Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೆಸುಗೆ ಫೌಂಡೇಶನ್ ರಿ. ಬೈಂದೂರು, ಗ್ರಾಮ ಪಂಚಾಯತ್ ಪಡುವರಿ, ಉಡುಪಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಬೈಂದೂರು ಸೋಮೇಶ್ವರ ಬೀಚ್ನಲ್ಲಿ ಡಿಸೆಂಬರ್ 28 ಹಾಗೂ 29ರಂದು ಬೈಂದೂರು ಬೀಚ್ ಉತ್ಸವ ಜರುಗಲಿರುವ ಬೀಚ್ ಉತ್ಸವಕ್ಕೆ ಕೊನೆ ಕ್ಷಣದ ಸಿದ್ಧತೆಗಳು ಜರುಗುತ್ತಿವೆ. ಬೈಂದೂರಿನಲ್ಲಿ ಪ್ರಪ್ರಥಮ ಭಾರಿಗೆ ಆಯೋಜನೆಗೊಂಡಿರುವ ಬೈಂದೂರು ಬೀಚ್ ಉತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರೆಯುತ್ತಿದ್ದು, ಪಡುವರಿ ಸೋಮೇಶ್ವರ ಕಡಲತೀರ ಸಿಂಗರಿಸಿಕೊಳ್ಳುತ್ತಿದೆ. ಉತ್ಸವಕ್ಕಾಗಿ ಬೀಚ್ ಪರಿಸರವನ್ನು ಸ್ವಚ್ಛಗೊಳಿಸಲಾಗಿದ್ದು, ವೇದಿಕೆ, ಪ್ರದರ್ಶನ ಮಳಿಗೆಗಳು, ಅಮ್ಯೂಸ್ ಮೆಂಟ್ ಪಾರ್ಟ್ ಮುಂದಾದವುಗಳ ಜೋಡಣೆಯ ಅಂತಿಮ ಹಂತದ ಸಿದ್ಧತೆ ನಡೆದಿದೆ. ಸೋಮೇಶ್ವರದಿಂದ ಅಳಿವೆಯ ತನಕ ವಿದ್ಯುದೀಪಗಳ ಅಲಂಕಾರ, ಬಣ್ಣದ ಚಿತ್ತಾರದಿಂದ ಬೀಚ್ ಪರಿಸರ ಶುಭ್ರವಾಗಿ ಕಂಗೊಳಿಸುತ್ತಿದೆ. ದಿ. 28 ಡಿಸೆಂಬರ್ 2017ರ ಗುರುವಾರ ಬೆಳಿಗ್ಗೆ 9 ಗಂಟೆಗೆ ಗಾಳಿಪಟ ಉತ್ಸವ ಸ್ವರ್ಧೆಗೆ ಚಾಲನೆ, 9:30ಕ್ಕೆ ಸೂಪರ್ ಸೆಲ್ಫಿ ಸ್ವರ್ಧೆಗೆ ಚಾಲನೆ, 10ಗಂಟೆಗೆ ಮರಳುಶಿಲ್ಪ ಅನಾವರಣ, 10:30ಕ್ಕೆ ಚಿತ್ರಸಿರಿ, ಚಿತ್ರಕಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರಿಪೂರ್ಣತೆ ಮತ್ತು ಪರಿಪಕ್ವತೆ ಸಾಧನೆ ಎಂಬ ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳು ತಮ್ಮ ಶಾಲಾ ಮತ್ತು ಕಾಲೇಜು ಹಂತಗಳಲ್ಲಿ ವಿಷಯವಾರು ಪರಿಕಲ್ಪನೆಗಳನ್ನು ಮಾತ್ರ ಕರಗತ ಮಾಡಿಕೊಳ್ಳದೇ, ಜೀವನದ ಮೌಲ್ಯದ ಬಗ್ಗೆ ಸಂಪೂರ್ಣವಾದ ಅರಿವನ್ನು ತಂದುಕೊಳ್ಳಬೇಕು. ಯಾವ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ವಿಫುಲವಾದ ಅವಕಾಶವನ್ನು ಹಾಗೂ ವೇದಿಕೆಯನ್ನು ನಿರ್ಮಾಣಮಾಡಿಕೊಡುತ್ತದೆಯೋ ಅಂತಹ ಶಿಕ್ಷಣ ಸಂಸ್ಥೆ ಸಮಾಜದ ಮುಂದಿನ ಆಶೋತ್ತರಗಳನ್ನು ಈಡೇರಿಸಲು ಉತ್ತಮ ವೇದಿಕೆಯಾಗುತ್ತದೆ ಎಂದು ಗುರುಕುಲ ವಿದ್ಯಾಸಂಸ್ಥೆಯ 12ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಎಮ್.ಜಿ.ಎಮ್ ಕಾಲೇಜು ಉಡುಪಿ ನಿರ್ವತ್ತ ಪ್ರಾಂಶುಪಾಲರು ಕುಸುಮ ಕಾಮತ್ ತಮ್ಮ ಅನುಭವನ್ನು ಹಂಚಿಕೊಂಡರು. ಗುರುಕುಲ ವಿದ್ಯಾಸಂಸ್ಥೆಯ ವಿಶಾಲವಾದ ಆವರಣದಲ್ಲಿ ರಂಗು ರಂಗಿನ ಬೆಳಕಿನ ನಡುವೆ ತನ್ನ 12ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಶ್ರೀ.