ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಇಲ್ಲಿನ ಸುರಭಿ ರಿ. ಬೈಂದೂರು ಇದರ ರಂಗ ಸುರಭಿ ವಿಭಾಗದಿಂದ 7 ದಿನಗಳ ಕಾಲ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ರಂಗ ತರಬೇತಿ ಶಿಬಿರ ಚಿಣ್ಣರ ಚಿತ್ತಾರ ರಂಗಶಿಬಿರವನ್ನು ಸುರಭಿ ಸಂಸ್ಥೆ ಸಲಹೆಗಾರ ಹಾಗೂ ರಂಗನಟರೂ ಆದ ಶ್ರೀ ಜಿ. ತಿಮ್ಮಪ್ಪಯ್ಯನವರು ಹಾಗೂ ಪುಟಾಣಿ ನಂದಿತಾ ಹೋಬಳಿದಾರ್ ಉದ್ಘಾಟಿಸಿ ಚಿಣ್ಣರ ಚಿತ್ತಾರದಿಂದ ಬಾಲಪ್ರತಿಭೆಗಳು ತಮ್ಮ ಪ್ರತಿಭೆ ಬೆಳಗುವಂತಾಗಲಿ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಬಿರದ ನಿರ್ದೇಶಕ ದಾವಣಗೆರೆಯ ಶ್ರೀ ಭೀಮೇಶ್ರವರು ಶುಭಶಂಸನೆ ಗೈದು ರಂಗ ನಿರ್ದೇಶಕಿ ಚನ್ನರಾಯ ಪಟ್ಟಣದ ಶ್ರೀಮತಿ ರಂಜಿನಿ, ಸುರಭಿ ನಿರ್ದೇಶಕ ಶ್ರೀ ಗಣಪತಿ ಹೋಬಳಿದಾರ್ರವರು ಪ್ರಾಸ್ತಾವಿಕ ಮಾತನಾಡಿ ಶ್ರೀ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಶಿಬಿರದಲ್ಲಿ ನಿರ್ಮಾಣಗೊಂಡ ಮಕ್ಕಳ ನಾಟಕ ಒಂದು ಗುಬ್ಬಿಯ ಹಾಡು ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಚಿತ್ರೀಕರಿಸಲ್ಪಟ್ಟು, ಬಿತ್ತರಗೊಳ್ಳಲಿದೆ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ವಿಭಾಗದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಬಳ್ಳಾರಿಯ ಶ್ರವಣ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆ, ಬಳ್ಳಾರಿ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಇವುಗಳ ಸಹಯೋಗದೊಂದಿಗೆ ನೆಡೆದ ಟೂರ್ನಿ ಅಲ್ಲಿ ಮೂಡಬಿದ್ರೆಯ ಆಳ್ವಾಸ್ ತಂಡ ಮಹಿಳಾ ವಿಭಾಗದಲ್ಲಿ ಟೂರ್ನಿಯ ಪೂರ್ತಿ ಗಮನಾರ್ಹ ಪ್ರದರ್ಶನ ನೀಡಿತು. ಸೂಪರ್ ಲೀಗ್ ಪಂದ್ಯಗಳ 3 ಪಂದ್ಯಗಳಲ್ಲಿ ನೇರ ಸೆಟ್ ದಾಖಲಿಸಿದಲ್ಲದೆ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈನ ಎಸ್ಆರ್ಎಂ ವಿಶ್ವವಿದ್ಯಾಲಯ ತಂಡವನ್ನು 35-19 ಹಾಗೂ 35-24 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಗಳಿಸಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಮಾಜದಲ್ಲಿರುವ ಹೆಚ್ಚಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ತಿಳುವಳಿಕೆ ಇರುವ ಹಿರಿಯರಿಂದ ಸಾಧ್ಯವಾಗುವುದೇ ಹೊರತು ಇದಕ್ಕೆ ರಾಜಕೀಯದ ಅವಶ್ಯಕತೆಯಿಲ್ಲ. ಸಾಮಾನ್ಯವಾಗಿ ಜನರಿಗೆ ರಾಜಕಾರಣಿಗಳ, ರಾಜಕೀಯ ಮುಖಂಡರಿಂದ ಮಾತ್ರ ಸಮಾಜದ ಬದಲಾಣೆ ಸಾಧ್ಯ ಎಂಬ ತಪ್ಪು ತಿಳುವಳಿಕೆಯಿಂದ ಭಿನ್ನಾಭಿಪ್ರಾಯಗಳು, ಸಮಸ್ಯೆಗಳು ಇನ್ನಷ್ಟು ಜಟಿಲಗೊಳ್ಳುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು. ಬೈಂದೂರು-ಕಳವಾಡಿ ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ಹವ್ಯಾಸಿ ಕಲಾತಂಡದ ೧೩ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾವೆಲ್ಲರೂ ಸಾಮಾನ್ಯವಾಗಿ ಬದುಕಲು, ಸಾಧಿಸಲು ಹಾಗೂ ಜೀವಿಸಲು ಹುಟ್ಟಿನಿಂದಾಗಿ ಒಂದೇ ರೀತಿಯ ಅವಕಾಶ ಪಡೆದಿರುತ್ತೇವೆ. ಆದರೆ ನಮ್ಮ ನಡುವೆ ಅತ್ಯುನ್ನತ ಸಾಧನೆ ಮಾಡಿದ ಮತ್ತು ಜೀವನದಲ್ಲಿ ಏನನ್ನೂ ಮಾಡದೇ ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದವರನ್ನೂ ನೋಡುತ್ತಿದ್ದೇವೆ. ಇದೆಲ್ಲ ಮನುಷ್ಯನ ವರ್ತನೆ ಹಾಗೂ ನಡವಳಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮೊಳಗಿನ ಬಾಹ್ಯ ಪರಿಸರವು ನಮ್ಮ ಆಸಕ್ತಿ ಕ್ಷೇತ್ರದಲ್ಲಿ ಸ್ಪಷ್ಟಚಿತ್ರಣ ಸೃಷ್ಠಿಸಲು ಸಹಾಯ ಮಾಡಿದರೆ ನಮ್ಮೊಳಗಿನ ಪರಿಸರವೂ ಸರಿಯಾಗಿದ್ದನ್ನು ಆರಿಸಿಕೊಳ್ಳಲು ಸಹಕರಿಸುತ್ತದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಪಕ್ಷವು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಬಹತೇಕ ಹಾಲಿ ಶಾಸಕರು ಹಾಗೂ ಗೊಂದಲವಿಲ್ಲದ 72 ಕ್ಷೇತ್ರಗಳ ಅಭ್ಯರ್ಥೀಗಳ ಟಿಕೆಟ್ ಅಂತಿಮಗೊಳಿಸಲಾಗಿದೆ. ಕುಂದಾಪುರ ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೇಟ್ ದೊರೆತಿದ್ದು, ಬೈಂದೂರು ಕ್ಷೇತ್ರದಲ್ಲಿ ಯಾರು ಸ್ವರ್ಧಿಸಲಿದ್ದಾರೆ ಎಂಬುದು ಮೊದಲ ಪಟ್ಟಿಯಲ್ಲಿ ಅಂತಿಮಗೊಂಡಿಲ್ಲ. ಕುಂದಾಪುರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಳೆದ ಭಾರಿ ಸಚಿವ ಸ್ಥಾನ ಕೈತಪ್ಪಿದ್ದರಿಂದ ನೊಂದು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ ಪಕ್ಷೇತರರಾಗಿ ಸ್ವರ್ಧಿಸಿ ವಿಜಯಿಯಾಗಿದ್ದರು. ಆ ಬಳಿಕವೂ ಬಿಜೆಪಿ ಪಕ್ಷದ ಪರ ಒಲವು ಹೊಂದಿದ್ದ ಅವರು ಸ್ಥಳಿಯಾಡಳಿತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ಸೂಚಿಸಿದ್ದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮರಳಿ ಮಾತೃ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಅವರನ್ನು ಸೇರ್ಪಡೆಗೂ ಮೊದಲೇ ಬಿಜೆಪಿಯ ಅಭ್ಯರ್ಥಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಘೋಷಿಸಿದ್ದರು. ಈ ನಡುವೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸ್ವಾಭಾವಿಕ ಬದುಕಿನಿಂದ ಅಸ್ವಾಭಾವಿಕ ಬದುಕಿನತ್ತ ಸಮಾಜ ನಡೆಯಿತ್ತಿದೆ. ಪ್ರಕೃತಿ ಜೊತೆಯಲ್ಲೇ ಬದುಕಬೇಕೇ ವಿನಹಾ ಪ್ರಕೃತಿ ವಿರುದ್ಧ ಬದುಕಲಾಗದು. ಸಮಾಜ ಕೃಷಿ ಸಂಸ್ಕೃತಿಯಿಂದ ವಿಮುಕ್ತವಾ ಗುತ್ತಿದ್ದು, ಪ್ಲಾಟ್ ಸಂಸ್ಕೃತಿಗೆ ಬಂದು ಮುಟ್ಟಿದ್ದೇವೆ. ಪೋಷಕರು ಅಂಕ ಪಡೆಯಲಷ್ಟೇ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಡುತ್ತಿದ್ದು, ಪರಂಪರೆ ನಮ್ಮ ಅಮೂಲ್ಯ ಗ್ರಂಥಗಳ ಪರಿಚಯಿಸದಿದ್ದರೆ ಪೋಷಕರೂ ಪರಕೀಯರಾಗುವ ಅಪಾಯವಿದೆ. ಹೀಗೆ ಎಚ್ಚರಿಕೆ ನೀಡಿದವರು ಮಂಗಳೂರು ಕೇಮಾರು ಮಠ ಶ್ರೀ ಈಶ ಮಿಠಲದಾಸ ಸ್ವಾಮೀಜಿ. ಬೈಂದೂರು ತಾಲೂಕ್, ಮಾರಣಕಟ್ಟೆ ತೆಂಕೂರು ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನ ವಠಾರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.ದೇವಸ್ಥಾನಗಳು ಪ್ರಕೃತಿ ದತ್ತವಾಗಿದ್ದು, ಆಧುನಿಕತೆ ಭರಾಟೆಯಲ್ಲಿ ಶಿಲಾಮಯ, ಸ್ವರ್ಣಮಯ ದೇವಾಲಯಗಳಾಗಿ ಬದಲಾಯಿಸುತ್ತಿರುವುದರಿಂದ ದೇವಸ್ಥಾನದಲ್ಲಿ ಶಕ್ತಿ ನಷ್ಟವಾಗುತ್ತಿದೆ. ನಮ್ಮ ಮಕ್ಕಳನ್ನು ಅಂಕ ಪಡೆಯುವ ಯಂತ್ರಗಳಾಗಿ ರೂಪಿಸುತ್ತಿದ್ದು, ಉಣ್ಣುವ ಅನ್ನ ಎಲ್ಲಿಂದ ಬರುತ್ತದೆ ಎನ್ನುವ ಕನಿಷ್ಠ ಜ್ಞಾನ ಕೂಡಾ ಇಲ್ಲದಿರುವುದರಿಂದ ಮಕ್ಕಳಿಗೆ ಕೃಷಿ ಪಾಠ ಕಲಿಸದಿದ್ದರೆ, ಮುಂದಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಭಿಮಾನಿಯೋರ್ವ ಅಭಿಮಾನದಿಂದ ನೀಡಿದ ಬೆಲೆ ಬಾಳುವ ಚಿನ್ನದ ಶೂ ಅನ್ನು ಖ್ಯಾತ ಪುಟ್ಬಾಲ್ ಆಟಗಾರ ರೋನಾಲ್ಡ್ ಅವರು ಹರಾಜಿಗಿಟ್ಟು ಅದರಿಂದ ಬಂದ ಹಣವನ್ನು ಎಚ್. ಐ.ವಿ ಪೀಡಿತರ ಕಲ್ಯಾಣಕ್ಕೆ ಬಳಸಿದರು. ಅವರ ಶ್ಲಾಘನೀಯ ಸೇವಾ ಮನೋಭಾವವನ್ನು ಜಗತ್ತು ಕೊಂಡಾಡಿತು. ಇದೇ ರೀತಿಯಲ್ಲಿ ಸೇವೆ ಮಾಡಲು ನೂರಾರು ಅವಕಾಶಗಳು ನಮಗೂ ಸಿಗಬಹುದು. ಅದು ಚಿಕ್ಕದಿರಲಿ ದೊಡ್ಡದಿರಲಿ ನಮ್ಮಲ್ಲಿರುವ ತ್ಯಾಗ ಮನೋಭಾವವೇ ನಮ್ಮನ್ನು ಉನ್ನತಿಯೆಡೆಗೆ ಕೊಂಡೊಯ್ಯುವುದು ಆದುದರಿಂದ ಪ್ರತಿಯೊಬ್ಬರು ಸೇವಾ ಭಾವವನ್ನು ಅಳವಡಿಸಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳೋಣ ಎಂದು ರೋಟರಿ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಜಿ.ಎನ್ ಪ್ರಕಾಶ್ ಹೇಳಿದರು.ಅವರು ರೋಟರಿ ಕ್ಲಬ್ ಕುಂದಾಪುರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭ ಸ್ಥಳೀಯ ಆಶೀರ್ವಾದ ಹಾಲ್ನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಗಣೇಶ್ ಐತಾಳ್ ವಹಿಸಿದ್ದರು. ರೋಟರಿ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ.ಕಾಂಚನ್ ಕ್ಲಬ್ ಬುಲೆಟಿನ್ ಬಿಡುಗಡೆಗೊಳಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಪುಟ್ಟ ಪುಟ್ಟ ಮಕ್ಕಳು ತಾಯಿಯ ಪಾದಗಳನ್ನು ತೊಳೆದು, ಪುಷ್ಪಗಳನ್ನು ಅರ್ಪಿಸಿ ಆರತಿ ಬೆಳಗುತ್ತಾ ತಾಯಿಯನ್ನು ಪೂಜಿಸಿ ವಂದಿಸುವ ಆ ಸುಂದರ ಅಪರೂಪದ ದೃಶ್ಯ ಕಂಡು ಬಂದಿದ್ದು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ. ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಆಶ್ರಯದಲ್ಲಿ ಮಂಗಳವಾರ ಜರಗಿದ ವಿನೂತನವಾದ ಮಾತೃ ವಂದನ ಕಾರ್ಯಕ್ರಮ ಶಾರದಾ ಮಂಟಪದಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಜನರು ಪ್ರಥಮ ಬಾರಿಗೆ ನಡೆಯುತ್ತಿರುವ ಈ ಕಾರ್ಯಕ್ರಮದ ಅಪರೂಪದ ಆ ಸುಂದರ ಅದ್ಭುತ ಕ್ಷಣಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡರು. ಓಡಿ ಆಡಿ ನಲಿದಾಡುತ್ತಿದ್ದ ಆ ಪುಟ್ಟ ಮಕ್ಕಳು ತಾಯಿಯ ಪಾದಗಳನ್ನು ನೀರಿನಿಂದ ತೊಳೆದು ತಾಯಿಯ ಪಾದಗಳಲ್ಲಿ ಪುಷ್ಪಾರ್ಚನೆ ಮಾಡಿ ತಂದೆ ತಾಯಿಗೆ ಆರತಿ ಬೆಳಗಿ ಪೂಜಿಸಿ ನಮಿಸುತ್ತಿರುವ ಆ ಕ್ಷಣ ಎಲ್ಲರನ್ನು ರೋಮಾಂಚನಗೊಳಿಸಿತು. ಶಿಶು ಮಂದಿರದ ಪುಟಾಣಿಗಳು, ಬಾಲ ಗೋಕುಲದ ಮಕ್ಕಳು ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು. ಮಕ್ಕಳಿಗೆ ಬಾಲ್ಯದಲ್ಲಿ ಹೆತ್ತವರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: 2017-18 ನೇ ಸಾಲಿನ ಬಿ.ಎಡ್/ಎಂ.ಎಡ್ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಅಂತರ್ ಬಿ.ಎಡ್/ ಎಂ.ಎಡ್ ಕಾಲೇಜ್ನ ಆಟೋಟ ಸ್ಪರ್ಧೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು ಅದರಲ್ಲಿ ನಮ್ಮ ಸಂಸ್ಥೆಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. 