ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರೋಟರಿ ಕೋಟ ಸಿಟಿ ಹಾಗೂ ರೋಟರಿ ಕೋಟ ಸಾಲಿಗ್ರಾಮ ಇವರ ಜಂಟಿ ಆಯೋಗದಲ್ಲಿ ಕೋಟ ಸಮುದಾಯ ಕೇಂದ್ರದಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕ ಅಭಿಯಾನ ಕಾರ್ಯಕ್ರಮಕ್ಕೆ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿ ಪೋಲಿಯೋ ಮುಕ್ತ ಭಾರತದ ಬಗ್ಗೆ ರೋಟರಿಯ ಕೊಡುಗೆಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಾಧವ ಪೈ, ಸಿಟಿಯ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬ್ರಹ್ಮಾವರ, ಅಸಿಸ್ಟೆಂಟ್ ಗವರ್ನರ್ ಶ್ಯಾಮ್ ಸುಂದರ್ ನಾಯರಿ, ವಲಯ ತರಬೇತುದಾರರಾದ ಸತೀಶ್ ಶೆಟ್ಟಿ, ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಮಾಜಿ ಅಸಿಸ್ಟೆಂಟ್ ಗವರ್ನರ್ ರಾಜೇಂದ್ರ ಸುವರ್ಣ, ಕೋಟ ಸಿಟಿಯ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ, ನಿತ್ಯಾನಂದ ನಾಯರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕೋಟ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಮ್ಮ ಸಂಸದರಿಗೆ ರಾಷ್ಟ್ರೀಯ ಹೆದ್ದಾರಿ 66ನ್ನು ಚತುಷಟ್ಪತಗೊಳಿಸಲು ಮನವಿ ಸಲ್ಲಿಸಲಾಯಿತು ಹಾಗೂ ಕೋಟ ಸಿಟಿಯ ಕಾರ್ಯದರ್ಶಿ ಉಮೇಶ್ ನಾಯರಿ ವಂದಿಸಿದರು.