ಬಸ್ರೂರು ಅಪ್ಪಣ್ಣ ಹೆಗ್ಡೆ ರವರು ವಹಿಸಿದ್ದರಲ್ಲದೇ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಗುರುಕುಲ ಹೇಗೆ ಸಮಾಜಮುಖಿ ಶಿಕ್ಷಣ ಸಂಸ್ಥೆಯಾಗುದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಸುಮ ಫೌಂಡೇಶನ್ ನಾಗೂರು ಸಾರಥ್ಯದಲ್ಲಿ ಜರುಗುತ್ತಿರುವ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ಕುಸುಮಾಂಜಲಿ-2017’ ನಾಗೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿದರು. ಎಸ್.ಡಿ.ಪಿ.ಟಿ. ಪ್ರಥಮ ದರ್ಜೆ ಕಾಲೇಜು ಕಟೀಲು ಇಲ್ಲಿನ ಪ್ರಾಶುಂಪಾಲರಾದ ಎಮ್. ಬಾಲಕೃಷ್ಣ ಶೆಟ್ಟಿ ಇವರು ದಿಕ್ಸೂಚಿ ಭಾಷಣ ಮಾಡಿ ಸಂಸ್ಕೃತಿ ಹಾಗೂ ಕಲೆಯ ಉಳಿಯುವಿಕೆಗೆ ಕುಸುಮ ಫೌಂಡೇಶನ್‌ನ ಕೊಡುಗೆಯನ್ನು ಶ್ಲಾಘಿಸಿದರು. ಸಂಸ್ಥೆಯು ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಕೊಡಮಾಡುವ ಪ್ರತಿಷ್ಠಿತ ‘ಕುಸುಮಶ್ರೀ’ ಪ್ರಶಸ್ತಿಯನ್ನು ಪ್ರೊ. ಎ.ವಿ. ನಾವಡ, ನಿವೃತ್ತ ಪ್ರಾಧ್ಯಾಪಕರು ಮತ್ತು ಡೀನ್ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ಹಾಗೂ ಡಾ. ಗಾಯತ್ರಿ ನಾವಡ, ಸಂಶೋಧಕರು ಮತ್ತು ವಿಮರ್ಶಕರು, ಮಂಗಳೂರು ದಂಪತಿಗಳಿಗೆ ಇವರು ಜಾನಪದ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ ಪ್ರಧಾನ ಮಾಡಿದರು. ಅವರು ಮಾತನಾಡಿ ಜಾನಪದ ಕಲೆ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ, ಈ ನಿಟ್ಟಿನಲ್ಲಿ ಕುಸುಮ ಸಂಸ್ಥೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ಕಾರ್ಯಕ್ರಮದ ಚಾನಲ್ ಪಾರ್ಟನರ್ ಮುಂಬೈನ ಶುಭಸಾಗರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸುತ್ತಲಿನ ಸಮಸ್ಯೆ, ತಲ್ಲಣಗಳಿಗೆ ಸ್ಪಂದಿಸಿ ಸಮಾಜವನ್ನು ಎಚ್ಚರಿಸುವ ಜೊತೆಗೆ ವಿಘಟನೆಯ ಕಾಲಘಟ್ಟದಲ್ಲಿಯೂ ಎಲ್ಲರನ್ನೂ ಬೆಸೆಯುವ ಬಹುಮುಖ್ಯ ಮಾಧ್ಯಮವಾಗಿ ರಂಗಭೂಮಿ ಬೆಳೆದಿದೆ ಎಂದು ರಂಗ ಕಲಾವಿದೆ, ಸಾಹಿತಿ ಮಮತಾ ಅರಸಿಕೆರೆ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ನಡೆಯುತ್ತಿರುವ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗಸುರಭಿ ೨೦೧೭ ನಾಟಕ ಸಪ್ತಾಹದ ಎರಡನೇ ದಿನ ಏಣಗಿ ಬಾಳಪ್ಪ ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಬಳಿಕ ಮಾತನಾಡಿದರು. ಸಿನೆಮಾ, ಧಾರಾವಾಹಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಬಗೆಯ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿರುವ ಅಂಶಗಳು ಸಮಾಜವನ್ನು ಕಲುಷಿತಗೊಳಿಸಿರುವ ಹೊತ್ತಿನಲ್ಲಿ ಕ್ಷೇತ್ರದ ವಿಚಾರಗಳನ್ನು ಒಳಗೊಂಡಿರುವ ರಂಗಭೂಮಿ ಪರಿಹಾರ ಆಗಬಲ್ಲದು. ದಾರಿ ತಪ್ಪುತ್ತಿರುವ ಯುವಕ ಸಮುದಾಯ ರಂಗಭೂಮಿಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳವ ಅಗತ್ಯವೂ ಇದೆ ಎಂದರು. ಈ ಸಂದರ್ಭ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಅರಸಿಕೆರೆಯ ಡಾ| ಹೆಚ್. ಆರ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಸಿದ್ಧಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ (೫೬) ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಾರಣ್ಣ ಅಂತಲೇ ಜನಜನಿತರಾಗಿದ್ದರು. ಹಾಲಾಡಿ ಶ್ರೀ ಮರ್ಲಚಿಕ್ಕು ದೇವಸ್ಥಾನದ ಧರ್ಮದರ್ಶಿಯಾಗಿದ್ದರು, ಹಾಲಾಡಿ ಯಕ್ಷಗಾನ ಮೇಳದ ಸಂಚಾಲಕರಾಗಿದ್ದರು. ಕಳೆದ ಭಾರಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಿದ್ಧಾಪುರ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದು ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಅವಿವಾಹಿತರಾಗಿದ್ದ ಅವರು ಕುಟುಂಬಿಕರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ಸಮಷ್ಠಿಯ ಕಲೆ. ಒಬ್ಬರಿಂದ ಅದು ಪರಿಪೂರ್ಣಗೊಳ್ಳಲು ಸಾಧ್ಯವಿಲ್ಲ. ಆಧುನಿಕ ಯುಗದಲ್ಲಿ ನಮ್ಮ ನಮ್ಮ ನಡುವೆ ಕಟ್ಟಿಕೊಂಡಿರುವ ಗೋಡೆಯನ್ನು ತೊಡೆದುಹಾಕಿ, ರಂಗ ಉತ್ಸವಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಮಹತ್ತರ ಕೆಲಸ ರಂಗಭೂಮಿಯಿಂದಾಗುತ್ತಿದೆ ಎಂದು ಬರಹಗಾರ್ತಿ, ರಂಗ ನಿರ್ದೇಶಕಿ ಅಭಿಲಾಷಾ ಹಂದೆ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ನಡೆಯುತ್ತಿರುವ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗಸುರಭಿ ೨೦೧೭ ನಾಟಕ ಸಪ್ತಾಹದಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿ ಇತಿಹಾಸದಲ್ಲಿ ಎದುರಾದ ಬಿಕ್ಕಟ್ಟುಗಳಿಗೆ ನಾಟಕಗಳ ಮೂಲಕ ಸಂಚಲನ ಮೂಡಿಸಿ, ಜನರನ್ನು ಜಾಗೃತಿಗೊಳಿಸಿದ ಹೆಗ್ಗಳಿಕೆ ರಂಗಭೂಮಿಯದ್ದು. ಕಲೆ ಮತ್ತು ಸಾಹಿತ್ಯ ಮನುಷ್ಯನ ಬದುಕನ್ನು ಖುಷಿ ಹಾಗೂ ಲವಲವಿಕೆಯಿಂದ ಇರುವಂತೆ ಮಾಡುತ್ತದೆ ಎಂದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಡಾ. ಗಣೇಶ್ ಅಮೀನಗಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುರಭಿ ರಿ. ಬೈಂದೂರು ಇದರ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಯು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರಿಗೆ ಜಾತಿ, ಅಂತಸ್ತು ಅರ್ಹತೆಯ ಅಗತ್ಯವಿಲ್ಲ. ನಾಟಕಗಳ ಮೂಲಕವೇ ಉತ್ತಮ ಬದುಕು ಕಟ್ಟಿಕೊಳ್ಳುವ ಗಟ್ಟಿತನತನವನ್ನು ರಂಗಭೂಮಿಯಲ್ಲಿ ತೊಡಗಿಸಿಕೊಂಡವರಿಗೆ ಕರಗತವಾಗುವಷ್ಟು ಅಂಕಗಳ ಬೆನ್ನತ್ತಿ ಉದ್ಯೋಗ ಗಿಟ್ಟಿಸಿಕೊಳ್ಳುವವರಿಗೆ ಬದುಕಿನ ಗಟ್ಟಿತನ ಕರಗತವಾಗದು ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಡಾ. ಗಣೇಶ್ ಅಮೀನಗಡ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ನಡೆಯುತ್ತಿರುವ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗಸುರಭಿ 2017  ನಾಟಕ ಸಪ್ತಾಹವನ್ನು ಉದ್ಘಾಟಿಸಿ, ಏಣಗಿ ಬಾಳಪ್ಪ ಅವರ ಭಾವಚಿತ್ರಕ್ಕೆ ಪುಪ್ಪ ಸಮರ್ಪಿಸಿ ಬಳಿಕ ಮಾತನಾಡಿದರು. ನಾಟಕ ಉತ್ಸವದ ನೆಪದಲ್ಲಿ ರಂಗಾಸಕ್ತರು ಸೇರುವಂತೆ ಮಾಡುವುದೇ ದೊಡ್ಡ ಕೆಲಸ. ಒಳ್ಳೆಯ ನಾಟಕಗಳನ್ನು ನೋಡುವುದೆಂದರೆ ಉತ್ತಮ ಕೃತಿಗಳನ್ನು ಓದಿದಂತೆ. ನೈಜವಾಗಿರುವ ರಂಗಭೂಮಿ ಪ್ರೇಕ್ಷಕರಿಗೆ ಸದಾ ಆಪ್ತವಾಗುತ್ತದೆ ಎಂದವರು ಹೇಳಿದರು. ನಾಡೋಜ ಏಣಗಿ ಬಾಳಪ್ಪ ಅವರು ನಡೆದಾಡುವ ರಂಗಭೂಮಿ ಎಂದೆಸಿನಿಕೊಂಡವರು. ಬಡತನದ ಮಧ್ಯೆ ಬೆಳೆದು ಬಂದ ಅವರಿಗೆ ಅಚಾನಕವಾಗಿ ಒದಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 8 ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಈ ಕುರಿತು ಕೈಗೊಳ್ಳಬೇಕಾದ ಸಿದ್ದತೆಗಳ ಕುರಿತು ಕ.ರಾ.ರ.ಸಾ.ನಿಗಮದ ಅಧ್ಯಕ್ಷರು ಹಾಗೂ ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ , ಬೈಂದೂರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ಗೋಪಾಲ ಪೂಜಾರಿ ಅವರು, ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರಥಮ ಕಾರ್ಯಕ್ರಮ ಬೈಂದೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮದ ವೇದಿಕೆ ನಿರ್ಮಾಣ ಸೇರಿದಂತೆ ಎಲ್ಲಾ ಅಗತ್ಯ ಕಾರ್ಯಗಳನ್ನು, ಯಾವುದೇ ಲೋಪಗಳಿಲ್ಲದಂತೆ ಕೈಗೊಳ್ಳುವಂತೆ ಹಾಗೂ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ತಮಗೆ ವಹಿಸಿರುವ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು, ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಊಟೋಪಚಾರ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ತಾ.ಪಂ. ಸದಸ್ಯ ರಾಜು ಪೂಜಾರಿ, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್, ಕುಂದಾಪುರ ತಹಸೀಲ್ದಾರ್ ಜಿ.ಎಂ.