Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ದೂರದರ್ಶನ ಕೇಂದ್ರ ಬೆಂಗಳೂರು ಇವರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯಮಟ್ಟದ ಸರ್ ಸಿವಿ ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಮಾ.27 , 28, ಮತ್ತು 29ರಂದು ದೂರದರ್ಶನ ಕೇಂದ್ರ ಬೆಂಗಳೂರಿನಲ್ಲಿ ನಡೆದ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಆಯೋಜಿಸಲಾಯಿತು. ಈ ಸ್ಪರ್ಧೆಯಲ್ಲಿ ಪ್ರಜ್ಞಾನ್ ಪಿ ಶೆಟ್ಟಿ ಮತ್ತು ಅನಿಕೇತ್ ಆರ್ ಇವರು ಲಿಟಲ್ ರಾಕ್ ಇಂಡಿಯನ್ ಶಾಲೆ , ಬ್ರಹ್ಮಾವರ , ಉಡುಪಿ ಜಿಲ್ಲೆಯಿಂದ ಭಾಗವಹಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ಪ್ರಶಸ್ತಿ ಪತ್ರದೊಂದಿಗೆ ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನ್ಯಾನಲ್ ಕೆಡೆಟ್ ಕೋರ್ (ಎನ್‌ಸಿಸಿ) ನಮ್ಮ ದೇಶದ ಒಂದು ಪ್ರಮುಖ ಯುವ ಸಂಘಟನೆ. ಇದನ್ನು ಸೆಕೆಂಡ್ ಲೈನ್ ಆಫ್ ಡಿಫೆನ್ಸ್ ಎಂದೇ ಪರಿಗಣಿಸಲಾಗಿದೆ. ಇಂದು ದೇಶಾದ್ಯಂತ ಅಸ್ತಿತ್ವದಲ್ಲಿರುವ ಈ ಸಂಘಟನೆಗೆ ಆರು ದಶಕಗಳಿಗೂ ಹೆಚ್ಚಿನ ಇತಿಹಾಸವಿದೆ ಎಂದು ನಿವೃತ್ತ ಸೈನಿಕರು ಬೈಂದೂರು ಚಂದ್ರಶೇಖರ ನಾವಡರವರು ನುಡಿದರು ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ಪ್ರಪ್ರಥಮ ಬಾರಿಗೆ ಆರಂಭಗೊಳ್ಳುತ್ತಿರುವ 6/8 ಎನ್‌ಸಿಸಿ ನೇವಿ ಕರ್ನಾಟಕ ಉಡುಪಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸೇನೆಯ ವಿವಿಧ ಕ್ಷೇತ್ರದಲ್ಲಿ ಯುವ ಪೀಳಿಗೆಗೆ ವಿಪುಲ ಅವಕಾಶಗಳಿದ್ದು ಎನ್‌ಸಿಸಿಯಲ್ಲಿ ಸಿ ಸರ್ಟಿಫಿಕೇಟ್ ಪಡೆಯುವ ಮೂಲಕ ಸೇನೆಯಲ್ಲಿ ನೇರ ಪ್ರವೇಶ ಗಳಿಸಬಹುದು ಎಂದು ವಿವರಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ದೀಪಕ್ ಕುಮಾರ ಶೆಟ್ಟಿ ಮಾತನಾಡಿ, ಕಾಲೇಜಿನ ಮೊಟ್ಟಮೊದಲ ಬಾರಿಗೆ ಆರಂಭಗೊಳ್ಳುತ್ತಿರುವ ಎನ್‌ಸಿಸಿ ನೇವಿ ಘಟಕಕ್ಕೆ ಶುಭಾಶಯವನ್ನು ಕೋರಿ, ವಿದ್ಯಾರ್ಥಿಗಳಿಗೆ ಜೀವನವನ್ನು ರೂಪಿಸುವಲ್ಲಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಇದು ಸುವರ್ಣ ಅವಕಾಶ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎಂ.ಕಾಂ. ಹೆಚ್‌ಆರ್‌ಡಿ ವಿಭಾಗದ ವತಿಯಿಂದ ‘ಸೈಕ್ಲಿಂಗ್ ಫಾರ್ ಹ್ಯುಮಾನಿಟಿ’ ವಿಶೇಷ ಕಾರ‍್ಯಕ್ರಮ ನಡೆಯಿತು. ಸೈಕಲ್ ಸವಾರಿಯ ಮೂಲಕ ಸಾಮಾಜಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಣಿಪುರ ಮೂಲದ ಸೈಕಲ್ ಸವಾರ ಫಿಲೆಮ್ ರೋಹನ್ ಸಿಂಗ್ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಫಿಲೆಮ್ ರೋಹನ್ ಸಿಂಗ್, ನಾವು ಮಾಡುವ ಕೆಲಸಗಳು ಇತರರ ಮೇಲೆ ಪ್ರಭಾವ ಬೀರುವಂತಿರಬೇಕು. ಯಾವುದೇ ನಿರೀಕ್ಷೆ ಇಲ್ಲದೆ ಇತತರಿಗೆ ಸಹಾಯ ಮಾಡಬೇಕು ಎಂದರು. ತಮ್ಮ ಜೀವನಾನುಭವಗಳನ್ನು ಹಂಚಿಕೊಂಡ ರೋಹನ್ ಜೀವನದಲ್ಲಿ ಎದುರಾಗುವ ಸವಾಲುಗಳು ಹಾಗೂ ಅವುಗಳನ್ನು ಎದುರಿಸಬಹುದಾದ ವಿವಿಧ ಸಾಧ್ಯತೆಗಳನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಾಳೆ ಏನು ಆಗಬಹುದು ಎಂಬ ಭಯದಲ್ಲಿ ಯಾರು ಇರುತ್ತರೋ ಅವರು ಯಾವುದೇ ಸಾಧನೆ ಮಾಡಲಾರರು. ಆದ್ದರಿಂದ ಪ್ರತಿಯೊಬ್ಬರು ಆ ಚೌಕಟ್ಟಿನಿಂದ ಹೊರಗೆ ಬರಬೇಕು ಸಣ್ಣ ಪುಟ್ಟ ಸಹಾಯ ಮಾಡುವುದರ ಮೂಲಕ ಕೆಲಸ ಪ್ರಾರಂಭಿಸಬೇಕು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ಅಧಿನಿಯಮದಂತೆ ಉಡುಪಿ ಜಿಲ್ಲಾ ಪಂಚಾಯತಿ ಅಧಿಕಾರ ವ್ಯಾಪ್ತಿಯ ಪ್ರದೇಶವನ್ನು 30 ಏಕ ಸದಸ್ಯ ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ, ಜಿಲ್ಲೆಯ 7 ತಾಲೂಕು ಪಂಚಾಯತಿಗಳ ಪ್ರದೇಶವನ್ನು ಏಕ ಸದಸ್ಯ ತಾಲೂಕು ಪಂಚಾಯತಿ ಚುನಾವಣಾ ಕ್ಷೇತ್ರವನ್ನಾಗಿ ವಿಂಗಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಅವುಗಳ ವಿವರ ಈ ಕೆಳಗಿನಂತಿದೆ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ರೈತ ಸಂಘದ ಕಾವ್ರಾಡಿ ಮತ್ತು ತ್ರಾಸಿ ವಲಯದ ಆಶ್ರಯದಲ್ಲಿ ಸೌಕೂರು ಏತ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ಸೌಕೂರು ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಿತು. ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಸೌಕೂರು ಏತ ನೀರಾವರಿ ಯೋಜನೆಯ ಯೋಜನಾ ಪ್ರದೇಶ, ಮಾವಿನಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ನೀರು ಶೇಖರಣ ಸ್ಥಾವರ, ರಾಜಾಡಿ, ಜಾಡಿ ಮೊದಲಾದ ಪ್ರದೇಶಗಳಿಗೆ ಭೇಟಿ ಮಾತನಾಡಿ, ಯಾವುದೇ ಯೋಜನೆ ಆಗಿರಲಿ ರೈತರು ಯೋಜನೆಯ ಆರಂಭದಲ್ಲಿ ಮುತುವರ್ಜಿ ವಹಿಸಿ, ಯೋಜನೆಯ ಬಗ್ಗೆ ತಿಳಿದುಕೊಂಡರೆ ಕಾಮಗಾರಿ ವ್ಯವಸ್ಥಿತವಾಗಿ ಅನುಷ್ಟಾನವಾಗಲು ಸಾಧ್ಯ. ಕಾಮಗಾರಿ ಅನುಷ್ಟಾನ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಲು ಸಾದ್ಯವಿದೆ. ಕಾಮಗಾರಿ ಮುಗಿದ ನಂತರ ಎಚ್ಚೆತ್ತುಕೊಂಡರೆ ಏನು ಮಾಡಲೂ ಸಾಧ್ಯವಿಲ್ಲ ಎಂದರು. ಸುಮಾರು 73 ಕೋಟಿ ವೆಚ್ಚದಲ್ಲಿ ಅನುಷ್ಟಾನಗೊಳ್ಳುತ್ತಿರುವ ಈ ಯೋಜನೆ 1350 ಹೆಕ್ಟೇರು ಪ್ರದೇಶದ ಭೂಮಿಗೆ ನೀರು ಸಿಗುತ್ತದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದರೆ: 2019-20ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಗಳ ರ‍್ಯಾಂಕ್‌ಪಟ್ಟಿ ಪ್ರಕಟಗೊಂಡಿದ್ದು, ಮೂಡುಬಿದಿರೆಯ ಆಳ್ವಾಸ್ ಕಾಲೇಜು ಒಟ್ಟು 32 ರ‍್ಯಾಂಕ್‌ಗಳನ್ನು ಗಳಿಸಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ರ‍್ಯಾಂಕ್ ಗಳಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ಪದವಿ, ಸ್ನಾತಕೋತ್ತರ ಪದವಿ, ಬಿ.ಎಡ್ ಹಾಗೂ ಬಿ.ಪಿಎಡ್ ಫಲಿತಾಂಶಗಳು ಪ್ರಕಟಗೊಂಡಿವೆ. ಒಟ್ಟು 32 ರ‍್ಯಾಂಕ್‌ಗಳಲ್ಲಿ 14 ಪ್ರಥಮ, 5 ದ್ವಿತೀಯ, 6 ತೃತೀಯ, 1 ಐದನೇ ರ‍್ಯಾಂಕ್, 2 ಏಳನೇ ರ‍್ಯಾಂಕ್, 2 ಎಂಟನೇ ರ‍್ಯಾಂಕ್, 2 ಹತ್ತನೇ ರ‍್ಯಾಂಕ್ ಬಂದಿವೆ. ಪ್ರಥಮ ರ‍್ಯಾಂಕ್ ಬಿಎಸ್ಸಿ(ಎಫ್‌ಎನ್‌ಡಿ)ಯ ನಮಿತಾ ವಿ. (89%), ಬಿಎಸ್‌ಡಬ್ಲ್ಯೂನ ಸನಿಕಾ ಎಸ್.ಕುಮಾರ್ (87%), ಬಿವಿಎನ ಸಾಕ್ಷಿ ಸಿ.ಎ.(83.21%), ಬಿಪಿಎಡ್‌ನ ಶ್ರೇಯಾ ಕೆ.ಎಚ್(81.75%), ಎಂಕಾ ಐಬಿಎಮ್‌ನ ಬಾನವಿ ಎಚ್‌ವಿ(ಸಿಜಿಪಿಎ 7.76), ಎಂಎಸ್ಸಿ ಅನಾಲಿಟಿಕಲ್ ಕೆಮಿಸ್ಟಿçಯ ಆತಿಯಾ ಆರ್ ವೆರ್ಣೇಕರ್ (ಸಿಜಿಪಿಎ 7.72), ಎಂಎ ಎಕನಾಮಿಕ್ಸ್ನ ಟೋನ್‌ಟೊನ್ (ಸಿಜಿಪಿಎ 7.94), ಎಂಎಸ್‌ಡಬ್ಲ್ಯೂನ ಶರಣ್ಯ ರಾವ್ ಎಚ್. (ಸಿಜಿಪಿಎ 8.70),…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಟ್ಕಳದಿಂದ ಕೆಮ್ಮಣ್ಣುವಿಗೆ ತೆರಳುತ್ತಿದ್ದ ಸಂದರ್ಭ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕಾರಿನ ಟಯರ್ ಸಿಡಿದು ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದು, ನಾಲ್ವರು ಮಕ್ಕಳು ಸೇರಿ ಐದು ಮಂಂದಿ ಗಾಯಗೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ಸಿಬ್ಬತುಲ್ಲ ಎಂಬುವವರ ಪತ್ನಿ ಸುಹಾನಾ (30) ಮೃತಪಟ್ಟಿದ್ದು, ಮಕ್ಕಳಾದ ಸಾಹಿಮ್ (7), ಸಿಬ್ರಾ (4), ಮನ್ಹಾ (2), ಮೂರು ತಿಂಗಳ ಮರಿಯಮ್ ಹಾಗೂ ಸಿಬ್ಬತುಲ್ಲ ಗಾಯಗೊಂಡವರು. ಭಟ್ಕಳದ ಪತ್ನಿ ಮನೆಯಿಂದ ಕೆಮ್ಮಣ್ಣು ಹೊಡೆಗೆ ತೆರಳುತ್ತಿದ್ದಾಗ ಈ ಅವಘಡ ನಡೆದಿದ್ದು, ಹೆಮ್ಮಾಡಿ ಬಳಿ ಕಾರಿನ ಟಯರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಸಿಬ್ಬತುಲ್ಲ ಕಾರು ಚಲಾಯಿಸುತ್ತಿದ್ದರು. ಸ್ಥಳೀಯರ ಸಹಕಾರದಿಂದ ಗಾಯಗೊಂಡವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಂಗಭೂಮಿ ಕಲಾವಿದೆ, ಲೇಖಕಿ ವಿನುತಾ ವಿಶ್ವನಾಥ್ ಅವರ ‘ಹುಣ್ಸ್‌ಮಕ್ಕಿ ಹುಳ’ ಪುಸ್ತಕ ಬೆಂಗಳೂರಿನ ಫಿಡಿಲೆಟಸ್ ಗ್ಯಾಲರಿಯಲ್ಲಿ ಬಿಡುಗಡೆಗೊಂಡಿತು. ಹೂವಿನಹೊಳೆ ಪ್ರತಿಷ್ಠಾನ ಬೆಂಗಳೂರು, ಫಿಡಿಲಿಟಸ್ ಗ್ಯಾಲರಿ, ಶಿಲ್ಪ ಫೌಂಡೇಶನ್, ಸುದಯ ಟ್ರಸ್ಟ್ ಬೆಂಗಳೂರು ಸಹಕಾರದೊಂದಿಗೆ ಭಾನುವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಈ ಪುಸ್ತಕ ಬಿಡುಗಡೆಗೊಂಡಿತು. ಲೇಖಕ, ಪತ್ರಕರ್ತ ಜೋಗಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ದಿನದಲ್ಲಿ ಎರಡು ಬಾರಿ ಓದಿದ್ದೇನೆ. ಮೊದಲ ಬಾರಿ ಓದಿದಾಗ ಕಣ್ಣಂಚಲಿ ನೀರು ತುಂಬಿಕೊಂಡಿತ್ತು. ಎರಡನೇ ಬಾರಿ ಓದಿದಾಗ ಸಮಾಜದಲ್ಲಿ ವೃತ್ತಿ, ನೆಚ್ಚಿದ ಪ್ರೀತಿ, ಹಳ್ಳಿಯಿಂದ ನಗರಕ್ಕೆ ಬಂದಾಗ ಎದುರಾದ ಸಮಸ್ಯೆ, ನೋವು ಅಪಮಾನ ಇದನ್ನೆಲ್ಲೆ ಹೆದರಿಸಿ ಗೆಲ್ಲುತ್ತಿರುವ ದಿಟ್ಟ ಮಹಿಳೆಯನ್ನು ನೋಡಿದಂತಾಯಿತು ಎಂದರು. ಚಿತ್ರನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಮಾತನಾಡಿ ಲೇಖಕಿಯ ಮೊದಲ ಪುಸ್ತಕವಿದು.. ಮುಂದೆ ಹೆಚ್ಚು ಹೆಚ್ಚು ಬರೆದು ಕನ್ನಡಕ್ಕೆ ಇನ್ನಷ್ಟು ಸೇವೆ ಮಾಡಲಿ. ಸೋದರಿ ಸುಮನ್ ಕಿತ್ತೂರು ಅವರು ಬೆನ್ನುಡಿ ಬರೆದುಕೊಟ್ಟಿದ್ದಾರೆ ತುಂಬಾ ಅರ್ಥಪೂರ್ಣವಾಗಿದೆ. ಅದನ್ನ ಓದಿದರೆ ಯಾರೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಡುವರಿ ಗ್ರಾಮದ ಸುಮಂಗಲ ಆಚಾರ್ಯ ಮತ್ತು ರಾಜೇಶ್ ಆಚಾರ್ಯ ಮಗನಾದ ರಿಷಿಕ್ ಇವನು ಪಡುಕೋಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಭ್ಯಾಸ ಮಾಡುತಿದ್ದು ಕಳೆದ 5ವರ್ಷದಿಂದ ಥಲಸ್ಸಿಮಿಯಾ ಖಾಯಿಲೆಯಿಂದ ಬಳಲುತ್ತಿದ್ದು ಇತ್ತೀಚೆಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ತಪಾಸಣೆ ನಡೆಸಿದ ವೈದ್ಯರು ಅಸ್ಥಿಮಜ್ಜೆ ಚಿಕಿತ್ಸೆ ಮಾಡಬೇಕೆಂದು ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದಾರೆ. ಚಿಕಿತ್ಸೆಗಾಗಿ 35ರಿಂದ 40ಲಕ್ಷ ವೆಚ್ಚವಾಗುವುದೆಂದು ವೈದ್ಯರು ತಿಳಿಸಿರುತ್ತಾರೆ ಅವರ ವೈದ್ಯಕೀಯ ಚಿಕಿತ್ಸೆಗೆ ಮಾನವೀಯ ನೆರವಿನ ಅಗತ್ಯವಿದೆ. ರಿಷಿಕ್ ಅವರ ಕುಟುಂಬ ಕೂಲಿಕಾರ್ಮಿಕರಾಗಿದ್ದು ಇಷ್ಟು ದೊಡ್ಡ ಮಟ್ಟದ ಚಿಕಿತ್ಸಾ ವೆಚ್ಚವನ್ನು ಭರಿಸುವಲ್ಲಿ ಅಸಾಯಕರಾಗಿದು, ರಿಷಿಕ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಅವರ ಬ್ಯಾಂಕ್ ಆಫ್ ಬರೋಡಾ ಉಳಿತಾಯ ಸಂಖ್ಯೆ 81920100004582, ಐಎಫ್‌ಎಸ್‌ಸಿ ಕೋಡ್ಸBARB0VJNADA(fifth character is zero) phonepay-8105877136, google pay-8105877136 ಲ್ಲಿಸಬಹುದಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಇಲ್ಲಿನ ಎಂಟಿಆರ್ ಉಪಹಾರ ಮಂದಿರದಲ್ಲಿ ನಾಲ್ಕು ದಶಕಗಳ ಅವಿರತ ಸೇವೆ ಸಲ್ಲಿಸಿದ ಉದಯ ಹಂದೆ ಯವರನ್ನು ಗ್ರಾಹಕರೇ ಸನ್ಮಾನಿಸಿದ ವಿಶೇಷ ಮತ್ತು ಅಪರೂಪದ ಕಾರ್ಯಕ್ರಮ ನಡೆಯಿತು. ಉದಯ ಹಂದೆಯವರು ತಮ್ಮ ಗ್ರಾಹಕ ಸ್ನೇಹಿ ಸ್ವಭಾವದಿಂದ ಮಾಲೀಕರಿಗೂ ಹಾಗೂ ಗ್ರಾಹಕರಿಗೂ ಪ್ರಿಯವಾದವರು. ತಮ್ಮ ಕೆಲಸದ ಜೊತೆಯಲ್ಲಿಯೇ ಹಲವಾರು ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿಕೊಂಡಿರುವ ಹಂದೆಯವರು ದೇವಸ್ಥಾನ ಜೀರ್ಣೋದ್ಧಾರ, ಯಕ್ಷಗಾನ ಪ್ರದರ್ಶನಗಳ ಸಂಘಟನೆ ಮುಂತಾದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ವಧೂ-ವರರ ಸಂಪರ್ಕ ಸೇತುವಾಗಿ ಇದುವರೆಗೂ ಹಲವಾರು ಮದುವೆಗಳನ್ನು ಮಾಡಿಸಿರುವುದು ಇವರ ಹೆಗ್ಗಳಿಕೆ.  ವೃತ್ತಿಸೇವೆ ಹಾಗೂ ಸಮಾಜಸೇವೆಯನ್ನು ಗುರುತಿಸಿ ಬೆಂಗಳೂರಿನ ಹೊಂಬೇಗೌಡ ನಗರದ ಕನ್ನಡ ಯುವಜನ ಸಂಘದಿಂದ ಗೌರವಿಸಿ ಸನ್ಮಾನಿಸಲಾಯಿತು.

Read More