವರ್ಗೀಕರಣದ ಮಹತ್ವವನ್ನು ಮತ್ತು ರಕ್ತದ ಅನಿವಾರ್ಯತೆಯನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಯುವ ರೆಡ್ ಕ್ರಾಸ್ ಸಂಯೋಜನಾಧಿಕಾರಿಯಾದ ಶ್ರೀ ಸತ್ಯನಾರಾಯಣ್ ಪುರಾಣಿಕ್ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳಲ್ಲಿ ಸೇವಾ ಮನೋಭಾವನೆ ಬಹುಮುಖ್ಯ ಪಾತ್ರ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಸುಭದ್ರ ಸಮಾಜPÉÌ ಆರೋಗ್ಯಯುತ ಯುವಶಕ್ತಿ ಅವಶ್ಯಕ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕೋಶಾಧಿಕಾರಿಯಾದ ಶಿವರಾಮ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿ ಚೇತನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆಯಲ್ಲಿ ಯುವ ರೆಡ್ಕ್ರಾಸ್ ಘಟಕದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಯುವ ರೆಡ್ಕ್ರಾಸ್ ಘಟಕ ಕುಂದಾಪುರ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಯಿತು. ಕುಂದಾಪುರ ರೆಡ್ಕ್ರಾಸ್ ಘಟಕದ ಸಂಚಾಲಕರಾದ ಜಯಕರ ಶೆಟ್ಟಿಯವರು ರೆಡ್ಕ್ರಾಸ್ ಸಂಸ್ಥೆಯ ಮೂಲತತ್ವ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಸುನೀತ ವಿ ವಹಿಸಿದ್ದರು. ವೇದಿಕೆಯಲ್ಲಿ ರೆಡ್ಕ್ರಾಸ್ ಸಂಸ್ಥೆಯ ಗಣೇಶ್ ಆಚಾರ್ಯ, ಸೀತಾರಾಮ್ ಶೆಟ್ಟಿ, ಶಿವರಾಮ್ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ನಿತ್ಯಾನಂದ ವಿ. ಗಾಂವಕರ, ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ. ಸುಬ್ರಮಣ್ಯ. ಎ, ರೆಡ್ಕ್ರಾಸ್ ಘಟಕದ ವಿದ್ಯಾರ್ಥಿ ಪ್ರತಿನಿಧಿಗಳಾದ ರಜತ್ ಹಾಗೂ ಸಿಂಚನಾ ಉಪಸ್ಥಿತರಿದ್ದರು. ಕಾಲೇಜಿನ ಯುವ ರೆಡ್ಕ್ರಾಸ್ ಘಟಕದ ಸಂಚಾಲಕರಾದ ರಾಜಣ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘ ರಿ. ಕೊಡೇರಿ ಇವರ ಆಶ್ರಯದಲ್ಲಿ ಕೊಡೇರಿ ಹಕ್ರೆಮಠ ಶ್ರೀ ಜೈನ ಜಟ್ಟಿಗೇಶ್ವರ ದೇವರ 76ನೇ ವರ್ಷದ ಕಂಬಳೋತ್ಸವವು ನ.21ರಂದು ಕೊಡೇರಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ಪ್ರತಿವರ್ಷ ಸಾಂಪ್ರದಾಯಕವಾಗಿ ಜರಗುವ ಈ ಐತಿಹಾಸಿಕ ಕಂಬಳೋತ್ಸವಕ್ಕೆ ಊರ ಮತ್ತು ಅಕ್ಕಪಕ್ಕದ ಊರಿನ ಕೋಣಗಳಲ್ಲದೆ ದೂರದ ಭಟ್ಕಳದಿಂದ ಬಾರ್ಕುರು ವರೆಗಿನ ಕೋಣಗಳನ್ನು ಮಾಲಕರು ತರುವುದಲ್ಲದೆ ಈ ಕಂಬಳೋತ್ಸವದಲ್ಲಿ ಜರಗುವ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸುವುದು ವಿಶೇಷವಾಗಿದೆ ಸುಮಾರು 60ಜೋಡಿ ಕೋಣಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದು ಕಡಿಮೆ ಅವಧಿಯಲ್ಲಿ ಗುರಿ ತಲುಪಿದ ಕೋಣಗಳು ತಮ್ಮ ಮಾಲಕರಿಗೆ ಶಾಶ್ವತ ಫಲಕಗಳೊಂದಿಗೆ ನಗದು ಬಹುಮಾನಗಳನ್ನು ತಂದು ಕೊಡುವಲ್ಲಿ ಯಶಸ್ವಿಯಾದವು. ಕೋಣಗಳು ತಮ್ಮ ಸವಾರನೊಂದಿಗೆ ನಿಗದಿತ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು ಗುರುತಿಸಲು ಸೆನ್ಸಾರ್ ಅಳವಡಿಸಲಾಗಿದ್ದು ಆ ಮೂಲಕ ಕಡಿಮೆ ಅವಧಿಯಲ್ಲಿ ಗುರಿ ತಲುಪಿದ ಕೋಣಗಳನ್ನು ವಿಜೇತ ಕೋಣಗಳೆಂದು ಘೋಷಿಸಿ ಅವುಗಳ ಮಾಲಕರುಗಳಿಗೆ ನಗದು ಪುರಸ್ಕಾರದೊಂದಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು ಭಾಗವಹಿಸಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ದುಬೈ: ಕನ್ನಡಿಗರು ದುಬೈನ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (KPCC) ಯ ಸಹಯೋಗದೊಂದಿಗೆ “67 ನೇ ಕರ್ನಾಟಕ ರಾಜ್ಯೋತ್ಸವ” ಹಾಗೂ ಒಂದನೇ “ವಿಶ್ವ ಕನ್ನಡ ಹಬ್ಬ”ವನ್ನು ಇಂಡಿಯನ್ ಹೈಸ್ಕೂಲ್ನ ಶೇಖ್ ರಶೀದ್, ದುಬೈ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೈಸೂರಿನ ರಾಜವಂಶಸ್ಥರಾದ ಯದುವೀರ್ ಚಾಮರಾಜ ಒಡೆಯರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಮ್ ಅಲ್ ಕುವೈನ್ನ ರಾಜಮನೆತನದಿಂದ ಹಿಸ್ ಹೈನೆಸ್ ಶೇಖ್ ರಶೀದ್ ಬಿನ್ ಮಜಿದ್ ಅಲ್ ಮುಲ್ಲಾಮಹರ್ಷಿ ಆನಂದ ಗುರೂಜಿ, ಬಸವ ರಮಾನಂದ ಸ್ವಾಮಿ; ಸಿ ಸೋಮಶೇಖರ್, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಅಧ್ಯಕ್ಷ ಡಾ. ಚಿತ್ರನಟ ವಿಜಯ ರಾಘವೇಂದ್ರ, ಪ್ರೇಮಾ, ಭವ್ಯ, ವಸಿಷ್ಠ ಸಿಂಹ, ಪ್ರಥಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೆಪಿಸಿಸಿಯ ಪ್ರಮುಖ ಸಂಘಟಕರು, ಅಧ್ಯಕ್ಷರು ಶಿವಕುಮಾರ್ ನಾಗರನವಿಲೆ ನೇತೃತ್ವದಲ್ಲಿ ಕರ್ನಾಟಕದಿಂದ ಬೃಹತ್ ತಂಡವನ್ನು ಹೊಂದಿದ್ದರು ಮತ್ತು ರವಿ ಸಂತು, ಪ್ರಸಾದ್ ಶೆಟ್ಟಿ, ಸುಧಾ, ಪಲ್ಲವಿ, ಪಾರ್ಥ, ಹೇಮಲತಾ ಅವರ ತಂಡವಾಗಿತ್ತು. ದುಬೈನಿಂದ ಗಲ್ಫ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ಥೆರೆಸಾ ವಿದ್ಯಾಸಂಸ್ಥೆಯ ಏಳನೇ ತರಗತಿ ವಿದ್ಯಾರ್ಥಿ ರೋಶನ್ ಆರ್. ಜಿಲ್ಲಾ ಮಟ್ಟದ 100 ಮೀ. ಓಟದ ಸ್ವರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು, ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ. ವಿಜೇತ ವಿದ್ಯಾರ್ಥಿಗೆ ಮದರ್ ಥೆರೆಸಾ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೋಲೆ ಗೆಲುವಿನ ಸೋಪಾನ. ಸೋಲಿನಿಂದಾಚೆಗೆ ಬರುವುದು ಹೇಗೆ ಎಂದು ನಾವು ತಿಳಿದಿಲ್ಲದಿದ್ದರೆ ಗೆಲುವನ್ನು ನಿಭಾಯಿಸುವುದು ಕಷ್ಟಸಾಧ್ಯ. ವ್ಯಕ್ತಿ ತನ್ನ ಜೀವನದಲ್ಲಿ ಸೋತೆ ಇಲ್ಲ ಎಂದರೆ ಅವನು ಜೀವನದ ಹೊಸತನಕ್ಕೆ ಪ್ರಯತ್ನಿಸಿಲ್ಲ ಎಂದರ್ಥ ಎಂದು ಕೋಟ ಪೋಲಿಸ್ ಠಾಣೆಯ ಪಿಎಸೈ ಮಧು ಬಿ.