ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿರೂರು ಗಡಿಭಾಗದಲ್ಲಿ ವಾಹನ ತಪಾಸಣಾ ಚೆಕ್‌ಪೋಸ್ಟ ಪ್ರಾರಂಭಗೊಂಡಿದೆ. ಪ್ರತಿ ವಾಹನಗಳನ್ನು ತಪಾಸಣೆ ಮಾಡಿ ಮಾಹಿತಿ ದಾಖಲಿಸಿಕೊಳ್ಳಲಾಗುತ್ತಿದೆ. ಈ ಕುರಿತು ಮಾತನಾಡಿದ ಚುನಾವಣಾಧಿಕಾರಿಗಳು ಈಗಾಗಲೇ ಶಿರೂರು,ಸಿದ್ದಾಪುರ ಹಾಗೂ ಕೊಲ್ಲೂರಿನಲ್ಲಿ ಪ್ರತ್ಯೇಕ ಚೆಕ್‌ಪೋಸ್ಟ್ ಪ್ರಾರಂಭಿಸಲಾಗಿದೆ.ವಿವಿಧ ಇಲಾಖೆಯ ಅಧಿಕಾರಿಗಳನ್ನು ಸರತಿ ಪ್ರಕಾರ ದಿನದ 24 ಗಂಟೆಯು ತಪಾಸಣೆ ಮಾಡಲಾಗುತ್ತಿದೆ. ವಿಶೇಷ ನಿಗಾ ವಹಿಸಲು ಪ್ರತ್ಯೇಕವಾದ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ..ಪ್ರತಿ ಚೆಕ್‌ಪೋಸ್ಟ್‌ಗಳಲ್ಲಿ ಕೇಂದ್ರ ಮೀಸಲು ಪಡೆಯ ಪೋಲಿಸರನ್ನು ನಿಯೋಜಿಸಲಾಗುವುದು ಎಂದರು. ತಪಾಸಣಾ ಚೆಕ್‌ಪೋಸ್ಟ್‌ಗಳಿಂದ ನಿತ್ಯ ಪ್ರಯಾಣಿಸುವ ಸ್ಥಳೀಯ ಪ್ರಯಾಣಿಕರಿಗೆ ಮಾತ್ರ ಚುನಾವಣಾ ಬಿಸಿ ತಾಗಿದಂತಾಗಿದೆ.
Author: ನ್ಯೂಸ್ ಬ್ಯೂರೋ
ಉಪ್ಪುಂದ: ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಕಳವು ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಗೌಡ ಸಾರಸ್ವತ ಸಮಾಜ ಬಾಂಧವರ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ಮುಂಜಾನೆ ಅಧಿಕ ಪ್ರಮಾಣದ ಬೆಳ್ಳಿ, ಚಿನ್ನ ಕಳ್ಳತನವಾದ ಘಟನೆ ನಡೆದಿದೆ. ಗರ್ಭಗುಡಿಯ ಹೊರಗಿನ ಹಾಗೂ ಗರ್ಭಗುಡಿಯ ಬಾಗಿಲನ್ನು ಆಯುಧಗಳಿಂದ ಮೀಟಿ ತೆಗೆದು ಅಲ್ಲಿರುವ ಬೆಳ್ಳಿ ಕವಚ ಹೊಂದಿರುವ ದೇವರ ಮೂರ್ತಿ, ಎರಡು ಪ್ರಭಾವಳಿ, ಬೆಳ್ಳಿಯ ಪರಿಕರಗಳು, ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ಬೆಳಿಗ್ಗೆ ಪೂಜೆಗೆಂದು ಬಂದ ಅರ್ಚಕರು, ಪ್ರಧಾನ ದ್ವಾರದ ಬಾಗಿಲುಗಳಿಗೆ ಒಳಗಿನಿಂದ ಚಿಲಕ ಹಾಕಿದ್ದರಿಂದ ಸಂಬಂಧಿಸಿದವರಿಗೆ ವಿಷಯ ತಿಳಿಸಿದ್ದು, ನಂತರ ಇನ್ನೊಂದು ದ್ವಾರದ ಮೂಲಕ ಒಳಗೆ ಪ್ರವೇಶಿಸಿದಾಗ ಗರ್ಭಗುಡಿಯಲ್ಲಿರುವ ಮೂರೂ ಮೂರ್ತಿಗಳು ಕಾಣೆಯಗಿದ್ದವು. ನಂತರ ಪರಿಶೀಲಿಸಿದಾಗ ಕಳುವಾದ ಸಾಮಗ್ರಿಗಳ ವಿಚಾರ ಗೊತ್ತಾಗಿದೆ. ನಂತರ ಸುಮಾರು 10 ಗಂಟೆಗೆ ದೇವಳದ ಹಿಂದಿರುವ ಮರ್ಲಮ್ಮಬೆಟ್ಟು (ದೈವದಮನೆ) ಎಂಬಲ್ಲಿ ದೇವರ ಪೀಠ, ಬೆಳ್ಳಿ ಕವಚ ರಹಿತ ದೇವರ ಚಂದನ ಮೂರ್ತಿ, ಅಲ್ಲಿಂದ ಸ್ವಲ್ಪ ದೂರದಲ್ಲಿ ಒಂದು ಬೆಳ್ಳಿಯ ಪ್ರಭಾವಳಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಕ್ರೀಡೆ ನಮ್ಮ ಜೀವನದ ಅವಿಭಾಜ್ಯ ಅಂಗ. ನಮ್ಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆ ಹೆಚ್ಚು ಸಹಕಾರಿಯಾಗಿದೆ. ದೇಶಿಯ ಕ್ರೀಡೆಗಳಿಗೆ ಹೆಚ್ಚು ಮಹತ್ವವನ್ನು ನೀಡುವ ಮೂಲಕ ದೇಶಿಯ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಸಂಘಟನೆಗಳು ಮುಂದಾಗಬೇಕು. ದೇಶಿಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗರಾಜ್ ಪೂಜಾರಿ ಹೇಳಿದರು. ಗಂಗೊಳ್ಳಿಯ ಕರಾವಳಿ ವಾರಿಯರ‍್ಸ್ ಆಶ್ರಯದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸದ ಸಹಾಯಾರ್ಥವಾಗಿ ಗಂಗೊಳ್ಳಿ ಕೆಎಫ್‌ಡಿಸಿ ವಠಾರದಲ್ಲಿ ಆಯೋಜಿಸಲಾಗಿದ್ದ ಬೈಂದೂರು-ಬ್ರಹ್ಮಾವರ ವಲಯ ಮಟ್ಟದ ಹೊನಲು ಬೆಳಕಿನ ಹಗ್ಗ ಜಗ್ಗಾಟ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ತಾಪಂ ಮಾಜಿ ಸದಸ್ಯ ಸುಧಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಮತ್ಸ್ಯೋದ್ಯಮಿ ಹರೀಶಕುಮಾರ್, ಸಂತೋಷ ಶೆಟ್ಟಿ ಹೇರಿಕುದ್ರು, ಸತೀಶ ದೇವಾಡಿಗ ಹೆಮ್ಮಾಡಿ, ಸಂಘದ ಅಧ್ಯಕ್ಷ ಗಣೇಶ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರಿತೇಶ ಖಾರ್ವಿ ಹಾಗೂ ಮೂವರು ವಿದ್ಯಾರ್ಥಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಆಹ್ವಾನಿತ ಪುರುಷರ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂಡುಬಿದಿರೆ ಆಳ್ವಾಸ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಹಾಸನ ಫ್ರೆಂಡ್ಸ್ ಹಾಗೂ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸಹಯೋಗದೊಂದಿಗೆ ನಡೆದ ಟೂರ್ನಿಯ ಅಂತಿಮ ಪಂದ್ಯದಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಬನಶಂಕರಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ನೇರ ಸೆಟ್‍ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿತು. ಸೂಪರ್ ಲೀಗ್‍ನ ಉಳಿದ ಪಂದ್ಯಗಳಲ್ಲಿ ಆಳ್ವಾಸ್ ಆತಿಥೇಯ ಹಾಸನ ಫ್ರೆಂಡ್ಸ್ ಹಾಗೂ ಕೋಲಾರ ತಂಡಗಳನ್ನು ಸೋಲಿಸಿತು. ಆಳ್ವಾಸ್‍ನ ಕಿರಣ್ ಕುಮಾರ್ ಟೂರ್ನಿಯ ಉತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಗದಗದ ಎಸ್‍ಕೆಎಸ್‍ವಿಎಂಸಿಇಟಿ ಕಾಲೇಜಿನಲ್ಲಿ ಜರುಗಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ( ಬೆಂಗಳೂರು ಹೊರತುಪಡಿಸಿ) ಖೋ ಖೋ ಪಂದ್ಯಾಟದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಇಲ್ಲಿನ ಕಲೈಕಾರ್ ಮಠ ಶ್ರೀ ನಗರ ಮಹಾಕಾಳಿ ಅಮ್ಮನವರ ಮತ್ತು ಶ್ರೀ ಕಲ್ಲುಕುಟ್ಟಿಗ ದೇವಸ್ಥಾನದ ಶ್ರೀದೇವರ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂದರ್ಭದಲ್ಲಿ ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ ಸಾರಂಗ್ ಅವರನ್ನು ದೇವಸ್ಥಾನದ ಶ್ರೀ ವರಮಹಾಲಕ್ಷ್ಮೀ ಮಹಿಳಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಸರಸ್ವತಿ ಕಲೈಕಾರ್ ಅವರು ವಸಂತಿ ಮೋಹನ ಸಾರಂಗ್ ಅವರನ್ನು ಸನ್ಮಾನಿಸಿ ಗೌರವಿಸಿದರು. ದೇವಸ್ಥಾನದ ಆಡಳಿತ ಧರ್ಮದರ್ಶಿ ಜಿ.ಭಾಸ್ಕರ ಕಲೈಕಾರ್, ಅಧ್ಯಕ್ಷ ಕೆ.ಸುಭಾಶ್ ಖಾರ್ವಿ, ಶ್ರೀ ವರಮಹಾಲಕ್ಷ್ಮೀ ಮಹಿಳಾ ಸಮಿತಿ ಅಧ್ಯಕ್ಷೆ ಯಶೋಧ ಕೃಷ್ಣ ಖಾರ್ವಿ, ಸುಮಲತಾ ಮಂಜುನಾಥ ಖಾರ್ವಿ, ಲಲಿತಾ ಮಂಜುನಾಥ ಖಾರ್ವಿ, ಮೀನಾ ಜನಾರ್ದನ ಕಲೈಕಾರ್, ಸಕು ಉದಯ ಜಿ., ಅನನ್ಯ ಖಾರ್ವಿ, ಪ್ರೇಮಾ ಜಿ.ಖಾರ್ವಿ, ರತ್ನಿ ಭಾಸ್ಕರ ಖಾರ್ವಿ, ಲಲಿತಾ ಖಾರ್ವಿ, ಸಾವಿತ್ರಿ ಜನಾರ್ದನ ಖಾರ್ವಿ, ಶೋಭಾ ಕಲೈಕಾರ್, ಜಿ.ನಾಗೇಶ ಕಲೈಕಾರ್, ಕಾಂತು ಮಂಜುನಾಥ ಖಾರ್ವಿ, ಮಡಿಕಲ್ ಜನಾರ್ದನ ಖಾರ್ವಿ, ಮೋಹನ ಸಾರಂಗ್,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೂಲಿ ಕೆಲಸಕ್ಕಾಗಿ ಹಾವೇರಿಯಿಂದ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮಕ್ಕೆ ಬಂದು ನೆಲೆಸಿದ ಯಲ್ಲಪ್ಪಾ ಬಿ. ಅಗಡಿ ಮತ್ತು ಈರಮ್ಮ ದಂಪತಿಯ ಏಕೈಕ ಪುತ್ರ ಹರೀಶ್(2) ಕಣ್ಣಿನ ಕ್ಯಾನ್ಸರ್‌ಗೆ ತುತ್ತಾಗಿದ್ದಾನೆ. ತೀರಾ ಕಷ್ಟದಲ್ಲಿ ಜೀವನ ನಡೆಸುತ್ತಿರುವ ಈ ಬಡ ಕುಟುಂಬಕ್ಕೆ ಮಗುವಿನ ಕಾಯಿಲೆಯ ಚಿಕಿತ್ಸೆಗೆ ಅಗತ್ಯವಿರುವ ಹಣವನ್ನು ಭರಿಸುವುದೇ ದೊಡ್ಡ ಚಿಂತೆಯಾಗಿದ್ದು, ದಾನಿಗಳು ಹಾಗೂ ಸಾರ್ವಜನಿಕರ ಮಾನವೀಯ ನೆರವಿಗಾಗಿ ದಂಪತಿ ಮನವಿ ಮಾಡಿಕೊಂಡಿದ್ದಾರೆ. ಸೇನಾಪುರ ರೈಲ್ವೇ ನಿಲ್ದಾಣದ ಸಮೀಪ ಜೋಪಡಿಯಲ್ಲಿ ಹಾವೇರಿಯ ಹಲವು ಕೂಲಿಕಾರ್ಮಿಕ ಮಂದಿ ಜೊತೆ ವಾಸವಾಗಿರುವ ಯಲ್ಲಪ್ಪಾ ಬಿ. ಅಗಡಿ ದಂಪತಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿ ಸಂಸಾರ ಸಾಗಿಸುತ್ತಾರೆ. ಇದೀಗ ಅವರ ಪುತ್ರ ಹರೀಶ್ ಎಡಗಣ್ಣಿಗೆ ಕ್ಯಾನ್ಸರ್ ಬಾಧಿಸಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. ವೈದ್ಯಕೀಯ ಚಿಕಿತ್ಸೆಗೆ ಲಕ್ಷಾಂತರ ರೂ. ಅಗತ್ಯವಾಗಿದ್ದು, ಬಡ ಕುಟುಂಬ ಕಂಗಾಲಾಗಿದೆ. ಆದ್ದರಿಂದ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ದಾನಿಗಳು ಹಾಗೂ ಸಾರ್ವಜನಿಕರು ಉದಾರ ಮನಸ್ಸಿನಿಂದ ಧನಸಹಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ ವೆಲ್ತ್ ಗೇಮ್ಸ್ ನ ವೆಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಕುಂದಾಪುರದ ಗುರುರಾಜ್ ಬೆಳ್ಳಿ ಪದಕ ಪಡೆದು ಭಾರತದ ಪದಕಗಳ ಭೇಟೆ ಆರಂಭ ದೊರಕಿಸಿದ್ದಾರೆ . 56ಕೆ.ಜಿ ವಿಭಾಗದಲ್ಲಿ ವೆಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಗುರುರಾಜ್ ಬೆಳ್ಳಿ ಪದಕ ಪಡೆದು ಈ ಸಾಧನೆ ಮಾಡಿದ್ದಾರೆ. ಚಿತ್ತೂರು ಗ್ರಾಮದ ಜಡ್ಡು ಮಹಾಬಲ ಪೂಜಾರಿ ಹಾಗು ಪದ್ದು ದಂಪತಿಗಳ ಆರು ಮಕ್ಕಳಲ್ಲಿ ಐದನೇಯವರಾದ ಗುರುರಾಜಗೆ ಓದಿನಷ್ಟೇ ಕ್ರೀಡೆಯಲ್ಲಿಯೂ ಆಸಕ್ತಿ. ತಂದೆ ತಾಯಿಯೂ ಅಷ್ಟೇ. ಮಗನ ಮನದ ಇಂಗಿತ ಅರಿತು ಅವರ ಸಾಧನೆಗೆ ಶಕ್ತಿ ಮೀರಿ ನೆರವಾಗುತ್ತಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ರ್ವೆಸ್ಲಿಂಗ್ ನಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದ ಗುರುರಾಜ್‌ಗೆ ಸುಕೇಶ್ ಶೆಟ್ಟಿ ಅವರು ತರಬೇತಿ ನೀಡಿದ್ದರು. ಮುಂದೆ ಪದವಿ ವ್ಯಾಸಂಗಕ್ಕಾಗಿ ಉಜಿರೆಯ ಎಸ್.ಡಿ.ಎಂ ಕಾಲೇಜು ಸೇರಿದ ಬಳಿಕ ಗುರುರಾಜ್ ಬದುಕಿಗೊಂದು ತಿರುವು ದೊರೆತಿತ್ತು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ದೇವಸ್ಥಾನಗಳ ಜೀರ್ಣೋದ್ಧಾರವಾದ ನಂತರ ದೇವಳದಲ್ಲಿ ಮುಖ್ಯವಾಗಿ ನಡೆಯಬೇಕಾದ ಪೂಜೆ, ಪುನಸ್ಕಾರ, ಯಜ್ಞ ಯಾಗಾದಿಗಳು, ಉತ್ಸವಗಳು ಭಜನೆ ಹಾಗೂ ಅನ್ನಸಂತರ್ಪಣೆ ಮುಂತಾದ ಕಾರ್ಯಗಳನ್ನು ಕ್ರಮಬದ್ಧವಾಗಿ ಮುಂದುವರಿಸಿಕೊಂಡು ಹೋಗಬೇಕು. ದೇವಳಗಳು ಧಾರ್ಮಿಕ ಶೃದ್ಧಾಕೇಂದ್ರವಾಗಿರಬೇಕೆ ಹೊರತು ವ್ಯವಹಾರ ಕೇಂದ್ರವಾಗಬಾರದು