Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅನಿವಾಸಿ ಭಾರತೀಯ ಉದ್ಯಮಿ, ಶಿರೂರು ಮೂಲದ ಮಣೆಗಾರ್ ಮೀರಾನ್ ಸಾಹೇಬ್ ಅವರು ಸಾಮಾಜಿಕ – ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ರಾಜ್ಯ ಸರ್ಕಾರ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಳೆದ 40 ವರ್ಷಗಳಿಂದ ಗಲ್ಪ್ ರಾಷ್ಟ್ರಗಳಲ್ಲಿ ಕನ್ನಡದ ನಾಡು ನುಡಿಯ ಸೇವೆ ಜೊತೆಗೆ ಶಿಕ್ಷಣ, ಸಾಮಾಜಿಕ, ಸಾಂಸ್ಕ್ರತಿಕ ಸೇರಿದಂತೆ ಹೊರನಾಡಿನಲ್ಲಿ ಪ್ರತಿ ವರ್ಷ ಕನ್ನಡಿಗರ ಸಂಘಟನೆಗೆ ಮತ್ತು ಕನ್ನಡದ ಅಭಿವೃದ್ದಿಗಾಗಿ ನಾನಾ ಸಂಘ ಸಂಸ್ಥೆಗಳ ಮೂಲಕ ಅನುಪಮ ಕೊಡುಗೆ ನೀಡುತ್ತಾ ಬಂದಿದ್ದಾರೆ. ಬೆಂಗಳೂರಿನಲ್ಲಿ ಸಂಘ ಸಂಸ್ಥೆಯ ಸಹಕಾರದೊಂದಿಗೆ ಸ್ಲಮ್ ಏರಿಯಾದಲ್ಲಿ ದುಶ್ಚಟಗಳಿಗೆ ಮಾರು ಹೋಗಿರಿರುವ ನೂರಾರು ಯುವಕರಿಗೆ ಸ್ವ ಉದ್ಯೋಗ ಕಲ್ಪಿಸಿ ಸ್ವಾವಲಂಬನೆಯ ಬದುಕು ಕಟ್ಟಿ ಕೊಟ್ಟಿದ್ದಾರೆ. ಶಿರೂರು ಉತ್ಸವದ ಮೂಲಕ ಶಿರೂರಿನ ಅಭಿವೃದ್ದಿಗೆ ಶ್ರಮಿಸಿದ ಇವರು ನಮ್ಮ ಕುಂದಾಪ್ರ ಕನ್ನಡ ಬಳಗದ ಗೌರವಾಧ್ಯಕ್ಷರಾಗಿದ್ದಾರೆ. ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್, ಶಿರೂರು ಅಸೋಸಿಯೇಶನ್ ಸೇರಿದಂತೆ ವಿವಿಧ ಸಂಘ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ:  ಅಜ್ಜರಕಾಡು ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಂ. ಎ (ಇತಿಹಾಸ), ಎಂ. ಎ ( ರಾಜ್ಯಶಾಸ್ತ್ರ), ಎಂ. ಕಾಂ, ಎಂ. ಎಸ್ಸಿ (ಗಣಿತ), ಎಂ. ಎಸ್ಸಿ ( ರಸಾಯನಶಾಸ್ತ್ರ) ಕೋರ್ಸುಗಳು ಲಭ್ಯವಿದೆ. ಅರ್ಜಿ ಸಲ್ಲಿಸಲು ನವೆಂಬರ್ 16 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820 -2527955, ಮೊ. ನಂ.  9449969818  ಸಂಪರ್ಕಿಸುವಂತೆ ಕಾಲೇಜಿನ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿರಿಯ ವಕೀಲ, ವಾಗ್ಮಿ, ಲೇಖಕ ಎ.ಎಸ್.ಎನ್. ಹೆಬ್ಬಾರ್ ಅವರ 12 ಪುಸ್ತಕಗಳ ಗುಚ್ಛ ನ.1ರ ಕನ್ನಡ ರಾಜ್ಯೋತ್ಸವದಂದು ಕುಂದಾಪುರ ಕಲಾಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಅಂದು ಸಂಜೆ 5:30ಕ್ಕೆ ವಿನೂತನ ರಾಜ್ಯೋತ್ಸವ ಕಾರ್ಯಕ್ರಮವಾಗಿ ಕಲಾಕ್ಷೇತ್ರ-ಕುಂದಾಪುರ ಈ ಅಪೂರ್ವ ಸಮಾರಂಭವನ್ನು ಕೊರೊನಾ ಕಟ್ಟುಪಾಡಿನ ಚೌಕಟ್ಟಿನಲ್ಲಿ ನಡೆಸಲು ಸಜ್ಜಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಮಾನ್ಯ ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಸಾಹಿತಿ ಮತ್ತು ಮಾಜಿ ಪ್ರಾಂಶುಪಾಲರಾದ ಡಾ. ಜಯಪ್ರಕಾಶ್ ಮಾವಿನಕುಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಭಾಗವಹಿಸಲಿದ್ದಾರೆ. ಸದಾ ಸಭೆ, ಸಮಾರಂಭ, ಸಮ್ಮೇಳನ, ಭಾಷಣ ಎಂದುತಿರುಗಾಟದಲ್ಲೇ ಇರುತ್ತಿದ್ದ, ತನ್ನ ಬರಹಗಳನ್ನು ಪುಸ್ತಕವಾಗಿಸಲು ಸಮಯವಿಲ್ಲವೆನ್ನುತ್ತಿದ್ದ ಹೆಬ್ಬಾರರಿಗೆ ಲಾಕ್‌ಡೌನ್ ಸದವಕಾಶ ಒದಗಿಸಿಕೊಟ್ಟಿತ್ತು. ಮನೆಯಲ್ಲೇ ಕುಳಿತುಕೊಳ್ಳುವ ಹಾಗಾದ್ದನ್ನು ಬಳಸಿಕೊಂಡ ಅವರು ತಮ್ಮ ಬರಹಗಳ ಕಡತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಬೈಂದೂರು – ಗಂಗಾನಾಡು ಮಾರ್ಗದಲ್ಲಿ ಎತ್ತಬೇರು ಹಾಗೂ ಮಾವಡ ನಡುವಿನ ಕಿರು ಸಂಪರ್ಕ ಸೇತುವೆ ಶಿಥಿಲಗೊಂಡು ಮುರಿದುಬಿದ್ದು ಎರಡು ವರ್ಷ ಕಳೆದಿದ್ದರೂ ಮರುನಿರ್ಮಾಣವಾಗದೆ ಸಂಚಾರಕ್ಕೆ ತೊಡಕಾಗಿದೆ. ಗ್ರಾಮೀಣ ಭಾಗದ ನಡೆದಾರಿ ಮತ್ತು ಸಣ್ಣ ವಾಹನ ಸಂಚರಿಸುವ ಈ ಮಾರ್ಗ ಅಲ್ಲಿನ ಜನರ ಜೀವನಾಡಿ. ಈಗಲೂ ಅದರಲ್ಲೇ ಓಡಾಡುತ್ತಿದ್ದಾರೆ. ಮಳೆಗಾಲದಲ್ಲಿ ಅದರ ಮೇಲೆ ಹಳ್ಳದ ನೀರು ಹರಿಯುವುದರಿಂದ ಸಂಚಾರ ಸಾಧ್ಯವಾಗುವುದಿಲ್ಲ. ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿರೂ ಕ್ರಮ ಆಗಿಲ್ಲ. ಈ ಬಗ್ಗೆ ಬೇಸತ್ತಿರುವ ಜನಸಾಮಾನ್ಯರು ಶೀಘ್ರ ದುರಸ್ತಿಗೆ ಆಗ್ರಹಿಸಿದ್ದಾರೆ ‘ಯಡ್ತರೆ, ಬೈಂದೂರು ಹಾಗೂ ಪಡುವರಿ ಗ್ರಾಮ ಪಂಚಾಯಿತಿಗಳು ವಿಲೀನಗೊಂಡು ಎರಡು ತಿಂಗಳುಗಳು ಆಗಿವೆ. ಇಷ್ಟರಲ್ಲೇ ವ್ಯಾಪ್ತಿಯಲ್ಲಿ ಕೆಟ್ಟು ಹೋಗಿರುವ ರಸ್ತೆ, ಸೇತುವೆಗಳ ದುರಸ್ತಿ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿದೆ. ಅಂದಾಜು ವೆಚ್ಚದ ಕರಡು ಪಟ್ಟಿಯನ್ನು ಸಂಬಂಧಪಟ್ಟವರಿಗೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಹಾಗೂ ಎತ್ತಬೇರು-ಮಾವಡ ಸೇತುವೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಮೂರು ವರ್ಷಗಳ ಅವಧಿಗೆ ನೂತನ ವ್ಯವಸ್ಥಾಪನಾ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ನೂತನ ಸಮಿತಿಗೆ ಪಾಳಿಯಲ್ಲಿರುವ ಪ್ರಧಾನ ಅರ್ಚಕರಾದ ಡಾ. ಕೆ. ರಾಮಚಂದ್ರ ಅಡಿಗ, ಮಹಿಳಾ ಮೀಸಲಾತಿಯಲ್ಲಿ ರತ್ನಾ ರಮೇಶ್‌ ಕುಂದರ್‌ ಕೊಲ್ಲೂರು, ಸಂಧ್ಯಾ ರಮೇಶ್‌ ಮಚ್ಚಟ್ಟು, ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಗೋಪಾಲಕೃಷ್ಣ ರಾಮನಗರ ಸೇನಾಪುರ, ಸಾಮಾನ್ಯ ವರ್ಗದಿಂದ ಕೆರಾಡಿ ಚಂದ್ರಶೇಖರ ಶೆಟ್ಟಿ, ಗಣೇಶ್‌ ಕಿಣಿ ಬೆಳ್ವೆ, ಡಾ. ಅತುಲ್‌ಕುಮಾರ ಶೆಟ್ಟಿ ಚಿತ್ತೂರು, ಜಯಾನಂದ ಹೋಬಳಿದಾರ ಬೈಂದೂರು ಹಾಗೂ ಶೇಖರ ಪೂಜಾರಿ ಕಾರ್ಕಡ ಆಯ್ಕೆಯಾಗಿದ್ದಾರೆ. ಸಮಿತಿಗೆ ಈ ಬಾರಿ 158 ಅರ್ಜಿಗಳು ಬಂದಿದ್ದು, ಅರ್ಜಿದಾರರ ಅರ್ಹತೆ, ವಿಳಾಸ ಹಾಗೂ ಹಿನ್ನೆಲೆಯನ್ನು ಪರಿಶೀಲಿಸಿ ನೂತನ ಸಮಿತಿ ಸದಸ್ಯರ ಆಯ್ಕೆ ಮಾಡಲಾಗಿದೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವ್ಯವಸ್ಥಾಪನ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿರುತ್ತಾರೆ. ನೂತನ ಸದಸ್ಯರು ಪ್ರಥಮ ಸಭೆಯಲ್ಲಿ ತಮ್ಮಲ್ಲಿಯೇ ಒಬ್ಬರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭತ್ತ ಕಟಾವು ಯಂತ್ರಗಳಿಗೆ ದುಬಾರಿ ಬಾಡಿಗೆ ನಿಗದಿಗೊಳಿಸುವ ಮೂಲಕ ರೈತರನ್ನು ಶೋಷಿಸಲಾಗುತ್ತಿದೆ ಎಂದು ಖಂಬದಕೋಣೆ ವ್ಯಾಪ್ತಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತಸಿರಿ ಸಭಾಭವನದಲ್ಲಿ ನಡೆದ ವ್ಯಾಪ್ತಿಯ 9 ಗ್ರಾಮಗಳ ರೈತರ ಮಾಸಿಕ ಸಭೆಯಲ್ಲಿ ಯಂತ್ರಗಳ ಲಭ್ಯತೆ ಮತ್ತು ದರ ಕುರಿತು ಗಂಭೀರ ಚರ್ಚೆ ನಡೆಯಿತು. ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೈತರಿಗೆ ಬಾಡಿಗೆ ಮೇಲೆ ಕಟಾವು ಯಂತ್ರ ಒದಗಿಸುವ ವ್ಯವಹಾರದಲ್ಲಿ ದಲ್ಲಾಳಿಗಳ ಕೈವಾಡ ನಡೆಯುತ್ತಿದೆ. ಅವರು ಗಂಟೆಗೆ ರೂ 2,400 ರೂ 2,500 ಕೊಡಬೇಕು ಎನ್ನುತ್ತಿದ್ದಾರೆ. ಇದರ ಕುರಿತು ಕೃಷಿ ಅಧಿಕಾರಿಗಳ ಗಮನ ಸೆಳೆದರೆ ಖಾಸಗಿಯವರ ಮೇಲೆ ತಮಗೆ ಕಾನೂನು ಬದ್ಧ ಹಿಡಿತ ಇಲ್ಲ. ರೈತರೇ ಒಗ್ಗಟ್ಟಾಗಿ ಮಧ್ಯವರ್ತಿಗಳನ್ನು