ಬೋರ್ಕರ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೆಸುಗೆ ಫೌಂಡೇಶನ್ ರಿ. ಬೈಂದೂರು, ಗ್ರಾಮ ಪಂಚಾಯತ್ ಪಡುವರಿ, ಉಡುಪಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಬೈಂದೂರು ಸೋಮೇಶ್ವರ ಬೀಚ್‌ನಲ್ಲಿ ಡಿಸೆಂಬರ್ ೨೮ ಹಾಗೂ ೨೯ರಂದು ಬೈಂದೂರು ಬೀಚ್ ಉತ್ಸವ ಜರುಗಲಿದ್ದು, ಉತ್ಸವದ ಸಿದ್ದತೆಗಳ ಬಗ್ಗೆ ಬೆಸುಗೆ ಫೌಂಡೇಶನ್‌ನ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. ತಾಲೂಕು ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಬೈಂದೂರು ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರಕಾರ, ಇಲಾಖೆ, ಜನಪ್ರತಿನಿಧಿಗಳು, ಸಂಘ-ಸಂಸ್ಥೆ ಹಾಗೂ ನಾಗರಿಕರ ನಡುವಿನ ಕೊಂಡಿಯಾಗಿ ನಿಂತು ಮಾದರಿ ಪ್ರವಾಸೋದ್ಯಮ ತಾಣವನ್ನಾಗಿಸುವ ಉದ್ದೇಶದೊಂದಿಗೆ ಹುಟ್ಟಿಕೊಂಡ ’ಬೆಸುಗೆ ಫೌಂಡೇಶನ್ ರಿ. ಬೈಂದೂರು’ ಸಂಸ್ಥೆಯ ಸಾರಥ್ಯದಲ್ಲಿ ಪಡುವರಿ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಪ್ರಪ್ರಥಮ ಭಾರಿಗೆ ಆಯೋಜನೆಗೊಂಡಿದೆ ಬೈಂದೂರು ಬೀಚ್ ಉತ್ಸವವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರೆಯುತ್ತಿದೆ ಎಂದರು. ದಿ. ೨೮ ಡಿಸೆಂಬರ್ ೨೦೧೭ರ ಗುರುವಾರ ಬೆಳಿಗ್ಗೆ ೯ ಗಂಟೆಗೆ ಗಾಳಿಪಟ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ ನಿರ್ಮಾಣ ಮಾಡಿ ಅರೆಶಿರೂರಿನಿಂದ ಮಂಗಳೂರಿಗೆ ಕರೆದೊಯ್ದು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಸಾಗಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೊಳಿಹೊಳೆ ಗ್ರಾಮದ ಅರೆಶಿರೂರಿನ ಆರನೇ ತರಗತಿ ವಿಧ್ಯಾರ್ಥಿನಿ, ಕಪ್ಪಾಡಿ ಶಾಲೆಯ ಮುಖ್ಯಶಿಕ್ಷಕ ಸಂಜೀವ ಗೌಡ ಅವರ ಮಗಳು ಅನುಷಾ ಗೌಡ (11) ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲವು ದಿನಗಳ ಹಿಂದೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯದಲ್ಲಿ ಸ್ಪಲ್ಪ ಮಟ್ಟಿನ ಸುಧಾರಣೆ ಕಂಡ ಬಳಿಕ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಆಕೆಗೆ ಮತ್ತೆ ನೋವು ಹೆಚ್ಚಾಗಿದ್ದರಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬ ಕರ್ನಾಟಕ ಕಾರ್ಮಿಕರ ವೇದಿಕೆ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಅವರನ್ನು ಸಂಪರ್ಕಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ರವಿ ಶೆಟ್ಟಿ ಬಾಲಕಿಯ ಚಿಕಿತ್ಸೆಯ ವಿವರಗಳನ್ನು ಬೆಂಗಳೂರಿನ ವೈದ್ಯರಿಗೆ ತಲುಪಿಸಿದಾಗ ಕೂಡಲೇ ಚಿಕಿತ್ಸೆಗೆ ಕರೆತಂದರೆ ಯಕೃತ್ತಿನ ಕಸಿ ಚಿಕಿತ್ಸೆ ನೀಡಬಹುದು. ಚಿಕಿತ್ಸೆಗೆ 25ಲಕ್ಷ ಹಣ…

Read More