ಕುಂದಾಪ್ರ ಡಾಟ್ ಕಾಂ ಸುದ್ದಿ.
ಭಾರತದಲ್ಲಿರುವ ಪ್ರಸಕ್ತ ಶಿಕ್ಷಣ ಪದ್ಧತಿಯೂ ಭಾರತೀಯ ಸಂಸ್ಕೃತಿ ಧಾರ್ಮಿಕತೆಯ ಬೆಳವಣಿಗೆಗೆ ಸ್ವಲ್ಪವೂ ಪೂರಕವಾಗಿಲ್ಲ. ಈ ಶಿಕ್ಷಣ ವಿದೇಶಿ ಶೂಟು ಬೂಟು ಸಂಸ್ಕೃತಿಯೊಂದಿಗೆ ಹಣ ಸಂಗ್ರಹಕ್ಕೆ ಮಾತ್ರ ಪೂರಕವಾಗಿದೆ ಅದಕ್ಕಾಗಿ ಭಾರತೀಯ ಶಿಕ್ಷಣ ಪದ್ಧತಿ ಆಮೂಲಾಗ್ರ ಬದಲಾವಣೆ ಆಗಬೇಕು. ಧಾರ್ಮಿಕ ಭೋದನೆಯ ಶಿಕ್ಷಣವನ್ನು ಶಿಕ್ಷಣ ಪದ್ಧತಿಯಲ್ಲಿ ಜೋಡಿಸುವ ಕಾರ್ಯ ಆಗಬೇಕು ಎಂದು ಹಾಲಾಡಿ ಪಂಚಾಂಗ ಕರ್ತು ವಿದ್ವಾನ್ ವಾಸುದೇವ ಜೋಯೀಸ್ ಹೇಳಿದರು,
ನಾಗೂರು ಓಡೆಯರಮಠ ಗೋಪಾಲಕೃಷ್ಣ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯ ಇವರ ೨೩ನೇಯ ವಾರ್ಷಿಕ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಪ್ರತಿ ಸಮಾಜಕ್ಕೂ ಸಂಘಟನೆಯ ಅಗತ್ಯವಿದೆ, ವ್ಯಕ್ತಿಗಳ ಮನಸ್ಸು ಮನಸ್ಸು ಒಂದಾಗಿ ಸಂಘಟನೆ ಮಾಡಬೇಕು, ಸಂಘಟನೆಯ ಸದುದ್ಧೇಶ, ಸತ್ಯ ಪ್ರಾಮಾಣೀಕತೆ ಜೊತೆಯಲ್ಲಿ ಧಾರ್ಮಿಕ ಶಿಕ್ಷಣ ನೋಡುವುದರೊಂದಿಗೆ ಪ್ರತಿ ಸಂಘಟನೆ ಯಶಸ್ವಿಯಾಗಲಿದೆ ಎಂದು ಹೇಳಿದರು.
ಉಪ್ಪುಂದ ವಲಯದ ಅಧ್ಯಕ್ಷ ಮಂಜುನಾಥ ಉಡುಪ ಸಮಾರಂಭದ ಅರ್ಧಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಮಹಿಳಾ ಅಧ್ಯಕ್ಷೆ ಪ್ರಪುಲ್ಲಾ ಎನ್. ಭಟ್, ವೇದಮೂರ್ತಿ ನಾಗರಾಜ ಐತಾಳ್, ಗೌರವಾಧ್ಯಕ್ಷ ಯು. ಹೆಚ್ ರಾಜರಾಮ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೈಂದೂರು ಶೆನೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚನ್ನಕೇಶವ ಉಪಾದ್ಯಾಯ ಹಾಗೂ ಆತಿಥ್ಯದ ಪ್ರಾಯೋಜಕರಾದ ಸರೋಜ ಉಡುಪ ಚಿಕ್ತಾಡಿ ಅವರನ್ನು ಸಮಾಜದ ಪರವಾಗಿ ಸನ್ಮಾನಿಸಲಾಯಿತು, ಉನ್ನತ ಶಿಕ್ಷಣ ಪಡೆಯುತ್ತಿರುವ ೨೫ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು, ಯುವವೇದಿಕೆ ಅಧ್ಯಕ್ಷ ಪ್ರಶಾಂತ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು, ಜೊತೆಕಾರ್ಯದಶಿ ಯು. ಸಂದೇಶ್ ಭಟ್ ಸ್ವಾಗತಿಸಿದರು, ಕಾರ್ಯದರ್ಶಿ ಗುರುರಾಜ್ ಹೆಬ್ಬಾರ್ ವಂದಿಸಿದರು