ಹತ್ತಿರಕ್ಕೆ ಸೇರಿಸದೆ ಅವರನ್ನು ಮಣಿಸಬೇಕು ಎನ್ನುತ್ತಾರೆ ಎಂದು ಕೆಲವರು ದೂರಿದರು. ಕೃಷಿ ಇಲಾಖೆಯಿಂದ ಸಹಾಯಧನ ಪಡೆದು ನಿರ್ವಹಿಸಲಾಗುತ್ತಿರುವ ಯಂತ್ರಮನೆಯ ಯಂತ್ರಗಳಿಗೂ ಸುಮಾರಾಗಿ ಖಾಸಗಿಯವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ವಿಸ್ತರಣಾ ಚಟುವಟಿಕೆಯ ಭಾಗವಾಗಿ ಬೀಜಾಡಿಯ ಕಪಿಲೆ ಗೋಸಮೃದ್ಧಿ ಟ್ರಸ್ಟ್‌ಗೆ ವಿದ್ಯಾರ್ಥಿಗಳು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಪ್ರವರ್ತಕ ಕುಮಾರ್ ಕೆ. ಕಾಂಚನ್ ಅವರು ದೇಸಿ ಗೋತಳಿಗಳು ಮತ್ತು ಅದರ ಉತ್ಪನ್ನಗಳ ಮಹತ್ವದ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗೆ ವಿಸ್ತರಣಾ ಚಟುವಟಿಕೆಯ ಭಾಗವಾಗಿ ಸಗಣಿಯಿಂದ ಹಣತೆ, ದೂಪದ ಬತ್ತಿ ತಯಾರಿಕೆ ಹಾಗೂ ಗೋವುಗಳ ಆರೈಕೆಯ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಮುಖ್ಯಸ್ಥ ಹಾಗೂ ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಎನ್. ಎಸ್. ಎಸ್. ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ. ವಿಭಾಗದ ಪ್ರಾಧ್ಯಾಪಕರಾದ ಸುಕುಮಾರ್ ಶೆಟ್ಟಿ, ಪ್ರವೀಣಾ ಮಹಾಬಲ ಪೂಜಾರಿ ಹಾಗೂ ಕಛೇರಿ ಸಿಬ್ಬಂದಿ ಶರತ್ ಖಾರ್ವಿ ಉಪಸ್ಥಿತರಿದ್ದರು. ವಿಭಾಗದ ಉಪನ್ಯಾಸಕಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಮೃತೇಶ್ವರಿ ಎಜುಕೇಶನಲ್ ಟ್ರಸ್ಟಿನ ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಆಯೋಜಿಸಲಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಿಬಿರವನ್ನು ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದು. ಈ ಶಿಬಿರದ ಮುಖೇನ ನೂರಾರು ಸಾರ್ವಜನಿಕರಿಗೆ ಉಚಿತ ಆರೋಗ್ಯ ಪರೀಕ್ಷೆ ಮತ್ತು ವ್ಯಾದಿಕ್ಷಮತ್ವವನ್ನು ಹೆಚ್ಚಿಸುವ ಔಷಧಿಯನ್ನು ವಿತರಿಸಲಾಯಿತು. ಈ ಸುಸಂದರ್ಭದ ಸದುಪಯೋಗವನ್ನು ಕುಂದಾಪುರ, ಕೋಟೇಶ್ವರದ ಸುತ್ತಮುತ್ತ ಅನೇಕ ಹಳ್ಳಿಗಳ ಸಾರ್ವಜನಿಕರು ಈ ಶಿಬಿರದ ಉಪಯೋಗವನ್ನು ಪಡೆದುಕೊಂಡಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಹತ್ತು ಹಲವಾರು ಉಚಿತ ಆರೋಗ್ಯ ಶಿಬಿರವನ್ನು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಿರ್ವಹಿಸಲು ಉದ್ದೇಶಿಸಲಾಗಿದೆ, ಈ ಶಿಬಿರದಲ್ಲಿ ಒಟ್ಟು 350 ಜನ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ತ್ರಾಸಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕೊಂಕಣಿ ಖಾರ್ವಿ ಭವನದಲ್ಲಿ ಗಂಗೊಳ್ಳಿಯ ನಿನಾದ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ’ಸಾಕೇತ’ ವೈದ್ಯಕೀಯ ಪ್ರಯೋಗಾಲಯ ಹಾಗೂ ತಪಾಸಣಾ ಕೇಂದ್ರ ಉದ್ಘಾಟನೆ ನಡೆಯಿತು. ಉದ್ಘಾಟಿಸಿ ಮಾತನಾಡಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ನೆಫ್ರೋಲಾಜಿ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ. ರವೀಂದ್ರ ಪ್ರಭು, ಜನರು ಆರೋಗ್ಯ ರಕ್ಷಣೆ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ. ಗ್ರಾಮೀಣ ಭಾಗದ ಜನರು ಆರೋಗ್ಯ ತಪಾಸಣೆಗಾಗಿ ಪಟ್ಟಣ ಪ್ರದೇಶಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಗ್ರಾಮೀಣ ಪ್ರದೇಶದ ಜನರು ಆರೋಗ್ಯ ತಪಾಸಣೆಗಾಗಿ ಪಟ್ಟಣ ಪ್ರದೇಶಗಳಿಗೆ ಅಲೆದಾಡುವುದನ್ನು ತಪ್ಪಿಸಲು ತ್ರಾಸಿಯ ಹೃದಯ ಭಾಗದಲ್ಲಿ ವಿಶಿಷ್ಟ ವೈದ್ಯಕೀಯ ಸೌಲಭ್ಯಗಳನ್ನೊಳಗೊಂಡ ’ಸಾಕೇತ’ ವೈದ್ಯಕೀಯ ಪ್ರಯೋಗಾಲಯ ಪ್ರಾರಂಭಿಸಿರುವುದು ಶ್ಲಾಘನೀಯ ಎಂದು ಹೇಳಿದರು. ಮಂಗಳೂರು ಹಾಂಗ್ಯೋ ಐಸ್‌ಕ್ರೀಮ್ ಪ್ರೈ. ಲಿ. ಆಡಳಿತ ನಿರ್ದೇಶಕ ಪ್ರದೀಪ ಜಿ. ಪೈ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನವು ಅಕ್ಟೋಬರ್ ಮೊದಲ ವಾರದಲ್ಲಿ ನಡೆಸಿದ ದ್ವಿತೀಯ ಅಂತರರಾಷ್ಟ್ರೀಯ ಆನ್‌ಲೈನ್ ಯೋಗಾಸನ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ನಾವುಂದ ಗ್ರಾಮದ ಅರೆಹೊಳೆಯ ನಿರೀಕ್ಷಾ ಪ್ರಥಮ ಸ್ಥಾನ ಪಡೆದಿರುವಳು. ಅರೆಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೆ ತರಗತಿ ವಿದ್ಯಾರ್ಥಿನಿಯಾಗಿರುವ ಅವಳು ಅಲ್ಲಿನ ಬಾಬು ಪೂಜಾರಿ – ಜಯಲಕ್ಷ್ಮೀ ದಂಪತಿಯ ಪುತ್ರಿ.  ಪರಿಣತ ಯೋಗಗುರು ಸುಬ್ಬಯ್ಯ ದೇವಾಡಿಗ ಅವರಿಂದ ತರಬೇತಿ ಪಡೆದಿದ್ದಾಳೆ.

Read More