100 ಮೀ ದ್ವಿತೀಯ, 200 ಮೀ ಪ್ರಥಮ, ಗುಂಡು ಎಸೆತ ದ್ವಿತೀಯ, ಪುರುಷರ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುತ್ತಾರೆ. 100 ಮೀ ದ್ವಿತೀಯ, 400 ಮೀ ದ್ವಿತೀಯ ಮತ್ತು ತೃತೀಯ, 800 ಮೀ ಪ್ರಥಮ, ತೃತೀಯ 400 ರಿಲೇ ಪ್ರಥಮ, ಗುಂಡು ಎಸೆತ ಪ್ರಥಮ ಶಟಲ್ ಬ್ಯಾಡ್ಮಿಟನ್ ದ್ವಿತೀಯ ಸ್ಥಾನವನ್ನು ಮಹಿಳಾ ವಿಭಾಗ ಪಡೆದಿರುತ್ತಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಮಹಿಳೆ ವಿಭಾಗದಲ್ಲಿ ಸಮಗ್ರ ಪ್ರಸಸ್ತಿ. ಪ್ರಥಮ ಸ್ಥಾನ, ಮಹಿಳಾ ಚಾಂಪಿಯನ್ ಶಿಪ್ನಲ್ಲಿ 3ನೇ ಸ್ಥಾನ ಹಾಗೂ ಕಾಲೇಜ್ನ ಸಮಗ್ರ ಪ್ರಶಸ್ತಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿರುತ್ತಾರೆ. ಪ್ರಶಸ್ತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆ ಕೋಡಿ ಕುಂದಾಪುರ ಇದರ ಅಧ್ಯಕ್ಷರು, ಸಂಚಾಲಕರು, ಪ್ರಾಂಶುಪಾಲರು ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೈಂದೂರು ಭಾಗಕ್ಕೆ ಕೇಂದ್ರ ಮೀಸಲು ಪೋಲಿಸ್ ಪಡೆ ಆಗಮಿಸಿದೆ.ಕುಂದಾಪುರ ತಾಲೂಕಿಗೆ 40 ಜನರ ಸಿ.ಆರ್.ಪಿ.ತಂಡ ಆಗಮಿಸಿದೆ.ತಾಲೂಕಿನ ಸುತ್ತಮುತ್ತ ಭಾಗಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಾರ್ವಜನಿಕರಿಗೆ ಜಾಗೃತಿ ಉದ್ದೇಶದಿಂದ ಬೈಂದೂರು ಹಾಗೂ ಶಿರೂರಿನ ವಿವಿಧ ಭಾಗಗಳಲ್ಲಿ ಸ್ಥಳೀಯ ಪೋಲಿಸರೊಂದಿಗೆ ಸಿ.ಆರ್.ಪಿ ತಂಡದವರು ಪಥಸಂಚಲನ ನಡೆಸಿದರು.ಈ ಕುರಿತು ಪ್ರತಿಕ್ರಯಿಸಿದ ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಮೊದಲ ಹಂತದಲ್ಲಿ 40 ಜನರ ತಂಡ ಪಥ ಸಂಚಲನ ನಡೆಸುವುದರ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಲಾಗಿದೆ.ಉಳಿದ ಪೋಲಿಸ್ ತಂಡಗಳಿಂದ ಪ್ಯಾರಾಮಿಲಿಟರಿ ತಂಡಗಳು ನಿಯೋಜನೆಗೊಂಡ ಬಳಿಕ ಕ್ಷೇತ್ರದ ವಿವಿಧ ಭಾಗಗಳಿಗೂ ಪಥಸಂಚಲನ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು:ಬ್ಲಾಕ್ ಕಾಂಗ್ರೇಸ್ ಬೈಂದೂರು ಇದರ ನೂತನ ಕಛೇರಿಯನ್ನು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕೆ.ಡಿ.ಪಿ ಸದಸ್ಯ ಎಸ್.ರಾಜು ಪೂಜಾರಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಮದನ್ ಕುಮಾರ್ ಉಪ್ಪುಂದ, ಜಿ.ಪಂ ಸದಸ್ಯೆ ಗೌರಿ ದೇವಾಡಿಗ , ತಾ.ಪಂ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.
