Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೇಂದ್ರ ಸರ್ಕಾರ ರಾಜ್ಯಕ್ಕೆ ಹಲವಾರು ಯೋಜನೆ, ಅನುದಾನ ನೀಡಿದ್ದರೂ ಸಂಬಂಧಪಟ್ಟ ಸಂಸದರು, ಕೇಂದ್ರ ಸರ್ಕಾರ ಅಧಿಕಾರಿಗಳ ಗಮನಕ್ಕೂ ತಾರದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ಮಾಡುತ್ತಿದ್ದಾರೆ. ಕೇಂದ್ರದ ಯೋಜನೆಗಳ ಇಂಪ್ಲಿಮೆಂಟ್ ಮಾಡುವ ಕೆಲಸ ರಾಜ್ಯ ಸರ್ಕಾರ ಮಾಡದೆ, ತನ್ನದೇ ಯೋಜನೆ ಎಂದು ಪ್ರತಿಬಿಂಬಿಸುತ್ತಿದೆ. ಕೇಂದ್ರ ಸರ್ಕಾರದ ಅನುದಾನ, ಯೋಜನೆಗಳ ಕೂಸಿಗೆ ರಾಜ್ಯ ಸರ್ಕಾರ ನಾಮಕರಣ ಮಾಡುತ್ತಿದೆ ಎಂದು ಸಂಸದ ಬಿ.ಎಸ್.ಯಡಿಯೂರಪ್ಪ ಆಪ್ತ ಕಾರ‍್ಯದರ್ಶಿ ಪುರುಷೋತ್ತಮ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡವರು. ಕುಂದಾಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದ ಬಿ. ಎಸ್. ಯಡಿಯೂರಪ್ಪ ಬೈಂದೂರು ಕ್ಷೇತ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದು, ಆ ಯೋಜನೆಗಳ ಶಿಲಾನ್ಯಾಸಕ್ಕೆ ಎಲ್ಲಾ ನಿಯಮ ಗಾಳಿಗೆ ತೂರಿ, ತಮ್ಮದೇ ಸಾಧನೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದ್ದು, ಇದು ಗೌರವ ತರುವ ಸಂಗತಿಯಲ್ಲ. ಕೇಂದ್ರ ಸರ್ಕಾರದಯೋಜನೆ ಹಾಗೂ ಅನುದಾನದ ಕಾರ‍್ಯಕ್ರಮಗಳಿಗೆ ಸಂದರನ್ನೂ ಕರೆಯುವ ಸೌಜನ್ಯ ತೋರಿಸಬೇಕು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬಿ.ಎಸ್.ಯಡಿಯೂರಪ್ಪ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ೨೦೧೩ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ೧೬೫ ಆಶ್ವಾಸನೆಗಳಲ್ಲಿ ಸಂಪೂರ್ಣವಾಗಿ ೧೬೫ನ್ನು ಈಗಾಗಲೇ ಈಡೇರಿಸಿದೆ. ಮತ್ತು ಜನಪರವಾದ ಹಾಗೂ ಭ್ರಷ್ಟಾಚಾರ ರಹಿತವಾದ ಆಡಳಿತ ನೀಡಿದೆ. ಆ ಮೂಲಕ ಕರ್ನಾಟಕದಲ್ಲಿ ಮತ್ತೊಮ್ಮೆ ಸಿದ್ದಾರಾಮಯ್ಯನವರ ಸರಕಾರ ಅಧಿಕಾರಕ್ಕೆ ಬರುವುದು ಖಚಿತಗೊಂಡಿದೆ ಎಂದು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ’ಮನೆ ಮನೆಗೆ ಕಾಂಗ್ರೆಸ್’ ಉಸ್ತುವಾರಿ ಜಿ.ಎ.ಬಾವ ಹೇಳಿದ್ದಾರೆ. ಅವರು ಕುಂದಾಪುರ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ಪುರಸಭಾ ಮಟ್ಟದ ’ಮನೆ ಮನೆಗೆ ಕಾಂಗ್ರೆಸ್’ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸದಾ ರೇಪ್, ಕೊಲೆ, ಲೂಟಿ, ಬ್ಲೂಫಿಲ್ಮ್, ಜೈಲುವಾಸ, ಭಿನ್ನಮತ, ಡಿನೋಡಿಫಿಕೇಶನ್, ರೆಸಾರ್ಟ್ ರಾಜಕಾರಣ ಮುಂತಾದ ಹಗರಣಗಳಲ್ಲೇ ಕಾಲ ಕಳೆದಿತ್ತು. ಆದರೆ ಸಿದ್ಧಾರಾಮಯ್ಯನವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಸರಕಾರ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಧಾರೆ, ಕ್ಷೀರಭಾಗ್ಯ, ಮೈತ್ರಿ, ವಿದ್ಯಾಸಿರಿ, ರಾಜೀವ್ ಆರೋಗ್ಯಭ್ಯಾಗ್ಯ, ಶುದ್ಧನೀರು, ಋಣಮುಕ್ತ, ವಸತಿಭಾಗ್ಯ, ಸೌರಭಾಗ್ಯ, ಶಾದಿಭಾಗ್ಯ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಭಾರತದಲ್ಲಿರುವ ಪ್ರಸಕ್ತ ಶಿಕ್ಷಣ ಪದ್ಧತಿಯೂ ಭಾರತೀಯ ಸಂಸ್ಕೃತಿ ಧಾರ್ಮಿಕತೆಯ ಬೆಳವಣಿಗೆಗೆ ಸ್ವಲ್ಪವೂ ಪೂರಕವಾಗಿಲ್ಲ. ಈ ಶಿಕ್ಷಣ ವಿದೇಶಿ ಶೂಟು ಬೂಟು ಸಂಸ್ಕೃತಿಯೊಂದಿಗೆ ಹಣ ಸಂಗ್ರಹಕ್ಕೆ ಮಾತ್ರ ಪೂರಕವಾಗಿದೆ ಅದಕ್ಕಾಗಿ ಭಾರತೀಯ ಶಿಕ್ಷಣ ಪದ್ಧತಿ ಆಮೂಲಾಗ್ರ ಬದಲಾವಣೆ ಆಗಬೇಕು. ಧಾರ್ಮಿಕ ಭೋದನೆಯ ಶಿಕ್ಷಣವನ್ನು ಶಿಕ್ಷಣ ಪದ್ಧತಿಯಲ್ಲಿ ಜೋಡಿಸುವ ಕಾರ್ಯ ಆಗಬೇಕು ಎಂದು ಹಾಲಾಡಿ ಪಂಚಾಂಗ ಕರ್ತು ವಿದ್ವಾನ್ ವಾಸುದೇವ ಜೋಯೀಸ್ ಹೇಳಿದರು, ನಾಗೂರು ಓಡೆಯರಮಠ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ ಇವರ ೨೩ನೇಯ ವಾರ್ಷಿಕ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಪ್ರತಿ ಸಮಾಜಕ್ಕೂ ಸಂಘಟನೆಯ ಅಗತ್ಯವಿದೆ, ವ್ಯಕ್ತಿಗಳ ಮನಸ್ಸು ಮನಸ್ಸು ಒಂದಾಗಿ ಸಂಘಟನೆ ಮಾಡಬೇಕು, ಸಂಘಟನೆಯ ಸದುದ್ಧೇಶ, ಸತ್ಯ ಪ್ರಾಮಾಣೀಕತೆ ಜೊತೆಯಲ್ಲಿ ಧಾರ್ಮಿಕ ಶಿಕ್ಷಣ ನೋಡುವುದರೊಂದಿಗೆ ಪ್ರತಿ ಸಂಘಟನೆ ಯಶಸ್ವಿಯಾಗಲಿದೆ ಎಂದು ಹೇಳಿದರು. ಉಪ್ಪುಂದ ವಲಯದ ಅಧ್ಯಕ್ಷ ಮಂಜುನಾಥ ಉಡುಪ ಸಮಾರಂಭದ ಅರ್ಧಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಲೇಖನ. ವೈದೇಹಿ, ಕನ್ನಡ ನಾಡು ಕಂಡ ಸಹೃದಿಯಿ ಸಾಹಿತಿ. ಕನ್ನಡ ಸಾಹಿತ್ಯ ಲೋಕವನ್ನು ತಮ್ಮದೇ ವಿಭಿನ್ನ ಆಯಾಮದ ಕಥೆ-ಕವಿತೆಗಳಿಂದ ಶ್ರೀಮಂತಗೊಳಿಸಿದವರು. ಕುಂದಾಪುರ ಕನ್ನಡದಲ್ಲೇ ಅನೇಕ ಕೃತಿಗಳನ್ನು ರಚಿಸಿ, ಕುಂದಗನ್ನಡದ ಕಂಪನ್ನು ಹಲವೆಡೆ ಪಸರಿಸಿದವರು. ವೈದೇಹಿಯವರ ಅನೇಕ ಕಥೆ-ಕವನಗಳು ಅಸಂಖ್ಯಾತ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಸ್ತ್ರೀ ಲೋಕದ ಸೂಕ್ಷ್ಮತೆಯ ಅನಾವರಣ ಎಲ್ಲೆಡೆ ಬಿಂಬಿತವಾಗಿದೆ. ವೈದೇಹಿಯವರ ಕೃತಿಗಳು ಈಗಾಗಲೇ ಧಾರಾವಾಹಿ, ನಾಟಕಗಳಾಗಿಯೂ ನೋಡುಗರನ್ನು ಆಕರ್ಷಿಸಿದೆ. ಇವರ “ಅಮ್ಮಚ್ಚಿಯೆಂಬ ನೆನಪು” ಕೃತಿ ಇದೀಗ ಸಿನೆಮವಾಗುತ್ತಿರುವುದು ಹೊಸ ಸುದ್ದಿ. ಹೌದು. ಈ ಹಿಂದೆ ವೈದೇಹಿಯವರ “ಅಕ್ಕು”, “ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು” ಹಾಗೂ “ಅಮ್ಮಚ್ಚಿಯೆಂಬ ನೆನಪು” ಸಣ್ಣ ಕತೆಗಳನ್ನು ಒಗ್ಗೂಡಿಸಿ “ಅಕ್ಕು” ಎಂಬ ನಾಟಕವನ್ನು ಚಂಪಾ ಶೆಟ್ಟಿಯವರು ರಂಗ ಮಂಟಪ ತಂಡಕ್ಕೆ ಕಟ್ಟಿಕೊಟ್ಟಿದ್ದರು. ಸಂಪೂರ್ಣ ಕುಂದಾಪುರ ಕನ್ನಡದಲ್ಲೇ ಇರುವ ಈ ನಾಟಕ ಇದಾಗಲೆ 50ನೇ ಪ್ರದರ್ಶನದತ್ತದಾಪುಗಾಲಿಡುತ್ತಿದೆ. ಇದರ ಹೊಸ್ತಿಲಲ್ಲೇ ಚಂಪಾ ಶೆಟ್ಟಿಯವರು “ಎಪ್ರಾನ್ ಪ್ರೊಡಕ್ಷನ್” ಲಾಂಛನದಡಿ ಅದೇ ಕತೆಯನ್ನಾದರಿಸಿ “ಅಮ್ಮಚ್ಚಿಯೆಂಬ ನೆನಪು” ಚಲನಚಿತ್ರದ ಸಿದ್ದತೆಯಲ್ಲಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೀಚ್ ಉತ್ಸವದ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ದಾರಿ ಕಂಡುಕೊಂಡಂತಾಗಿದೆ. ಪ್ರಪಂಚದ ಸಣ್ಣ ಸಣ್ಣ ದೇಶಗಳ ದೊಡ್ಡ ವ್ಯವಹಾರ ಪ್ರವಾಸೋದ್ಯಮವೇ ಆಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಯಾದಂತೆ ಸ್ಥಳೀಯ ಜೀವನ ಮಟ್ಟವೂ ಹೆಚ್ಚುತ್ತದೆ, ಸರಕಾರ ಆ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುತ್ತದೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಬೈಂದೂರು ಸೋಮೇಶ್ವರ ಬೀಚಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೈಂದೂರು ಬೀಚ್ ಉತ್ಸವ 2017ರ ಸಮಾರೋಪ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಮುಖಪುಟ ಅನಾವರಣಗೊಳಿಸಿ ಮಾತನಾಡಿದರು. ಪ್ರವಾಸಿ ತಾಣಗಳ ಅಭಿವೃದ್ಧಿಯೊಂದಿಗೆ ಪರಿಸರದ ಜನರಿಗೂ ವಿಪುಲವಾದ ಉದ್ಯೋಗವಕಾಶಗಳು ತೆರೆದುಕೊಳ್ಳುತ್ತವೆ. ಹೋಂಸ್ಟೇ ಮಾಡಿಕೊಂಡರೇ ಪ್ರವಾಸೋದ್ಯಮ ಇಲಾಖೆಯೇ ನೆರವು ನೀಡುತ್ತದೆ. ಪ್ರವಾಸೋದ್ಯಮ ಬೆಳೆದಂತೆಲ್ಲ ಆರ್ಥಿಕ ಸುಧಾರಣೆಯಾಗುವುದಲ್ಲದೇ ಊರಿನ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣಗೊಳ್ಳುತ್ತದೆ ಎಂದರು. ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಓಂಗಣೇಶ್ ಉಪ್ಪುಂದ ಸಮಾರೋಪ ನುಡಿಗಳನ್ನಾಡಿದರು. ಬೈಂದೂರು ಹೊಲಿಕ್ರಾಸ್ ಚರ್ಚ್ ರೆವರೆಂಡ್ ಫಾದರ್ ರೋನಾಲ್ಡ್ ಮಿರಾಂದ, ಜಿಪಂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತೀ ಮಗುವೂ ವಿಶ್ವ ಮಾನವನಾಗಿ ಜಗತ್ತಿನ ಬೆಳಕು ಕಾಣುತ್ತದೆ. ಪರಿಸರ ಒಡನಾಟದಿಂದ ಸಹಜವಾಗಿಯೇ ಬೆಳೆಯುತ್ತಾ ಅಲ್ಪ ಮಾನವರಾಗಿ ಪರಿರ್ವತನೆ ಆಗುತ್ತಾರೆ. ಆದರೆ ಉತ್ತಮ ಶಿಕ್ಷಣದ ಪಡೆಯುವ ಮೂಲಕ ಕುವೆಂಪು ಏರಿದ ವಿಶ್ವ ಮಾನವತೆಯ ಕಡೆಗೆ ಸಾಗುತ್ತಾನೆ ಎಂದು ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಕಾಸ್ ಹೆಗ್ಡೆ ಅಭಿಪ್ರಾಯಪಟ್ಟರು. ಕುಂದಾಪುರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಇಲ್ಲಿನ ಮಿನಿ ವಿಧಾನ ಸೌಧ, ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾಜದಲ್ಲಿ ಶಾಂತಿ, ಸೌಹಾದತೆ ಮರೆಯಾಗುತ್ತಿದ್ದು, ವಿಶ್ವ ಮಾನವ ಶ್ರೇಷ್ಠತೆ ಅರಿವು ಕಡಿಮೆ ಆಗುತ್ತಿದೆ. ಸಹೋದರತೆ, ಸಹಬಾಳ್ವೆ, ಸಂಯಮ, ಕೂಡಿ ಬಾಳಿವ ಕಲ್ಪನೆ ವಿಶ ಮಾನವ ಸ್ಥಾನದ ಮೆಟ್ಟಿಲಾಗಿದ್ದು, ಕುವೆಂಪು ಸಾಗಿಬಂದ ದಾರಿಯ ಅನುಸರಿಸುವುದರ ಮೂಲಕ ಸಾಮಾನ್ಯ ಕೂಡಾ ವಿಶ್ವಮಾನವ ಪಟ್ಟಕ್ಕೆ ಏರಲು ಸಾಧ್ಯೆ ಎಂದು ಹೇಳಿದರು. ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶಾಲವಾದ ಕರಾವಳಿ ತೀರ ಸೌಂದರ್ಯದ ನೆಲೆಬೀಡು. ಸರಕಾರ ಸಮುದ್ರಕ್ಕೆ ಕಲ್ಲು ಹಾಕಲು ನೀಡಿದ ಆದ್ಯತೆಯನ್ನು ಬೀಚ್ ಅಭಿವೃದ್ಧಿಗೆ ನೀಡಿಲ್ಲ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯಾದಂತೆ ಕರ್ನಾಟಕದಲ್ಲಿ ಈವರೆಗೂ ಆಗಿಲ್ಲ. ಹೀಗೆಂದವರು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ. ಬೀಜಾಡಿ-ಕೋಟೇಶ್ವರ ಹಳಅಳಿವೆ ಬೀಚ್‌ನಲ್ಲಿ ಕುಂದಾಪುರ ಊರ್‌ಮನಿ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ ಸುರೇಶ್ ಶೆಟ್ಟಿ, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ತಾ.ಪಂ ಸದಸ್ಯೆ ರೂಪಾ ಪೈ, ಕೋಟೇಶ್ವರ ಗ್ರಾಪಂ ಅದ್ಯಕ್ಷೆ ಜಾನಕಿ ಬಿಲ್ಲವ, ಬೀಜಾಡಿ ಗ್ರಾಪಂ ಅಧ್ಯಕ್ಷೆ ಸಾಕು ಬೀಜಾಡಿ, ಮೀನುಗಾರಿಕ ಅಭಿವೃದ್ದಿ ನಿಗಮ ಮಾಜಿ ಅಧ್ಯಕ್ಷ ಹೆರಿಯಣ್ಣ ಚಾತ್ರಬೆಟ್ಟು,  ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಮೊದಲಾದವರು ಉಪಸ್ಥಿತರಿದ್ದರು. ಕೋಟೇಶ್ವರ ಬೀಚ್ ಉತ್ಸವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ನಿರಂತವಾಗಿ ಶ್ರಮಿಸಲಾಗುತ್ತಿದೆ. ಸೋಮೇಶ್ವರ ಬೀಚ್ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಸರಕಾರದಿಂದ ಅನುದಾನ ನೀಡಲಾಗಿದ್ದು, ಮೊದಲ ಹಂತದ ಕಾಮಗಾರಿ ಈಗಾಗಲೇ ನಡೆದಿದ್ದು, ಎರಡನೇ ಹಂತದ ಅನುದಾನ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೆಸುಗೆ ಫೌಂಡೇಶನ್ ರಿ. ಬೈಂದೂರು, ಗ್ರಾಮ ಪಂಚಾಯತ್ ಪಡುವರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಜರುಗಿದ ಬೈಂದೂರು ಬೀಚ್ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೈಂದೂರು ತಾಲೂಕು ಹಂತ ಹಂತವಾಗಿ ಅಭಿವೃದ್ಧಿಯಾಗಲಿದ್ದು, ಆಡಳಿತಾತ್ಮಕ ಹಾಗೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು. ನಿವೃತ್ತ ಐ.ಎಫ್.ಎಸ್ ಅಧಿಕಾರಿ ಜಗನ್ನಾಥ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪಶ್ಚಿಮಘಟ್ಟ ಹಾಗೂ ಅರಬ್ಬಿ ಸಮುದ್ರದ ನಡುವೆ ಇರುವ ಸುಂದರ ಪ್ರದೇಶ ಮನಮೋಹಕವಾಗಿದ್ದು ಪ್ರಕೃತಿದತ್ತವಾಗಿ ಉತ್ತಮ ಪ್ರವಾಸಿ ತಾಣಗಳನ್ನು ಹೊಂದಿದೆ. ಇದರನ್ನು ಅಭಿವೃದ್ದಿಪಡಿಸುವ ಕೆಲಸ ಹೆಚ್ಚಾಗಿ ಆಗಬೇಕಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೆಸುಗೆ ಫೌಂಡೇಶನ್ ರಿ. ಬೈಂದೂರು, ಪಡುವರಿ ಗ್ರಾಮ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಸೋಮೇಶ್ವರದಲ್ಲಿ ಜರುಗುತ್ತಿರುವ ಬೈಂದೂರು ಬೀಚ್ ಉತ್ಸವ 2017ರ ವಿವಿಧ ಕಾರ್ಯಕ್ರಮಗಳು ಹಾಗೂ ಸ್ವರ್ಧೆಗಳಿಗೆ ಗಾಳಿಪಟ ಉತ್ಸವದ ಮೂಲಕ ಚಾಲನೆ ದೊರೆಯಿತು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬೈಂದೂರು ಸುತ್ತಲಿನ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಹಿನ್ನೆಡೆಯನ್ನು ಕಂಡಿದ್ದು ಆದರೆ ಈ ಉತ್ಸವದ ಮೂಲಕ ಅದಕ್ಕೊಂದು ವೇಗ ದೊರೆತಿದೆ ಎಂದರು. ಗಾಳಿಪಟ ಉತ್ಸವಕ್ಕೆ ಚಾಲನೆ ನೀಡುವ ಸಂದರ್ಭ ಗುಡೇಮನೆ ನಾಗಪ್ಪ ಶೇರುಗಾರ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಗಳಾಗಿ ಪಡುವರಿ ಗ್ರಾ.ಪಂ ಅಧ್ಯಕ್ಷೆ ದೀಪಾ ಶೆಟ್ಟಿ, ಪಡುವರಿ ಗ್ರಾ.ಪಂ.ಸದಸ್ಯರಾದ ಮಾಣಿಕ್ಯ ಹೋಬಳಿದಾರ್, ಎಸ್. ತಿಮ್ಮಪ್ಪ, ಶಿವರಾಮ ಪೂಜಾರಿ, ಸೋಡಿತಾರ್ ಸುಬ್ರಾಯ ಶೇರುಗಾರ್, ಸಂಜು ದೇವಾಡಿಗ, ಶ್ರೀ ರಾಮ ಭಜನಾ ಮಂಡಳಿ ಸೋಮೇಶ್ವರ ಇದರ ಅಧ್ಯಕ್ಷ ಪರಮೇಶ್ವರ, ಬೆಸುಗೆ…

Read More