ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿರೂರು ಗಡಿಭಾಗದಲ್ಲಿ ವಾಹನ ತಪಾಸಣಾ ಚೆಕ್ಪೋಸ್ಟ ಪ್ರಾರಂಭಗೊಂಡಿದೆ. ಪ್ರತಿ ವಾಹನಗಳನ್ನು ತಪಾಸಣೆ ಮಾಡಿ ಮಾಹಿತಿ ದಾಖಲಿಸಿಕೊಳ್ಳಲಾಗುತ್ತಿದೆ. ಈ ಕುರಿತು ಮಾತನಾಡಿದ ಚುನಾವಣಾಧಿಕಾರಿಗಳು ಈಗಾಗಲೇ ಶಿರೂರು,ಸಿದ್ದಾಪುರ ಹಾಗೂ ಕೊಲ್ಲೂರಿನಲ್ಲಿ ಪ್ರತ್ಯೇಕ ಚೆಕ್ಪೋಸ್ಟ್ ಪ್ರಾರಂಭಿಸಲಾಗಿದೆ.ವಿವಿಧ ಇಲಾಖೆಯ ಅಧಿಕಾರಿಗಳನ್ನು ಸರತಿ ಪ್ರಕಾರ ದಿನದ 24 ಗಂಟೆಯು ತಪಾಸಣೆ ಮಾಡಲಾಗುತ್ತಿದೆ. ವಿಶೇಷ ನಿಗಾ ವಹಿಸಲು ಪ್ರತ್ಯೇಕವಾದ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ..ಪ್ರತಿ ಚೆಕ್ಪೋಸ್ಟ್ಗಳಲ್ಲಿ ಕೇಂದ್ರ ಮೀಸಲು ಪಡೆಯ ಪೋಲಿಸರನ್ನು ನಿಯೋಜಿಸಲಾಗುವುದು ಎಂದರು. ತಪಾಸಣಾ ಚೆಕ್ಪೋಸ್ಟ್ಗಳಿಂದ ನಿತ್ಯ ಪ್ರಯಾಣಿಸುವ ಸ್ಥಳೀಯ ಪ್ರಯಾಣಿಕರಿಗೆ ಮಾತ್ರ ಚುನಾವಣಾ ಬಿಸಿ ತಾಗಿದಂತಾಗಿದೆ.