ಪೂರ್ವಾಹ್ನ ೨೩ನೇಯ ವಾರ್ಷಿಕ ಅಧಿವೇಶನವನ್ನು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷರಾದ ಟಿ.ಕೆ ಎಂ ಭಟ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾದ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಡಾ|| ಪ್ರಶಾಂತ್ ಭಟ್ ಕಮಲಶಿಲೆ ವಲಯದ ಕಾರ್ಯದರ್ಶಿ ಪೂರ್ಣೀಮಾ ಭಟ್, ಸಭೆ ಉದ್ಧೇಶಿಸಿ ಮಾತನಾಡಿದರು, ವಿಶೇಷ ಸಾಧನೆಮಾಡಿದ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಅಧ್ಯಕ್ಷ ಡಾ|| ಸುಬ್ರಹ್ಮಣ್ಯ ಭಟ್, ಜಿಲ್ಲಾ ಕೃಷಿ ಪಂಡಿತ್ ಪ್ರಶಸ್ತಿ ಪುರಸ್ಕೃತ ಎಚ್. ವೆಂಟೇಶ ರಾವ್, ಜೆಡಿಎಸ್ ಬೈಂದೂರು ಬ್ಲಾಕ್ ಅಧ್ಯಕ್ಷ ಯು. ಸಂದೇಶ ಭಟ್, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿವರಾಮ ಮದ್ಯಸ್ಥ ಅವರನ್ನು ಸಮಾಜದ ಪರವಾಗಿ ಸನ್ಮಾನಿಸಲಾಯಿತು ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ರಾಜ್ಯಕ್ಕೆ ೩ನೇ ರ‍್ಯಾಂಕ್ ವಿಜೇತ ರೋಹನ್‌ರಾವ್ ಉಪ್ಪುಂದ ಪಿ.ಯು ವಿಭಾಗದಲ್ಲಿ ಚಿನ್ನಯಿ ಕಾರಂತ ಅವರನ್ನು ಸಹ ನಗದು ಸ್ಮರಣಿಕೆ ನೀಡಿ ಗೌರವಿಸಲಾಯಿತು, ವಲಯಾಧ್ಯಕ್ಷ ಒಡೆಯರ ಮಠ ಮಂಜುನಾಥ ಉಡುಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ರಾಜಾರಾಮ್ ಭಟ್, ಕಾರ್ಯದರ್ಶಿ ಗುರುರಾಜ್ ಹೆಬ್ಬಾರ್ ವೇದಿಕೆಯಲಲಿ ಉಪಸ್ಥತರಿದ್ದರು. ವಾರ್ಷಿಕ ಮಹಾಸಭೆಯಲ್ಲಿ ವರದಿ ಆಯ-ವ್ಯಯ ಮಂಡಣೆಮಾಡಿ ಅನೊಮೋದನೆ ಪಡೆಯಲಾಯಿತು ಹಾಗೂ ಮುಂದಿನ ೨ ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಿಗೆ ನಿವೃತ್ತ ಮುಖ್ಯೋಪಾದ್ಯಾಯ ಬಿ. ವಿಶ್ವೇಶ್ವರ ಅಡಿಗ, ಕಾರ್ಯದರ್ಶಿ ರತ್ನಕರ ಉಡುಪ ಸಹಿತ ಹೊಸ ಸಮಿತಿಯನ್ನು ರಚಿಸಲಾಯಿತು.
ಕುಮಾರಿ ಸಂಜಿತಾ ಪ್ರಾರ್ಥಿಸಿದರು, ಕೋಶಾಧ್ಯಕ್ಷ ಅರುಣ ಕುಮಾರ್ ಶ್ಯಾನುಬೋಗ್ ಸ್ವಾಗತಿಸಿದರು, ಅನ್ನಪೂರ್ಣ ಉಡುಪ, ವೆಂಕಟೇಶ ಮೂರ್ತಿ ವೈದ್ಯ, ಪ್ರಶಾಂತ ಮಯ್ಯ ಕಾರ್ಯಕ್ರಮ ನಿರೂಪಿಸಿದರು, ಮಾಜಿ ಕೋಶಾಧ್ಯಕ್ಷ ಯು. ಸಂದೇಶ ಭಟ್ ವಂದಿಸಿದರು.