ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ಇಲ್ಲಿನ ಸುರಭಿ ರಿ. ಬೈಂದೂರು ಇದರ ರಂಗ ಸುರಭಿ ವಿಭಾಗದಿಂದ 7 ದಿನಗಳ ಕಾಲ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ರಂಗ ತರಬೇತಿ ಶಿಬಿರ ಚಿಣ್ಣರ ಚಿತ್ತಾರ ರಂಗಶಿಬಿರವನ್ನು ಸುರಭಿ ಸಂಸ್ಥೆ ಸಲಹೆಗಾರ ಹಾಗೂ ರಂಗನಟರೂ ಆದ ಶ್ರೀ ಜಿ. ತಿಮ್ಮಪ್ಪಯ್ಯನವರು ಹಾಗೂ ಪುಟಾಣಿ ನಂದಿತಾ ಹೋಬಳಿದಾರ್ ಉದ್ಘಾಟಿಸಿ ಚಿಣ್ಣರ ಚಿತ್ತಾರದಿಂದ ಬಾಲಪ್ರತಿಭೆಗಳು ತಮ್ಮ ಪ್ರತಿಭೆ ಬೆಳಗುವಂತಾಗಲಿ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಬಿರದ ನಿರ್ದೇಶಕ ದಾವಣಗೆರೆಯ ಶ್ರೀ ಭೀಮೇಶ್‌ರವರು ಶುಭಶಂಸನೆ ಗೈದು ರಂಗ ನಿರ್ದೇಶಕಿ ಚನ್ನರಾಯ ಪಟ್ಟಣದ ಶ್ರೀಮತಿ ರಂಜಿನಿ, ಸುರಭಿ ನಿರ್ದೇಶಕ ಶ್ರೀ ಗಣಪತಿ ಹೋಬಳಿದಾರ್‌ರವರು ಪ್ರಾಸ್ತಾವಿಕ ಮಾತನಾಡಿ ಶ್ರೀ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಶಿಬಿರದಲ್ಲಿ ನಿರ್ಮಾಣಗೊಂಡ ಮಕ್ಕಳ ನಾಟಕ ಒಂದು ಗುಬ್ಬಿಯ ಹಾಡು ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಚಿತ್ರೀಕರಿಸಲ್ಪಟ್ಟು, ಬಿತ್ತರಗೊಳ್ಳಲಿದೆ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ.