ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗುಜ್ಜಾಡಿ ಬೆನ್ಗೆರೆ ಶ್ರೀ ಜೆಟ್ಟಿಗೇಶ್ವರ ಮತ್ತು ಭದ್ರ ಮಹಾಂಕಾಳಿ ಸಹಪರಿವಾರ ಗರಡಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಬಾಬು ಜೆ. ಪೂಜಾರಿ ಉಪ್ಪುಂದ ಅವರು ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪುಟ್ಟಯ್ಯ ಪೂಜಾರಿ ಹೊರ್ಕೊಡು ಮನೆ, ಕಾರ್ಯದರ್ಶಿಯಾಗಿ ನರಸಿಂಹ ಪೂಜಾರಿ ಅರೆಶಿರೂರು, ರಾಮ ಪೂಜಾರಿ ಯಡ್ತರೆ, ಸುಧಾಕರ್ ಪೂಜಾರಿ ಹೊರ್ಕೊಡು, ಸತೀಶ್ ಪೂಜಾರಿ ವಕ್ವಾಡಿ, ಜೋಗಿ ಪೂಜಾರಿ ತಾರಾಪತಿ, ರಾಮ ಪೂಜಾರಿ ಬೆಟ್ಯಾನಿ, ಗೌರವ ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಚಿತ್ತೂರು, ಉಪಾಧ್ಯಕ್ಷರಾಗಿ ಮಹಾಬಲ ದೇವಾಡಿಗ ಬೆನ್ಗೆರೆ, ಮಾಧವ ಪೂಜಾರಿ ಮಲಗದ್ದೆ ಮನೆ ಬಡಾಕೆರೆ, ಅಚ್ಚುತ ನಾಯಕವಾಡಿ, ಅನಂತ ಕಾರ್ವಿ ಮಡಿ, ಗಣಪತಿ ಪಟೇಲ್, ಗಣಪತಿ ಪೂಜಾರಿ ಉಪ್ಪುಂದ, ಗೌರವ ಸಲಹೆಗಾರಾಗಿ ರಾಮಚಂದ್ರ ಮಯ್ಯ, ಮಹೇಶ್ ಮಯ್ಯ, ಕೃಷ್ಣ ಪೂಜಾರಿ ಹುಬ್ಬಳ್ಳಿ, ಎಸ್. ಕೆ. ಪೂಜಾರಿ ಗೋವಾ, ರಾಮ ಪೂಜಾರಿ ಬೆಂಗಳೂರು, ದುಗ್ಗಪ್ಪ ಪೂಜಾರಿ ಮುಂಬೈ, ಬಾಬೇಂದ್ರ ಪೂಜಾರಿ ಮುಂಬೈ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೆಲ್ಕೋ ಎನರ್ಜಿ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಮಣಿಪಾಲ, ತೋಟಗಾರಿಕೆ ಇಲಾಖೆ ಕುಂದಾಪುರ, ಪಶು ವೈದ್ಯಾಧಿಕಾರಿಗಳು ಕುಂದಾಪುರ ಮತ್ತು ವರ್ಕಿಂಗ್ ಚಿಲ್ಡ್ರನ್(ಸಿಡಬ್ಲ್ಯೂಸಿ) ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಸ್ಥಳೀಯ ಸಮುದಾಯಕ್ಕೆ ಸ್ವ ಉದ್ಯೋಗದ ಮಾಹಿತಿ ಕಾರ್ಯಾಗಾರ ನಮ್ಮಭೂಮಿಯಲ್ಲಿ ನಡೆಯಿತು. ಸೆಲ್ಕೋ ಎನರ್ಜಿ ಸಂಸ್ಥೆಯ ಗುರುಪ್ರಕಾಶ ಶೆಟಿ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯ ಉಪನ್ಯಾಸಕಿ ನವ್ಯ, ಸಿಡಬ್ಲ್ಯೂಸಿ ಸಂಸ್ಥೆಯ ನಿರ್ದೇಶಕರಾದ ಶಿವಮೂರ್ತಿ ಭಂಡಾರ್ಕರ್ ಮತ್ತು ನಮ್ಮ ಭೂಮಿಯ ಮಕ್ಕಳ ಪಂಚಾಯತ್ನ ಅಧ್ಯಕ್ಷರಾದ ಪ್ರೀತಮ್ ಸೇರಿ ಗಿಡಕ್ಕೆ ಗೊಬ್ಬರ ಮತ್ತು ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೇಲ್ಕೋ ಎನರ್ಜಿಯ ಗುರುಪ್ರಕಾಶ ಶೆಟ್ಟಿ ಮಾತನಾಡಿ, ಹಳ್ಳಿಯಲ್ಲಿ ದಿನನಿತ್ಯದ ಬಳಕೆಯ ವಸ್ತುಗಳನ್ನು ಪಟ್ಟಿ ಮಾಡಿ ಅದರಲ್ಲಿ ಹೆಚ್ಚು ಹೆಚ್ಚು ವಸ್ತುಗಳು ಹಳ್ಳಿಯಲ್ಲಿಯೇ ಉತ್ಪಾದಿಸುವಂತಾದರೆ ಹಳ್ಳಿಯ ಜನ ವಲಸೆ ಹೊಗುವುದನ್ನು ತಪ್ಪಿಸಬಹುದು ಮತ್ತು ಹಳ್ಳಿಯಲ್ಲಿಯೇ ಸ್ವಾವಲಂಬಿ ಜೀವನ ನಡೆಸಬಹುದು ಎಂದರು. ಮಣಿಪಾಲ ಮಣಿಪಾಲ ಕೆನರಾ ಬ್ಯಾಂಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಅನ್ನಭಾಗ್ಯ ಯೋಜನೆಯಡಿ ದುರ್ಬಲ ಕುಟುಂಬಗಳಿಗೆ ನೀಡುವ ಅಂತ್ಯೋದಯ ಮತ್ತು ಆದ್ಯತಾ (ಬಿಪಿಎಲ್) ಕಾರ್ಡನ್ನು ಆರ್ಥಿಕವಾಗಿ ಸಧೃಡವಾದ ಕೆಲವು ಕುಟುಂಬಗಳು ಆದ್ಯತಾ (ಬಿಪಿಎಲ್) ಕಾರ್ಡ್ ಪಡೆಯುವ ಬಗ್ಗೆ ಮಾನದಂಡವನ್ನು ಉಲ್ಲಂಘಿಸಿ, ಸುಳ್ಳು ಮಾಹಿತಿ ನೀಡಿ, ಅಂತ್ಯೋದಯ ಮತ್ತು ಆದ್ಯತಾ (ಬಿಪಿಎಲ್) ಕಾರ್ಡ್ ಪಡೆದುಕೊಂಡಿರುವುದು ಕಂಡುಬಂದಿದ್ದು, ಅಂತಹ ಅನರ್ಹರು ಪಡೆದಿರುವ ಕಾರ್ಡನ್ನು ಪತ್ತೆಹಚ್ಚಿ ಆದ್ಯತೇತರ ಪಡಿತರ ಚೀಟಿಯನ್ನಾಗಿ ಪರಿವರ್ತಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರ್ಥಿಕವಾಗಿ ಸಧೃಢವಾಗಿರುವ ಕುಟುಂಬಗಳು ಹೊಂದಿರುವ ಕಾರ್ಡನ್ನು ಸ್ವಯಂ ಪ್ರೇರಿತವಾಗಿ ಹಿಂದಿರುಗಿಸಲು ಏಪ್ರಿಲ್ 15 ಕೊನೆಯ ದಿನವಾಗಿದೆ. ತಪ್ಪಿದಲ್ಲಿ ಸರ್ಕಾರ ನಿಗಧಿಪಡಿಸಿರುವ ಮಾನದಂಡ ವಿರುದ್ಧವಾಗಿ ಪಡೆದಿರುವ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವುದು ಕಾನೂನು ಬಾಹಿರವಾಗಿದ್ದು, ಅಂತವರ ವಿರುದ್ಧ ಕ್ರಮ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೆಸಿಐ ಬೈಂದೂರು ಸಿಟಿ ವತಿಯಿಂದ ಸೆಲ್ಯೂಟು ಸೈಲೆಂಟ್ ವರ್ಕರ್ ಕಾರ್ಯಕ್ರಮದಡಿ ಯೋಧ ಮೋಹನ ದೇವಾಡಿಗ ಅವರ ಧರ್ಮಪತ್ನಿ ಯಶೋಧ ಅವರನ್ನು ಸನ್ಮಾನಿಸಲಾಯಿತು. ಜೆಸಿಐ ಪೂರ್ವ ಅಧ್ಯಕ್ಷರಾದ ಪ್ರಿಯದರ್ಶಿನಿ ಬೆಸ್ಕೂರ್ ಅವರ ಮನೆಯ ಸಭಾಂಗಣದಲ್ಲಿ ಗುರುತಿಸಿ ಗೌರವಿಸಲಾಯಿತು, ಜೆಸಿಐ ಬೈಂದೂರು ಸಿಟಿ ಅಧ್ಯಕ್ಷರಾದ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು, ಈ ಸಂದರ್ಭದಲ್ಲಿ ಜೆಸಿ ವಲಯ ಉಪಾಧ್ಯಕ್ಷರಾದ ನಾಗೇಶ್ ನಾವಡ, ಜೆಸಿ ಬೈಂದೂರು ಸಿಟಿ ವಲಯಾಧಿಕಾರಿ ಮಣಿಕಂಠ ಎಸ್ ದೇವಾಡಿಗ, ಉಪಾಧ್ಯಕ್ಷೆ ಸೌಮ್ಯ, ಘಟಕದ ಕಾರ್ಯದರ್ಶಿ ಸವಿತಾ ದಿನೇಶ್ ಗಾಣಿಗ, ಜೊತೆ ಕಾರ್ಯದರ್ಶಿ ಗೀತಾ ಬೈಂದೂರ್, ಜೇಸಿರೇಟ್ ಕಾರ್ಯದರ್ಶ ಗುಲಾಬಿ ಮರವಂತೆ, ಸದಸ್ಯರಾದ ಸಕ್ಕುಕಲ್ಮಕ್ಕಿ, ರಾಘವೇಂದ್ರ ಹೊಳ್ಳ, ರಾಘವೇಂದ್ರ ಶೇಟ್, ಸತೀಶ್ ದೇವಾಡಿಗ, ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು, ಉದ್ದಿಮೆಗಳು, ಕಾರ್ಖಾನೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ , ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸ್ತುತ ಕನ್ನಡ ಕಾಯಕ ವರ್ಷವನ್ನು ಆಚರಿಸಲಾಗುತ್ತಿದ್ದು, ಈ ಕುರಿತು ಸರ್ಕಾರದಿಂದ ನೀಡಿರುವ ಅಧಿಕೃತ ಚಿಹ್ನೆಯನ್ನು ಎಲ್ಲಾ ಸರ್ಕಾರಿ ಇಲಾಖೆಗಳು ತಮ್ಮ ದೈನಂದಿನ ಪತ್ರ ವ್ಯವಹಾರಗಳಲ್ಲಿ ಕಡ್ಡಾಯವಾಗಿ ಬಳಸುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಇಲಾಖೆಗಳು ತಮ್ಮ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ನಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು, ಗಣಕಯಂತ್ರದಲ್ಲಿ ಸಂಪೂರ್ಣವಾಗಿ ಕನ್ನಡ ತಂತ್ರಾಶವನ್ನು ಅಳವಡಿಸಬೇಕು, ವಾಹನಗಳಲ್ಲಿ ಸಂಖ್ಯಾಫಲಕ, ಸರ್ಕಾರಿ ವಾಹನಗಳ ನಾಮಫಲಕಗಳಲ್ಲಿ , ಮೈಲುಗಳಲ್ಲಿ, ಹೆದ್ದಾರಿ ಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು , ಜಿಲ್ಲಾ ಪಂಚಾಯತ್ ನ ಕೆ.ಡಿ.ಪಿ ಸಭೆಗಳಲ್ಲಿ ಕನ್ನಡವನ್ನು ಒಂದು ಅಂಶವಾಗಿ ಚರ್ಚೆ ಮಾಡಬೇಕು ಎಂದರು. ಜಿಲ್ಲೆಯ ಎಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ(2017-18 ಸ್ಫೂರ್ತಿ ಡಿ.ಸಿ. ಅಖಿಲ ಭಾರತ ಮಟ್ಟದಲ್ಲಿ 24ನೇ ರ್ಯಾಂಕ್ ಗಳಿಸಿದ್ದಾರೆ. ಇಂಟರ್ಮೀಡಿಯೆಟ್ ಪರೀಕ್ಷೆಯ ಗ್ರೂಪ್1 ಮತ್ತು ಗ್ರೂಪ್1 ಎರಡೂ ವಿಭಾಗಗಳಲ್ಲಿ ಒಟ್ಟು575 ಅಂಕಗಳನ್ನು ಗಳಿಸುವ ಮೂಲಕ ಒಂದೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಸ್ಪೂರ್ತಿ ತಮ್ಮ ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹಾಗೂ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ಹೆದ್ದಾರಿ ರಸ್ತೆ ಮತ್ತು ಸೇತುವೆ ಸುಧಾರಣೆ ಕಾಮಗಾರಿ ಗಳ ಲೆಕ್ಕಶೀರ್ಷಿಕೆ 5054-03-337-0-17-154ರಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿವಮೊಗ್ಗ – ಕುಂದಾಪುರ ಸಂಪರ್ಕ ರಸ್ತೆ ಅಭಿವೃದ್ಧಿಗೆ ಒಟ್ಟು ರೂ.12 ಕೋಟಿ ಮೊತ್ತದ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ-52ರಲ್ಲಿ ಕುಂದಾಪುರ ತಾಲೂಕಿನಲ್ಲಿ ಕಿ.ಮೀ.46.40 ರಿಂದ 48.40 ರವರೆಗೆ ರಸ್ತೆ ಅಭಿವೃದ್ದಿ ಹಾಗೂ ಬಾಳೆಬರೆ ಘಾಟ್ ನಿಂದ 7 ಕಿ ಮಿ. ವೈಟ್ ಟ್ಯಾಪಿಂಗ್ ಕಾಮಗಾರಿಗೆ ರೂ.300.00 ಲಕ್ಷ, ಶಿವಮೊಗ್ಗ ತಾಲೂಕು ಹಲಗೇರಿ-ಹುಲಿಕಲ್ ರಸ್ತೆ(ಎಸ್ ಹೆಚ್-26) ರ ಸರಾಪಳಿ 75.62 ರಿಂದ 86.32 ಕಿ ಮೀ ವರೆಗೆ ಆಯ್ದ ಭಾಗಗಳಲ್ಲಿ ಡಾಂಬರೀಕರಣ ಮಾಡಿ ಅಭಿವೃದ್ದಿ ಪಡಿಸುವ ಕಾಮಗಾರಿ ಹಾಗೂ ಅಯನೂರಿನಿಂದ ಸುಡುರುವರೆಗೆ ಕಾಮಗಾರಿ ರೂ.300.00 ಲಕ್ಷ, ಹೊಸನಗರ ತಾಲೂಕು ಅಲಗೆರಿಯಿಂದ ಹಾಲ್ಕಲ್ ರಾಜ್ಯ ಹೆದ್ದಾರಿ 26ರ ಸರಪಳಿ 86.32 ರಿಂದ 122.50 ಕಿ.ಮೀ. ವರೆಗೆ ಹಾಗೂ ಸುಡೂರಿನಿಂದ ಹೊಸನಗರ ಪಟ್ಟಣದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಕಾಲೇಜಿನ ಕ್ಯಾಂಪಸ್ ನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಯಿತು. ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಸುರತ್ಕಲ್ ಎನ್ಐಟಿಕೆ ಯ ಪ್ರಾಧ್ಯಾಪಕರಾದ ಪ್ರೊ. ನರೇಂದ್ರನಾತ್ ಎಸ್., ಪ್ರತಿಯೊಬ್ಬರೂ ತಮ್ಮದೇ ಆದ ಧ್ಯೇಯ ಮತ್ತು ಗುರಿಯನ್ನು ಅಳವಡಿಸಿಕೊಂಡು ಅದನ್ನು ಸಾಕಾರಗೊಳಿಸುವ ಕಡೆ ಪ್ರಯತ್ನಶೀಲರಾಗಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರ ರಾವ್ ಮದಾನೆ ಮಾತನಾಡಿ, ಕೆಲಸ ಮಾಡುವ ಮನಸ್ಥಿತಿ ಹಾಗೂ ಶ್ರದ್ಧೆ ಇಟ್ಟುಕೊಂಡು ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು. ಕಾಲೇಜಿನ ಪ್ಲೇಸ್ಮೆಂಟ್ ಡೀನ್ ಸತ್ಯನಾರಾಯಣ, ಅಭ್ಯರ್ಥಿಗಳ ಕೌಶಲ್ಯ ಹಾಗೂ ಪ್ರತಿಭೆಗೆ ತಕ್ಕಂತಹ ಕಂಪೆನಿಗಳನ್ನು ಆಯ್ದುಕೊಳ್ಳಲು ಸಲಹೆ ನೀಡಿದರು ಮೇಳದಲ್ಲಿ ಹೆಸರಾಂತ ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪೆನಿಗಳು ಪಾಲ್ಗೊಗೊಂಡಿದ್ದು ಉತ್ತಮ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದೇವೆ, ಮಾರ್ಚ್ 