ಹೇರೂರು: ವೆಂಟೆಡ್ ಡ್ಯಾಂ ಮತ್ತು ಸೇತುವೆ ಗುದ್ದಲಿಪೂಜೆ

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲ್ಗದ್ದೆಕೇರಿ ಸಿದ್ದುಮನೆ ಎಂಬಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ವೆಂಟೆಡ್ ಡ್ಯಾಂ ಮತ್ತು ಸೇತುವೆಗೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಗುದ್ದಲಿಪೂಜೆ ನೇರವೆರಿಸಿದರು.

Click Here

Call us

Click Here

ಪ್ರಾಸ್ತಾವಿಕ ಮಾತನಾಡಿದ ಮಾಜಿ ಪಂಚಾಯತ್ ಅಧ್ಯಕ್ಷರಾದ ಅಶೋಕ ಕುಮಾರ ಶೆಟ್ಟಿ, ಗ್ರಾಮೀಣ ಭಾಗದ ಬಹುದಿನದ ಬೇಡಿಕೆ ಸೇತುವೆ ಹಾಗೂ ವೆಂಟೆಡ್ ಡ್ಯಾಂ ನಿರ್ಮಾಣವಾಗುವುದರಿಂದ ಕೇರಿಸಿದ್ದುಮನೆ ಜೋಗಿಜೆಡ್ಡು ಮತ್ತು ಸ್ಥಳೀಯರಿಗೆ ಅಂತರ್ಜಲ ವೃದ್ಧಿಯಾಗುವುದರೊಂದಿಗೆ ಸಾರಿಗೆ ವ್ಯವಸ್ಥೆ ತುಂಬಾ ಅನುಕೂಲವಾಗಿದೆ ಈ ವ್ಯವಸ್ಥೆಗೆ ಅನುದಾನ ಒದಗಿಸಲು ನೆರವಾದ ಅಭಿವೃದ್ಧಿಯ ಹರಿಕಾರ ನಮ್ಮ ಹೆಮ್ಮಯ ಶಾಸಕರು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ಪಂಚಾಯತ್ ಸದಸ್ಯರಾದ ಸೂಲಿಯಣ್ಣ ಶೆಟ್ಟಿ, ಶ್ರೀನಿವಾಸ ಪೂಜಾರಿ, ಬಾಬು ಆಚಾರ್ಯ, ಕಿರಣ್ ಶೆಟ್ಟಿ ಮರವಂತೆ, ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಭೋಜ ನಾಯ್ಕ, ಮಂಡಲ ಅಧ್ಯಕ್ಷರಾದ ದೀಪಕ ಶೆಟ್ಟಿ ವಿರೇಂದ್ರ ಹೆಗ್ಡೆ ಊರಿನ ಗಣ್ಯರು ಉಪಸ್ಥಿತರಿದ್ದರು. ಪೂಜಾ ವಿಧಿ ವಿಧಾನಗಳನ್ನು ಶಂಕರ ಭಟ್ ಯರುಕೋಣೆ ನೆರವೇರಿಸಿದರು

Leave a Reply