ಎಂದು ಶಿರೂರು ಜ್ಞಾನದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಮಚಂದ್ರ ಬಿ. ಶಿರೂರಕರ್ ಹೇಳಿದರು. ಶಿರೂರು ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಿಯ ಸಾನಿಧ್ಯದಲ್ಲಿ ನಡೆದ 28ನೇ ಪುನರ್‌ಪ್ರತಿಷ್ಠಾ ವರ್ಧಂತ್ಯೋತ್ಸವದ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಭಕ್ತರು ತಮ್ಮ ವರ್ಷದ ದುಡಿಮೆಯಲ್ಲಿ ಒಂದು ದಿನದ ಗಳಿಕೆಯನ್ನು ದೇವಳದ ಧಾರ್ಮಿಕ ಕಾರ್ಯಗಳಿಗೆ ಮೀಸಲಿಟ್ಟರೆ ಸನ್ನಿಧಿಯಲ್ಲಿ ಇನ್ನೂ ಹೆಚ್ಚಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದರು. ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಅಧ್ಯಕ್ಷ ಕೆ.ಎನ್. ಆಚಾರ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಗೋಪಾಲ ಭೂಸೇನಹಳ್ಳಿ. ನಿವೃತ್ತ ಯೋಧ ರುಕ್ಮಾನಂದ ಮತ್ತವರ ಪತ್ನಿ ಶಿಕ್ಷಕಿ ಲತಾ, ಹಿರಿಯ ಪುರೋಹಿತ ಶ್ಯಾಮ ಅವಭೃತ್ ಅಳ್ವೆಗದ್ದೆ ಹಾಗೂ ಸಮಾಜದ ಹಿರಿಯರಿಗೆ ಸನ್ಮಾನಿಸಲಾಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕೂಡು ಕುಟುಂಬದಿಂದ ಒಂಟಿ ಕುಟುಂಬ ಆಯ್ತು. ಕೃಷಿಯಿಂದ ಸ್ವಾಪ್ಟ್ ವೇರ್ ಬಂತು. ಹೀಗೆ ಕುಟುಂಬದಿಂದ ಬೇರೆ ಬೇರೆ ಕಾರಣದಿಂದ ಹೊರ ಬಂದು ವಿಶ್ವದಾದ್ಯಂತ ಹಂಚಿಹೋದ ಕುಟುಂಬ ಸದಸ್ಯರಲ್ಲಿ ಸಂಬಂಧಗಳೇ ಶಿಥಿಲಗೊಳ್ಳುತ್ತಿರುವ ಆಧುನಿಕ ಯುಗ ಇದು. ಹೀಗಿರುವಾಗ ದೂರ ದೂರ ಹಂಚಿಹೋದ ಸುಮಾರು 200 ವರ್ಷದ ಹಿಂದಿನ ತಮ್ಮ ಪೂರ್ವಜರ ಸಂತತಿಯನ್ನು ಅರಸಿ ಸುಮಾರು ಎಂಟು ತಲೆಮಾರಿನ ಸಹೋದರ ಸಹೋದರಿಯರ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು ಒಂದಾಗಿ ತಮ್ಮ ಕಟುಂಬೋತ್ಸವವನ್ನು ಆಚರಿಕೊಂಡ ಅಪರೂಪದ ಆದರ್ಶ ಕಾರ್ಯಕ್ರಮ ಒಂದು ಇತ್ತೀಚೆಗೆ ಉಪ್ಪುಂದದ ಪ್ರಭು ಮನೆತನದಲ್ಲಿ ಜರುಗಿತು. ಯಾವುದೇ ಧಾರ್ಮಿಕ ಹಿನ್ನೆಲೆ ಇರದೇ ಕುಟುಂಬದ ಹಿರಿಯ ಸದಸ್ಯರ ಮನೆ ಅಂಗಳದಲ್ಲೇ ಆಯೋಜನೆ ಗೊಂಡ ಒಂದು ದಿನದ ಈ ಸಮ್ಮೇಳನವನ್ನು ಇಂದಿನ ತಲೆಮಾರಿನ ಹಿರಿಯರಾದ ಉಪ್ಪುಂದದ ಶ್ರೀಧರ ಪ್ರಭುರವರು ಉದ್ಗಾಟಿಸಿದರು. ಅವರು ಮಾತನಾಡಿ ‘ಗೋವಾದಿಂದ ವಲಸೆ ಬಂದು ಹಲವು ಕಡೆ ನೆಲೆನಿಂತ ನಮ್ಮ ಕುಟುಂಬದ ಪೂರ್ವಜರ ಸಂಪೂರ್ಣ ಇತಿಹಾಸ ಇನ್ನೂ ಸಿಗದಿದ್ದರೂ…