27ರಂದು ಉದ್ಯೋಗ ಮೇಳದ ಎರಡನೇ ಆವ್ರತ್ತಿ ಇರಲಿದೆ ಹಾಗೂ ನೇರ ಸಂದರ್ಶನ ಇರಲಿದ್ದು, ಉದ್ಯೋಗಾಕಾಂಕ್ಷಿಗಳು ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಉದ್ಯೋಗ ಮೇಳದ ಸಹಭಾಗಿತ್ವವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರ 60ನೆಯ ಕೃತಿ ‘ಹುಲಿಯಪ್ಪ ಮೇಷ್ಟ್ರು ಬಿಡುಗಡೆ ಮಾ.28ರಂದು ಸಂಜೆ 3.30ಕ್ಕೆ ಕುಂದಾಪುರದ ಪಾರಿಜಾತ ಹೋಟೆಲ್ ಸ್ನೇಹಾ ಸಭಾಂಗಣದಲ್ಲಿ ನಡೆಯಲಿದೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಸಾಹಿತಿಗಳಾದ ಬೇಳಗೊಡು ರಮೇಶ್ ಭಟ್ ಕೃತಿ ಪರಿಚಯಿಸಲಿದ್ದು, ಎ. ಎಸ್. ಎನ್. ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ,ಡಯಟ್ ಉ.ಪ್ರಾಂಶುಪಾಲ ಅಶೋಕ್ ಕಾಮತ್, ,ಶಿಕ್ಷಣಾಧಿಕಾರಿ ಪದ್ಮನಾಭ, ಸದಾನಂದ ಬೈಂದೂರು ,ಸುಬ್ರಹ್ಮಣ್ಯ ಶೆಟ್ಟಿ ಭಾಗವಹಿಸಲಿದ್ದಾರೆ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಾರಾಯಣ ವಿಶೇಷ ಶಾಲೆಯ ಮಕ್ಕಳ ಷೋಷಕರಿಗಾಗಿ ಆರೋಗ್ಯ ಮಾಹಿತಿ ಅರಿವು ಕಾರ್ಯಾಗಾರ ಪಾಲಕರ ಸಭೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಡಾ. ಕಾಶಿನಾಥ್ ಪೈ , ಗಂಗೊಳ್ಳಿ ಇವರು ಎಪಿಲೆಪ್ಸಿ (ಮೂರ್ಛೆ ರೋಗ)ದ ಬಗ್ಗೆ ಮಾಹಿತಿಯನ್ನು ನೀಡಿದರು. ಅದರಲ್ಲೂ ವಿಶೇಷ ಮಕ್ಕಳಲ್ಲಿ ಈ ಕಾಯಿಲೆ ಕಂಡು ಬಂದಾಗ ತೆಗೆದುಕೂಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮತ್ತು ವೈದ್ಯಕೀಯ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಪೋಷಕರ ವಿವಿಧ ಪ್ರಶ್ನೆಗಳಿಗೆ ಸೂಕ್ತವಾದ ವಿವರಣೆಯನ್ನು ನೀಡಿ ಸಂದೇಹಗಳಿಗೆ ಪರಿಹಾರವನ್ನು ಸೂಚಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ದಾನಿಗಳಾದ ಕಾರ್ತಿಕೇಯ ಶಿರೂರು ಹಾಗೂ ಕಮಲಬಾಯಿ ಟ್ರಸ್ಟ್ ನ ಜೀವಿತೇಶ್ವರ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುರೇಶ್ ತಲ್ಲೂರು ಸ್ವಾಗತಿಸಿದರು, ಟ್ರಸ್ಟೀ ವಸಂತ ಶಾನುಭಾಗ ವಂದಿಸಿದರು. ಮುಖ್ಯ ಶಿಕ್ಷಕಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು.