ಇ. ಅವರು ಹೇಳಿದರು. ಅವರು ಕುಂದಾಪುರದ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಈ ನಿಟ್ಟಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜತೆಗೆ ನಾಯಕತ್ವಗುಣ ಬೆಳೆಸಿಕೊಳ್ಳುವಲ್ಲಿ ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವ ಗುಣವನ್ನು ಕಲಿಸಬಲ್ಲದು ಎಂದರು. ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಅವರು ಧ್ವಜಾರೋಹಣಗೈದು ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಅದರಂತೆ ಯಶಸ್ವಿ ಜೀವನಕ್ಕೆ ತಾಳ್ಮೆಯ ಜತೆಗೆ ಗುರಿ ಇರಿಸಿಕೊಂಡು ಸಾಗುವುದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಕ್ರೀಡಾ ಚಟುವಟಿಕೆಯಲ್ಲಿಯೂ ಕೂಡಾ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ದೇಹ ಮತ್ತು ಮನಸ್ಸು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ಥೆರೆಸಾ ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಶರಣ್ಯ, ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಜರುಗಿದ ಜಿಲ್ಲಾ ಮಟ್ಟದ ಜಾನಪದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿಜೇತ ವಿದ್ಯಾರ್ಥಿನಿಗೆ ಮದರ್ ಥೆರೆಸಾ ಪಿಯು ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಂದಿಗ್ದತೆ, ಅತ್ಯಂತ ನೋವಿನ ಸಂಗತಿಗಳನ್ನೂ ಗೆರೆಗಳ ಮೂಲಕ ತೆರೆದಿಟ್ಟು, ನಗುವರಳಿಸುವ ಜೊತೆಗೆ ಸಮಾಜವನ್ನು ತಿದ್ದುವ ತಾಕತ್ತು ಕಾರ್ಟೂನಿಗಿದೆ. ಎಲ್ಲಾ ಕಾರ್ಟೂನಿಸ್ಟ್‌ಗಳು ಸಮಾಜಕ್ಕೊಂದು ಸಂದೇಶ ನೀಡುವ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೊಂಬಾಳೆ ಫಿಲ್ಮ್ಸ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದರು. ಅವರು ವಿಭಿನ್ನ ಹಾಗೂ ಕಾರ್ಟೂನು ಕುಂದಾಪ್ರ ಬಳಗದ ವತಿಯಿಂದ ಕುಂದಾಪುರದ ಕಲಾಮಂದಿರದಲ್ಲಿ 5 ದಿನಗಳ ಕಾಲ ಆಯೋಜಿಸಲಾದ 10ನೇ ಕಾರ್ಟೂನ್ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ ಸಂತಷವಿರಲಿ ವಿಷಾದವಿರಲಿ ಮೊಗದಲ್ಲಿ ನಗುವರಳಿಸಿ, ಹೇಳುವ ತಾಕತ್ತು ಕಾರ್ಟೂನ್ ಗೆರೆಗಳಿಗಲ್ಲದೆ ಮತ್ತಾವ ಮಾಧ್ಯಮದಲ್ಲಿ ಕಾಣಲಾಗದು. ಸತೀಶ್ ಆಚಾರ್ಯ ಅವರ ಕಾರ್ಟೂನನ್ನು ಸಾಕಷ್ಟು ವರ್ಷದಿಂದ ಫಾಲೋ ಮಾಡುತ್ತಿದ್ದು, ಕಾರ್ಟೂನು ಹಬ್ಬದಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ ಎಂದರು. ಹಿರಿಯ ವ್ಯಂಗ್ಯಚಿತ್ರಗಾರ ಜೇಮ್ಸ್ ವಾಜ್, ಸತೀಶ್ ಆಚಾರ್ಯ ಪುಸ್ತಕ ಗೋ ಕೊರೋನಾ ಗೋ-2 ಬಿಡುಗಡೆ ಮಾಡಿ, ಕಾರ್ಟೂನ್ ಕಲಿಕೆಗೆ ಉತ್ತಮ ಮಾರ್ಗದರ್ಶಿ ಪುಸ್ತಕವಾಗಿದ್ದು, ಗೆರೆಗಳ ರಚನೆ, ಬಣ್ಣಗಳ ಸಂಯೋಜನೆಗೆ ಇದು ಮಾರ್ಗದರ್ಶಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಬುಧವಾರ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಹಾಗೂ ರಥೋತ್ಸವವು ವೈಭವದೊಂದಿಗೆ ನೆರವೇರಿತು. ವಾರ್ಷಿಕ ಜಾತ್ರೋತ್ಸವವದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಪೂರ್ವಾಹ್ನ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಲಕ್ಷದೀಪೋತ್ಸವ ಪ್ರಯುಕ್ತ ನೆರೆದಿದ್ದ ಅಸಂಖ್ಯ ಭಕ್ತರು ಕುಂದೇಶ್ವರ ದೇವರಿಗೆ ಹಣತೆ ದೀಪ ಬೆಳಗಿ ದೇವರ ದರ್ಶನ ಪಡೆದರು. ದೇವಳದ ಪುಷ್ಪ ರಥೋತ್ಸವ ಹಾಗೂ ಶ್ರೀ ದೇವರ ಕಟ್ಟೆಪೂಜೆ ನಡೆಯಿತು. ಬೆಳಗ್ಗೆ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ; ಮಹಾಪೂಜೆ; ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆದರೆ, ರಾತ್ರಿ ರಂಗಪೂಜೆ ಮತ್ತು ಮಹಾಮಂಗಳಾರತಿ ನಡೆದ ಬಳಿಕ ಶ್ರೀ ದೇವರ ಉತ್ಸವಮೂರ್ತಿ ಗರ್ಭಗುಡಿಯಿಂದ ಹೊರತಂದು ಹಳಗ – ಜಾಗಟೆ ಮೊದಲಾದ ವಾದ್ಯೋಪಕರಣಗಳ ನಿನಾದ; ದೇವಾಲಯದ ತಂತ್ರಿಗಳ ನೇತೃತ್ವದಲ್ಲಿ ಒಳಗೆ ಮೂರು ಸುತ್ತು ಮತ್ತು ಹೊರಾಂಗಣದಲ್ಲಿ ಮೂರು ಸುತ್ತು – ಹೀಗೆ ಬಲಿಗಲ್ಲುಗಳ ಬಳಿ ಬಲಿ ಸಮರ್ಪಿಸಲಾಯಿತು. ಕೊನೆಯ ಸುತ್ತಿನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ನ.22: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನೇತೃತ್ವದಲ್ಲಿ ಜರುಗಿದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕೇಂದ್ರೀಕೃತ ವಿದ್ಯಾರ್ಥಿಗಳ ತಂಡ ರನ್ನರ್ ಅಪ್ ಆಗಿದ್ದು, ಈ ಪೈಕಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬೈಂದೂರು ಜ್ಯೂನಿಯರ್ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿಗಳಾದ ವಿಘ್ನೇಶ್ವರ ಹಾಗೂ ರಿತೇಶ್ ಎಂ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು. ಮೈಸೂರು ವಿಭಾಗೀಯ ಮಟ್ಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ತಂಡವು, ಮೈಸೂರು ವಿಭಾಗೀಯ ಮಟ್ಟದಲ್ಲಿ ವಿಜೇತರಾಗಿ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಜರುಗಿದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ ಎಸ್. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಂಡದಲ್ಲಿ ಕುಂದಾಪುರ ವೆಂಕಟರಮಣ ಶಾಲೆಯ ವಿದ್ಯಾರ್ಥಿ ಸೃಜನ್, ಮಂಗಳೂರು ಭಗವತಿ ಶಾಲೆಯ ವಿದ್ಯಾರ್ಥಿ ಸುಮುಖ, ಮಂಗಳೂರು ಮೊರಾರ್ಜಿ ಶಾಲೆ…

Read More