ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವಕರ್ಮ ಗೆಳೆಯರ ಬಳಗ ರಿ. ಭಟ್ಕಳ ಇವರ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮದ ಮನೆಗೊಂದು ಗಿಡ ಅಭಿಯಾನದ ಈ ವರ್ಷದ ಉದ್ಘಾಟನಾ ಕಾರ್ಯಕ್ರಮವು ಭಟ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಅನೇಕ ಗಣ್ಯರ ಸಮ್ಮುಖದಲ್ಲಿ ನೆರವೇರಿತು.
ವನಮಹೋತ್ಸವದ ದಶಮಾನೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಮ್.ಎನ್. ನಾಯ್ಕ್ ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಉಲ್ಲಾಸ ನಾಯ್ಕ ಹಾಗೂ ತಾಲೂಕು E.C.O ಪ್ರೌಢ ಶ್ರೀನಿವಾಸ ನಾಯ್ಕ ಸಂಘದ ಪರಿಸರ ಕಾಳಜಿಯ ಬಗ್ಗೆ ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮ ತಿಳಿದು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ ಉಮೇಶ ಕೆರೆಕಟ್ಟೆ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹಿತ ನುಡಿಗಳನ್ನಾಡಿದರು.
ನಿವೃತ್ತ ಯೋಧರು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಭಟ್ಕಳದ ನಿರ್ದೇಶಕರಲ್ಲೊಬ್ಬರಾ ದ ಶ್ರೀಕಾಂತ್ ನಾಯ್ಕ್ ಮಾತನಾಡಿ ಈ ವಿಶಿಷ್ಟ ಕಾರ್ಯಕ್ರಮ ದ ಜೊತೆಗೆ ಸಂಘದ ಇನ್ನಷ್ಟು ಕಾರ್ಯಕ್ರಮ ಗಳ ಬಗ್ಗೆ ಕೂಡ ತಿಳಿದು ಶ್ಲಾಘನೀಯ ಮಾತುಗಳನ್ನಾಡಿದರು. ಬಿಜೆಪಿ ಜಿಲ್ಲಾಕಾರ್ಯದರ್ಶಿ ಸುಬ್ರಾಯ ದೇವಾಡಿಗ ಅವರು ಪ್ರಶಂಸೆ ವ್ಯಕ್ತ ಪಡಿಸಿದರು.
ವಿಶ್ವಕರ್ಮ ಗೆಳೆಯರ ಬಳಗದ ಅಧ್ಯಕ್ಷರಾದ ಗಜಾನನ ಕೆ ಆಚಾರ್ಯಮಾತನಾಡಿ, ಸಂಘದ ಅನೇಕ ಸಾಮಾಜಿಕ ಕಾರ್ಯಕ್ರಮಗಳಿಂದ ಇಂದು ಸದೃಢವಾಗಿ ಸಂಘವು 18ವರ್ಷಗಳು ಪೂರೈಸಲು ಸಾಧ್ಯವಾಗಿದೆ. ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರ ಬೆಂಬಲದಿಂದ ನಮ್ಮ ತಂಡ ಮುಂದೆ ಸಾಗುತ್ತಿದೆ. ಎಲ್ಲರ ಸಹಕಾರ ಸದಾ ಇರಲಿ ಎಂದರು.
ಸಂಘದ ಮಾಜಿ ಅಧ್ಯಕ್ಷರು ಗಳು ಹಾಗೂ ಮಂಜುನಾಥ ಆಚಾರ್ಯ ಮುಂಬೈ, ದೇವಿದಾಸ ಆಚಾರ್ಯ, ಉಮೇಶ ಆಚಾರ್ಯ, ಗಣೇಶ ಆಚಾರ್ಯ ಹಾಗೂ ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ವನಮಹೋತ್ಸವದ ದಶಮಾನೋತ್ಸವದ ಪ್ರಯುಕ್ತ ಮನೆಗೊಂದು ಗಿಡ ಅಭಿಯಾನದ ಈ ಕಾರ್ಯಕ್ರಮ ಕ್ಕೆ ಕಳೆದ 10 ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಸಂಘಕ್ಕೆ ಬೆಂಬಲವಾಗಿ ನಿಂತ ಸುರೇಶ ಆಚಾರ್ಯ ಶಿಕ್ಷಕರು (ನಿರೂಪಣೆ), ಉಮೇಶ ಆಚಾರ್ಯ (ಭಿತ್ತಿ ಪತ್ರ ಪ್ರಿಂಟಿಂಗ್) ಹಾಗೂ ಗಣೇಶ ಆಚಾರ್ಯ (ವಾಹನ ವ್ಯವಸ್ಥೆ) ಇವರೆಲ್ಲರಿಗೂ ಪ್ರಶಂಸನಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ರವಿ ಆರ್ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ ಆಚಾರ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

















